ದೀಪಾವಳಿ ರಜೆ ಸಖತ್ತಾಗಿ ಎಂಜಾಯ್ ಮಾಡಲು ಈ ತಾಣಗಳಿಗೊಮ್ಮೆ ಭೇಟಿ ನೀಡಿ

Published : Oct 15, 2022, 04:26 PM ISTUpdated : Oct 15, 2022, 04:30 PM IST

ದೀಪಾವಳಿ ಭಾರತದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ಧಾರ್ಮಿಕ ಆಚರಣೆಗಳು, ಸಿಹಿತಿಂಡಿಗಳು, ಆಚರಣೆಗಳು, ಉಡುಗೊರೆಗಳು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತೆ. ಈ ಆಚರಣೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಜೊತೆಯಾಗಿ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ. ಭಾರತದ ವಿವಿಧೆಡೆ ವಿವಿಧ ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗುತ್ತೆ. ಈ ಬೆಳಕಿನ ಹಬ್ಬದ ಸಮಯದಲ್ಲಿ ಭೇಟಿ ನೀಡಲು 5 ಅತ್ಯುತ್ತಮ ಸ್ಥಳಗಳು ಇಲ್ಲಿವೆ:

PREV
110
ದೀಪಾವಳಿ ರಜೆ ಸಖತ್ತಾಗಿ ಎಂಜಾಯ್ ಮಾಡಲು ಈ ತಾಣಗಳಿಗೊಮ್ಮೆ ಭೇಟಿ ನೀಡಿ

ವಾರಣಾಸಿ - ದೇವ್ ದೀಪಾವಳಿ
ವಾರಣಾಸಿಯಲ್ಲಿ ದೀಪಾವಳಿ ಆಚರಣೆ ವಿಜೃಂಭಣೆಯಿಂದ ಆಚರಿಸಲಾಗುತ್ತೆ. ಪವಿತ್ರ ಗಂಗೆಯಲ್ಲಿ ಸ್ನಾನದೊಂದಿಗೆ ಪ್ರಾರಂಭಿಸಿ ಪ್ರತಿಯೊಂದನ್ನು ಇಲ್ಲಿ ಸಂಭ್ರಮಿಸಬಹುದು. ಸಾಂಪ್ರದಾಯಿಕ ಬಟ್ಟೆಗಳಿಂದ ಹಿಡಿದು ಸಿಹಿತಿಂಡಿಗಳವರೆಗೆ ಎಲ್ಲವನ್ನೂ ಮಾರಾಟ ಮಾಡುವ ಗಿಜಿಗುಡುವ ಬಜಾರ್ ಗಳನ್ನು ನೀವಿಲ್ಲಿ ಕಾಣಬಹುದು. ಸೂರ್ಯಾಸ್ತದ ಸಮಯದಲ್ಲಿನ ಬೋಟ್ ರೈಡ್ (boat ride) ಎಂಜಾಯ್ ಮಾಡಬಹುದು. ನದಿಯ ಪಕ್ಕದಲ್ಲಿ ಧಾರ್ಮಿಕ ಪಠಣಗಳು ಮತ್ತು ಮಂತ್ರಗಳ ಹಿನ್ನೆಲೆಯಲ್ಲಿ ಮಿನುಗುವ ದೀಪಗಳನ್ನು ವೀಕ್ಷಿಸಬಹುದು. ಇಲ್ಲಿ ಪಟಾಕಿಗಳ ಅದ್ಭುತ ಪ್ರದರ್ಶನದೊಂದಿಗೆ ಉತ್ಸವಗಳು ಕೊನೆಗೊಳ್ಳುತ್ತವೆ. 

210

ನೀವು ವಾರಣಾಸಿಯಲ್ಲಿ ಇನ್ನೂ ಸ್ವಲ್ಪ ಸಮಯ ಉಳಿದರೆ, ನೀವು ದೇವ್ ದೀಪಾವಳಿ ಅಥವಾ ಅಪ್ರತಿಮ ಗಂಗಾ ಮಹೋತ್ಸವ (Ganga Mahotsav) ಉತ್ಸವದ ಭಾಗವಾಗಿ ಇಲ್ಲಿ ಆಚರಿಸಲಾಗುವ ದೇವ ದೀಪಾವಳಿಯಲ್ಲಿ ಭಾಗವಹಿಸಬಹುದು. ಭಾರತದ ಆಧ್ಯಾತ್ಮಿಕ ರಾಜಧಾನಿಯಲ್ಲಿ ಹಲವಾರು ಬಜೆಟ್ ಹೋಟೆಲ್ ಗಳಿವೆ ಮತ್ತು ಹೆಚ್ಚಿನ ಅನುಕೂಲಕ್ಕಾಗಿ ನೀವು ಆನ್ ಲೈನ್ ಹೋಟೆಲ್ ಬುಕಿಂಗ್ ಮುಂಚಿತವಾಗಿ ಮಾಡಬಹುದು. 

310

ಅಮೃತಸರ - ಬಂಡಿ ಚೋರ್ ದಿವಸ್ 
ದೀಪಾವಳಿಯ ಸಂದರ್ಭದಲ್ಲಿ ಅಮೃತಸರವು ಭೇಟಿ ನೀಡಲು ಮತ್ತೊಂದು ಉತ್ತಮ ಸ್ಥಳವಾಗಿದೆ. ಇದನ್ನು ಬಂಡಿ ಚೋರ್ ದಿವಸ ಎಂದು ಆಚರಿಸಲಾಗುತ್ತದೆ, ಇದು ಸಿಖ್ಖರಿಗೆ ದೊಡ್ಡ ಹಬ್ಬವಾಗಿದೆ ಮತ್ತು 6 ನೇ ಸಿಖ್ ಗುರು ಹರ್ಗೋಬಿಂದ್ ಜೀ ಅವರು ತಮ್ಮ ಸೆರೆವಾಸದಿಂದ ಹಿಂದಿರುಗಿದ ನೆನಪಿಗಾಗಿ ಇದನ್ನ ಆಚರಣೆ ಮಾಡಲಾಗುತ್ತೆ. ನಗರದಾದ್ಯಂತ ವಿಶೇಷ ಪ್ರಾರ್ಥನೆಗಳು ಅಥವಾ ಕೀರ್ತನೆಗಳು ನಡೆಯುತ್ತವೆ ಮತ್ತು ಗೋಲ್ಡನ್ ಟೆಂಪಲ್ (golden temple) ಬೆಳಗಿದಾಗ ಅದ್ಭುತವಾಗಿ ಕಾಣುತ್ತದೆ. 

410

ಅಮೃತಸರದ ತಂಪಾದ ಹವಾಮಾನ, ಸುಂದರವಾದ ಸಾಸಿವೆ ಗದ್ದೆಗಳು ಮತ್ತು ಸ್ಥಳೀಯರ ಸಂಭ್ರಮಾಚರಣೆಯನ್ನು ಸಹ ನೀವು ಆನಂದಿಸಬಹುದು. ಅಲ್ಲದೇ ಇಲ್ಲಿ ನೀವು ಬಾಯಿ ಚಪ್ಪರಿಸುವಂತಹ ತಿನಿಸುಗಳನ್ನು ಸಹ ಸೇವಿಸಬಹುದು. ಪವಿತ್ರ ನಗರವು ಪ್ರಮುಖ ಪ್ರವಾಸಿ ತಾಣವಾಗಿರುವುದರಿಂದ, ನೀವು ಆಯ್ಕೆ ಮಾಡಬಹುದಾದ ಹಲವಾರು ಹೋಟೆಲ್ ಗಳನ್ನು ನೀವಿಲ್ಲಿ ಕಾಣಬಹುದು. 

