ಟ್ರೆಂಡ್ ಆಗುತ್ತಿದೆ ಸ್ಲೀಪ್ ಟೂರಿಸಂ; ಎಲ್ಲಿವೆ ಸ್ಲೀಪಿಂಗ್ ಟೂರ್ ತಾಣಗಳು?

First Published | Sep 10, 2024, 7:38 PM IST

ದೇಶದಲ್ಲಿ ಇದೀಗ ಸ್ಲೀಪಿಂಗ್ ಟೂರಿಸಂ (Sleep tourism) ಪರಿಕಲ್ಪನೆ ತುಂಬಾ ಟ್ರೆಂಡ್ ಆಗುತ್ತಿದೆ. ಒಮ್ಮೆ ನಾವೇನಾದರೂ ಪ್ರವಾಸಕ್ಕೆ ಹೋಗಿ ಬಂದತೆ ಕೈ ಕಾಲು-ಮೈ ನೋವು ಮಾಡಿಕೊಂಡು, ಸುಸ್ತಾಗಿ, ಸರಿಯಾದ ಊಟ-ನಿದ್ರೆಯೂ ಇಲ್ಲದೇ ಬಳಲುವ ಸ್ಥಿತಿಗೆ ನಾವು ತಲುಪಿರುತ್ತೇವೆ. ಹೀಗಾಗಿ, ಪ್ರವಾಸಕ್ಕೆ ಹೋಗಿ ಬಂದರೆ ಕನಿಷ್ಠ ಒಂದೆರೆಡು ದಿನ ವಿಶ್ರಾಂತಿ ಬೇಕಾಗುತ್ತದೆ. ಆದರೆ, ಇಲ್ಲಿ ನಿಮಗೆ ಪ್ರವಾಸದಲ್ಲಿ ಒತ್ತಡ ರಹಿವಾಗಿ ಹಾಗೂ ನಿದ್ರೆಗೆ ಭಂಗ ತರದಂತಹ ಪ್ರವಾಸ ಆಯೋಜನೆ ಮಾಡುವುದೇ ಸ್ಲೀಪಿಂಗ್ ಟೂರಿಸಂ ಆಗಿದೆ. ಇದೀಗ ದೇಶದಲ್ಲಿ ಸ್ಲೀಪಿಂಗ್ ಟೂರಿಸಂ ಹೆಚ್ಚು ಟ್ರೆಂಡ್ ಆಗುತ್ತಿದೆ. ಹಾಗಾದರೆ, ಸ್ಲೀಪಿಂಗ್ ಟೂರಿಸಂ ಎಂದರೇನು? ಎಲ್ಲಿವೆ ಈ ತಾಣಗಳು ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಲೀಪ್ ಟೂರಿಸಂ ಎಂದರೇನು?
ಸ್ಲೀಪ್ ಟೂರಿಸಂ ಎನ್ನುವುದು ನಿದ್ರೆ ಮತ್ತು ವಿಶ್ರಾಂತಿಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುವ ಸ್ಥಳಗಳಿಗೆ ಪ್ರಯಾಣಿಸುವ ಅಭ್ಯಾಸವನ್ನು ಸೂಚಿಸುತ್ತದೆ. ಈ ಸ್ಥಳಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ವಿವಿಧ ಸೇವೆಗಳು ಮತ್ತು ಸೌಕರ್ಯಗಳನ್ನು ನೀಡುತ್ತವೆ, ಉದಾಹರಣೆಗೆ ನಿದ್ರೆ-ವರ್ಧಿಸುವ ಪರಿಸರಗಳು, ವಿಶೇಷ ನಿದ್ರೆ ಚಿಕಿತ್ಸೆಗಳು ಮತ್ತು ವಿಶ್ರಾಂತಿ ತಂತ್ರಗಳು.

