ಚುಮು ಚುಮು ಚಳೀಲಿ ಸಂಗಾತಿ ಜೊತೆ ಇಂಥಾ Romantic Placeಗೆ ಹೋಗಿಲ್ಲಾಂದ್ರೆ ಹೇಗ್ ಹೇಳಿ

Published : Jan 03, 2023, 03:41 PM ISTUpdated : Jan 03, 2023, 03:42 PM IST

ಚಳಿಗಾಲ ಶುರುವಾಗಿದೆ. ಎಲ್ಲೆಡೆ ತಣ್ಣನೆಯ ಗಾಳಿ ಬೀಸುತ್ತಿದೆ. ಚುಮು ಚುಮು ಚಳಿ ಮೈಯನ್ನು ಥರಗುಟ್ಟಿಸುತ್ತಿದೆ. ಹೀಗಿರುವಾಗ ಸಂಗಾತಿ ಜೊತೆ ಬೆಚ್ಚಗಿರಲು ರೋಮ್ಯಾಂಟಿಕ್ ಪ್ಲೇಸ್‌ಗೆ ವಿಸಿಟ್ ಮಾಡಿದ್ರೆ ಚೆನ್ನಾಗಿರುತ್ತೆ ಅಲ್ವಾ ? ದಕ್ಷಿಣ ಭಾರತದಲ್ಲಿ ಅಂಥಾ ಸ್ಥಳಗಳು ಎಲ್ಲಿವೆ ?

PREV
17
ಚುಮು ಚುಮು ಚಳೀಲಿ ಸಂಗಾತಿ ಜೊತೆ ಇಂಥಾ Romantic Placeಗೆ ಹೋಗಿಲ್ಲಾಂದ್ರೆ ಹೇಗ್ ಹೇಳಿ

ಮುನ್ನಾರ್, ಕೇರಳ
ಹೊಸ ವರ್ಷದಲ್ಲಿ ಉತ್ತರ ಭಾರತದ ಸಾಮಾನ್ಯ ಗಿರಿಧಾಮಗಳನ್ನು (Hill stations) ನೋಡಿ ನೋಡಿ ನಿಮಗೆ ಬೇಜಾರಾಗಿದ್ದರೆ ಕೇರಳದ ಮುನ್ನಾರ್‌ಗೆ ವಿಸಿಟ್ ಮಾಡಿ. ಇದು, ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಗಿರಿಧಾಮಗಳಲ್ಲಿ ಒಂದಾಗಿದೆ, ಪಾರ್ಟ್‌ನರ್ ಜೊತೆ ರೋಮ್ಯಾಂಟಿಕ್ ಆಗಿರಲು ಹೇಳಿ ಮಾಡಿಸಿದ ಸ್ಥಳ. ಇಲ್ಲಿ ಉತ್ತಮ ಆಹಾರ (Food), ಸ್ನೇಹಶೀಲ ಹೋಮ್‌ಸ್ಟೇಗಳು ಮತ್ತು ಐಷಾರಾಮಿ ಹೋಟೆಲ್‌ಗಳು, ಸುತ್ತಲಿನ ಬೆಟ್ಟಗಳಲ್ಲಿ ಸುಂದರವಾದ ಡ್ರೈವ್‌ಗಳು ಮತ್ತು ಕಾಡಿನಲ್ಲಿ ಸರೋವರದ ಪಕ್ಕದಲ್ಲಿ ವಾಕಿಂಗ್‌ ಮನಸ್ಸಿಗೆ ಮುದ ನೀಡೋದು ಖಂಡಿತ.

27

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಸುಂದರವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಜೋಡಿಹಕ್ಕಿಗಳು ಜೊತೆಯಾಗಿ ಸಮಯ ಕಳೆಯಲು ಅತ್ಯುತ್ತಮ ಸ್ಥಳವಾಗಿದೆ. ಐಷಾರಾಮಿ ಕ್ರೂಸ್‌ಗಳಿಂದ ತೊಡಗಿ ಸ್ಕೂಬಾ ಡೈವಿಂಗ್‌ ವರೆಗೆ ಇಲ್ಲಿ ಎಲ್ಲಾ ರೀತಿಯ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶವಿದೆ

