ಪ್ರವಾಸಿಗರು ಹೆಚ್ಚಾಗಿಯೇ ಅವನತಿಯತ್ತ ಸಾಗುತ್ತಿವೆ ಈ ಸುಂದರ ಪ್ರವಾಸಿ ತಾಣಗಳು

First Published May 20, 2024, 2:54 PM IST

ವಿಶ್ವದ ಜನಪ್ರಿಯ ಸ್ಥಳಗಳು ಭಾರಿ ಜನರಿಂದ ಅಂದರೆ ಪ್ರವಾಸಿಗರಿಂದ ಕೂಡಿರುತ್ತೆ. ಇದನ್ನು ಓವರ್ ಟೂರಿಸಂ ಎಂದೂ ಕರೆಯುತ್ತಾರೆ. ಈ ಕಾರಣದಿಂದ, ಈ ಸ್ಥಳದ ಸೌಂದರ್ಯ ಮತ್ತು ಪ್ರಾಮುಖ್ಯತೆ ಕ್ರಮೇಣ ಕಡಿಮೆಯಾಗುತ್ತ ಬಂದಿದೆ. ಕೆಲವು ಸ್ಥಳಗಳಂತೂ ಅತಿಯಾದ ಪ್ರವಾಸಿಗರಿಂದ ಹಾಳಾಗಿ ಹೋಗಿದೆ. 
 

ಟ್ರಾವೆಲ್ ಅನ್ನೋದು ಇಂದಿನ ಜನರಿಗೆ ಒಂದು ಟ್ರೀಟ್‌ಮೆಂಟ್ ಅಥವಾ ಥೆರಪಿ ಇದ್ದ ಹಾಗೆ. ಜನರು ಬಿಡುವಿಲ್ಲದ ಜೀವನಶೈಲಿ ಮತ್ತು ಶಬ್ದದಿಂದ ದೂರವಿರಲು ತುಂಬಾ ದಿನಗಳ ಪ್ರವಾಸ ಹೋಗೋದಕ್ಕೆ ಇಷ್ಟಪಡ್ತಾರೆ. ಆದ್ದರಿಂದ ವಿಶ್ವದ ಜನಪ್ರಿಯ ಪ್ರವಾಸೋದ್ಯಮ ತಾಣಗಳಲ್ಲಿ ಜನಸಂದಣಿ ಹೆಚ್ಚುತ್ತಿವೆ. ಇದನ್ನು ಓವರ್ ಟೂರಿಸಂ (over tourism) ಎಂದೂ ಕರೆಯಲಾಗುತ್ತದೆ. ಈ ಓವರ್ ಟೂರಿಸಂ ನಿಂದಾಗಿ ಸುಂದರ ತಾಣಗಳು ಅವನತಿಯತ್ತ ಸಾಗುತ್ತಿವೆ. 

ಯಾವುದೇ ಸ್ಥಳ ಆಗಿರಲಿ ಅಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಸೇರುವುದರಿಂದ, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಆ ಸ್ಥಳದ ಸಂಸ್ಕೃತಿ ಮತ್ತು ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಇಲ್ಲಿ ನಾವು ವಿಶ್ವದ 5 ಜನಪ್ರಿಯ ಪ್ರವಾಸಿ ತಾಣಗಳ (travel places) ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ, ಅಲ್ಲಿ ಅತಿಯಾದ ಪ್ರವಾಸೋದ್ಯಮ ಪ್ರಕೃತಿಯ ಸೌಂದರ್ಯವನ್ನು ಹಾಳುಮಾಡುತ್ತದೆ.
 

Latest Videos


ವೆನಿಸ್, ಇಟಲಿ (Venice, Italy)
ವೆನಿಸ್ ನ ಸುಂದರವಾದ ಕಾಲುವೆಗಳು ರೊಮ್ಯಾನ್ಸ್ ಮತ್ತು ಇತಿಹಾಸ ಇಷ್ಟಪಡೋ ಪ್ರವಾಸಿಗರಿಗೆ ಬಹಳ ಹಿಂದಿನಿಂದಲೂ ಆಕರ್ಷಣೆಯ ಕೇಂದ್ರ, ಆದರೆ ಇತ್ತೀಚಿನ ದಿನಗಳಲ್ಲಿ ಈ ಸ್ಥಳವು ಜನ ಸಾಗರದಿಂದ ತುಂಬಿ ಹೋಗಿವೆ. ಇಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಐತಿಹಾಸಿಕ ಕಟ್ಟಡಗಳು ಹಾನಿಗೊಳಗಾಗುತ್ತಿವೆ. ಇದು ಜನರನ್ನು ತಮ್ಮ ಮನೆಗಳನ್ನು ತೊರೆಯುವಂತೆ ಮಾಡುತ್ತಿವೆ.
 

ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ (Great Barrier Reef, Australia)
ವಿಶ್ವದ ಅತಿದೊಡ್ಡ ಹವಳದ ಬಂಡೆ ಹೊಂದಿರುವ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಸುಂದರ ತಾಣ ಇದು. ಈ ಸ್ಥಳವು ಡೈವರ್ಗಳಿಗೆ ಮತ್ತು ಸ್ನೋರ್ಕೆಲಿಂಗ್ ಗೆ ಸ್ವರ್ಗ. ಆದರೆ ಹೆಚ್ಚುತ್ತಿರುವ ಸಮುದ್ರ ತಾಪಮಾನ, ಮಾಲಿನ್ಯ, ದೋಣಿ ದಟ್ಟಣೆ ಮತ್ತು ಹೆಚ್ಚುತ್ತಿರುವ ಜನಸಂದಣಿಯಿಂದ, ಇಲ್ಲಿನ ಬಂಡೆಗಳು ನಾಶವಾಗುತ್ತಿವೆ. ಅತಿಯಾದ ಪ್ರವಾಸೋದ್ಯಮದಿಂದಾಗಿ, ಈ ಸ್ಥಳ ತನ್ನ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.

ಮಚು ಪಿಚು, ಪೆರು (Machu Pichu, Peru)
ಮಚು ಪಿಚು ಆಂಡಿಸ್ ಪರ್ವತಗಳ ಮೇಲೆ ನಿರ್ಮಿಸಲಾದಂತಹ ವಿಶ್ವದ ಅತ್ಯಂತ ಜನಪ್ರಿಯ ಪುರಾತತ್ವ ತಾಣ. ಇದರ ಜನಪ್ರಿಯತೆಯಿಂದ ಪ್ರವಾಸಿಗರು ಇಲ್ಲಿಗೆ ಆಕರ್ಷಿತರಾಗುತ್ತಾರೆ. ಇದು ಇಲ್ಲಿನ ಪರಿಸರ ವ್ಯವಸ್ಥೆಯನ್ನು ಅಪಾಯಕ್ಕೆ ದೂಡಿದೆ. ಈ ಸ್ಥಳದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರವಾಸಿ ಮಿತಿಗಳನ್ನು ವಿಧಿಸಲು ಮತ್ತು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನ ಮಾಡಲೇಬೇಕಿದೆ.

ಡುಬ್ರೊವ್ನಿಕ್, ಕ್ರೊಯೇಷಿಯಾ (Croatia)
ಜನಪ್ರಿಯ ಟಿವಿ ಸೀರೀಸ್ ಗೇಮ್ಸ್ ಆಫ್ ಥ್ರೋನ್ಸ್ ನಲ್ಲಿ ಕಾಣಿಸಿಕೊಂಡಾಗಿನಿಂದ, ಡುಬ್ರೊವ್ನಿಕ್ ನಲ್ಲಿ ಪ್ರವಾಸಿಗರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಮಧ್ಯಕಾಲೀನ ಯುಗದ ಈ ನಗರವನ್ನು 'ಅಡ್ರಿಯಾಟಿಕ್ ನ ಮುತ್ತು' ಎಂದೂ ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಹೆಚ್ಚುತ್ತಿರುವ ಜನಸಂದಣಿಯು ಮೂಲಸೌಕರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಇದು ಇಲ್ಲಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸೌಂದರ್ಯದ ಮೇಲೂ ಪರಿಣಾಮ ಬೀರಿದೆ.

ಬಾಲಿ, ಇಂಡೋನೇಷ್ಯಾ (Bali, Indonesia)
ಇತ್ತೀಚಿನ ದಿನಗಳಲ್ಲಿ, ಇಂಡೋನೇಷ್ಯಾದ ಬಾಲಿ ಯುವಕರು ಮತ್ತು ದಂಪತಿಗೆ ಜನಪ್ರಿಯ ಮಧುಚಂದ್ರ ಅಥವಾ ಸಾಹಸ ತಾಣವಿದು. ಜನದಟ್ಟಣೆಯಿಂದ, ಇಲ್ಲಿನ ಕಡಲ ತೀರಗಳು ಮತ್ತು ಹಸಿರು ಸ್ಥಳಗಳಲ್ಲಿ ಜನರಿಗೆ ಪ್ರವಾಸ ಮಾಡೋದಕ್ಕೂ ಸಾಧ್ಯವಾಗುತ್ತಿಲ್ಲ. ಹೆಚ್ಚುತ್ತಿರುವ ಸಂಚಾರ ಮತ್ತು ಪ್ರವಾಸೋದ್ಯಮದಿಂದ, ನೀರಿನ ಕೊರತೆ, ಸಂಚಾರ, ಭೂ ವಿವಾದಗಳು ಮತ್ತು ಪರಿಸರ ಕಾಳಜಿಗಳು ಇಲ್ಲಿ ಹೆಚ್ಚುತ್ತಿವೆ.

click me!