ವಿವಾಹ (Marriage) ಅನ್ನೋದು ಮುರಿಯಲಾರದ ಬಂಧ. ಈ ಸಂಬಂಧವು ಏಳು ಜನ್ಮದವರೆಗೆ ಮುಂದುವರೆಯುವ ಬಂಧ. ಆದರೆ ಮದುವೆಯಾಗದೆ ಸತ್ತವರ ಬಗ್ಗೆ ಏನು? ಸತ್ತ ಇಬ್ಬರು ವ್ಯಕ್ತಿಗಳು ಮದುವೆಯಾದರೆ ಏನಾಗುತ್ತದೆ! ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸಬಹುದು. ಸತ್ತ ವ್ಯಕ್ತಿಗೆ ಮದುವೆಯೇ? ಎಂದು ನಿಮಗೆ ಅನಿಸಬಹುದು… ಆದರೆ ಈ ರೀತಿ ಮದುವೆಯಾಗುತ್ತೆ.
ಜೀವಂತ ಜನರು ಮೃತ ದೇಹಗಳನ್ನು ಮದುವೆಯಾಗುವ ದೇಶವಿದೆ, ಮೃತ ದೇಹಗಳಿಗೆ (marriage of dead) ಪರ್ಫೆಕ್ಟ್ ಜೋಡಿಯನ್ನು ಸಹ ಕಂಡುಕೊಳ್ಳುತ್ತಾರೆ. ಈ ರೀತಿ ಯಾವ ದೇಶದಲ್ಲಿ ನಡೆಯುತ್ತದೆ ಮತ್ತು ಅದು ಹೇಗೆ ಸಂಭವಿಸುತ್ತಿತ್ತು ಎಂದು ನೀವು ಯೋಚಿಸುತ್ತಿರಬಹುದು ಅಲ್ವಾ? ಇಲ್ಲಿದೆ ನೋಡಿ ಆ ಕುರಿತಾದ ತುಂಬಾನೆ ಇಂಟ್ರೆಸ್ಟಿಂಗ್ ಮಾಹಿತಿ.
ದೆವ್ವದ ಮದುವೆ ಎಂದರೇನು?
ಸತ್ತ ಜನರನ್ನು ಮದುವೆಯಾಗುವ ಸಂಪ್ರದಾಯವು ಚೀನಾದಲ್ಲಿದ್ದು, ಪ್ರೇತ ವಿವಾಹ (Ghost wedding) ಎಂದು ಕರೆಯಲಾಗುತ್ತದೆ. 3000 ವರ್ಷಗಳಿಂದ ಈ ಸಂಪ್ರದಾಯವನ್ನುಇಲ್ಲಿನ ಜನರು ನಂಬಿಕೊಂಡು ಬಂದಿದ್ದಾರೆ., ಅವಿವಾಹಿತರು ಮರಣದ ನಂತರ ಏಕಾಂಗಿಯಾಗಿ ಉಳಿಯಬಾರದು ಎನ್ನುವ ಕಾರಣಕ್ಕೆ ಮದುವೆ ಮಾಡಿಸಲಾಗುತ್ತೆ. ನಮ್ಮ ಕರ್ನಾಟಕದಲ್ಲೂ ಈ ರೀತಿಯ ಮದುವೆ ಇದೆ, ಆದರೆ ಇಲ್ಲಿ, ಸಾವನ್ನಪ್ಪಿದ ಪುರುಷ ಆತ್ಮದ ಜೊತೆ, ಸಾವನ್ನಪ್ಪಿದ ಮಹಿಳೆಯ ಆತ್ಮವನ್ನು ಮದುವೆ ಮಾಡಿಸುತ್ತಾರೆ. ಆದರೆ ಚೀನಾದಲ್ಲಿ ಜೀವಂತ ಜನರ ಜೊತೆ ಸತ್ತ ವ್ಯಕ್ತಿಯ ಮದುವೆ ಮಾಡಲಾಗುತ್ತದೆ.
ಪ್ರೇತ ವಿವಾಹಗಳಲ್ಲಿಯೂ ಮ್ಯಾಚ್ ಮೇಕಿಂಗ್ ನಡೆಯುತ್ತದೆ
ಸಾಮಾನ್ಯ ಜನರ ಮದುವೆಗೆ ಮುಂಚಿತವಾಗಿ ಹುಡುಗ ಅಥವಾ ಹುಡುಗಿಗೆ ಪರ್ಫೆಕ್ಟ್ ಮ್ಯಾಚ್ ಕೂಡಿ ಬರುವುದು ಮುಖ್ಯ ಎನ್ನುವ ನಂಬಿಕೆ ಇದೆ, ಅದರಂತೆ ಚೀನಾದಲ್ಲಿ, ಮೃತ ವ್ಯಕ್ತಿಯ ಕುಟುಂಬದ ಜನರು ತಮ್ಮ ಹುಡುಗ/ಹುಡುಗಿಗೆ ಸೂತಕ ವಧು ಮತ್ತು ವರನನ್ನು ಹುಡುಕಲು ಫೆಂಗ್ ಶೂಯಿ ಮಾಸ್ಟರ್ ಅನ್ನು ಮ್ಯಾಚ್ ಮೇಕರ್ ಆಗಿ ನೇಮಿಸಿಕೊಳ್ಳುತ್ತವೆ.