ಸ್ಲೀಪಿಂಗ್ ಪ್ರವಾಸೋದ್ಯಮವು ಸರಿಯಾದ ನಿದ್ರೆ, ವಿಶ್ರಾಂತಿ ಮತ್ತು ಒತ್ತಡ ಪರಿಹಾರಕ್ಕಾಗಿ ಪ್ರಯಾಣದ ಮೇಲೆ ಕೇಂದ್ರೀಕೃತವಾಗಿರುವ ಪ್ರವೃತ್ತಿಯಾಗಿದೆ. ಇದು ಸಾಮಾನ್ಯವಾಗಿ ಯೋಗ, ಈಜು, ಸ್ಪಾ ಮಸಾಜ್ ಮತ್ತು ಆರೋಗ್ಯಕರ ಆಹಾರದ ಆಯ್ಕೆಗಳಂತಹ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಗಂಟೆಗಟ್ಟಲೇ ಯಾವುದೇ ಅಡೆತಡೆಯಿಲ್ಲದ ನಿದ್ರೆಯನ್ನು ಮಾಡಲು ಅವಕಾಶ ನೀಡುತ್ತದೆ. ಈ ಪ್ರಯಾಣದ ಶೈಲಿಯು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅತಿಯಾದ ಕೆಲಸ ಮಾಡುವ ವೃತ್ತಿಪರರು ಮತ್ತು ಒತ್ತಡದ ಜೀವನವನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಸ್ಲೀಪಿಂಗ್ ಟೂರಿಸಂ ಅತಿಹೆಚ್ಚು ಇಷ್ಟವಾಗಿತ್ತದೆ.

Tap to resize

ಸ್ಲೀಪ್ ಟೂರಿಸಂ ಅನ್ನು ಬಯಸುವ ಜನರು ಸಾಮಾನ್ಯವಾಗಿ ಗುಣಮಟ್ಟದ ನಿದ್ರೆಯನ್ನು ಪಡೆಯುವಲ್ಲಿ ಹೆಣಗಾಡುತ್ತಾರೆ. ವಯಸ್ಕರಿಗೆ 7-9 ಗಂಟೆಗಳ ಕಾಲ ನಿದ್ರೆ ಅಗತ್ಯವಿದೆ. ಆದರೆ, ಭಾರತೀಯರು ಸರಾಸರಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ. ನಿದ್ರಾಹೀನತೆಯು ಉತ್ಪಾದನೆ ಮತ್ತು ಕೆಲಸದ ಮೇಲೆ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಪುನಶ್ಚೇತನಗೊಳಿಸಲು ನಿದ್ರೆ ಅಗತ್ಯವಾಗಿದೆ. ಇದಕ್ಕೆಂದೇ ಸ್ಲೀಪ್ ಟೂರಿಸಂ ಯೋಗ, ಧ್ಯಾನ, ಸ್ಪಾ ಚಿಕಿತ್ಸೆಗಳು, ನಿಸರ್ಗ ವಿಹಾರಗಳು ಮತ್ತು ಆಯುರ್ವೇದಿಕ್ ಮಸಾಜ್‌ಗಳಂತಹ ಚಟುವಟಿಕೆಗಳನ್ನು ಒಳಗೊಂಡಿದೆ. ಇದು ಪ್ರವಾಸಿಗರ ಮನಸ್ಥಿತಿಯನ್ನು ಉತ್ತೇಜನಗೊಳಿಸಿ, ಪರಿಣಾಮವಾಗಿ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ.

ಪ್ರವಾಸಕ್ಕೆ ರಜೆ ತೆಗೆದುಕೊಂಡು ಹೋಗುವ ಅನೇಕರು ತಮ್ಮ ರಜೆಯಲ್ಲಿ ಕಳೆದ ಪ್ರವಾಸದ ಆಯಾಸದಿಂದ ಚೇತರಿಸಿಕೊಳ್ಳಲು ಪುನಃ ರಜೆಯ ಅಗತ್ಯವಿದೆ ಎನ್ನುತ್ತಾರೆ. ಆದರೆ, ಸ್ಲೀಪ್ ಟೂರಿಸಂ ಮಾಡಿದ ವ್ಯಕ್ತಿಗಳು ಕೆಲಸಕ್ಕಾಗಿ ರಿಫ್ರೆಶ್ ಮತ್ತು ಶಕ್ತಿಯುತವಾಗಿರುತ್ತಾರೆ. ಭಾರತದಲ್ಲಿ ಸ್ಲೀಪ್ ಟೂರಿಸಂ‌ಗಾಗಿ ಟಾಪ್ 5 ತಾಣಗಳು ಇಲ್ಲಿವೆ.

