ಹಲ್ಲು ಸ್ವಚ್ಚಗೊಳಿಸಲು ಪೇಸ್ಟ್ ಅಲ್ಲ, ಮೂತ್ರ ಬಳಸುತ್ತಿದ್ರಂತೆ ರೋಮನ್ನರು: ಕಾರಣ ಏನ್ ಗೊತ್ತಾ?

First Published | May 18, 2024, 5:27 PM IST

ಪ್ರಾಚೀನ ರೋಮನ್ ಜನರ ಆಚರಣೆ, ಪದ್ಧತಿಗಳ ಬಗ್ಗೆ ಇಂದಿನ ಜನ ಕೇಳಿಸಿಕೊಂಡ್ರೆ  ಶಾಖ್ ಆಗೋದು ಖಂಡಿತಾ. ರೋಮನ್ನರಿಗೆ ಹಳೆಯ ಆಚರಣೆಗಳಲ್ಲಿ ಮೌತ್ ವಾಶ್ ಆಗಿ, ಬಟ್ಟೆ ಒಗೆಯಲು ಮತ್ತು ಬಣ್ಣ ಹಾಕಲು ಮೂತ್ರವನ್ನು ಬಳಸುತ್ತಿದ್ದರಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

ಪ್ರಾಚೀನ ಕಾಲದ ಪದ್ಧತಿಗಳು (ancient people) ಇಂದಿನ ಕಾಲಕ್ಕಿಂತ ತುಂಬಾನೆ ಭಿನ್ನವಾಗಿದ್ದವು. ಆ ಅವಧಿಯಲ್ಲಿ, ಜನರು ಹೆಚ್ಚಾಗಿ ಬೇಟೆಯಾಡಿ, ತಾವೇ ಕೃಷಿ ಮಾಡಿ ಆಹಾರ ಸೇವಿಸುತ್ತಿದ್ದರು, ಅಲ್ಲದೇ ಜನರು ಮ್ಮ ದೈನಂದಿನ ಜೀವನದಲ್ಲಿ ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದರು. ಆದರೆ ಕೆಲವು ವಿಷಯಗಳು ತುಂಬಾನೆ ವಿಚಿತ್ರವಾಗಿದ್ದವು, ಇಂದಿನ ಜನರು ಈ ಬಗ್ಗೆ ಕೇಳಿದ್ರೆ, ಹೀಗೂ ಉಂಟೆ ಅನ್ನೋದು ಖಂಡಿತಾ. 
 

ಪ್ರಾಚೀನ ರೋಮನ್  (Ancient Roman) ಜನರ ಬಗ್ಗೆ ಹೇಳೋದಾದರೆ, ಈ ಜನರು ಅನೇಕ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದರು. ಅವುಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ವಿಷಯ ಅಂದ್ರೆ ಮೂತ್ರದ ಬಳಕೆ, ಹೌದು ಆ ಜನರು ಬಾಯಿ ತೊಳೆಯಲು, ಬಟ್ಟೆ ಒಗೆಯಲು ಮತ್ತು ಬಟ್ಟೆಗಳಿಗೆ ಡೈ ಅಥವಾ ಬಣ್ಣ ಹಾಕಲು ಮೂತ್ರವನ್ನು ಬಳಸುತ್ತಿದ್ದರು. ಛೀ ಅನ್ನಬೇಡಿ, ಇದು ನಿಜಾ. 
 

