ವಂದೇ ಭಾರತ್, ಶತಾಬ್ದಿ ಅಲ್ಲ; ಭಾರತೀಯ ರೈಲ್ವೆಗೆ ಹೆಚ್ಚು ಆದಾಯ ತಂದುಕೊಡುವ ರೈಲು ಯಾವುದು ಗೊತ್ತಾ?

Published : Jun 02, 2025, 01:36 PM ISTUpdated : Jun 02, 2025, 02:06 PM IST

ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಅಲ್ಲ, ಬದಲಾಗಿ ಈ ರೈಲುಗಳು ಭಾರತೀಯ ರೈಲ್ವೆಗೆ ಹೆಚ್ಚಿನ ಆದಾಯವನ್ನು ತರುತ್ತವೆ.ಈ ರೈಲು ಬೆಂಗಳೂರಿನಿಂದಲೇ ಪ್ರಯಾಣ ಬೆಳೆಸುತ್ತದೆ.

PREV
16

ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ರೈಲುಗಳು ಸಂಚರಿಸುತ್ತವೆ. ಆದ್ರೆ ಕೆಲವೊಂದು ಮಾರ್ಗದ ರೈಲುಗಳು ಯಾವಾಗಲೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಈ ರೈಲುಗಳಿಂದಲೇ ಭಾರತೀಯ ರೈಲ್ವೆಗೆ ಹೆಚ್ಚು ಆದಾಯ ಬರುತ್ತವೆ.

26

ಜನ್ ಶತಾಬ್ದಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಸೂಪರ್ ಸ್ಪೀಡ್‌ನಿಂದ ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲಿಯೂ ಇತ್ತೀಚೆಗೆ ಬಂದಿರುವ ವಂದೇ ಭಾರತ್ ಹಲವು ವಿಷಯಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತದೆ. ಆದ್ರೆ ಇದು ಶ್ರೀಮಂತರ ರೈಲು ಎಂಬ ಅಪವಾದವನ್ನು ಸಹ ಹೊಂದಿದೆ.

36

ರಾಜಧಾನಿ ಎಕ್ಸ್‌ಪ್ರೆಸ್

ಜನ್ ಶತಾಬ್ದಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತೀಯ ರೈಲ್ವೆ ಹೆಚ್ಚು ಆದಾಯವನ್ನು ತಂದು ಕೊಡಲ್ಲ. ರಾಜಧಾನಿ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಗೆ ಹೆಚ್ಚು ಆದಾಯ ನೀಡುವ ರೈಲುಗಳಾಗಿವೆ. ಆದ್ರೆ ಈ ಎರಡು ರೈಲುಗಳು ಹೆಚ್ಚು ಲಾಭದಾಯಕವಾಗಿಲ್ಲ.

46

ಪ್ರಯಾಣಿಕರ ಟಿಕೆಟ್ ಮಾರಾಟವೇ ರೈಲ್ವೆಯ ಪ್ರಮುಖ ಆದಾಯದ ಮೂಲವಾಗಿದೆ. ಆದರೆ ರೈಲ್ವೆ ಟಿಕೆಟ್‌ನಲ್ಲಿ ಸರಾಸರಿ 46% ರಿಯಾಯಿತಿ ನೀಡುತ್ತದೆ. ಎಲ್ಲಾ ವರ್ಗದ ಪ್ರಯಾಣದಲ್ಲಿಯೂ ಭಾರತೀಯ ರೈಲ್ವೆ ಟಿಕೆಟ್ ದರದಲ್ಲಿ ರಿಯಾಯ್ತಿಯನ್ನು ನೀಡುತ್ತದೆ. ಈ ಸಬ್ಸಿಡಿಯ ವಾರ್ಷಿಕ ಮೊತ್ತ 56,993 ಕೋಟಿ ರೂಪಾಯಿ ಆಗಿದೆ.

56

ಬೆಂಗಳೂರು-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್

ಕೆಎಸ್‌ಆರ್ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಅತ್ಯಂತ ಲಾಭದಾಯಕ ರೈಲುಗಳಲ್ಲಿ ಒಂದಾಗಿದೆ. ಈ ರೈಲು ನವದೆಹಲಿಯನ್ನು ಬೆಂಗಳೂರಿಗೆ ಸಂಪರ್ಕಿಸುತ್ತದೆ. ಈ ರೈಲು 2022-23ನೇ ಸಾಲಿನಲ್ಲಿ ಗರಿಷ್ಠ ಲಾಭ ಗಳಿಸಿದೆ. ಈ ರೈಲು ₹ 1,760.67 ಕೋಟಿ ಗಳಿಸಿತು.

66

ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ, ಈ ರೈಲು 5,09,510 ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಸಾಗಿಸಿದೆ. ಇದಲ್ಲದೆ, ಇತರ ರಾಜಧಾನಿ ಎಕ್ಸ್‌ಪ್ರೆಸ್‌ಗಳ ಸೇವೆಗಳು ಭಾರತದ ಆದಾಯಕ್ಕೆ ಗಣನೀಯ ಕೊಡುಗೆ ನೀಡಿವೆ. ಈ ರೈಲುಗಳು ಕೂಡ ಭಾರಿ ಆದಾಯವನ್ನು ಗಳಿಸಲಿವೆ.

Read more Photos on
click me!

Recommended Stories