ತಲೆ ಬುರುಡೆಗೆ ಆಕರ್ಷಕ ಅಲಂಕಾರ: ಮೆಕ್ಸಿಕೋದಲ್ಲಿ ನಡೆಯುತ್ತೆ ಸತ್ತವರ ದಿನದ ಸಂಭ್ರಮ

First Published | Oct 19, 2020, 3:29 PM IST

ಮೆಕ್ಸಿಕೋದಲ್ಲಿದೆ ವಿಚಿತ್ರ ಆಚರಣೆ | ಸತ್ತವರ ನೆನಪಿನಲ್ಲೊಂದು ದಿನ | ಸತ್ತರವರ ದಿನವನ್ನು ಅದ್ಧೂರಿಯಾಗಿ ಆಚರಿಸ್ತಾರೆ ಮೆಕ್ಸಿಕೋ ಜನ

ಈ ಉತ್ಸವವನ್ನು 2008ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು. ಸತ್ತವರ ದಿನವನ್ನು ಸಾಮಾನ್ಯವಾಗಿ ನವೆಂಬರ್ ಮೊದಲ ದಿನಗಳಲ್ಲಿ ಆಚರಿಸಲಾಗುತ್ತದೆ. ಮೃತಪಟ್ಟ ಎಲ್ಲಾ ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ಆ ದಿನಗಳನ್ನುಮೀಸಲಿಡಲಾಗಿದೆ. ಸತ್ತವರಿಗೆ ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ.
ಆ ವಿಶೇಷ ದಿನ ಎಲ್ಲರೂ ಒಟ್ಟುಗೂಡಿ ಈ ಪ್ರಾರ್ಥನೆ ಮಾಡುತ್ತಾರೆ. ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಮನುಷ್ಯನಿಗೆ ಸಾವು ಅನಿವಾರ್ಯ. ಸಾವಿಗೆ ಭಯಪಡಬೇಕಿಲ್ಲ, ಅದಕ್ಕೆ ಸಿದ್ಧರಿರಬೇಕು ಎಂದೂ ನೆನಪಿಸಲಾಗುತ್ತದೆ.
Tap to resize

ಸತ್ತವರ ದಿನ, ಎಲ್ಲರೂ ಶೋಕದಲ್ಲಿ ಬಿಳಿ ಅಥವಾ ಕಪ್ಪು ಬಟ್ಟೆಯಲ್ಲಿರುತ್ತಾರೆ ಎಂದುಕೊಂಡರೆ ತಪ್ಪು. ಮೆಕ್ಸಿಕೋ ಸತ್ತವರ ದಿನದ ಚಿತ್ರಣವೇ ಬೇರೆ. ಆ ದಿನ ಸತ್ತವೂ ಬಂದು ಬದುಕಿದ್ದವರ ದಿನ ಸಂಭ್ರಮಿಸುತ್ತಾರೆ ಎಂದು ನಂಬಲಾಗುತ್ತದೆ. ಹಾಗಾಗಿಯೇ ಇದು ಭಾರೀ ಅದ್ಧೂರಿಯಾಗಿ ನಡೆಯುತ್ತದೆ
ಮೆಕ್ಸಿಕೋದಲ್ಲಿ ಸತ್ತವರ ದಿನ ಸರ್ಕಾರಿ ರಜೆ. ಈ ಆಚರಣೆಯನ್ನು ಸ್ಪಾನಿಷ್ ವಸಾಹತಿಕರಣದ ಮೊದಲೇ ಆರಂಭಿಸಲಾಯಿತು. ಆರಂಭದಲ್ಲಿ ಈ ಆಚರಣೆ ನಡೆಯುತ್ತಿದ್ದುದು ಬೇಸಗೆಯಲ್ಲಿ
ಆದರೆ ನಂತರ ಪಾಶ್ಚಾತ್ಯ ಕ್ರಿಶ್ಚಿಯನ್ ವಿಧಿಗಳಾದ ಆಲ್ ಸೇಂಟ್ಸ್ ಈವ್, ಆಲ್ ಸೇಂಟ್ಸ್ ಡೇ, ಮತ್ತು ಆಲ್ ಸೋಲ್ಸ್ ಡೇ ಜೊತೆಗೆ, ಸತ್ತವರ ಹಬ್ಬದ ಆಚರಣೆಯೂ ನಡೆಯಲಾರಂಭಿಸಿತು. ಇದನ್ನು ಅಕ್ಟೋಬರ್ 31, ನವೆಂಬರ್ 1, 2ರಂದು ಆಚರಿಸುತ್ತಾರೆ
ಸತ್ತವರಿಗಾಗಿ ಅವರ ಪ್ರೀತಿಪಾತ್ರರು ಅನೇಕ ಸಿದ್ಧತೆಗಳನ್ನು ಮಾಡುತ್ತಾರೆ. ಸತ್ತವರ ಸಮಾಧಿಯನ್ನು ಒಫ್ರೆಂಟಾಸ್ ಎಂದು ಕರೆಯುತ್ತಾರೆ. ಸತ್ತವರನ್ನು ಗೌರವಿಸಲು ವಿವಿಧ ಹೂವುಗಳನ್ನು ಇಟ್ಟು ಅಲಂಕರಿಸುತ್ತಾರೆ. ಸತ್ತವರ ಭಕ್ಷ್ಯಗಳು ಮತ್ತು ಪಾನೀಯಗಳನ್ನು ಅವರ ಸಮಾಧಿಯಲ್ಲೇ ತಯಾರಿಸಿ ಬಡಿಸುತ್ತಾರೆ
ಪಾನ್ ಡಿ ಮೊರ್ಟೋ: ಪಾನ್ ಡಿ ಮುರ್ಟೋ ಎಂಬ ವಿಶೇಷ ಆಹಾರವನ್ನು ಸೇವಿಸಲಾಗುತ್ತದೆ. ಇದು ಆರೆಂಜ್ ಫ್ಲೇವರ್‌ನಲ್ಲಿ ಮಾಡಲಾಗುವ ಸ್ವೀಟ್ ಬ್ರೆಡ್. ಇದನ್ನು ಎಲುಬಿನ ರೀತಿಯಲ್ಲೇ ತಯಾರಿಸಲಾಗುತ್ತದೆ
ಪಾನ್ ಡಿ ಮೊರ್ಟೋ: ಪಾನ್ ಡಿ ಮುರ್ಟೋ ಎಂಬ ವಿಶೇಷ ಆಹಾರವನ್ನು ಸೇವಿಸಲಾಗುತ್ತದೆ. ಇದು ಆರೆಂಜ್ ಫ್ಲೇವರ್‌ನಲ್ಲಿ ಮಾಡಲಾಗುವ ಸ್ವೀಟ್ ಬ್ರೆಡ್. ಇದನ್ನು ಎಲುಬಿನ ರೀತಿಯಲ್ಲೇ ತಯಾರಿಸಲಾಗುತ್ತದೆ
ಬಹಳಷ್ಟು ವರ್ಷಗಳ ನಂತವೂ ಸತ್ತವರ ಆಚರಣೆ ಇಂದಿಗೂ ಮೆಕ್ಸಿಕೊದಲ್ಲಿ ಸಕ್ರಿಯವಾಗಿದೆ.

Latest Videos

click me!