ಚುಮುಚುಮು ಚಳಿಯಲ್ಲಿ ಹನಿಮೂನ್ ಎಂಜಾಯ್ ಮಾಡಲು ಈ ತಾಣಗಳು ಬೆಸ್ಟ್

First Published Nov 24, 2022, 3:40 PM IST

ಈ ಚಳಿಗಾಲದ ಸೀಸನ್‌ನಲ್ಲಿ ನೀವು ಕೂಡ ಮದುವೆಯಾಗಲು ಹೊರಟಿದ್ದರೆ ಅಥವಾ ಮದುವೆಯಾಗಿ ನಿಮ್ಮ ಹನಿಮೂನ್‌ಗೆ ಪ್ಲ್ಯಾನ್ ಮಾಡುತ್ತಿದ್ದರೆ ನೀವು ನಿಮ್ಮ ಪರ್ಫೆಕ್ಟ್ ಮಧುಚಂದ್ರವನ್ನು ಭಾರತದ ಈ ಸ್ಥಳಗಳಲ್ಲಿ ಆಚರಿಸಬಹುದು.

ಚಳಿಗಾಲದ ಆರಂಭದೊಂದಿಗೆ, ದೇಶಾದ್ಯಂತ ಮದುವೆಯ ಸೀಸನ್ (wedding season) ಕೂಡ ಪ್ರಾರಂಭವಾಗಿದೆ. ಸೆಲೆಬ್ರಿಟಿ ಜೋಡಿಗಳಿಂದ ಹಿಡಿದು ಸಾಮಾನ್ಯರವರೆಗೂ ಎಲ್ಲರೂ ಈ ಋತುವಿನಲ್ಲಿ ಮದುವೆಯಾಗಲು ಸಜ್ಜಾಗಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಈಗಾಗಲೇ ಮದುವೆಯಾಗಿದ್ದಾರೆ ಮತ್ತು ಈಗ ತಮ್ಮ ಮಧುಚಂದ್ರವನ್ನು ಪ್ಲ್ಯಾನ್ ಮಾಡುತ್ತಿದ್ದಾರೆ. ನೀವು ಸಹ ನಿಮ್ಮ ಮಧುಚಂದ್ರಕ್ಕೆ (honeymoon) ಪರ್ಫೆಕ್ಟ್ ಸ್ಥಳವನ್ನು ಹುಡುಕುತ್ತಿದ್ದರೆ, ನಾವು ನಿಮಗೆ ಭಾರತದ ಕೆಲವು ಸುಂದರವಾದ ಮಧುಚಂದ್ರದ ತಾಣಗಳ ಬಗ್ಗೆ ತಿಳಿಸುತ್ತೇವೆ-

ಡಾಲ್ ಹೌಸಿ (Dalhousie)

ಈ ವೆಡ್ಡೀಂಗ್ ಸೀಸನ್ (Wedding Season) ನಲ್ಲಿ ನೀವು ಹನಿಮೂನ್ ಗೆ ಪರ್ಫೆಕ್ಟ್ ಸ್ಥಳ ಹುಡುಕುತ್ತಿದ್ದರೆ, ಆಗ ಡಾಲ್ ಹೌಸಿ ಉತ್ತಮ ಆಯ್ಕೆ. ಚಳಿಗಾಲದಲ್ಲಿ (Winter) ಇಲ್ಲಿ ಹಿಮಪಾತವು ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನವೆಂಬರ್ ನಿಂದ ಫೆಬ್ರವರಿಯವರೆಗೆ ಇಲ್ಲಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದು.

ಕೂರ್ಗ್

ಭಾರತದ ಸ್ಕಾಟ್ಲೆಂಡ್ (Scotland of India Coorg) ಎಂದು ಕರೆಯಲ್ಪಡುವ ಕೊಡಗಿನ ಹಚ್ಚ ಹಸಿರಿನ ಉದ್ಯಾನಗಳು ಮತ್ತು ಅನೇಕ ಜಲಪಾತಗಳು ನಿಮ್ಮ ಹನಿಮೂನ್ ನ್ನು ಇನ್ನಷ್ಟು ಅದ್ಭುತವಾಗಿಸುತ್ತದೆ. ಚಳಿಗಾಲದಲ್ಲಿ ಈ ವಿಶೇಷ ಕ್ಷಣವನ್ನು ಮಿಸ್ ಮಾಡಲು ನೀವು ಬಯಸದಿದ್ದರೆ, ಈ ಸ್ಥಳವು ನಿಮಗೆ ಪರಿಪೂರ್ಣ ಹನಿಮೂನ್ ಡೆಸ್ಟಿನೇಶನ್ (Honeymoon Destination). ನೀವು ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಇಲ್ಲಿಗೆ ಹೋಗಬಹುದು.

