ಹೋಯಾ ಬಿಜು ಎನ್ನುವ ಈ ಕಾಡು ಟ್ರಾನ್ಸಿಲ್ವೇನಿಯಾದ ರೋಮಾನಿಯಾದಲ್ಲಿದೆ. ದೆವ್ವಗಳ ರಾಜ ಡ್ರ್ಯಾಕುಲಾಗೆ ಸೇರಿದ ಜಾಗವಂತೆ ಇದು. ಇಲ್ಲಿ ನಡೆಯುವ ಚಿತ್ರ, ವಿಚಿತ್ರ ಘಟನೆಗಳು ಯಾರ ತರ್ಕಕ್ಕೂ ಸಿಗುವುದಿಲ್ಲ.ರೋಮಾನಿಯಾದ ಬರ್ಮುಡಾ ಟ್ರಯಾಂಗಲ್ ಎಂದೂ ಈ ಪ್ರದೇಶವನ್ನು ಕರೆಯುತ್ತಾರೆ.
undefined
ಸ್ಥಳೀಯರಿಗೆ ಈ ಪ್ರದೇಶವೊಂದು ದುಃಸ್ವಪ್ನ.ಸುಮಾರು 50 ವರ್ಷಗಳ ಹಿಂದೆ ಇಡೀ ವಿಶ್ವಕ್ಕೆ ಈ ಪ್ರದೇಶದ ಅಸ್ತಿತ್ವ ಅರಿವಿಗೆ ಬಂದಿದೆ. ಆಗಸ್ಟ್ 18, 1968ರಲ್ಲಿ ಮಿಲಿಟರಿ ಟೆಕ್ನಿಷಿಯನ್ ಎಮಿಲ್ ಬರ್ನಿಯಾ ಎಂಬ ವ್ಯಕ್ತಿ ಈ ಪ್ರದೇಶದ ಫೋಟೋ ತೆಗೆದಿದ್ದು, ಅದರಿಂದ ಈ ಕಾಡು ವಿಶ್ವದಲ್ಲಿಯೇ ಪ್ರಸಿದ್ಧಿಯಾಯಿತು.
undefined
ಈ ಕಾಡಿನಲ್ಲಿ ರಾತ್ರಿ ಹೊತ್ತು ಪ್ರಕಾಶಮಾನವಾದ ಬೆಳಕು ಕಾಣುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಅಷ್ಟೇ ಅಲ್ಲ ಹೆಂಗಳೆಯರು ವಿಚಿತ್ರ ಕೂಗುವ ಸದ್ದು ಈ ಪ್ರದೇಶದಲ್ಲಿ ಕೇಳಿ ಬರುತ್ತದೆ ಎಂಬುವುದು ಅಲ್ಲಿಯವರು ಅಂಬೋಣ. ಆ ಕಾಡಿನಲ್ಲಿ ಚಿತ್ರ ವಿಚಿತ್ರ ಪ್ರಾಣಿಗಳೆಂದರೆ ದೊಡ್ಡ ದೊಡ್ಡ ತೋಳಗಳು, ಹಲವು ತಲೆ ಇರುವ ಮನುಷ್ಯರು, ಆಕಾಶದೆತ್ತರದ ಮರಗಳು...ಮುಂತಾದ ಕೇವಲ ಹಾರರ್ ಚಿತ್ರಗಳಲ್ಲಿ ಮಾತ್ರ ಕಾಣಬಹುದಾದ ಜೀವಿಗಳನ್ನು ನೋಡಬಹುದಂತೆ.
