ಉಚಿತವಾಗಿ 5 ಲಕ್ಷ ಏರ್ ಟಿಕೆಟ್ ನೀಡ್ತಿದೆಯಂತೆ ಹಾಂಗ್ ಕಾಂಗ್ ಸರ್ಕಾರ!

First Published Oct 14, 2022, 4:25 PM IST

ಕರೋನಾ ಸಾಂಕ್ರಾಮಿಕ ರೋಗಕ್ಕೆ ಮೊದಲು, ವಾರ್ಷಿಕವಾಗಿ ಐದು ಮಿಲಿಯನ್ ಪ್ರವಾಸಿಗರು ಹಾಂಗ್ ಕಾಂಗ್ ಗೆ ತೆರಳಿ ಅಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದರು. ಇದು ವಿಶ್ವದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಆದರೆ ಕೊರೊನಾ ಎಲ್ಲವನ್ನೂ ಹಾಳು ಮಾಡಿತು. ಪ್ರವಾಸಿಗರನ್ನು ಆಕರ್ಷಿಸಲು, ಹಾಂಕಾಂಗ್ ಸರ್ಕಾರವು ಈಗ ಐದು ಲಕ್ಷ ಉಚಿತ ವಿಮಾನ ಟಿಕೆಟ್ಗಳನ್ನು ನೀಡುತ್ತಿದೆ. ಅವುಗಳ ಮೌಲ್ಯ ಸುಮಾರು 2100 ಕೋಟಿ ರೂ. ನೀವು ಫ್ರೀ ಟಿಕೆಟ್ ಪಡೆಯಲು ಬಯಸಿದ್ರೆ ಇದನ್ನ ಓದಿ. 

ಹಾಂಗ್ ಕಾಂಗ್ ಗೆ ಉಚಿತವಾಗಿ ಭೇಟಿ ನೀಡಲು ನಿಮಗೆ ಸುವರ್ಣಾವಕಾಶವಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಹಾಂಕಾಂಗ್ ಸರ್ಕಾರವು (Hong Kong government) ಪ್ರವಾಸಿಗರಿಗೆ ಉಚಿತ ವಿಮಾನ ಟಿಕೆಟ್‌ಗಳನ್ನು ನೀಡುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವ ಆಸಕ್ತಿ ಇದ್ರೆ ಮುಂದೆ ಓದಿ… 

ಹಾಂಕಾಂಗ್ ಏರ್ ಪೋರ್ಟ್ ಅಡ್ಮಿನಿಸ್ಟ್ರೇಷನ್ ಎರಡು ವರ್ಷಗಳ ಹಿಂದೆ ಐದು ಲಕ್ಷ ಟಿಕೆಟ್‌ಗಳನ್ನು ಖರೀದಿಸಿದೆ, ಇದು ಸುಮಾರು 2,100 ಕೋಟಿ ರೂ. ಈಗ ಅವುಗಳನ್ನು ವಿಶ್ವದಾದ್ಯಂತದ ಪ್ರವಾಸಿಗರಿಗೆ ಉಚಿತವಾಗಿ ನೀಡಲಾಗುತ್ತಿದೆ. ಹಾಂಗ್ ಕಾಂಗ್ ತನ್ನ ಪ್ರವಾಸೋದ್ಯಮವನ್ನು ಪುನರಾರಂಭಿಸಲು ಪ್ರಾರಂಭಿಸಿದೆ. ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಲು, ಅವರಿಗೆ ಉಚಿತ ವಿಮಾನ ಟಿಕೆಟ್ ನೀಡಲಾಗುತ್ತಿದೆ.

ಕರೋನಾ ಸಾಂಕ್ರಾಮಿಕ ರೋಗವು ವಿಶೇಷವಾಗಿ ಪ್ರವಾಸೋದ್ಯಮ (tourism) ಮತ್ತು ವಿಮಾನಯಾನ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಸಾಂಕ್ರಾಮಿಕ ರೋಗಕ್ಕೆ ಮೊದಲು, ವಾರ್ಷಿಕವಾಗಿ ಸುಮಾರು ಐದು ಕೋಟಿ ಪ್ರವಾಸಿಗರು ಹಾಂಗ್ ಕಾಂಗ್ ಗೆ ಭೇಟಿ ನೀಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಹಾಂಗ್ ಕಾಂಗ್ ಸೋಂಕನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ಕಾರಣದಿಂದಾಗಿ, ಅವರ ವಿಮಾನಯಾನ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸಿದವು. 

