ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಸುಂದರ ತಾಣಗಳಿವು

First Published Jun 28, 2022, 5:54 PM IST

ಭಾರತದಲ್ಲಿ ಕೆಲವು ವಿಶೇಷ ಸ್ಥಳಗಳಿವೆ, ಈ ತಾಣಗಳು ಎಷ್ಟೊಂದು ಜನಪ್ರಿಯವಾಗಿದೆ ಅಂದ್ರೆ ಇಲ್ಲಿಗೆ ಸಾಕಷ್ಟು ಜನ ದೇಶ, ವಿದೇಶದಿಂದ ಬರ್ತಾರೆ, ವರ್ಷಪೂರ್ತಿ ಈ ತಾಣಗಳಲ್ಲಿ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ, ಅಂತಹ ಅದ್ಭುತವಾದ ತಾಣಗಳು ಇವು. ಅವುಗಳಲ್ಲಿ ಅನೇಕ ತಾಣಗಳ ಹೆಸರುಗಳನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣದಲ್ಲಿ ಸಹ ಸೇರಿಸಲಾಗಿದೆ. ಇವುಗಳಲ್ಲಿ ಅನೇಕ ಐತಿಹಾಸಿಕ ಕಟ್ಟಡಗಳು (historical buildings), ಕೋಟೆಗಳು ಮತ್ತು ಗುಹೆಗಳು ಸೇರಿವೆ. 
 

ಭಾರತದಲ್ಲಿ ನೀವು ಭೇಟಿ ನೀಡಬಹುದಾದ ಅನೇಕ ದೊಡ್ಡ ತಾಣಗಳಿವೆ, ಅದರಲ್ಲಿ ಕೆಲವು ವಿಶೇಷ ಸ್ಥಳಗಳಿವೆ, ಅಲ್ಲಿ ಯಾವಾಗಲೂ ವಿದೇಶಿಯರ ಗುಂಪು ಇದ್ದೇ ಇರುತ್ತೆ. ಇವುಗಳಲ್ಲಿ ಅನೇಕ ತಾಣಗಳ ಹೆಸರುಗಳನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣದಲ್ಲಿ ಸಹ ಸೇರಿಸಲಾಗಿದೆ. ಇವುಗಳಲ್ಲಿ ಅನೇಕ ಐತಿಹಾಸಿಕ ಕಟ್ಟಡಗಳು, ಕೋಟೆಗಳು ಮತ್ತು ಗುಹೆಗಳು ಸೇರಿವೆ. ವಿದೇಶಿಯರನ್ನು ಆಕರ್ಷಿಸುವ ಅಂತಹ ಸುಂದರ ತಾಣಗಳು ಯಾವುವು ನೋಡೋಣ. 

ಆಗ್ರಾದಲ್ಲಿರುವ ತಾಜ್ ಮಹಲ್ 
ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ (7 wonders) ಒಂದಾಗಿದೆ. ಇದು ಇಸ್ಲಾಮಿಕ್ ವಿನ್ಯಾಸದ ಸುಂದರ ಮಾದರಿಯಾಗಿದ್ದು, ಕಮಾನು, ಮಿನಾರೆಟ್ ಮತ್ತು ಗುಮ್ಮಟ ಸೇರಿದಂತೆ ಅನೇಕ ಸುಂದರ ಕಲಾಕೃತಿಯನ್ನು ಹೊಂದಿದೆ. ಯಮುನಾ ನದಿಯ ದಡದಲ್ಲಿ ನಿರ್ಮಿಸಲಾದ ತಾಜ್ ಮಹಲ್ ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ.  

Latest Videos


ಕೆಂಪು ಕೋಟೆ
ಶಹಜಾನ್ 1648 ರಲ್ಲಿ ಕೆಂಪು ಕೋಟೆಯನ್ನು (red fort) ನಿರ್ಮಿಸಿದನು. ಕೆಂಪು ಕೋಟೆಯ ನಿರ್ಮಾಣದಲ್ಲಿ ಕೆಂಪು ಮರಳುಗಲ್ಲನ್ನ ಬಳಸಲಾಗಿದೆ. ಈ ಐತಿಹಾಸಿಕ ಸ್ಮಾರಕವು ಸುಮಾರು ಎರಡು ಕಿಲೋಮೀಟರ್ ವರೆಗೂ ಹರಡಿದೆ. ಇದರ ಎರಡು ಮುಖ್ಯ ದ್ವಾರಗಳೆಂದರೆ 'ಲಾಹೋರ್ ಗೇಟ್' ಮತ್ತು 'ದೆಹಲಿ ಗೇಟ್'. 

ಅಮೇರ್ ಕೋಟೆ, ಜೈಪುರ 
ಅಮೇರ್ ಕೋಟೆಯನ್ನು 1592 ರಲ್ಲಿ ನಿರ್ಮಿಸಲಾಯಿತು. ಜಿಲೇಬ್ ಚಾಕ್, ಶಿಲಾ ದೇವಿ ದೇವಾಲಯವು ಈ ಕೋಟೆಗೆ ಮತ್ತಷ್ಟು ವಿಶೇಷತೆಯನ್ನು ನೀಡುತ್ತೆ. ಅಲ್ಲದೇ ಇದರಲ್ಲಿ ಜನರಿಗಾಗಿ ಒಂದು ಸಭಾಂಗಣವೂ ಇದೆ, ಅದನ್ನು ದಿವಾನ್-ಇ-ಆಮ್ ಎಂದು ಕರೆಯಲಾಗುತ್ತದೆ  

