ಸಿಕ್ಕಿಂ(ನ. 11) ಗಾಜಿನ ಸ್ಕೈ ವಾಕ್ ಮೇಲೆ ನಡೆದಾಡಬೇಕು.. ಆ ಅನುಭವ ಆಸ್ವಾದಿಸಬೇಕು.. ಹೌದು ಈ ಕಾರಣಕ್ಕೆ ವಿದೇಶಕ್ಕೆ ಹೋಗಬೇಕಿಲ್ಲ. ನಮ್ಮ ದೇಶದಲ್ಲಿಯೂ ಅಂಥದ್ದೊಂದು ಸ್ವಾದ ಸವಿಯಬಹುದು. ನಮ್ಮದೆ ದೇಶದ ಸಿಕ್ಕಿಂ ಪೆಲ್ಲಿಂಗ್ ಗೆ ಹೋದರೆ ಗಾಜಿನ ಸ್ಕೈ ವಾಕ್ ಮೇಲೆ ನಡೆದಾಡಬಹುದು. 137 ಅಡಿ ಎತ್ತರದ ಚೆನ್ರೆಜಿಗ್ ಪ್ರತಿಮೆಗೆ ತೆರಳುವ ವೇಳೆ ಈ ಗಾಜಿನ ಲೋಕ ನೋಡಬಹುದು. ಭಾರತದಲ್ಲಿಯೇ ಈ ಸ್ವಾದ ಅನುಭವಿಸುವ ಭಾಗ್ಯ ಸಿಕ್ಕಿದ್ದು ಒಂದು ವಿಸಿಟ್ ಹಾಕಬಹುದು. ಪರ್ವತದ ಮೇಲಿಂದ ಗಾಜಿನ ಸ್ಕೈ ವಾಕ್ ಮೇಲೆ ನಡೆಯುವುದೇ ಒಂದು ರೋಮಾಂಚಕ ಅನುಭವ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಇದು ತೆರೆದಿರುತ್ತದೆ. ಪೆಲ್ಲಿಂಗ್ ನಿಂದ 2.5 ಕಿಮೀ ದೂರದಲ್ಲಿ ಇದ್ದು ಪ್ರವೇಶ ಶುಲ್ಕ 50 ರೂ. ಇದೆ. India's first glass skywalk in Sikkim Pelling must visit ಸಿಕ್ಕಿಂನ ಪೆಲ್ಲಾಂಗ್ ನಲ್ಲಿ ಭಾರತದ ಮೊಟ್ಟ ಮೊದಲ ಗ್ಲಾಸ್ ಸ್ಕೈವಾಕ್!