ಕೊಡಗು - ಹಸಿರು ಮತ್ತು ಶಾಂತ ವಾತಾವರಣಕ್ಕೆ ಹೆಸರುವಾಸಿಯಾದ ಕೊಡಗಿನ ಕೆಲವು ರೆಸಾರ್ಟ್‌ಗಳು ಧ್ಯಾನ ತರಗತಿಗಳು, ಆಯುರ್ವೇದಿಕ್ ಚಿಕಿತ್ಸೆಗಳು ಮತ್ತು ಚಿಕಿತ್ಸಾ ಅವಧಿಗಳನ್ನು ಒಳಗೊಂಡಂತೆ ನಿದ್ರೆ-ಕೇಂದ್ರಿತ ಪ್ಯಾಕೇಜ್‌ಗಳನ್ನು ನೀಡುತ್ತವೆ.

ಕೊಡೈಕೆನಲ್ - 'ಹಸಿರು ಪರ್ವತಗಳ ರಾಣಿ' ಎಂದು ಕರೆಯಲ್ಪಡುವ ಕೊಡೈಕೆನಲ್ ತಮಿಳುನಾಡಿನಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿ ಹೋಮ್ ಮೆಡ್ ಚಾಕೊಲೇಟ್‌ಗಳು ಮತ್ತು ಶುದ್ಧ ನೀಲಗಿರಿ ಎಣ್ಣೆಗೆ ಹೆಸರುವಾಸಿಯಾಗಿವೆ. ಇದು ಕೂಡ ಸ್ಲೀಪ್ ಟೂರಿಸಂ ತಾಣವಾಗಿದೆ.

Mysuru dasara

ಮೈಸೂರು - ನೀವು ದೇವಸ್ಥಾನ ಪ್ರಿಯರಾಗಿದ್ದರೆ, ಪ್ರಾಚೀನ ದೇವಾಸ್ಥಾನಗಳು ಮತ್ತು ರುಚಿಕರವಾದ ಆಹಾರಕ್ಕೆ ಹೆಸರುವಾಸಿಯಾದ ಮೈಸೂರು ಉತ್ತಮ ಆಯ್ಕೆಯಾಗಿದೆ. ಇದು ಯೋಗ ಮತ್ತು ಆಯುರ್ವೇದಿಕ್ ರಿಟ್ರೀಟ್ ಪ್ಯಾಕೇಜ್‌ಗಳನ್ನು ಒಳಗೊಂಡಂತೆ ಹಲವಾರು ಸ್ಲೀಪ್ ಟೂರಿಸಂ ಆಯ್ಕೆಗಳನ್ನು ನೀಡುತ್ತದೆ.

ಗೋವಾ - ದೇಶದಲ್ಲಿ ಗೋವಾ ಮತ್ತೊಂದು ನೆಚ್ಚಿನ ಪ್ರವಾಸಿ ತಾಣವಾಗಿದ್ದು, ಇದು ವಿವಿಧ ಸ್ಲೀಪ್ ಟೂರಿಸಂ ಆಯ್ಕೆಗಳನ್ನು ನೀಡುತ್ತದೆ. ಗೋವಾದಲ್ಲಿರುವ ಅನೇಕ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು ಸ್ಪಾ ಚಿಕಿತ್ಸೆಗಳು, ಯೋಗ ತರಗತಿಗಳು ಮತ್ತು ಆರೋಗ್ಯಕರ ಆಹಾರ ಆಯ್ಕೆಗಳಂತಹ ವಿಶ್ರಾಂತಿ ಮತ್ತು ಪುನಶ್ಚೇತನಗೊಳಿಸುವಿಕೆಗಾಗಿ ಪ್ಯಾಕೇಜ್‌ಗಳನ್ನು ಒದಗಿಸುತ್ತವೆ.

ರಿಷಿಕೇಶ - ದೆಹಲಿಯಿಂದ 5 ಗಂಟೆಗಳ ದೂರದಲ್ಲಿರುವ ರಿಷಿಕೇಶವು ಸುಂದರವಾದ ಪರ್ವತಗಳಿಂದ ಆವೃತವಾಗಿದೆ. ಮತ್ತು ಬಿಯಾಸ್ ನದಿಯ ಅದ್ಭುತ ನೋಟಗಳನ್ನು ನೀಡುತ್ತದೆ. ನೀಲಿ ನೀರಿನ ಶಬ್ದ ಮತ್ತು ತಂಪಾದ ತಂಗಾಳಿಯು ರಿಷಿಕೇಶದ ಆರಾಮದಾಯಕ ಕೋಣೆಗಳಲ್ಲಿ ನಿಮ್ಮನ್ನು ಸುಲಭವಾಗಿ ನಿದ್ರೆಗೆ ಜಾರುವಂತೆ ಮಾಡುತ್ತದೆ.

Latest Videos

click me!