ಹಾಂಕಾಂಗ್ ಸರ್ಕಾರವು ವಿದೇಶಿ ಪ್ರವಾಸಿಗರಿಗೆ ಹೋಟೆಲ್ ಕ್ವಾರಂಟೈನ್ (hotel quarantine) ನಿಯಮವನ್ನು ತೆಗೆದುಹಾಕಿದೆ, ಆದರೆ ಅನೇಕ ನಿರ್ಬಂಧಗಳು ಇನ್ನೂ ಅಸ್ತಿತ್ವದಲ್ಲಿವೆ. ಇದೀಗ ನಿಮಗೆ ಉಚಿತ ಟಿಕೆಟ್ ಪಡೆಯೋದು ಹೇಗೆ? ಹಾಂಕಾಂಗ್ ಪ್ರವಾಸಕ್ಕೆ ನೀವು ಏನೆಲ್ಲಾ ತಯಾರಿ ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. 

ಟಿಕೆಟ್ ಪಡೆಯುವುದು ಹೇಗೆ?

ಹಾಂಗ್ ಕಾಂಗ್ ಸರ್ಕಾರವು ಉಚಿತ ವಿಮಾನ ಟಿಕೆಟ್‌ಗಳನ್ನು (free air ticket) ನೀಡುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗೋದು ಖಂಡಿತಾ ಮತ್ತು ಈ ನಗರವನ್ನು ಮತ್ತೊಮ್ಮೆ ಉನ್ನತ ಪ್ರವಾಸಿ ತಾಣವಾಗಿ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ. ಆದಾಗ್ಯೂ, ಹಾಂಗ್ ಕಾಂಗ್ ಗೆ ಬರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಚೀನಾದಿಂದ ಬಂದವರು. ಆದ್ದರಿಂದ ಇದು ಚೀನೀ ಪ್ರವಾಸಿಗರು ಯಾವಾಗ ಹಿಂತಿರುಗುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದೀಗ ಚೀನಾದ ಅನೇಕ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಇದೆ.

ಉಚಿತ ಟಿಕೆಟ್ ಪಡೆಯುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಹಾಂಕಾಂಗ್ ಆಡಳಿತವು ಮುಂದಿನ ವರ್ಷ ಕಾಂಪ್ಲಿಮೆಂಟರಿ ಟಿಕೆಟ್ ಗಳನ್ನು ವಿತರಿಸಲು ಯೋಜಿಸುತ್ತಿದೆ. ಹಾಂಗ್ ಕಾಂಗ್ ವಿಮಾನ ನಿಲ್ದಾಣದ (Hong Kong air port) ಅಧಿಕಾರಿಗಳು ಒಳಬರುವ ಮತ್ತು ಹೊರ ಹೋಗುವ ಪ್ರಯಾಣಿಕರಿಗೆ ಟಿಕೆಟ್ ಗಳನ್ನು ಒದಗಿಸುತ್ತಾರೆ.  ಪ್ರವಾಸಿಗರ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿದಾಗ, ಉಚಿತ ಟಿಕೆಟ್ ಬಗ್ಗೆ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಹಾಂಕಾಂಗ್ ಪ್ರವಾಸೋದ್ಯಮ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡೇನ್ ಚೆಂಗ್ ಹೇಳಿದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರವು ಈ ನಿಟ್ಟಿನಲ್ಲಿ ವಿಮಾನಯಾನ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.

ಹಾಂಗ್ ಕಾಂಗ್ ತೆರಳುವುದಾದರೆ ಅಲ್ಲಿನ ವೀಸಾ ಪ್ರಕ್ರಿಯೆ ಹೇಗಿರುತ್ತೆ?

ಇತ್ತೀಚೆಗೆ, ಹಾಂಗ್ ಕಾಂಗ್ ಸರ್ಕಾರವು ವೀಸಾ ಆನ್ ಅರೈವಲ್ (Visa on Arrival) ಸೌಲಭ್ಯವನ್ನು ತೆಗೆದುಹಾಕುವ ಮೂಲಕ ಇ-ವೀಸಾದ (eVisa) ಅಗತ್ಯವನ್ನು ಕಡ್ಡಾಯಗೊಳಿಸಿದೆ. ಭಾರತೀಯ ಪ್ರವಾಸಿಗರು ಈಗ ವೀಸಾಗಳಿಗಾಗಿ ತಮ್ಮನ್ನು ತಾವು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದು ಸಾಕಷ್ಟು ಸುಲಭ ಮತ್ತು ತೊಂದರೆ-ಮುಕ್ತವಾಗಿದೆ. ಒಳ್ಳೆಯ ವಿಷಯವೆಂದರೆ ಯಾವುದೇ ವೀಸಾ ಶುಲ್ಕವನ್ನು ಒಳಗೊಂಡಿಲ್ಲ ಮತ್ತು ಈ ಪ್ರಕ್ರಿಯೆಯನ್ನು ಬಹಳ ಬೇಗನೆ ಪೂರ್ಣಗೊಳಿಸಲಾಗುತ್ತದೆ.

