ಭಾರತ ಸೇರಿದಂತೆ ಬಹುತೇಕ ದೇಶದಲ್ಲಿ ಪ್ರವಾಸಿ ತಾಣಗಳ ಪಟ್ಟಿ ದೊಡ್ಡದಿದೆ. ಪ್ರತಿ ಪ್ರವಾಸಿ ತಾಣಗಳ ಇತಿಹಾಸ, ಸಂಸ್ಕತಿ, ಆಕರ್ಷಣೆ ಭಿನ್ನ. ಈ ಪೈಕಿ ವರ್ಲ್ಡ್ ಸ್ಟಾಟಿಸ್‌ಸ್ಟಿಕ್ ಜಗತ್ತಿನ ವಿಶಿಷ್ಠ ಪ್ರವಾತಿ ಆಕರ್ಷಣೀಯ ತಾಣಗಳನ್ನು ಪಟ್ಟಿ ಮಾಡಿದೆ. ಪ್ರವಾಸಿಗರ ಭೇಟಿ, ಅವರು ದಾಖಲಿಸಿದ ಅಭಿಪ್ರಾಯ, ವಿಶೇಷತೆ ಸೇರಿದಂತೆ ಹಲವು ಮಾನದಂಡಗಳ ಮೇಲೆ ಈ ಪಟ್ಟಿ ಬಿಡುಗಡೆ ಮಾಡಿದೆ.
ವರ್ಲ್ಡ್ ಸ್ಟಾಟಿಸ್‌ಸ್ಟಿಕ್ ವರದಿ ಪ್ರಕಾರ ಜಗತ್ತಿನ ಅತ್ಯಂತ ವಿಶಿಷ್ಠವಾದ ಪ್ರವಾಸಿ ಆಕರ್ಷಣೀಯ ತಾಣದ ಪಟ್ಟಿಯಲ್ಲಿ ಭಾರತದ ಜಾತ್ ಮಹಲ್ 2ನೇ ಸ್ಥಾನ ಪಡೆದುಕೊಂಡಿದೆ.
ಆದರೆ ಹಲವರು ತಾಜ್‌ಮಹಲ್‌ಗಿಂತಲೂ ಆಕರ್ಷಣೀಯ ತಾಣ ಭಾರತದಲ್ಲಿ ಹಲವಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮೊದಲ ಸ್ಥಾನವನ್ನು ಚೀನಾದ ಗ್ರೇಟ್ ವಾಲ್ ಆಕ್ರಮಿಸಿಕೊಂಡಿದೆ.
1887ರಲ್ಲಿ ನಿರ್ಮಿಸಿದ ಫ್ರಾನ್ಸ್‌ನ ಐಫೆಲ್ ಟವರ್ ಜಗತ್ತಿನ ವಿಶಿಷ್ಠ ಪ್ರವಾಸಿ ಆಕರ್ಷಣೆ ತಾಣ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಗಸ್ಟೇವ್ ಐಫೆಲ್ ಇದರ ಎಂಜಿನಿಯರ್. ಹೀಗಾಗಿ ಇದಕ್ಕೆ ಐಫೆಲ್ ಟವರ್ ಎಂದು ನಾಮಕರಣ ಮಾಡಲಾಗಿದೆ.
ಅತ್ಯಂತ ನಯನ ಮನೋಹರ ನಯಗರ ಫಾಲ್ಸ್ 4ನೇ ಸ್ಥಾನ ಪಡೆದುಕೊಂಡಿದೆ. ಜಲಪಾತಗಳ ರಾಜ ಎಂದೇ ಗುರುತಿಸಿಕೊಂಡಿರುವ ನಯಗರ ಫಾಲ್ಸ್ ಪ್ರಮುಖ ಪ್ರವಾಸಿ ತಾಣ ಕೂಡ ಹೌದು.
ವಿದೇಶಿ ಪ್ರವಾಸ ಎಂದ ತಕ್ಷಣ ಥಾಯ್ಲೆಂಡ್ ದೇಶದ ಹೆಸರು ಥಟ್ಟನೆ ನೆನಪಿಗೆ ಬರುತ್ತದೆ. ಫುಕೆಟ್ ದ್ವೀಪಕ ಪಟಾಂಗ್ ಬೀಚ್ ಜಗತ್ತಿನ ವಿಶಿಷ್ಠ ಆಕರ್ಷಣಿಯ ತಾಣಧಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.
ಬ್ರೆಜಿಲ್‌ನ ಅತೀ ದೊಡ್ಡ ಏಸು ಕ್ರಿಸ್ತನ ಮೂರ್ತಿ ಹೊಂದಿರುವ ರಿಯೋ ಡಿ ಜನೈರೋ, ಕ್ಯೂಬಾದ ಒಲ್ಡ್ ಹವಾನಾ ನಗರ, ಯುನೈಟೆಡ್ ಅರಬ್‌ನ ಬುರ್ಜ್ ಖಲೀಫಾ ತಾಣಗಳು ನಂತರದ ಸ್ಥಾನ ಪಡೆದಿದೆ.