undefined
ಅಪ್ಪಿತಪ್ಪಿ ಈ ಕಾಡೊಳಗೆ ಯಾರಾದರೂ ಕಾಲಿಟ್ಟರೋ, ಮತ್ತೆ ಮರಳುವುದು ಅಸಂಭವವಂತೆ. ಕುರಿ ಕಾಯುವ ಹೊಯಾ ಬಸ್ಯೂ ಎಂಬುವವನು ಇಲ್ಲಿಗೆ ತೆರಳಿದವರನು ಮಿಸ್ ಆದ ನಂತರವೇ ಈ ಕಾಡಿಗೆ ಅವನ ಹೆಸರನ್ನೇ ಇಡಲಾಗಿದೆ. ಮತ್ತೊಬ್ಬ ಬಾಲಕ ಈ ಕಾಡೊಳಗೆ ಹೋಗಿ ಐದು ವರ್ಷಗಳ ನಂತರ ಮರಳಿದ್ದನಂತೆ. ಆದರೆ, ಯಾವುದೂ ಅವನಿಗೆ ನೆನಪಿರಲಿಲ್ಲವಂತೆ. ಐದು ವರ್ಷದ ಧರಿಸಿದ ಬಟ್ಟೆಯೂ ಹೊಚ್ಚ ಹೊಸತರಂತೆ ಇತ್ತಂತೆ!
undefined
ಹತ್ತು ಹಲವು ಚಿತ್ರ, ವಿಚಿತ್ರ, ತರ್ಕಕ್ಕೆ ನಿಲುಕದ ನಿಗೂಢ ಘಟನೆಗಳಿಗೆ ಈ ಪ್ರದೇಶ ಹೆಸರವಾಸಿ. ಈ ಕಾಡೊಳಗೆ ಹೋದವರಿಗೆಬಗೆ ಬಗೆಯ ಭಯಾನಕ ಅನುಭವಗಳಾಗಿವೆಯಂತೆ. ಈ ಕಾಡೊಳಗೆ ನುಗ್ಗಿದ ಮನುಷ್ಯನಿಗೆ ವಿಚಿತ್ರ ಭಯವೊಂದು ಆವರಿಸಿಕೊಳ್ಳುತ್ತದೆಯಂತೆ. ಮತ್ತೆ ಮರಳಿದವರಿಗೆ ದೇಹವೇ ಸುಟ್ಟು ಹೋದಂತೆ ಅನುಭವವಾಗಿದೆಯಂತೆ. ಮೈ ತುರಿಕೆ, ಮೈ ಜಜ್ಜಿದ ಅನುಭವಗಳೂ ಆಗಿದವರಿದ್ದಾರೆ.
undefined
ಕಾಡಲ್ಲಿ ತೆಗೆದ ಫೋಟೋಗಳೂ ವಿಚಿತ್ರವಾಗಿರುತ್ತವಂತೆ. ಫೋಟೋ ತೆಗೆದವರ ನೆರಳೇ ಚಿತ್ರ ವಿಚಿತ್ರವಾಗಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿರುತ್ತವೆಯಂತೆ.
undefined
ಈ ಕಾಡಿನ ಫೋಟೋ ತೆಗೆದ ಜೀವಶಾಸ್ತ್ರಜ್ಞನೊಬ್ಬನಿಗೂ ವಿಚಿತ್ರ ಅನುಭವವಾಗಿದೆ. ಅವನು ಸಾಯೋ ಸ್ವಲ್ಪ ದಿನಗಳ ಮುಂದೆ ತೆಗೆದ ಫೋಟೋಗಳೆಲ್ಲವೂ ಮಾಯವಾಗಿದ್ದವಂತೆ. ಹೇಗೆ ಎಂಬುವುದಿನ್ನೂನಿಗೂಢ.
undefined
ಯಾವೂದೋ ನಿಗೂಢ ಜೀವಿಗಳು, ದೆವ್ವಗಳು ಈ ಪ್ರದೇಶವನ್ನು ಆಳುತ್ತಿವೆ ಎಂದೇ ನಂಬಲಾಗುತ್ತಿದೆ.
undefined
ಆದರೆ, ಸಾಹಸ ಪ್ರವೃತ್ತಿಯುಳ್ಳ ಪ್ರವಾಸಿಗರನ್ನು ಸೆಳೆಯಲು, ಇದೊಂದು ಅದ್ಭುತ ಟೆಕ್ನಿಕ್ ಎಂದೂ ಹೇಳಲಾಗುತ್ತಿದೆ.
undefined