ನಿಮಗೆ ಫ್ರೀ ಟಿಕೆಟ್ ಸಿಕ್ಕರೂ, ಅಲ್ಲಿ ಸುತ್ತಾಡಲು ಹಣ ಖರ್ಚು ಮಾಡಲೇಬೇಕು ಅಲ್ವಾ? ಕಡಿಮೆ ದರದಲ್ಲಿ ಹಾಂಗ್ ಕಾಂಗ್ ನಲ್ಲಿ ಉಳಿಯಲು ಏನು ಮಾಡಬಹುದು?
– ನೀವು ಗೆಸ್ಟ್ ಹೌಸ್ ನಲ್ಲಿ ಉಳಿಯಬಹುದು, ಇದು ರಾತ್ರಿಗೆ ಸುಮಾರು 2100 ರೂ. ಆಗಿರುತ್ತೆ
- ಬೆಸ್ಟ್ ವೆಸ್ಟರ್ನ್ ಗ್ರ್ಯಾಂಡ್ ಹೋಟೆಲಿನಲ್ಲಿ ಉಳಿಯಬಹುದು, ಇದು ರಾತ್ರಿಗೆ 3600 ರೂ.
- ಡಾರ್ಸೆಟ್ ಮೊಂಗ್ಕೋಕ್ನಲ್ಲಿ ಸ್ಟೇ ಮಾಡಬಹುದು, ಇದರ ಬೆಲೆ ಪ್ರತಿ ರಾತ್ರಿಗೆ 4500 ರೂ. ಆಗಿರುತ್ತೆ.

ಏನೇನು ನೋಡಬಹುದು?

ವೈವಿಧ್ಯಮಯ ಚಿತ್ರಗಳಿಂದ ತುಂಬಿರುವ ಈ ಸ್ಥಳವು ಬೆರಗುಗೊಳಿಸುವ ನಗರ ಭೂದೃಶ್ಯಗಳು, ಸುಂದರವಾಗಿ ನಿಂತಿರುವ ಪರ್ವತಗಳು, ವಿವಿಧ ಪಾರಂಪರಿಕ ತಾಣಗಳು (Heritage Place) ಮತ್ತು ವಿಶಾಲವಾದ ಗ್ರಾಮೀಣ ಪ್ರದೇಶಗಳೊಂದಿಗೆ ನಿಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತದೆ. ಇತರ ಕೆಲವು ಹಾಂಗ್ ಕಾಂಗ್ ಪ್ರೇಕ್ಷಣೀಯ ಸ್ಥಳಗಳೆಂದರೆ ನ್ಯಾಷನಲ್ ಜಿಯೋ ಪಾರ್ಕ್, ಪೀಕ್, ವಿಕ್ಟೋರಿಯಾ ಹಾರ್ಬರ್, ಮು ಫ್ಯಾಟ್ ಬೌದ್ಧ ವಿಹಾರ ಮತ್ತು ಯುಎನ್ ಇನ್ಸ್ಟಿಟ್ಯೂಟ್. ಅಮೃತಶಿಲೆಯ ವಾಸ್ತುಶಿಲ್ಪ, ವಸ್ತುಸಂಗ್ರಹಾಲಯಗಳು, ಕಲಾ ಗ್ಯಾಲರಿಗಳು, ವಸ್ತುಪ್ರದರ್ಶನ ಕೇಂದ್ರಗಳು, ವಸಾಹತುಶಾಹಿ ಕಟ್ಟಡಗಳು, ಭವ್ಯವಾದ ಸ್ಮಾರಕಗಳು ಮತ್ತು ಅದ್ಭುತ ವಾಸ್ತುಶಿಲ್ಪದೊಂದಿಗೆ ಇಲ್ಲಿನ ದೇಗುಲಗಳು ನಿಮ್ಮನ್ನು ಆಕರ್ಷಿಸುತ್ತವೆ.

click me!