ಈ ದೇಗುಲಕ್ಕೆ ಪ್ರೇಮಿ ಜೊತೆ ಹೋಗಿ ಬೇಡಿಕೊಂಡ್ರೆ ಸಾಕು, ಬೇಗನೆ ಅವ್ರ ಜೊತೆಗೆ ಮದ್ವೆನೂ ಆಗುತ್ತೆ !

First Published May 28, 2024, 4:17 PM IST

ನಿಮ್ಮ ಸಂಗಾತಿಯೊಂದಿಗೆ ಈ ದೇವಾಲಯಗಳಿಗೆ ಭೇಟಿ ನೀಡುವುದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ನೀವು ಪ್ರೀತಿ ಮಾಡುತ್ತಿರುವವರೆ ಜೊತೆಗೆ ಶೀಘ್ರದಲ್ಲೇ ವಿವಾಹ ನಡೆಯಲಿದೆ ಎನ್ನಲಾಗುತ್ತದೆ. 

ದೇಶಾದ್ಯಂತ ಅನೇಕ ದೇವಾಲಯಗಳಿವೆ (Temples), ಅವುಗಳ ಇತಿಹಾಸವು ಶತಮಾನಗಳಷ್ಟು ಹಳೆಯದಾಗಿದೆ. ಕೆಲವು ದೇವಾಲಯಗಳನ್ನು ಪವಾಡ ನಡೆಯುವ ಜಾಗ ಎಂದು ಜನರು ನಂಬುತ್ತಾರೆ. ಹೆಚ್ಚಾಗಿ ಜೋಡಿಗಳು (Couples) ತಮ್ಮ ಪ್ರೀತಿ ಗಟ್ಟಿಯಾಗಿರಲಿ, ದೇವರ ಆಶೀರ್ವಾದ ತಮ್ಮ ಮೇಲಿರಲಿ ಎಂದು ಬೇಡಿಕೊಳ್ಳಲು ದೇಗುಲಗಳಿಗೆ ಭೇಟಿ ನೀಡುತ್ತಾರೆ.  ಇನ್ನು ಕೆಲವು ಪ್ರೇಮಿಗಳು ತಮ್ಮ ಮನೆಯವರೆಲ್ಲರೂ ಒಪ್ಪಿ ನಮ್ಮ ಮದುವೆ ಮಾಡಿಸಲಿ ಎಂಬ ಬೇಡಿಕೆಯೊಂದಿಗೆ ದೇಗುಲಕ್ಕೆ ತೆರಳುತ್ತಾರೆ. 
 

ನಿಮಗೆ ಗೊತ್ತಾ? ಭಾರತದಲ್ಲಿ ಕೆಲವೊಂದು ಪವಾಡ ಸದೃಶ ದೇಗುಲಗಳಿವೆ. ಅಲ್ಲಿಗೆ ಪ್ರೀತಿ ಮಾಡುತ್ತಿರುವ ಜೋಡಿಗಳು ತೆರಳಿ, ದರ್ಶನ ಪಡೆದು, ಭಕ್ತಿಯಿಂದ ಬೇಡಿಕೊಂಡರೆ, ದೇವರು ಅವರ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಕಪಲ್ಸ್ ತಮ್ಮ ಪ್ರೀತಿಯನ್ನು, ವಿವಾಹವಾಗಿ ಪರಿವರ್ತಿಸಬೇಕೆಂದು ದೇವರಲ್ಲಿ ಬೇಡಿಕೊಂಡು ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ನಿಮ್ಮ ಪ್ರೀತಿಯನ್ನು ಸಹ ಮನೆಯವರ ಒಪ್ಪಿ, ಬೇಗನೆ ಮದುವೆಯಾಗಬೇಕೆಂದು (marriage) ನೀವು ನಿರ್ಧರಿಸಿದರೆ ಈ ದೇಗುಲಗಳಿಗೆ ಭೇಟಿ ನೀಡಿ. 

Latest Videos


ತ್ರಿನೇತ್ರ ಗಣೇಶ ದೇವಸ್ಥಾನ, ರಣಥಂಬೋರ್ (Trinetra Ganesha Temple, Ranthambore)
ಈ ದೇವಾಲಯವನ್ನು ಕಪಲ್ಸ್ ಗಳಿಗೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮದುವೆಗೆ ಮೊದಲು ದೇವರ ದರ್ಶನ ಪಡೆಯಲು ಜನರು ಇಲ್ಲಿಗೆ ಬರುತ್ತಾರೆ. ಈ ದೇವಾಲಯದ ಅತ್ಯಂತ ವಿಶೇಷವೆಂದರೆ ಗಣಪತಿಯ ವಿಗ್ರಹವನ್ನು ಅವರ ಕುಟುಂಬ ಸದಸ್ಯರೊಂದಿಗೆ ಅಂದರೆ ಶಿವ, ಪಾರ್ವತಿಯೊಂದಿಗೆ ಇಲ್ಲಿ ಇಡಲಾಗಿದೆ. ಈ ದೃಶ್ಯ ಕಂಡು ಬರುವ ವಿಶ್ವದ ಏಕೈಕ ದೇವಾಲಯ ಇದು ಎಂದು ನಂಬಲಾಗಿದೆ.

