ಇತಿಹಾಸದ ಪುಟ ಸೇರಿದ ಮುಂಬೈ ಡಬ್ಬಲ್ ಡೆಕ್ಕರ್ ಬಸ್‌: ಕೆಂಪು ಸುಂದರಿಗೆ ಮುಂಬೈ ಜನರ ಭಾವುಕ ವಿದಾಯ

First Published | Sep 15, 2023, 5:37 PM IST

ಆ ಬಸ್ ಎಂದರೆ ಫಿಲ್ಲಿಂಗೂ ಫುಲ್ ಇಮೋಷನ್‌, ಒಂದು ಕಾಲದಲ್ಲಿ ಮುಂಬೈ ಜನರ ಜೀವನಾಡಿ ಎನಿಸಿದ ಮುಂಬೈಯ ಲ್ಯಾಂಡ್ ಮಾರ್ಕ್ ಎನಿಸಿದ ಕೆಂಪು ಬಣ್ಣದ ಡಬ್ಬಲ್‌ ಡೆಕ್ಕರ್ ಬಸ್‌ಗೆ ಬೃಹನ್‌ ಮುಂಬೈ ಸಾರಿಗೆ ಇಲಾಖೆ ಗುಡ್‌ ಬೈ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಜನ ಈ ಬಸ್‌ಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ. ಇಂದು ಬಸ್ ತನ್ನ ಪ್ರಯಾಣ ಕೊನೆಗೊಳಿಸಿದೆ. 

Mumbai Double Decker Bus

ಆ ಬಸ್ ಎಂದರೆ ಫಿಲ್ಲಿಂಗೂ ಫುಲ್ ಇಮೋಷನ್‌, ಒಂದು ಕಾಲದಲ್ಲಿ ಮುಂಬೈ ಜನರ ಜೀವನಾಡಿ ಎನಿಸಿದ ಮುಂಬೈಯ ಲ್ಯಾಂಡ್ ಮಾರ್ಕ್ ಎನಿಸಿದ ಕೆಂಪು ಬಣ್ಣದ ಡಬ್ಬಲ್‌ ಡೆಕ್ಕರ್ ಬಸ್‌ಗೆ ಬೃಹನ್‌ ಮುಂಬೈ ಸಾರಿಗೆ ಇಲಾಖೆ ಗುಡ್‌ ಬೈ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಜನ ಈ ಬಸ್‌ಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ

Mumbai Double Decker Bus

ಬೃಹತ್‌ ಮುಂಬೈಯ ಎಲೆಕ್ಟ್ರಿಕ್‌ ಸಪ್ಲೈ & ಟ್ರಾನ್ಸ್‌ಪೋರ್ಟ್ ಸಂಸ್ಥೆ ನಗರದಲ್ಲಿ ಕೊನೆಯದಾಗಿ ಓಡಾಡುತ್ತಿದ್ದ ಡಬ್ಬಲ್ ಡೆಕ್ಕರ್ ಬಸ್‌ನ್ನು ತನ್ನ ಸುಪರ್ದಿಗೆ ಪಡೆದಿದೆ.  ಇಂದು ಮುಂಜಾನೆ ಮರೊಲ್ ಡಿಪೋದಲ್ಲಿ ಈ ಏಸಿ ರಹಿತವಾದ ಬಸ್‌ನ್ನು ಬಿಇಎಸ್‌ಟಿ ತನ್ನ ವಶಕ್ಕೆ ಪಡೆದಿದೆ. 

Latest Videos


Mumbai Double Decker Bus

ಈ ಬಿಇಎಸ್‌ಟಿ ಮುಂದಿನ 9 ತಿಂಗಳಲ್ಲಿ ಈ ಡಬ್ಬಲ್ ಡೆಕ್ಕರ್ ಬಸ್‌ಗೆ ಬದಲಾಗಿ 900 ಹವಾನಿಯಂತ್ರಿತ ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ನಗರದ ಸಂಚಾರ ವ್ಯವಸ್ಥೆಗೆ ಹಸ್ತಾಂತರ ಮಾಡಲಿದೆ. 