Tap to resize

ಮೆಂಟಲ್ ಫ್ಲೋಸ್ ವೆಬ್ಸೈಟ್ನ ವರದಿಯ ಪ್ರಕಾರ, ಮೂತ್ರವನ್ನು ದೀರ್ಘಕಾಲದವರೆಗೆ ಬಿಟ್ಟರೆ, ಅದು ಹಾಳಾದ ನಂತರ ಅಮೋನಿಯಾವಾಗಿ ಬದಲಾಗುತ್ತದೆ. ಅಮೋನಿಯಾವನ್ನು ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ ಎಂದು ನಂಬಲಾಗಿದೆ. ಇದು ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಆ ಕಾಲದ ಜನರು ಮಾನವ ಮತ್ತು ಪ್ರಾಣಿಗಳ ಮೂತ್ರವನ್ನು ಮೌತ್ ವಾಶ್ ಆಗಿ ಮತ್ತು ಹಲ್ಲುಗಳನ್ನು ಸ್ವಚ್ಛವಾಗಿಡಲು ಬಳಸುತ್ತಿದ್ದರು ಎಂದು ರೋಮನ್ ಲೇಖಕ ಕ್ಯಾಟುಲಸ್ ದೃಢಪಡಿಸಿದ್ದಾರೆ.
 

ಸಸ್ಯಗಳನ್ನು ಬೆಳೆಸಲು ಬಳಸಲಾಗುತ್ತಿತ್ತು
ಮೂತ್ರವು ಸಾರಜನಕ ಮತ್ತು ರಂಜಕವನ್ನು ಸಹ ಹೊಂದಿರುತ್ತದೆ. ಸಸ್ಯಗಳನ್ನು ಬೆಳೆಸಲು ಇದು ತುಂಬಾನೇ ಸಹಾಯಕವಾಗಿದೆ. ದಾಳಿಂಬೆಗಳನ್ನು ಬೆಳೆಯಲು ಬಹಳ ಹಿಂದೆ ಸಂಗ್ರಹಿಸಿಟ್ಟ ಮಾನವ ಮೂತ್ರವನ್ನು ಬಳಸಲಾಗುತ್ತಿತ್ತು, ಇದು ಅವುಗಳನ್ನು ಹೆಚ್ಚು ರಸ ಮತ್ತು ಸಿಹಿಭರಿತ ಹಣ್ಣುಗಳನ್ನು ನೀಡುವಂತೆ ಮಾಡಿತು ಎಂದು ರೋಮನ್ ಲೇಖಕ ಕೊಲುಮೆಲ್ಲಾ ಬರೆದಿದ್ದಾರೆ. 

ಹಲ್ಲುಗಳ ಜೊತೆಗೆ, ರೋಮನ್ನರು ತಮ್ಮ ಬಟ್ಟೆಗಳನ್ನು ತೊಳೆಯಲು ಮತ್ತು ಬಟ್ಟೆಗಳಿಗೆ ಬಣ್ಣ ಹಚ್ಚಲು ಸಹ ಮೂತ್ರವನ್ನು ಬಳಸುತ್ತಿದ್ದರು. ಮೂತ್ರವು ಯೂರಿಯಾವನ್ನು ಹೊಂದಿರುತ್ತದೆ, ಇದನ್ನು ಅಮೋನಿಯಾವಾಗಿ ಪರಿವರ್ತಿಸಿದಾಗ, ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ (cleaning agent) ಆಗುತ್ತದೆ. ಇದು ಗ್ರೀಸ್ ಅಥವಾ ತೈಲ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಇನ್ನ ಇದನ್ನು ಬಟ್ಟೆಗಳಿಗೆ ಡೈ ಮಾಡಲು ಸಹ ಬಳಕೆ ಮಾಡಲಾಗುತ್ತಿತ್ತು ಅಮೋನಿಯಾದಿಂದಾಗಿ, ಬಣ್ಣವು ಬಟ್ಟೆಗಳ ಮೇಲೆ ಸುಲಭವಾಗಿ ಅಂಟಿಕೊಳ್ಳುತ್ತಿತ್ತು ಮತ್ತು ದೀರ್ಘಕಾಲದವರೆಗೆ ಅದು ಹಾಗೆಯೇ ಉಳಿಯುತ್ತಿತ್ತು. ಈ ರೀತಿಯಾಗಿ, ಬಟ್ಟೆಗಳಿಗೆ ಬಣ್ಣ ಹಾಕುವ ಕೆಲಸವನ್ನು ಮಾಡಲಾಯಿತು.
 

Latest Videos

click me!