ಪ್ರತಿ ವರ್ಷ ಕಪಲ್ಸ್ ತಮ್ಮ ಮದುವೆಯ ಮೊದಲ ವಿವಾಹ ಆಮಂತ್ರಣವನ್ನು (wedding invitation) ಈ ದೇವಾಲಯಕ್ಕೆ ಕಳುಹಿಸುತ್ತಾರೆ. ಅಲ್ಲದೆ, ಮದುವೆಯಾಗಲು ಬಯಸುವ ಜೋಡಿಗಳು ಸಹ ಇಲ್ಲಿಗೆ ಭೇಟಿ ನೀಡಿ, ಪ್ರತಿಜ್ಞೆಗಳನ್ನು ಕೇಳಲು ಬರುತ್ತಾರೆ. ಬಾಲಿವುಡ್ ನ ಸ್ಟಾರ್ ದಂಪತಿಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮದುವೆಗೆ ಮೊದಲು ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಇತರ ದಂಪತಿಗಳಂತೆ, ಅವರು ಸಹ ತಮ್ಮ ಮೊದಲ ವಿವಾಹ ಆಮಂತ್ರಣವನ್ನು ದೇವರಿಗೆ ಕಳುಹಿಸಿದ್ದರು ಎಂದು ಹೇಳಲಾಗುತ್ತದೆ.
 

ಪ್ರೇಮ್ ಮಂದಿರ, ವೃಂದಾವನ (Prem Mandir Vrindavana)
ಭಗವಾನ್ ಕೃಷ್ಣ ಮತ್ತು ರಾಧೆಗೆ ಸಮರ್ಪಿತವಾಗಿರುವ ಈ ದೇವಾಲಯವು ಜೋಡಿಗಳಿಗೆ ಅತ್ಯಂತ ವಿಶೇಷವಾಗಿದೆ. ಪ್ರೇಮ್ ಮಂದಿರವು ಸಂಪೂರ್ಣವಾಗಿ ರಾಧಾ ಮತ್ತು ಕೃಷ್ಣರ ದೈವಿಕ ಪ್ರೀತಿಯನ್ನು ಪ್ರತಿಬಿಂಬಿಸುವ ದೇಗುಲವಾಗಿದೆ. ಆದ್ದರಿಂದ, ಯಾರು ತಮ್ಮ ಸಂಗಾತಿಯೊಂದಿಗೆ ದರ್ಶನಕ್ಕಾಗಿ ಇಲ್ಲಿಗೆ ಬಂದರೂ, ದೇವರು ಅವರ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ನಿಮ್ಮ ಸಂಬಂಧದಲ್ಲಿ ಇನ್ನೂ ಹೆಚ್ಚಿನ ಶಕ್ತಿಯನ್ನು ನೀವು ಬಯಸಿದರೆ, ನೀವು ದರ್ಶನಕ್ಕಾಗಿ ಇಲ್ಲಿಗೆ ಬರಬಹುದು. ಇದು ವೃಂದಾವನದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

ಗುರುವಾಯೂರು ದೇವಸ್ಥಾನ, ಕೇರಳ (Guruvayur Temple, Kerala)
ಈ ದೇವಾಲಯವು ಕೇರಳಿಗರ ನೆಚ್ಚಿನ ವಿವಾಹ ಸ್ಥಳವೆಂದು ಕರೆಯಲ್ಪಡುತ್ತದೆ. ಆದರೆ ನಿಮ್ಮ ಕುಟುಂಬವು ನಿಮ್ಮ ಸಂಗಾತಿಯೊಂದಿಗೆ ಮದುವೆಗೆ ಒಪ್ಪದಿದ್ದರೆ, ನೀವು ಇಲ್ಲಿಗೆ ಬಂದು ದೇವರಲ್ಲಿ ಬೇಡಿಕೊಳ್ಳಬಹುದು. ಈ ದೇವಾಲಯವನ್ನು ಕಪಲ್ಸ್ ಗಳಿಗೆ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಇಲ್ಲಿ ಮದುವೆಯಾಗುವ ದಂಪತಿಗಳು ಅಥವಾ ಆಶೀರ್ವಾದ ಪಡೆಯಲು ಬರುವ ಜೋಡಿಗಳು ದೀರ್ಘ ಮತ್ತು ಸಂತೋಷದ ವೈವಾಹಿಕ ಜೀವನ ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ಹಿಂದೂ ದೇವರಾದ ಕೃಷ್ಣನಿಗೆ ಸಮರ್ಪಿತವಾಗಿದೆ.

ತ್ರಿಯುಗಿ ನಾರಾಯಣ ದೇವಸ್ಥಾನ, ಉತ್ತರಾಖಂಡ (Triyugi Narayan Temple, Uttarakhand)
ಈ ದೇವಾಲಯವು ಉತ್ರಾರಖಂಡದ ತ್ರಿಯೋಗಿ ಗ್ರಾಮದಲ್ಲಿದೆ. ಇದು ಶಿವ ಮತ್ತು ಪಾರ್ವತಿ ವಿವಾಹವಾದ ದೇವಾಲಯವೆಂದು ನಂಬಲಾಗಿದೆ, ಆದ್ದರಿಂದ ನವವಿವಾಹಿತರಿಗೆ ಮತ್ತು ಮದುವೆಯಾಗಲು ಪ್ಲ್ಯಾನ್ ಮಾಡುತ್ತಿರುವವರಿಗೆ ಈ ದೇಗುಲ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಜೋಡಿಗಳಿಗಾಗಿ ಸದಾ ತೆರೆದಿರುತ್ತದೆ, ಹೆಚ್ಚಿನ ಜೋಡಿಗಳು, ದೇವರ ಆಶೀರ್ವಾದ ಪಡೆಯಲು ಮತ್ತು , ತಮ್ಮ ಮದುವೆಗೆ ದೇವರನ್ನು ಆಹ್ವಾನಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.  

click me!