37

ವಯನಾಡ್, ಕೇರಳ 
ದೇವರ ನಾಡಿನಲ್ಲಿ ನೀವು ನಿಮ್ಮ ವುಡ್ ಬಿ, ಲವರ್ ಅಥವಾ ಬಾಯ್‌ಫ್ರೆಂಡ್, ಹಸ್ಬೆಂಡ್ ಜೊತೆ ರೋಮ್ಯಾಂಟಿಕ್ ಆಗಿ ಸಮಯ ಕಳೆಯಬಹುದು. ಹಚ್ಚ ಹಸಿರಿನ ಕಾಡಿನಲ್ಲಿ ನಿಮ್ಮ ಸಂಗಾತಿ (Partner)ಯೊಂದಿಗೆ ಪಿಸು ಮಾತನಾಡುತ್ತಾ ವಿಹಾರ ಮಾಡುವುದು ನಿಮ್ಮ ಕನಸಾಗಿದ್ದರೆ ವಯನಾಡ್ ಉತ್ತಮ ಆಯ್ಕೆ. ಇದು ಇತರ ಗಿರಿಧಾಮಗಳಂತೆ ಜನಸಂದಣಿಯಿಂದ ಕೂಡಿಲ್ಲ. ಪ್ರಕೃತಿಯನ್ನು (Nature) ಪ್ರೀತಿಸುವವರಿಗೆ ಲಾಂಗ್‌ ಡ್ರೈವ್ ಮಾಡಲು ಉತ್ತಮ ಆಯ್ಕೆಯಾಗಿದೆ.

47

ಪುದುಚೇರಿ
ಪುದುಚೇರಿಯು ಪ್ರಣಯ ವಿರಾಮಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ಹೊಂದಿದೆ, ಮರಳಿನ ಕಡಲತೀರಗಳಿಂದ ಸುತ್ತುವ ಪರಂಪರೆಯ ಲೇನ್‌ಗಳವರೆಗೆ ವಿವಿಧ ಆಸಕ್ತಿದಾಯಕ ತಂಗುವಿಕೆಗಳನ್ನು ಇಲ್ಲಿ ನೋಡಬಹುದು. ಕೊಂಕಣಿ ಮತ್ತು ಫ್ರೆಂಚ್ ಪಾಕಪದ್ಧತಿ ಮನಸ್ಸಿಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವೇ ಇಲ್ಲ. ಹೆಚ್ಚು ಯೋಜನೆ ಅಗತ್ಯವಿಲ್ಲದ ಮತ್ತು ಸುಲಭವಾಗಿ ತಲುಪಲು ಸುಲಭವಾದ ರೋಮ್ಯಾಂಟಿಕ್ ವಿಹಾರಕ್ಕೆ ನೀವು ಉತ್ಸುಕರಾಗಿದ್ದರೆ ಪುದುಚೇರಿಯನ್ನು ಆಯ್ಕೆಮಾಡಿ.

57

ಕೊಡೈಕೆನಾಲ್, ತಮಿಳುನಾಡು
ತಮಿಳುನಾಡಿನ ಕೊಡೈಕೆನಾಲ್ ಕೂಡಾ ದಂಪತಿಗಳು ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದು ಅತ್ಯಂತ ಆಸಕ್ತಿದಾಯಕ ರಜೆಯ ಅನುಭವಕ್ಕಾಗಿ ಮನೆಯಲ್ಲಿ ತಯಾರಿಸಿದ ಚಾಕೊಲೇಟ್‌ಗಳು ಮತ್ತು ಅನನ್ಯ ಖಾಸಗಿ ತಂಗುವಿಕೆಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ. ಬೆರಗುಗೊಳಿಸುವ ದೃಶ್ಯಗಳು ನಿಮ್ಮ ಮನಸೂರೆಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

67

ಲಂಬಸಿಂಗಿ, ಆಂಧ್ರಪ್ರದೇಶ
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಹಿಮವನ್ನು ಕಾಣುವ ಏಕೈಕ ಸ್ಥಳವೆಂದರೆ ಲಮಾಬ್ಸಿಂಗಿ. ಇಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಬಹುದು. ಇದು ದಕ್ಷಿಣ ಭಾರತದ ಅತ್ಯಂತ ಪ್ರೀತಿಯ ಗಿರಿಧಾಮಗಳಲ್ಲಿ ಒಂದಾಗಿದೆ. ತಂಪಾದ ಗಾಳಿ, ಮೈ ಕೊರೆಯುವ ಚಳಿಯ ಜೊತೆ ಸಂಗಾತಿಯೊಂದಿಗೆ ಸಮಯ ಕಳೆಯಲು ಉತ್ತಮವಾಗಿರುತ್ತದೆ.

77

ಹಂಪಿ, ಕರ್ನಾಟಕ
ನೀವು ವಿಶ್ರಾಂತಿಯನ್ನು ಇಷ್ಟಪಡುವ ದಂಪತಿಗಳಾಗಿದ್ದರೆ ಕರ್ನಾಟಕದ ಹಂಪಿಗೆ ಭೇಟಿ ನೀಡಲೇಬೇಕು. ಇಲ್ಲಿ ಸೂರ್ಯಾಸ್ತಮಾನ (Sunset) ವೀಕ್ಷಿಸುವುದು ಅದ್ಭುತವಾದ ಅನುಭವವಾಗಿದೆ. ಮತ್ತು ಇದು ಖಂಡಿತವಾಗಿಯೂ ಮನಸ್ಸಿಗೆ ಮುದ ನೀಡುತ್ತದೆ.

Read more Photos on
click me!

Recommended Stories