510

ಜೈಪುರ-ಉದಯಪುರ -ಅದ್ಭುತ ಲೈಟಿಂಗ್ಸ್ ಮತ್ತು ಜಾನಪದ ಶೋ
ಜೈಪುರದಲ್ಲಿ ಧಂತೇರಸ್ ನಿಂದ ಪ್ರಾರಂಭವಾಗುವ ಆಚರಣೆಗಳಿಗೆ ನೀವು ಖಂಡಿತವಾಗಿಯೂ ಸಾಕ್ಷಿಯಾಗಬೇಕು. ಇಡೀ ನಗರವನ್ನು ಆವರಿಸಿರುವ ಬೆಳಕಿನ ಅದ್ಭುತ ದೃಶ್ಯಗಳನ್ನು ಮತ್ತು ಪಟಾಕಿಗಳು, ಜೊತೆಗೆ ಐತಿಹಾಸಿಕ ಕೋಟೆಗಳು (historical forts) ಇಲ್ಲಿನ ಸೌಂದರ್ಯ ಹೆಚ್ಚಿಸುತ್ತವೆ.. ಇಷ್ಟೇ ಅಲ್ಲ, ನಗರದ ಬಜಾರ್ ಗಳು ಸಂಗೀತಗಾರರು, ಜಾನಪದ ಹಾಗೂ ಸೂಕ್ಷ್ಮವಾಗಿ ತಯಾರಿಸಿದ ದೀಪಗಳು ಮತ್ತು ಇತರ ಕಲಾಕೃತಿಗಳಿಂದ ತುಂಬಿ ತುಳುಕುತ್ತಿರುತ್ತವೆ, ಇಲ್ಲಿ ನೀವು ಬೇಕಾದಷ್ಟು ಶಾಪಿಂಗ್ ಮಾಡಬಹುದು.
 

610

ಅಷ್ಟೇ ಅಲ್ಲ, ಇಲ್ಲಿ ನೀವು ಅತ್ಯುತ್ತಮ ಮಾರ್ವಾಡಿ ಆಹಾರಗಳನ್ನು ಸಹ ಸೇವಿಸಬಹುದು. ಜೈಪುರದಿಂದ ಮನೆಗಾಗಿ ಆಕರ್ಷಕ ಸ್ಮರಣಿಕೆಗಳು ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಿ. ಇಲ್ಲಿ ನೀವು ತೆರಳಿದರೆ ಉದಯಪುರದ ಸುಂದರವಾದ ಸರೋವರಗಳು ಖಂಡಿತವಾಗಿ ನಿಮಗೆ ಇಷ್ಟವಾಗುತ್ತೆ, ಅಲ್ಲದೇ ಎಲ್ಲೆಡೆ ಕೇಳಿ ಬರುವ ಪಟಾಕಿ ಸದ್ದು, ದೀಪಾಲಂಕೃತಗೊಂಡ ಅರಮನೆಗಳು ಕಣ್ಣಿಗೆ ಹಬ್ಬ ನೀಡುತ್ತೆ.  

710

ಕೊಲ್ಕತ್ತಾ - ಕಾಳಿ ಪೂಜೆ
ಹೌದು, ದೀಪಾವಳಿಯ ಸಮಯದಲ್ಲಿ ಸಿಟಿ ಆಫ್ ಜಾಯ್ ಕೋಲ್ಕತ್ತಾದಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಇಲ್ಲಿ ದೀಪಾವಳಿಯಂದು ಪ್ರಸಿದ್ಧ ಕಾಳಿ ಪೂಜೆ ನಡೆಯಲಾಗುತ್ತೆ. ಕೋಲ್ಕತ್ತಾದಲ್ಲಿ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಮಾಂಸ, ಮೀನು, ಹೂವುಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ದೇವಿಗೆ ವಿವಿಧ ರೀತಿಯ ವ್ಯಂಜನವನ್ನು ಅರ್ಪಿಸಲಾಗುತ್ತೆ. ಇಡೀ ನಗರವು ಸುಂದರವಾದ ದೀಪಗಳು, ಮೇಣದ ಬತ್ತಿಗಳು ಮತ್ತು ಲೈಟಿಂಗ್ಸ್ ನೊಂದಿಗೆ ಜಗಮಗಿಸುತ್ತವೆ. ನೀವು ಬಹುತೇಕ ಪ್ರತಿಯೊಂದು ಬೀದಿಯ ಮೂಲೆಯಲ್ಲೂ ಅದ್ಭುತ ಪಟಾಕಿ ಸಂಭ್ರಮ ಸಹ ನೋಡಬಹುದು.  

