ಸೋಲಾರ್‌ನಿಂದ ಓಡುವ ಮಿನಿಯೇಚರ್ ರೈಲು ಭಾರತದಲ್ಲಿಯೇ ಮೊದಲಬಾರಿ ಕೇರಳದಲ್ಲಿ ಆರಂಭವಾಗಿದೆ.
ಸಿಎಂ ಪಿಣರಾಯಿ ವಿಜಯನ್ ರೈಲನ್ನು ಲಾಂಚ್ ಮಾಡಿದ್ದಾರೆ.
ಮುಖ್ಯವಾಗಿ ಮಕ್ಕಳ ಆಕರ್ಷಣೆಯಾಗಿರುವ ಈ ರೈಲು ಸುಮಾರು 60 ಕೋಟಿ ರೂಪಾಯಿಯ ಪ್ರಾಜೆಕ್ಟ್‌ನ ಭಾಗ.
ಟೂರಿಸ್ಟ್ ವಿಲೇಜ್‌ನಲ್ಲಿ ಅರ್ಬನ್ ಪಾರ್ಕ್ ಹಾಗೂ ಸ್ವಿಮ್ಮಿಂಗ್ ಪೂಲ್ ಕೂಡಾ ನಿರ್ಮಾಣವಾಗಲಿದೆ.
ತಿರುವನಂತಪುರದ ಹೊರಭಾಗದಲ್ಲಿ ವೇಲಿ ನದಿ ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುವಲ್ಲಿ ಈ ಪ್ರವಾಸಿ ಸ್ಥಳವಿದೆ.
ಮಿನಿಯೇಚರ್ ರೈಲು ಮಾಮೂಲಿ ರೈಲಿನ ಎಲ್ಲ ಕ್ವಾಲಿಟಿಗಳನ್ನು ಹೊಂದಿರುವುದು ವಿಶೇಷ. ಇದಕ್ಕೆ ಟಿಕೆಟ್ ಕೌಂಟರ್, ಸುರಂಗ, ಸ್ಟೇಷನ್ ಕೂಡಾ ಇದೆ.
1.5 ಕಿಮೀ ರೈಲಿನಲ್ಲಿ ಪ್ರವಾಸಿಗರು ಪ್ರಕೃತಿ ಸೊಬಗನ್ನು ಎಂಜಾಯ್ ಮಾಡಬಹುದು.