ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುನ್ನ ನೈಟ್ ಕ್ಲಬ್ಬಲ್ಲಿ ದೈಹಿಕ ಸಂಬಂಧ ಬೆಳೆಸ್ಬಹುದು!

First Published | Sep 21, 2023, 4:12 PM IST

ಮುರಿಯಾ ಬುಡಕಟ್ಟು ಜನರು ಛತ್ತೀಸ್ಗಢದ ಕೆಲವು ಪ್ರದೇಶಗಳಲ್ಲಿ ಬಹಳ ಹಿಂದಿನಿಂದಲೂ ವಾಸಿಸುತ್ತಿವೆ. ಈ ಬುಡಕಟ್ಟು ಜನಾಂಗದವರು ಕೆಲವೊಂದು ವಿಶಿಷ್ಟ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಾರೆ. ಕೆಲವಂತೂ ಅಚ್ಚರಿ ಎನಿಸಿದರೂ ಸಹ ಸತ್ಯವಾದ ವಿಷಯವಾಗಿದೆ. 
 

ಭಾರತದಲ್ಲಿ ಪ್ರೀತಿ (Love), ಪ್ರೇಮದ ಬಗ್ಗೆ ಜನರಿಗೆ ಇನ್ನೂ ತೆರೆದ ಮನಸಿನಿಂದ ಒಪ್ಪಿಕೊಳ್ಳಲು ಹಿಂಜರೆಯುತ್ತಾರೆ. ಅದರಲ್ಲೂ ಮದುವೆ ಮೊದಲಿನ ಸೆಕ್ಸ್ ಅಂದರೆ ಉರಿದೇ ಬಿಳುತ್ತಾರೆ. ಆದರೆ ಭಾರತದಲ್ಲಿಒಂದು ಬುಡಕಟ್ಟು (Muria tribe) ಜನಾಂಗವಿದೆ. ಅಲ್ಲಿ ಪ್ರೀತಿ ಮತ್ತು ದೈಹಿಕ ಸಂಬಂಧಗಳಿಗೆ (Physical Relationship) ಪ್ರಮುಖ ಆದ್ಯತೆ ನೀಡುತ್ತಾರೆ ಅಂದ್ರೆ ನೀವು ನಂಬಲೇಬೇಕು. ಈ ಬುಡಕಟ್ಟು ಜನಾಂಗದಲ್ಲಿ ಮದುವೆಗೂ ಮುನ್ನ ಲವ್ ಮಾಡೋದು, ಸೆಕ್ಸ್ ಮಾಡೋದು ತಪ್ಪೇ ಅಲ್ವಂತೆ. 
 

ನಾವು ಛತ್ತೀಸ್ಗಢದ (Chhattisgarh ) ನಕ್ಸಲ್ ಪೀಡಿತ (Naxal infested) ಬಸ್ತಾರ್ ಜಿಲ್ಲೆಯ ಬಗ್ಗೆ ಹೇಳ್ತಿದ್ದೀವಿ, ಅಲ್ಲಿ ಮುರಿಯಾ ಬುಡಕಟ್ಟು ಸಮುದಾಯದ ಮುರಿಯಾ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ಈ ಪ್ರದೇಶದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದಾರೆ, ಆದರೆ ಅಚ್ಚರಿ ನೀಡುವ ವಿಷಯ ಎಂದರೆ, ಇಲ್ಲಿನ ಜನರ ಕೆಲವು ನಂಬಿಕೆಗಳು. 
 

Tap to resize

Muria

ಈ ಬುಡಕಟ್ಟು ತನ್ನ ದೃಷ್ಟಿಕೋನಗಳಲ್ಲಿ ತುಂಬಾ ಮುಕ್ತವಾಗಿದೆ. ಇತರ ಪ್ರದೇಶದ ವಿದ್ಯೆ ಬುದ್ದಿ ಇರುವ ಎಲ್ಲಾ ಜನರು ವಿರೋಧಿಸುವ ಕೆಲವೊಂದು ಅಂಶಗಳನ್ನು ಇಲ್ಲಿನ ಜನರು ಸ್ವೀಕರಿಸುತ್ತಾರೆ. ಇಲ್ಲಿ, ಪ್ರೀತಿ ಮತ್ತು ಸೆಕ್ಸ್ ಬಗ್ಗೆ ಕೆಟ್ಟದಾಗಿ ಜನರು ಯೋಚಿಸೋದೆ ಇಲ್ಲ. ಅದರಲ್ಲೂ ಮದುವೆಗೂ ಮುನ್ನ ಸೆಕ್ಸ್ (sex before marriage) ಮಾಡುವ ಜನರು ಈ ಜನರು ತುಂಬಾನೆ ಓಪನ್ ಆಗಿದ್ದಾರೆ. 
 