ಗೇಟ್ ವೇ ಆಫ್ ಇಂಡಿಯಾ, ಮುಂಬೈ
ಮಾಯಾನಗರಿ ಮುಂಬೈನಲ್ಲಿ ನಿರ್ಮಿಸಲಾದ 26 ಮೀಟರ್ ಎತ್ತರದ ಗೇಟ್ ವೇ ಆಫ್ ಇಂಡಿಯಾ (Gate way of India) ದೇಶದ ಪ್ರಮುಖ ಆಕರ್ಷಣೀಯ ತಾಣವಾಗಿದೆ. ಇಲ್ಲಿಂದ ನೀವು ಅರಬ್ಬಿ ಸಮುದ್ರದ ಸೌಂದರ್ಯವನ್ನು ಕಾಣಬಹುದು. ಇದು ಮುಂಬೈನ ಅತ್ಯಂತ ವಿಶೇಷ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಂಡೋ-ಸೆರಾಸೆನಿಕ್ ವಿನ್ಯಾಸಕ್ಕೆ ಹೆಸರುವಾಸಿಯಾದ ಗೇಟ್ ವೇ ಆಫ್ ಇಂಡಿಯಾವನ್ನು ನಿರ್ಮಿಸಲು ಹಳದಿ ಬಸಾಲ್ಟ್ ಗಳು ಮತ್ತು ಕಾಂಕ್ರೀಟ್ ಬಳಸಲಾಗಿದೆ.  

ಎಲ್ಲೋರಾದ ಗುಹೆಗಳು, ಔರಂಗಾಬಾದ್ 
ಈ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನು ಐದು ಮತ್ತು ಆರನೇ ಶತಮಾನಗಳಲ್ಲಿ ಬೌದ್ಧ, ಜೈನ ಮತ್ತು ಹಿಂದೂ ಧರ್ಮದ ಸಂತರು ನಿರ್ಮಿಸಿದ್ದಾರೆ. ಇದರಲ್ಲಿಅದ್ಭುತ ಕೆತ್ತನೆಯನ್ನು ನೀವು ನೋಡಬಹುದು. ಇಲ್ಲಿ ಮಠಗಳು, ಆರಾಧನಾ ಮಂದಿರಗಳು ಮತ್ತು ದೇವಾಲಯಗಳು ಸೇರಿವೆ, ಅವುಗಳಲ್ಲಿ 12 ಬೌದ್ಧ ಧರ್ಮಕ್ಕೆ ಸೇರಿವೆ, 17 ಹಿಂದೂಗಳಿಗೆ ಮತ್ತು 5 ಜೈನ ಧರ್ಮಕ್ಕೆ ಸೇರಿವೆ.

ಮೈಸೂರು ಅರಮನೆ, ಕರ್ನಾಟಕ 
ಕರ್ನಾಟಕದಲ್ಲಿ ನೀವು ನೋಡಬಹುದಾದ ಮತ್ತು ರಾಜಪರಂಪರೆಯ ಸೊಬಗನ್ನು ಆನಂದಿಸುವ ಸುಂದರ ತಾಣ ಎಂದರೆ ಅದು ಮೈಸೂರು ಅರಮನೆ (Mysore Palace). 1897 ರಲ್ಲಿ ಸಂಭವಿಸಿದ ವಿನಾಶಕಾರಿ ಬೆಂಕಿಯ ನಂತರ ಮೈಸೂರು ಅರಮನೆಯ ಮೂರು ಅಂತಸ್ತಿನ ಅರಮನೆಯನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಲಾಯಿತು. ಅರಮನೆಯ ಒಳಗೆ ಚೌಕಾಕಾರದ ಗೋಪುರಗಳು ಮತ್ತು ಗುಮ್ಮಟಗಳಿವೆ. ಆಸ್ಥಾನದಲ್ಲಿ ಮದುವೆ ಮಂಟಪವೂ ಇದೆ.  

ಮೆಹ್ರಾನ್ ಘರ್ ಕೋಟೆ, ಜೋಧಪುರ
15 ನೇ ಶತಮಾನದಲ್ಲಿ ನಿರ್ಮಿಸಲಾದ ಮೆಹ್ರಾನ್ ಘರ್ ಕೋಟೆಯು ಭಾರತದ ಅತಿದೊಡ್ಡ ಕೋಟೆಯಾಗಿದೆ. ಈ ಕಟ್ಟಡವನ್ನು ಜೋಧಪುರದ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಕೋಟೆಯು ಮಹಾರಾಜರಿಗೆ ಸಂಬಂಧಿಸಿದ ಕಲಾಕೃತಿಗಳ ಸಂಗ್ರಹವನ್ನು ಹೊಂದಿರುವ ಮ್ಯೂಸಿಯಂ ನ್ನು ಸಹ ಹೊಂದಿದೆ.  

ಕುತುಬ್ ಮಿನಾರ್, ನವದೆಹಲಿ
ರಾಜಧಾನಿ ದೆಹಲಿಯಲ್ಲಿ ನಿರ್ಮಿಸಲಾದ ಕುತುಬ್ ಮಿನಾರ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. 1193 ರಲ್ಲಿ ದೆಹಲಿಯ ಕೊನೆಯ ಹಿಂದೂ ಸಾಮ್ರಾಜ್ಯವನ್ನು ಸೋಲಿಸಿದ ನಂತರ ಕುತುಬ್-ಉದ್-ದಿನ್-ಐಬಕ್ 73 ಮೀಟರ್ ಎತ್ತರದ ಗೋಪುರ ನಿರ್ಮಿಸಿದನು. ಕುತುಬ್ ಮಿನಾರ್ ನಲ್ಲಿ ಐದು ವಿಭಿನ್ನ ಮಹಡಿಗಳಿವೆ.  ಇದು ನೀವು ನೋಡಬಹುದಾದ ಸುಂದರ ತಾಣವಾಗಿದೆ. 

click me!