ಆಂಸ್ಟೆಲ್ ನದಿ ಇರುವ ಡ್ಯಾಮ್‌ನಿಂದ ಈ ನಗರಕ್ಕೆ ಆರ್ಮಸ್ಟ್ರಡಾಮ್ ಎಂಬ ಹೆಸರು ಬಂದಿದೆ. ನೆದರ್ಲ್ಯಾಂಡ್ಸ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದ ಈ ನಗರ ದೇಶದ ಪಶ್ಚಿಮ ಭಾಗದಲ್ಲಿರುವ ಉತ್ತರ ಹಾಲೆಂಡ್ ಪ್ರದೇಶದಲ್ಲಿದೆ.
Amsterdam ಯುರೋಪಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದು. ನಗರವು ತನ್ನ ಹಿಂದಿನ, ವಿಸ್ತಾರವಾದ ಕಾಲುವೆ ವ್ಯವಸ್ಥೆ ಮತ್ತು ಅವರ ಸಾಂಪ್ರದಾಯಿಕ, ಕಿರಿದಾದ ಮನೆಗಳ ವಾಸ್ತುಶಿಲ್ಪಕ್ಕೆ ಹೆಸರುವಾಸಿ.
ಎಲ್ಲೆಡೆ ಸುಂದರ ಕಾಲುವೆಗಳು, ಗುಮ್ಮಟ ಬೀದಿಗಳು ಮತ್ತು ಹೂಗೊಂಚಲುಗಳು ಕಂಡು ಬರುವ Amsterdam ನಿಸ್ಸಂದೇಹವಾಗಿ ರೊಮ್ಯಾಂಟಿಕ್ ನಗರ. 4 ಸ್ಟಾರ್ ವಸತಿಗಳು, ಒಪನ್ ಏರ್ ಡೈನಿಂಗ್ ಮತ್ತು ಪ್ರಾಚೀನ ಕಾಲುವೆ ವ್ಯವಸ್ಥೆಗಳು ಮಧುಚಂದ್ರಕ್ಕೆ ಬೆಸ್ಟ್.
ಹಳೇ ಕೇಂದ್ರ, ರೆಡ್‌ಲೈಟ್, ಡ್ಯಾಮ್ ಸ್ಕ್ವೇರ್, ಗ್ರಾಚ್ಟೆನ್‌ಗಾರ್ಡೆಲ್ ಮತ್ತು ಮ್ಯೂಸಿಯಂಗಳಿಗೆ ಸುತ್ತಾಡಲು ಕಾಲ್ನಡಿಗೆ ಹಾಗೂ ಬೈಕ್ ಸವಾರಿ ಜನಪ್ರಿಯ.
ಎಲ್ಲೆಡೆ ಸುಂದರ ಕಾಲುವೆಗಳು, ಗುಮ್ಮಟ ಬೀದಿ ಹಾಗೂ ಹೂಗೊಂಚಲುಗಳು ಕಂಡು ಬರುವ ಈ ನಗರ ನಿಸ್ಸಂದೇಹವಾಗಿ ರೊಮ್ಯಾಂಟಿಕ್ ತಾಣ. 4 ಸ್ಟಾರ್ ವಸತಿಗಳು, ಒಪನ್ ಏರ್ ಡೈನಿಂಗ್ ಮತ್ತು ಪ್ರಾಚೀನ ಕಾಲುವೆ ವ್ಯವಸ್ಥೆಗಳು ಮಧುಚಂದ್ರಕ್ಕೆ ಬೆಸ್ಟ್.
ಡಚ್ ರಾಜಧಾನಿಗೆ ಭೇಟಿ ನೀಡಲು ಬೆಸ್ಟ್ ಸಮಯ ವಸಂತಕಾಲ, ಟುಲಿಪ್ಸ್, ಡ್ಯಾಫೋಡಿಲ್ಸ್ ಮತ್ತು ಕ್ರೋಕಸ್ ಹೂವಿನಿಂದ ತುಂಬಿರುವ ಹೊಲಗಳು ಮತ್ತು ನಗರ ಉದ್ಯಾನಗಳು ಕಣ್ಣಿಗೆ ಹಬ್ಬ.
ಈ ಕಾರಣದಿಂದಲೇ ನಿವಿ-ಚಂದನ್ ಜೋಡಿ ಈ ತಾಣವನ್ನು ಹನಿಮೂನಿಗೆ ಆರಿಸಿಕೊಂಡಿದೆ.
ಡಚ್ ಇಲ್ಲಿನ ಅಧಿಕೃತ ಭಾಷೆಯಾದರೂ ಎಲ್ಲರೂ ಇಂಗ್ಲೀಷ್ ಮಾತಾಡಬಲ್ಲರು. ಅತಿ ವೇಗವಾಗಿ ಚಲಿಸುವ ಬಸ್, ಮೆಟ್ರೋ ಮತ್ತು ಟ್ರಾಮ್ ಸವಾರಿಗಳನ್ನು ಇಲ್ಲಿನ ಸಾರಿಗೆ ವಿಶೇಷ.
ಈ ನಗರ ಪ್ರಭಾವಶಾಲಿ ಮತ್ತು ದುಬಾರಿಯಲ್ಲದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಬೈಸಿಕಲ್, ಮೆಟ್ರೋ, ಬಸ್ಸು, ದೋಣಿ ಮತ್ತು ರೈಲುಗಳನ್ನು ಬಳಸುತ್ತಾರೆ.
ಹನಿಮೂನ್ ಎಂಜಾಯ್ ಮಾಡುತ್ತಿರುವ ನವದಂಪತಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಫೋಟೊ.