ಭಾರತೀಯ ರೈಲ್ವೆ ಇಲಾಖೆ ನಿಯಮದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಎಷ್ಟು ಆಧ್ಯತೆ ನೀಡಲಾಗಿದೆಯೋ, ಅಷ್ಟೇ ಮುಖ್ಯವಾಗಿ ಪ್ರಯಾಣಿಕರ ಸಂಚಾರಕ್ಕೂ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ನೀವು ಸ್ಲೀಪರ್ ಕೋಚ್ ಬುಕ್ ಮಾಡಿದ್ದರೂ, ಮಧ್ಯದ ಸೀಟು ಸಿಕ್ಕಿದ್ದರೆ ಈ ಅವಧಿಯಲ್ಲಿ ನೀವು ಮಲಗುವುದಕ್ಕೆ ಅವಕಾಶವಿಲ್ಲ.
ಭಾರತೀಯ ರೈಲ್ವೆ ಇಲಾಖೆಯ ಮಿಡಲ್ ಬರ್ತ್‌ಗೆ (ಮಧ್ಯದ ಸೀಟು) ಪ್ರತ್ಯೇಕ ನಿಯಮ ಹೊಂದಿದೆ. ಮಿಡಲ್ ಬರ್ತ್ ಎಂದರೆ ರೈಲಿನಲ್ಲಿ ಸ್ಲೀಪರ್ ಕೋಚ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಮಧ್ಯದಲ್ಲಿರುವ ಸೀಟು ಮುಂಚಿತವಾಗಿ ಬುಕ್ ಮಾಡಿದ್ದರೂ, ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮಾತ್ರ ನಿದ್ರಿಸಬೇಕು.
27
ಒಂದು ವೇಳೆ ಇತರೆ ಪ್ರಯಾಣಿಕರು ಕುಳಿತುಕೊಳ್ಳಲು ಸ್ಥಳ ಕೇಳಿದರೆ ಅದನ್ನು ನೀಡಲೇಬೇಕು. ಇದಕ್ಕೆ ವಿನಾಯಿತಿ ಇದೆ. ಮಿಡಲ್ ಬರ್ತ್‌ನಲ್ಲಿ ಬುಕ್ ಮಾಡಿರುವ ಪ್ರಯಾಣಿಕರು ಹಿರಿಯ ನಾಗರಿಕರು ಅಥವಾ ಅಂಗವಿಕಲರಾಗಿದ್ದರೆ, ಅವರು ಮಧ್ಯದ ಬರ್ತ್‌ನಲ್ಲಿ ಮಲಗಬೇಕೆಂದು ಒತ್ತಾಯಿಸಲಾಗುವುದಿಲ್ಲ ಎಂದು ಭಾರತೀಯ ರೈಲ್ವೆ ನಿಯಮ ಹೇಳುತ್ತದೆ.
37
ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ, ಯಾವುದೇ ಸಂದರ್ಭದಲ್ಲಿ ರಾತ್ರಿ ಅವರನ್ನು ರೈಲಿನಿಂದ ಇಳಿಸಬಾರದು. ಸುರಕ್ಷತಾ ಪೋಸ್ಟ್‌ನಲ್ಲಿರುವ ಭದ್ರತಾ ಸಿಬ್ಬಂದಿ ಅಥವಾ ರೈಲ್ವೆ ಸಿಬ್ಬಂದಿಗೆ ಅವರನ್ನು ಹಸ್ತಾಂತರಿಸಬೇಕು. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಭಾರತೀಯ ರೈಲ್ವೆ ಇದನ್ನು ಕಟ್ಟುನಿಟ್ಟಾದ ನಿಯಮವನ್ನಾಗಿ ಜಾರಿಗೆ ತಂದಿದೆ. ಇನ್ನು ಮಹಿಳೆಯರು ಕೆಳಗಿನ ಸೀಟಿನಲ್ಲಿ ಕುಳಿತಿದ್ದರೆ, ಮಿಡ್ಲ್ ಬೆರ್ತ್‌ನಲ್ಲಿರುವವರು ಮಲಗುವಂತಿಲ್ಲ.