ಸತ್ತವರ ಮದುವೆಯಲ್ಲಿಯೂ ವರದಕ್ಷಿಣೆ ಪಡೆಯುವ ಪದ್ಧತಿ ಇದೆ
ವರದಕ್ಷಿಣೆ ಅನ್ನೋದು ಪ್ರಪಂಚದಲ್ಲೇಲ್ಲಾ ವ್ಯಾಪಕವಾಗಿ ಹರಡಿ ಕೊಂಡಿದೆ. ಜೀವಂತ ಇರೋವಾಗ ವರದಕ್ಷಿಣೆ ತೆಗೆದುಕೊಳ್ಳೋದು ಬೇರೆ ಮಾತು, ಇದೀಗ, ಸತ್ತ ವ್ಯಕ್ತಿಯ ಮದುವೆ ಮಾಡುವ ಸಂದರ್ಭದಲ್ಲಿಯೂ ವರದಕ್ಷಿಣೆ ಬಗ್ಗೆ ಮಾತುಕತೆ ನಡೆದೇ ನಡೆಯುತ್ತೆ. ಇದು ಸಂಪ್ರದಾಯವಂತೆ.
ಮದುವೆ ಬಳಿಕ ವಧುವಿನ ಕುಟುಂಬ ಇಬ್ಬರು ಮೃತ ವ್ಯಕ್ತಿಗಳ ನಡುವಿನ ಮದುವೆಯಲ್ಲಿ ಅವಳ ಬೆಲೆಯನ್ನು ಕೇಳುತ್ತದೆ, ಇದರಲ್ಲಿ (dowry) ಆಭರಣಗಳು, ಸರ್ವೆಂಟ್ಸ್ ಮತ್ತು ಬಂಗಲೆ ಇವೆಲ್ಲವೂ ಸೇರಿವೆ. ಆದರೆ ಇದೆಲ್ಲವನ್ನೂ ಕಾಗದದಲ್ಲಿ ಬರವಣಿಗೆ ರೂಪದಲ್ಲಿ ಮಾತ್ರ ಇರುತ್ತದೆ. ನಿಜವಾಗಿ ಕೊಡೋದಿಲ್ಲ. ಆದರೆ ಸತ್ತ ವ್ಯಕ್ತಿಯನ್ನು ಜೀವಂತ ವ್ಯಕ್ತಿ ಮದುವೆಯಾಗೋದಾದರೆ ಆವಾಗ ಅವರಿಗೆ ಇಂತಿಷ್ಟು ಹಣ ಕೊಡಬೇಕಾಗುತ್ತದೆ.
ಮದುವೆ ನಂತರ, ಅವರನ್ನು ಒಂದೇ ಸಮಾಧಿಯಲ್ಲಿ ಇಡಲಾಗುತ್ತದೆ
ಸಾಮಾನ್ಯ ವಿವಾಹದಲ್ಲಿ, ಮದುವೆಯ ನಂತರ ಹೆಂಡತಿ ತನ್ನ ಗಂಡನ ಮನೆಗೆ ಹೋಗಿ ನಂತರ ಅವರು ಒಟ್ಟಿಗೆ ವಾಸಿಸುವುದು ಸಂಪ್ರದಾಯ. ಈ ಚೈನೀಸ್ ಘೋಸ್ಟ್ ವೆಡ್ಡಿಂಗ್ ಗೂ ಇದು ಅನ್ವಯಿಸುತ್ತದೆ, ಇದು ಸಾಮಾನ್ಯವಾಗಿ ವಧು ಮತ್ತು ವರನ ಅಂತ್ಯಕ್ರಿಯೆಯ ಪಟ್ಟಿ ಮತ್ತು ಆಹಾರವನ್ನು ಒಳಗೊಂಡಿರುತ್ತದೆ. ಈ ಮದುವೆಯ ಪ್ರಮುಖ ಭಾಗವೆಂದರೆ ಈಗಾಗಲೇ ಸಾವನ್ನಪ್ಪಿದ ವಧುವಿನ ಸಮಾಧಿಯನ್ನು ಅಗೆದು ಮೂಳೆಗಳನ್ನು ತೆಗೆದು, ವರನ ಸಮಾಧಿಯೊಳಗೆ ಇಟ್ಟು ಮುಚ್ಚಲಾಗುತ್ತದೆ. ಆದರೆ ಜೀವಂತ ವ್ಯಕ್ತಿ ಜೊತೆ ಸತ್ತ ವ್ಯಕ್ತಿಯ ಮದುವೆ ಮಾಡಿಸಿದಾಗ ಯಾವ ರೀತಿ ಸಂಪ್ರದಾಯ ಪಾಲಿಸಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಈ ಸಂಪ್ರದಾಯ ಫಿಜಿಯಲ್ಲಿಯೂ ಇದೆ
ಚೀನಾದ ದೆವ್ವದ ಮದುವೆಯಂತೆ, ಫಿಜಿಯಲ್ಲಿ ಶವಸಂಸ್ಕಾರದ ಮದುವೆಗಳನ್ನು ನಡೆಸಲಾಗುತ್ತದೆ. ಅಲ್ಲಿನ ದೇವರುಗಳು ಮತ್ತು ದೇವತೆಗಳು ಮದುವೆಯಾಗದೆ ಸಾಯುವವರ ಆತ್ಮವನ್ನು ಹಿಂಸಿಸುತ್ತಲೇ ಇರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ, ಫಿಜಿಯಲ್ಲಿ ಈ ರೀತಿಯ ಮದುವೆಯ ಸಂಪ್ರದಾಯವು ಶತಮಾನಗಳಿಂದ ನಡೆಯುತ್ತಿದೆ.