ಭೂಮಿ ದುಂಡಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಭೂಮಿಯ ಮೂಲೆ ಮೂಲೆಯಲ್ಲೂ ಒಂದಲ್ಲ ಒಂದು ದೇಶವಿದೆ. ಪ್ರತಿಯೊಂದು ದೇಶವೂ ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಸುಂದರವಾಗಿಯೇ ಇದೆ. ಕೆಲವು ದೇಶಗಳು ಐತಿಹಾಸಿಕ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದರೆ, ಇನ್ನೂ ಕೆಲವು ನೈಸರ್ಗಿಕ ದೃಶ್ಯಾವಳಿಗಳಿಗೆ ಫೇಮಸ್. ವಿಶ್ವದ ಅತಿದೊಡ್ಡ ಮತ್ತು ಶ್ರೀಮಂತ ದೇಶಗಳ ಬಗ್ಗೆ ನೀವು ಕೇಳಿರಬಹುದು, ಆದರೆ ವಿಶ್ವದ ಕೊನೆಯ ದೇಶ (last country on earth) ಯಾವುದು?
ಇವತ್ತು ನಾವು ನಿಮಗೆ ವಿಶ್ವದ ಕೊನೆಯ ದೇಶ ನಾರ್ವೆ ಬಗ್ಗೆ ಮಾಹಿತಿ ನೀಡುತ್ತೇವೆ. ಇಲ್ಲಿ ಭೂಮಿ ಕೊನೆಗೊಳ್ಳುತ್ತದೆ. ಈ ದೇಶವು ಉತ್ತರ ಧ್ರುವದ ಬಳಿ ಇದೆ. ಉತ್ತರ ಧ್ರುವವು ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವ ಸ್ಥಳ. ಆದ್ದರಿಂದ ನಾರ್ವೆಯ ಹೇಗಿರಬಹುದು ಅನ್ನೋದನ್ನು ನೀವು ಊಹೆ ಮಾಡಬಹುದು.
ಈ ದೇಶದಲ್ಲಿ ರಾತ್ರಿ ತುಂಬಾ ಚಿಕ್ಕದು
ಈ ದೇಶ ತುಂಬಾನೆ ಸುಂದರವಾಗಿದೆ. ಆದರೆ ಇಲ್ಲಿ ರಾತ್ರಿ ಇಲ್ಲ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಉತ್ತರ ನಾರ್ವೆಯ (Norway) ಹ್ಯಾವರ್ಫೆಸ್ಟ್ ನಗರದಲ್ಲಿ, ಸೂರ್ಯ ಕೇವಲ 40 ನಿಮಿಷಗಳ ಕಾಲ ಮುಳುಗುತ್ತಾನೆ. ಆದ್ದರಿಂದ, ಇದನ್ನು ಮಧ್ಯರಾತ್ರಿಯ ಸೂರ್ಯನ ದೇಶ ಎಂದೂ ಕರೆಯಲಾಗುತ್ತದೆ. ಅಂದ್ರೆ 40 ನಿಮಿಷ ಮಾತ್ರ ಇಲ್ಲಿ ಕತ್ತಲೆ, ಮತ್ತೆ ಉಳಿದ 23 ಗಂಟೆ ಗಂಟೆ 20 ನಿಮಿಷ ಪೂರ್ತಿ ಬೆಳಕಿನಿಂದ ಕೂಡಿರುತ್ತೆ ಈ ನಗರ.
ಬೇಸಿಗೆಯಲ್ಲಿ ಇಲ್ಲಿ ಹಿಮ ಹೆಪ್ಪುಗಟ್ಟುತ್ತದೆ
ಈ ದೇಶ ತುಂಬಾ ಶೀತ ವಾತಾವರಣದಿಂದ ಕೂಡಿದೆ. ವಿಶ್ವದ ಕೆಲವು ದೇಶಗಳಲ್ಲಿ ಬೇಸಿಗೆಯಲ್ಲಿ ತಾಪಮಾನವು 45 ರಿಂದ 50 ಡಿಗ್ರಿಗಳ ನಡುವೆ ಇದ್ದರೆ, ಈ ದೇಶದಲ್ಲಿ ಬೇಸಿಗೆಯಲ್ಲಿ ಹಿಮವಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನ ಶೂನ್ಯ ಡಿಗ್ರಿಗಳಷ್ಟಿರುತ್ತದೆ. ತೀವ್ರ ಚಳಿಗಾಲದಲ್ಲಿ ಇಲ್ಲಿನ ತಾಪಮಾನವು ಮೈನಸ್ 45 ಡಿಗ್ರಿಗಳಿಗೆ ಇಳಿಯುತ್ತದೆ. ಇಲ್ಲಿನ ಸೌಂದರ್ಯ ಮಾತ್ರ ಬೇರೆಯದೇ ಲೋಕ ಸೃಷ್ಟಿಸುತ್ತೆ.
