ಗುಜರಾತ್‌ನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಏಕತಾ ಪ್ರತಿಮೆಬರೋಬ್ಬರಿ 7 ತಿಂಗಳ ನಂತರ ಪ್ರವಾಸಿಗರಿಗೆ ತೆರೆದುಕೊಂಡಿದೆ.
ಆದರೆ ಬಹಳಷ್ಟು ನಿಬಂಧನೆಗಳನ್ನು ವಿಧಿಸಲಾಗಿದ್ದು, ಒಂದು ದಿನ 2500 ಪ್ರವಾಸಿಗರಷ್ಟೇ ಭೇಟಿ ನೀಡಬಹುದಾಗಿದೆ.
ಬರೀ 500 ಪ್ರವಾಸಿಗರು ಒಂದು ಸಲ ವ್ಯೂ ಗಾಲರಿಗೆ ಭೇಟಿ ನೀಡಬಹುದಾಗಿದೆ.
ಸುಮಾರು 7 ತಿಂಗಳು ಕೊರೋನಾದಿಂದಾಗಿ ಮುಚ್ಚಲ್ಪಟ್ಟಿದ್ದ ಪ್ರವಾಸಿ ತಾಣ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದೆ.
ಪ್ರವಾಸಿಗರಿಗೆ ಟಿಕೆಟ್ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದೆ
ಎರಡು ಗಂಟೆ ಸ್ಲಾಟ್ ಪ್ರಕಾರ ಪ್ರವಾಸಿಗರು ಟಿಕೆಟ್ ಬುಕ್ ಮಾಡಿಕೊಳ್ಳಬಹುದುದಾಗಿದೆ.
ಪ್ರತಿ ಪ್ರವಾಸಿಗರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದ್ದು, ಸಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕಿದೆ.
Suvarna News