ಮದುವೆಗೂ ಮುಂಚೆಯೇ ಸೆಕ್ಸ್
ಈ ಮುರಿಯಾ ಬುಡಕಟ್ಟು ಸಮುದಾಯದಲ್ಲಿ ಘೋತುಲ್ (ghotul) ಎಂಬ ಸಂಪ್ರದಾಯವಿದೆ. ಇಲ್ಲಿನ ಜನರು ಘೋಟುಲ್ ಅಂದರೆ ದೊಡ್ಡ ಬಿದಿರಿನ ಮನೆಯನ್ನು ಮಾಡುತ್ತಾರೆ, ಇದನ್ನು ನಗರ ಪ್ರದಶಕ್ಕೆ ಹೋಲಿಸಿ ಹೇಳೋದಾದರೆ ನೈಟ್ ಕ್ಲಬ್ ಎಂದು ಹೇಳಬಹುದು. ಯುವಕರು ಮತ್ತು ಮಹಿಳೆಯರು ಸಮಯ ಕಳೆಯಲು, ಪರಸ್ಪರ ತಿಳಿದುಕೊಳ್ಳಲು ಮತ್ತು ಮೋಜು ಮಾಡಲು ಇಲ್ಲಿಗೆ ಬರುತ್ತಾರೆ. 
 

ಈ ಜನಾಂಗದಲ್ಲಿ ಮಗುವಿಗೆ 10 ವರ್ಷಕ್ಕಿಂತ ಹೆಚ್ಚು ವಯಸ್ಸಾದಾಗ, ಅವನ ಪೋಷಕರು ಅವನನ್ನು ಘೋತುಲ್ ಗೆ ಕಳುಹಿಸಲು ಪ್ರಾರಂಭಿಸುತ್ತಾರೆ. ಘೋತುಲ್ ಗೆ ಹೋಗಿ ಏನು ಬೇಕಾದರೂ ಮಾಡಲು ಅವರಿಗೆ ಸ್ವಾತಂತ್ರ್ಯವಿದೆ. ಅಲ್ಲಿ, ಯುವಕರು ಮತ್ತು ಮಹಿಳೆಯರು ಮದುವೆಗೆ ಮುಂಚಿತವಾಗಿಯೇ ಪರಸ್ಪರ ಸಂಬಂಧವನ್ನು ಹೊಂದಬಹುದು ಮತ್ತು ಅವರು ಬಯಸಿದಷ್ಟು ಸಂಗಾತಿಗಳನ್ನು (multiple partner) ಹೊಂದಬಹುದು. ಇಲ್ಲಿ ಯುವಕರು ಮತ್ತು ಮಹಿಳೆಯರಿಗೆ ಸಾಮಾಜಿಕ ಒತ್ತಡವಿಲ್ಲದೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಲು ಅವಕಾಶವಿದೆ.

ನೃತ್ಯ ಮತ್ತು ಬಾಚಣಿಗೆಮೂಲಕ ಮಹಿಳೆಯರ ಆಕರ್ಷಿಸೋ ಪುರುಷರು
ಘೋತುಲ್ ನಲ್ಲಿ, ಯುವಕರು ಮತ್ತು ಮಹಿಳೆಯರು ಪರಸ್ಪರ ಜೊತೆಯಾಗಿ ನೃತ್ಯ ಮಾಡುತ್ತಾರೆ ಮತ್ತು ಹಾಡುತ್ತಾರೆ. ಯುವಕ ಇತರ ಮಹಿಳೆಯರಿಗಾಗಿ ಬಿದಿರಿನ ಬಾಚಣಿಗೆಯನ್ನು (bamboo comb) ತಯಾರಿಸುತ್ತಾನೆ, ಅದನ್ನು ಬಳಸಿ ಅವರು ಕೂದಲು ಬಾಚುತ್ತಾರೆ. 

ಒಬ್ಬ ಮಹಿಳೆ ಪುರುಷ ತಯಾರಿಸಿದ ಬಾಚಣಿಗೆಯನ್ನು ಇಷ್ಟಪಟ್ಟರೆ, ಅವಳು ಅದನ್ನು ತನ್ನ ಕೂದಲಿನಲ್ಲಿ ಹಾಕಿ ಅವನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ಘೋತುಲ್ ನಲ್ಲಿ, ಜನರಿಗೆ ವಯಸ್ಕರಾಗಿರುವುದರ ಅರ್ಥವನ್ನು ಕಲಿಸಲಾಗುತ್ತದೆ ಮತ್ತು ವಯಸ್ಕರ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀಡಲಾಗುತ್ತದೆ. ಅಂತಹ ನಂಬಿಕೆಯಿಂದಾಗಿ, ಈ ಸಮುದಾಯದಲ್ಲಿ ಲೈಂಗಿಕ ಕಿರುಕುಳದ ಒಂದೇ ಒಂದು ಪ್ರಕರಣವು ಇದುವರೆಗೂ ದಾಖಲಾಗಿಲ್ಲ. 

Latest Videos

click me!