47
ಭಾರತೀಯ ರೈಲ್ವೇ ಒಬ್ಬರು ಸಾಗಿಸಬಹುದಾದ ಸರಕುಗಳ ಪ್ರಮಾಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮವನ್ನು ಪ್ರಕಟಿಸಿದೆ. ಈ ನಿಯಮದ ಪ್ರಕಾರ ರೈಲಿನಲ್ಲಿ 70 ಕೆಜಿಗಿಂತ ಹೆಚ್ಚು ತೂಕದ ಸರಕುಗಳನ್ನು ಸಾಗಿಸುವಂತಿಲ್ಲ. ಆದಾಗ್ಯೂ, ಪ್ರಸ್ತುತ, ಜನರು ತಲಾ 4 ಚೀಲಗಳನ್ನು ಒಯ್ಯುತ್ತಾರೆ. ಇದು ವಾಸ್ತವವಾಗಿ ಭಾರತೀಯ ರೈಲ್ವೇ ನಿಯಮಗಳಿಗೆ ವಿರುದ್ಧವಾಗಿದೆ. ರೈಲ್ವೆ ಅಧಿಕಾರಿಗಳು ನಿಮಗೆ ದಂಡ ವಿಧಿಸುವ ಸಾಧ್ಯತೆಯಿದೆ. ಹಾಗಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಅನಗತ್ಯ ವಸ್ತುಗಳನ್ನು ಕೊಂಡೊಯ್ಯದಿರುವುದು ಉತ್ತಮ.
57
ನೀವು ರೈಲು ತಪ್ಪಿಸಿಕೊಂಡಿದ್ದೀರಾ?
ನೀವು ಬುಕಿಂಗ್ ಮಾಡಿದ ರೈಲು ನಿಲ್ದಾಣದಲ್ಲಿ ರೈಲು ಹತ್ತಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ. ಮುಂದಿನ ಎರಡು ನಿಲ್ದಾಣಗಳಿಂದ ನೀವು ಅದೇ ರೈಲನ್ನು ಹತ್ತಬಹುದು. ಗಾಬರಿಯಾಗುವ ಬದಲು, ಬುದ್ಧಿವಂತಿಕೆಯಿಂದ ನಿಮ್ಮ ನಿಲ್ದಾಣದಿಂದ ತಕ್ಷಣವೇ ಮತ್ತೊಂದು ವಾಹನ, ಕಾರು ಅಥವಾ ಬೈಕು ತೆಗೆದುಕೊಂಡು ಮುಂದಿನ ನಿಲ್ದಾಣವನ್ನು ತಲುಪಿ ರೈಲು ಹಿಡಿಯಬಹುದು.
67
ಎಂಆರ್‌ಪಿಗಿಂತ ಅಧಿಕ ಬೆಲೆ ಪಡೆಯುವಂತಿಲ್ಲ!
ನಿಲ್ದಾಣದಲ್ಲಿ ಆಹಾರ ಪದಾರ್ಥಗಳು ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರು ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸಬಾರದು. ಹಾಗೆ ಮಾಡುವುದನ್ನು ಅನ್ಯಾಯವೆಂದು ಪರಿಗಣಿಸಲಾಗುತ್ತದೆ. ರೈಲ್ವೆ ಅಧಿಕಾರಿಗಳು ದಂಡವನ್ನೂ ವಿಧಿಸಲಿದ್ದಾರೆ. ಹಾಗಾಗಿ, ಇಂತಹ ಪರಿಸ್ಥಿತಿ ಎದುರಾದರೆ ಕೂಡಲೇ ರೈಲ್ವೆ ಸಿಬ್ಬಂದಿಗೆ ದೂರು ನೀಡಬಹುದು.
77
ರಾತ್ರಿ ಸ್ಪೀಕರ್ ಇಟ್ಟು ಹಾಡು ಕೇಳುವಂತಿಲ್ಲ:
ಭಾರತೀಯ ರೈಲ್ವೇಯಲ್ಲಿ ಮತ್ತೊಂದು ಪ್ರಮುಖ ನಿಯಮವಿದೆ. ಹಾಡುಗಳನ್ನು ಕೇಳಬೇಡಿ ಅಥವಾ ಸ್ಪೀಕರ್ ಬಳಸಿ ಫೋನ್‌ನಲ್ಲಿ ಮಾತನಾಡಬೇಡಿ. ರಾತ್ರಿ 10 ಗಂಟೆಯ ನಂತರ ಜೋರಾಗಿ ಆಡಿಯೋ ಅಥವಾ ವೀಡಿಯೋ ಪ್ಲೇ ಮಾಡುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ನೀವು ಪ್ರಯಾಣಿಸುವಾಗ ಯಾರಾದರೂ ನಿಮಗೆ ಈ ರೀತಿ ತೊಂದರೆ ನೀಡಿದರೆ, ನೀವು ಅವರನ್ನು ಎಚ್ಚರಿಸಬಹುದು ಅಥವಾ TDE ನಿಂದ ಸಹಾಯ ಪಡೆಯಬಹುದು.