810

ನೀವು ನಗರದಲ್ಲಿರುವ ಪ್ರಸಿದ್ಧ ಕಾಳಿ ಪೂಜಾ ಪೆಂಡಾಲ್ ಗಳ ಪ್ರವಾಸ ಸಹ ಮಾಡಬಹುದು ಅಥವಾ ಕಾಳಿಘಾಟ್ ದೇವಾಲಯ ಅಥವಾ ದಕ್ಷಿಣೇಶ್ವರ ದೇವಾಲಯದಂತಹ ದೊಡ್ಡ ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡಬಹುದು, ಅಲ್ಲಿ ಕಾಳಿ ದೇವಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ಕೋಲ್ಕತಾದಲ್ಲಿ ಬಜೆಟ್ ಹೋಟೆಲ್ ಗಳು ಸಹ ಲಭ್ಯವಿದೆ.

910

ಗೋವಾ - ನರಕ ಚತುರ್ದಶಿ ಮೆರವಣಿಗೆ
ದೀಪಾವಳಿಯ ಸಮಯದಲ್ಲಿ ಗೋವಾವು ಭೇಟಿ ನೀಡಬೇಕಾದ ಮತ್ತೊಂದು ಅದ್ಭುತ ತಾಣವಾಗಿದೆ. ಜನರು ತಮ್ಮ ಬಾಗಿಲುಗಳು ಮತ್ತು ಕಿಟಕಿಗಳನ್ನು ಲಾಟೀನುಗಳಿಂದ ಅಲಂಕರಿಸಲಾಗುತ್ತೆ. ಈ ಆಚರಣೆಗಳು ನರಕ ಚತುರ್ದಶಿಯಿಂದ ಪ್ರಾರಂಭವಾಗುತ್ತವೆ. ಸ್ಥಳೀಯರು ದೊಡ್ಡ ಗಾತ್ರದ ನರಕಾಸುರ ಪ್ರತಿಮೆಗಳನ್ನು ಪಟಾಕಿಗಳು ಮತ್ತು ಹುಲ್ಲಿನಿಂದ ತುಂಬಿಸಿ ಮರುದಿನ ಮುಂಜಾನೆ ಸುಡುತ್ತಾರೆ. ಇದು ನೋಡಲು ಯೋಗ್ಯವಾದ ಆಚರಣೆಯಾಗಿದೆ. 

1010

ಇದಲ್ಲದೇ ಗೋವಾದಲ್ಲಿ ನೀವು ಹಾಟೆಸ್ಟ್ ಬೀಚ್ ಗಳು, ಕ್ಯಾಸಿನೊಗಳು ಮತ್ತು ಸ್ವಾಂಕಿ ರೆಸ್ಟೋರೆಂಟ್ ಗಳು ಮತ್ತು ಲಾಂಜ್ ಗಳಿಗೆ ಭೇಟಿ ನೀಡುವ ಮೂಲಕ ಉತ್ತಮ ಸಮಯ ಸಹ ಕಳೆಯಬಹುದು. ನೀವು ಕಾಟೇಜ್, ಸ್ಪಾ,  ಸೇರಿದಂತೆ ಬಜೆಟ್ ದರದಲ್ಲಿ ಯಾವುದೇ ಹೊಟೇಲ್ ನಲ್ಲಿ ಸಹ ನೀವು ಸ್ಟೇ ಮಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories