ಪ್ರಯಾಣಿಕರಿಗೆ ಗುಡ್‌ನ್ಯೂಸ್, ರೈಲಿನಲ್ಲಿ ಇನ್ಮುಂದೆ ಈ ಎಲ್ಲಾ ಸೌಲಭ್ಯ ಸಂಪೂರ್ಣ ಉಚಿತ

First Published | Jul 18, 2023, 11:35 AM IST

ಕಡಿಮೆ ಬೆಲೆಯಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದಾದ ಸಾರಿಗೆ ವ್ಯವಸ್ಥೆ ರೈಲು. ಹೀಗಾಗಿಯೇ ಪ್ರತಿ ದಿನ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಇತ್ತೀಚಿಗೆ ರೈಲು ಪ್ರಯಾಣಿಕರಿಗಾಗಿ ರೈಲಿನಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ. 

ಅನುಕೂಲಕರ, ಸುರಕ್ಷಿತ ಪ್ರಯಾಣ ಮತ್ತು ಕಡಿಮೆ ಟಿಕೆಟ್ ದರ ಸೇರಿದಂತೆ ಹಲವು ಕಾರಣಗಳಿಂದ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದ್ರೆ ಈ ರೈಲಿನ ಬಗ್ಗೆ ನಾವು ತಿಳಿದುಕೊಂಡಿರದ ಹಲವು ವಿಷಯಗಳಿವೆ. ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ವಿವಿಧ ರೀತಿಯ ಉಚಿತ ಸೌಲಭ್ಯ ಒದಗಿಸುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.

ರೈಲ್ವೆ ಇಲಾಖೆಯು ರೈಲ್ವೆ ಟಿಕೆಟ್ ನಲ್ಲಿ ವಿವಿಧ ರೀತಿಯ ರಿಯಾಯಿತಿಯನ್ನು ನೀಡಲು ನಿರ್ಧರಿಸಿದೆ. ಹೀಗೆ ಮಾಡುವುದರಿಂದ ರೈಲು ಟಿಕೆಟ್ ಖರೀದಿಸಿದ ಬಳಿಕ ನೀವು ಈ ಎಲ್ಲ ಸೌಲಭ್ಯವನ್ನು ಪಡೆಯಬಹುದು. ಹಾಗಿದ್ರೆ ರೈಲು ಪ್ರಯಾಣಲ್ಲಿ ಉಚಿತವಾಗಿ ಸಿಗಲಿರುವ ಸೇವೆಗಳು ಯಾವುವು.

Tap to resize

ಉಚಿತ ವೈದ್ಯಕೀಯ ಸೌಲಭ್ಯ
ಪ್ರಯಾಣಿಕರಿಗಾಗಿ ಉಚಿತ ವೈದ್ಯಕೀಯ ಸೌಲಭ್ಯವನ್ನು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಯಾಣದ ಸಮಯದಲ್ಲಿ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಲ್ಲಿ ಭಾರತೀಯ ರೈಲ್ವೆ ಪ್ರಥಮ ಚಿಕಿತ್ಸೆ ಸೌಲಭ್ಯವನ್ನು ಒದಗಿಸಲಿದೆ.

ನಿರೀಕ್ಷಣಾ ಕೊಠಡಿಯ ಸೌಲಭ್ಯ
ಅದೆಷ್ಟೋ ಬಾರಿ ರೈಲು ತುಂಬಾ ತಡವಾಗಿ ಸ್ಟೇಷನ್ ತಲುಪುತ್ತದೆ. ಹೀಗಾದಾಗ ಬಿಸಿಲಿದ್ದರೂ, ಮರಳಿದ್ದರೂ ಜನರು ಫ್ಲಾಟ್‌ಫಾರಂನಲ್ಲೇ ಕುಳಿತು ಕಾಯಬೇಕಾಗುತ್ತದೆ. ಆದರೆ ಇಂಥಾ ಸಂದರ್ಭದಲ್ಲಿ ನೀವು  ವೈಟಿಂಗ್‌ ರೂಮ್‌ನ ಸದುಪಯೋಗ ಪಡೆದುಕೊಳ್ಳಬಹುದು. ಈ ಸಮಯದಲ್ಲಿ ನೀವು ಉಚಿತ ನಿರೀಕ್ಷಣಾ ಕೊಠಡಿಯ ಸೌಲಭ್ಯವನ್ನು ಪಡೆಯಬಹುದು. 

ಉಚಿತ ವೈ ಫೈ ಸೌಲಭ್ಯ
ರೈಲು ಪ್ರಯಾಣಿಕರಿಗಾಗಿ ರೈಲ್ವೆ ಪ್ಲಾಟ್ ಫಾರಂ ನಲ್ಲಿ ಉಚಿತ ವೈ ಫೈ ಸೌಲಭ್ಯ ಸಿಗಲಿದೆ. ಅರ್ಧ ಗಂಟೆಯ ವರೆಗೆ ಪ್ರಯಾಣಿಕರು ಈ ಉಚಿತ ವೈಫೈ ಅನ್ನು ಬಳಸಬಹುದಾಗಿದೆ.

ನೀವು ಹಗಲಿನ ಸಮಯದಲ್ಲಿ ರೈಲು ಆಗಮನದ 2 ಗಂಟೆಗಳ ಮೊದಲು ಮತ್ತು ಪ್ರಯಾಣದ ಅಂತ್ಯದ 2 ಗಂಟೆಗಳ ನಂತರ ಕಾಯುವ ಕೋಣೆಯನ್ನು ಉಚಿತವಾಗಿ ಬಳಸಬಹುದು. ರಾತ್ರಿಯ ಸಮಯದಲ್ಲಿ 6 ಗಂಟೆಗಳ ಕಾಲ ಉಚಿತ ಕೊಠಡಿಯ ಸೌಲಭ್ಯವನ್ನು ಪಡೆಯಬಹುದು.

ಕ್ಲೋಕ್ ರೂಮ್ ಸೌಲಭ್ಯ
ಪ್ರಯಾಣದ ಸಂದರ್ಭ ಕೆಲವೊಮ್ಮೆ ಅನಿವಾರ್ಯವಾಗಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಹೀಗಾದಾಗ ವಸ್ತು ಕಳೆದು ಹೋಗುತ್ತದೆ ಎಂಬ ಭಯ ಹೆಚ್ಚಾಗಿ ಕಾಡುತ್ತದೆ. ಇಂಥಾ ಸಂದರ್ಭದಲ್ಲಿ ನಿಮ್ಮ ಬಳಿಯಿರುವ ಪ್ರಮುಖ ವಸ್ತುಗಳನ್ನು ಕ್ಲೋಕ್ ರೂಮ್ ನಲ್ಲಿ ಕಡಿಮೆ ಶುಲ್ಕವನ್ನು ಪಾವತಿಸಿ ಇಟ್ಟುಕೊಳ್ಳಬಹುದು.

ಮೊದಲ 24 ಗಂಟೆಗಳವರೆಗೆ 15 ರೂ. ಪಾವತಿಸಬೇಕಾಗುತ್ತದೆ. ಪ್ರಯಾಣಿಕರು ಪ್ರತಿ ಯುನಿಟ್ ಗೆ 10 ರೂ. ಹಾಗೂ ಮುಂದಿನ 24 ಗಂಟೆಗಳ ಕಾಲ ಪ್ರತಿ ಯುನಿಟ್ ಗೆ 20 ಮತ್ತು 12 ರೂ. ಪಾವತಿಸಬೇಕಾಗುತ್ತದೆ.

Latest Videos

click me!