ಬೇಸಿಗೆಯಲ್ಲಿ ಇಲ್ಲಿ ರಾತ್ರಿ ಇರೋದೆ ಇಲ್ಲ
ಉತ್ತರ ಧ್ರುವಕ್ಕೆ ಹತ್ತಿರವಿರುವ ಕಾರಣ, ಇದು ಇತರ ದೇಶಗಳಂತೆ ಪ್ರತಿದಿನ ರಾತ್ರಿ ಅಥವಾ ಹಗಲು ಹೊಂದಿರುವುದಿಲ್ಲ. ಬದಲಾಗಿ, ಇದು ಇಲ್ಲಿ ಆರು ತಿಂಗಳು ಹಗಲು (6 month day) ಮತ್ತು ಆರು ತಿಂಗಳು ರಾತ್ರಿಯನ್ನು ಹೊಂದಿರುತ್ತೆ. ಚಳಿಗಾಲದಲ್ಲಿ, ಸೂರ್ಯನು ಇಲ್ಲಿ ಗೋಚರಿಸೋದೆ ಇಲ್ಲ, ಆದರೆ ಬೇಸಿಗೆಯಲ್ಲಿ ಸೂರ್ಯ ಇಲ್ಲಿ ಎಂದಿಗೂ ಮುಳುಗುವುದಿಲ್ಲ. ಅಂದರೆ ಬೇಸಿಗೆಯ ದಿನಗಳಲ್ಲಿ ಇಲ್ಲಿ ರಾತ್ರಿಗಳೇ ಇರೋದಿಲ್ಲ. ಈ ಸ್ಥಳವು ತುಂಬಾ ಎಷ್ಟೊಂದು ಇಂಟ್ರೆಸ್ಟಿಂಗ್ ಆಗಿದೆ ಅಂದ್ರೆ ಇದನ್ನು ನೋಡೋದಕ್ಕೆ ದೂರ ದೂರದಿಂದ ಜನ ಬರ್ತಾರೆ.
ಒಬ್ಬಂಟಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ
ಇದೆಲ್ಲವನ್ನೂ ತಿಳಿದ ನಂತರ, ನೀವು ಖಂಡಿತವಾಗಿಯೂ ನಾರ್ವೆಗೆ ಹೋಗಲು ಬಯಸುತ್ತೀರಿ ಅಲ್ವಾ? ಇ -69 ಹೆದ್ದಾರಿಯು ಭೂಮಿಯ ತುದಿಗಳನ್ನು ನಾರ್ವೆಗೆ ಸಂಪರ್ಕಿಸುತ್ತದೆ. ನೀವು ಮುಂದೆ ಹೋದಂತೆ ಇಲ್ಲಿ ರಸ್ತೆಯೇ ಕೊನೆಗೊಳ್ಳುತ್ತದೆ, ಅಲ್ಲಿ ತಲುಪಿದಾಗ ನಿಮಗೆ ಎಲ್ಲಿ ಹೋಗಬೇಕು ಅನ್ನೋದೆ ಗೊತ್ತಾಗೋದಿಲ್ಲ, ಏಕೆಂದರೆ ಇಲ್ಲಿ ಪ್ರಪಂಚವು ಕೊನೆಗೊಳ್ಳುತ್ತದೆ.
ನೀವು ಈ ಹೆದ್ದಾರಿಯಲ್ಲಿ ಹೋಗಲು ಬಯಸಿದರೂ, ಒಬ್ಬಂಟಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ. ಇಲ್ಲಿ, ತುಂಬಾ ಜನರು ಗುಂಪು ಜೊತೆಯಾಗಿದ್ದರೆ ಮಾತ್ರ ಹೋಗಲು ಅನುಮತಿ ಸಿಗುತ್ತದೆ. ಈ ರಸ್ತೆಯಲ್ಲಿ ಯಾವುದೇ ವ್ಯಕ್ತಿಗೆ ಒಬ್ಬಂಟಿಯಾಗಿ ಹೋಗಲು ಅಥವಾ ಒಬ್ಬಂಟಿಯಾಗಿ ವಾಹನ ಚಲಾಯಿಸಲು ಅನುಮತಿ ಇಲ್ಲ. ಇಲ್ಲಿ ಎಲ್ಲೆಡೆ ಹಿಮವಿದೆ, ಆದ್ದರಿಂದ ಏಕಾಂಗಿಯಾಗಿ ಪ್ರಯಾಣಿಸುವ ಮೂಲಕ ಕಳೆದುಹೋಗುವ ಸಾಧ್ಯತೆ ಇರೋದರಿಂದ ಏಕಾಂಗಿ ಪ್ರವಾಸ ನಿಷೇಧಿಸಲಾಗಿದೆ.
ಪೋಲಾರ್ ಲೈಟ್ ನೋಡುತ್ತಾ ಎಂಜಾಯ್ ಮಾಡಬಹುದು
ಈ ಸ್ಥಳದಲ್ಲಿ ಸೂರ್ಯಾಸ್ತ ಮತ್ತು ಪೋಲಾರ್ ಲೈಟ್ (polar light) ನೋಡುವುದು ಮೋಜಿನ ಸಂಗತಿಯಾಗಿದೆ. ವರ್ಷಗಳ ಹಿಂದೆ ಇಲ್ಲಿ ಮೀನು ವ್ಯಾಪಾರವಿತ್ತು ಎಂದು ಹೇಳಲಾಗುತ್ತದೆ, ಆದರೆ ಕ್ರಮೇಣ ಈ ದೇಶವು ಅಭಿವೃದ್ಧಿ ಹೊಂದಿತು ಮತ್ತು ಪ್ರವಾಸಿಗರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಈಗ ಪ್ರವಾಸಿಗರು ಇಲ್ಲಿ ಉಳಿಯಲು ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳ ಸೌಲಭ್ಯವನ್ನು ಸಹ ಪಡೆಯುತ್ತಾರೆ.