Mumbai Double Decker Bus

ಆದರೆ ಈಗಿದ್ದ  ಈ ಡಬ್ಬಲ್ ಡೆಕ್ಕರ್ ಬಸ್ ಮುಂಬೈ ಪ್ರವಾಸೋದ್ಯಮಕ್ಕೆ ಹಲವು ವರ್ಷಗಳಿಂದ ತನ್ನದೇ ಕೊಡುಗೆ ನೀಡಿತ್ತು. ಮುಂಬೈಗೆ ಪ್ರವಾಸ ಬಂದವರೆಲ್ಲಾ ಈ ಬಸ್‌ನ್ನು ಒಮ್ಮೆಯಾದರು ಹತ್ತಿ ಖುಷಿ ಪಡುತ್ತಿದ್ದರು. 

Mumbai Double Decker Bus

1997ರಲ್ಲಿ ಮೊದಲ ಡಬ್ಬಲ್ ಡೆಕ್ಕರ್‌ ಒಪನ್‌ ಟಾಪ್ ಬಸ್ ಪ್ರವಾಸೋದ್ಯಮಕ್ಕಾಗಿ ಆರಂಭವಾಗಿತ್ತು. ಆದರೆ ಈ ಡಬ್ಬಲ್ ಡೆಕ್ಕರ್ ಸಂಪೂರ್ಣವಾಗಿ ನಿಲುಗಡೆಯಾಗುವುದಿಲ್ಲ, ಹೊಸ ಪ್ಲಾನ್‌ನೊಂದಿಗೆ ಈ ಡಬ್ಬಲ್ ಡೆಕ್ಕರ್ ಮತ್ತೆ ಬರಲಿದೆ ಎಂದು ಬಿಇಟಿಎಸ್ ಹೇಳಿದೆ. 

Mumbai Double Decker Bus

ಇನ್ನು ಈ ಡಬ್ಬಲ್ ಡೆಕ್ಕರ್ ಬಸ್ ಇಂದು ತನ್ನ ಕೊನೆಯ ಪ್ರಯಾಣ ನಡೆಸಿದ್ದು, ಮುಂಬೈ ಜನ ಈ ಬಸ್‌ನೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಭಾವುಕರಾದರು. ಈ ಬಸ್‌ನೊಂದಿಗೆ ಬಹಳಷ್ಟು ಒಳ್ಳೆಯ ನೆನಪುಗಳಿದ್ದವು. ಮೇಲೆ ಕುಳಿತು ಪಕ್ಷಿನೋಟ ಕಾಣಲು ಸಾಧ್ಯವಾಗುತ್ತಿದ್ದ ಆ ದಿನಗಳು ಮುಗಿದು ಹೋದವು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  

Mumbai Double Decker Bus

ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಈ ಬಸ್‌ನೊಂದಿಗೆ ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದಾರೆ. ನನ್ನ ಕಾಲೇಜು ದಿನಗಳ ನೆನಪಾಗುತ್ತಿದೆ, ಬಸ್‌ನ ಮೇಲಿನ ಸೀಟುಗಳಲ್ಲಿ ಕುಳಿತು ಹೋಗುವುದೇ ಒಂದು ಮಜಾ ಎಂದು ಮಹಿಳೆಯೊಬ್ಬರು ಕಾಮೆಂಟ್ ಮಾಡಿದ್ದಾರೆ. 

Mumbai Double Decker Bus

ಬರೀ ಇಷ್ಟೇ ಅಲ್ಲದೇ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿಯೂ ಹಳೆಯ ಹಿಂದಿ ಹಾಡುಗಳಲ್ಲಿ ಈ ಬಸ್‌ನ ದೃಶ್ಯವಿದೆ. ಶಾನ್, ಜಾನೇ ಬಿ ದೋ, ಅರ್ಜುನ್, ಜಾನೇ ಬಿ ದೋ, ನಾಯಕ್ ರಿಯಲ್ ಹೀರೋ, ತಾರೆ ಜಮೀನ್ ಪರ್, ಮುಂತಾದ ಸಿನಿಮಾಗಳಲ್ಲಿ ಈ ಡಬ್ಬಲ್ ಡೆಕ್ಕರ್ ಬಸ್‌ನ ಚಿತ್ರಣವಿದೆ. 

click me!