ಚಳಿಗಾಲದಲ್ಲಿ ಅರಳಿದ ಚೆರಿ ಹೂಗಳು: ಶಿಲಾಂಗ್ ಪಿಂಕ್ ಪಿಂಕ್

First Published | Nov 28, 2020, 5:41 PM IST

ಮೇಘಾಲಯದ ಶಿಲ್ಲಾಂಗ್ ನಗರದ ಬಣ್ಣ ಬದಲಾಗಿದೆ. ಚಳಿಗಾಲ ಶುರುವಾಗ್ತಿದ್ದಂತೆ ಅರಳಿರೋ ಚೆರಿ ಹೂಗಳು ಶಿಲ್ಲಾಂಗ್ ನಗರವನ್ನು ಪಿಂಕ್ ಆಗಿಸಿವೆ. ಇಲ್ಲಿ ನೋಡಿ ಚಂದದ ಫೋಟೋಸ್

ಶಿಲ್ಲಾಂಗ್‌ನಲ್ಲಿ ಚೆರಿ ಹೂಗಳು ಅರಳಲಾರಂಭಿಸಿವೆ.
ಮೇಘಾಲಯದ ಸುಂದರ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.
Tap to resize

ಈಗ ಹೇಗಿದ್ದರೂ ದೂರ ಪ್ರಯಾಣ ಕಷ್ಟ ಬಿಡಿ.. ಶಿಲ್ಲಾಂಗ್‌ನ ಸುಂದರ ಫೋಟೋಗಳನ್ನು ನೋಡ್ಕೊಂಡ್ ಬರೋಣ ಬನ್ನಿ
ಇದು ಕೊರೋನಾ ಕಾಲವಲ್ಲದಿದ್ದರೆ ಈಗಾಗಲೇ ಪ್ರವಾಸಿಗರು ಶಿಲ್ಲಾಂಗ್‌ಗೆ ಮುಂಗಡ ಟಿಕೆಟ್ ಕಾಯ್ದಿರಿಸುತ್ತಿದ್ದರು.
ಆದರೆ ಈ ಬಾರಿ ಹಾಗಿಲ್ಲ. ಹೋಗೋಕಾಗಲ್ಲ. ಆದ್ರೆ ಶಿಲ್ಲಾಂಗ್‌ ಪೃಕೃತಿ ಮತ್ತೊಮ್ಮೆ ನಗುತ್ತಿದೆ.
ಶಿಲ್ಲಾಂಗ್‌ನ ನಗರಗಳೆಲ್ಲ ಪಿಂಕ್ ಬಣ್ಣದ ಸುಂದರ ಕಲರ್ ಪೈಂಟಿಂಗ್‌ನಂತೆ ಗೋಚರಿಸುತ್ತಿದೆ.
ಭಾರತದ ಅಂತಾರಾಷ್ಟ್ರೀಯ ಚೆರಿ ಬ್ಲಾಸಮ್ ಫೆಸ್ಟಿವಲ್‌ಗೆ ದಾಖಲೆ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.
ಈ ವರ್ಷ ಈ ಅವಕಾಶ ರದ್ದಾಗಿದೆ.
ಹಾಗಾಗಿ ಎಲ್ಲರೂ ಮನೆಯಲ್ಲೇ ಇದ್ದು ಇದನ್ನು ಆಸ್ವಾದಿಸಬೇಕಿದೆ
ಅಕ್ಟೋಬರ್ ಕೊನೆಗೆ ಮೊಗ್ಗುಗಳು ಕಾಣಿಸುತ್ತವೆ.ನವೆಂಬರ್ ಅರ್ಧ ತಿಂಗಳಾಗುತ್ತಿದ್ದಂತೆ ಮೊಗ್ಗೆಲ್ಲ ಅರಳುತ್ತದೆ.
ಈಗ ಮೇಘಾಲಯ, ಶಿಲ್ಲಾಂಗ್‌ನ ಗಲ್ಲಿ ಗಲ್ಲಿಯಲ್ಲೂ ಪಿಂಕು ಚಾದರ ಹಾಸಿದಂತಿದೆ.
ಪ್ರುನಸ್ ಸೆರಾಸೊಯಿಡ್ಸ್ ಎಂದೂ ಕರೆಯಲ್ಪಡುವ ಚೆರ್ರಿ ಹೂವುಗಳನ್ನು ಹಿಮಾಲಯದ ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ.
ಅವು ಸಾಮಾನ್ಯವಾಗಿ ಪೂರ್ವ ಮತ್ತು ಪಶ್ಚಿಮ ಖಾಸಿ ಬೆಟ್ಟಗಳಾದ್ಯಂತ ಬೆಳೆಯುತ್ತವೆ.
ಮಧ್ಯ ನವೆಂಬರ್‌ನಲ್ಲಿ ಶಿಲ್ಲಾಂಗ್‌ನಲ್ಲಿ ಅಂತಾರಾಷ್ಟ್ರೀಯ ಚೆರಿ ಬ್ಲಾಸಮ್ ಫೆಸ್ಟಿವಲ್ ಆಯೋಜಿಸಲಾಗುತ್ತದೆ.
ಇದರಲ್ಲಿ ಲೈವ್ ಮ್ಯೂಸಿಕ್, ನೃತ್ಯ, ಸೌಂದರ್ಯ ಸ್ಪರ್ಧೆಗಳೂ ನಡೆಯುತ್ತವೆ.ಆಹಾರ, ವೈನ್, ಕರಕುಶಲತೆಗಳನ್ನೂ ಪ್ರದರ್ಶಿಸಲಾಗುತ್ತದೆ.
ಶಿಲ್ಲಾಂಗ್‌ನ ಜನರು ತಮ್ಮ ಊರಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಶಿಲ್ಲಾಂಗ್‌ನ್ನು ಹೊರತುಪಡಿಸಿ ಚೆರಿ ಬ್ಲಾಸಮ್ ನೋಡಲು ಜಪಾನ್ ಕೂಡಾ ಪ್ರಮುಖ ಸ್ಥಳ

Latest Videos

click me!