ಊಟಿ (Ooty)

ದೇಶದ ಪ್ರಸಿದ್ಧ ಮತ್ತು ಜನಪ್ರಿಯ ಹನಿಮೂನ್ ತಾಣಗಳಲ್ಲಿ ಒಂದಾದ ಊಟಿ, ಬಹುತೇಕ ಪ್ರತಿಯೊಬ್ಬ ಭಾರತೀಯನ ಆಯ್ಕೆಯಾಗಿದೆ. ಈ ನಗರದಲ್ಲಿ ನೋಡಲು ಅನೇಕ ಸುಂದರವಾದ ಸ್ಥಳಗಳಿವೆ. ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿದೆ

ವಯನಾಡ್ (Wayanad)

ದಕ್ಷಿಣ ಭಾರತವು (South India) ಯಾವಾಗಲೂ ಭೇಟಿ ನೀಡಲು ಜನರ ಮೊದಲ ಆಯ್ಕೆಯಾಗಿದೆ. ನೀವು ಹನಿಮೂನ್ ಗಾಗಿ ಕೇರಳಕ್ಕೆ ಹೋಗಲು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಲಿಸ್ತ್ ನಲ್ಲಿ ವಯನಾಡ್ ಅನ್ನು ಸೇರಿಸಿ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ.
 

ಜೈಸಲ್ಮೇರ್ (Jaisalmer)

ನೀವು ಕಲೆ (Art) ಮತ್ತು ಸಂಸ್ಕೃತಿ (Culture) ಪ್ರಿಯರಾಗಿದ್ದರೆ ಮತ್ತು ಮರುಭೂಮಿಯಲ್ಲಿ ನಿಮ್ಮ ಮಧುಚಂದ್ರವನ್ನು ಆಚರಿಸಲು ಬಯಸಿದ್ರೆ, ಜೈಸಲ್ಮೇರ್ ನಿಮಗೆ ಉತ್ತಮ ಆಯ್ಕೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಡಿಸೆಂಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ತಿಂಗಳು. ರಾಜಮನೆತನದ (Royal Family) ಕೋಟೆಗಳಲ್ಲಿ ಉಳಿಯುವುದರ ಜೊತೆಗೆ, ನೀವು ಮರುಭೂಮಿಯಲ್ಲಿ ಸಫಾರಿ, ಕ್ಯಾಂಪಿಂಗ್ (Camping), ದೀಪೋತ್ಸವವನ್ನು ಎಂಜಾಯ್ ಮಾಡಬಹುದು.

ಅಂಡಮಾನ್ ನಿಕೋಬಾರ್  (Andaman and Nicobar)

ಚಳಿಗಾಲದಲ್ಲಿ ಮಧುಚಂದ್ರಕ್ಕೆ ಹೋಗಲು ಅತ್ಯುತ್ತಮ ಸ್ಥಳಗಳಲ್ಲಿ "ಅಂಡಮಾನ್ ಮತ್ತು ನಿಕೋಬಾರ್ ದ್ವೀಪ" ಒಂದಾಗಿದೆ, ಇದನ್ನು ಬಹಳ ಸುಂದರ ಮತ್ತು ರೊಮ್ಯಾಂಟಿಕ್ ದ್ವೀಪವೆಂದು ಪರಿಗಣಿಸಲಾಗಿದೆ. ನೀವು ಬೀಚ್ ಮತ್ತು ವಾಟರ್ ಸ್ಪೋರ್ಟ್ಸ್ ನಲ್ಲಿ ಆಸಕ್ತಿ ಹೊಂದಿದ್ದರೆ, ಈ ಸ್ಥಳವು ನಿಮಗೆ ಸೂಕ್ತ.  
 

ಕಾಶ್ಮೀರ

ಚಳಿಗಾಲದಲ್ಲಿ ಭಾರತದ ಅತ್ಯುತ್ತಮ ಮಧುಚಂದ್ರದ ತಾಣದಲ್ಲಿ ಕಾಶ್ಮೀರದ ಹೆಸರು ಅಗ್ರಸ್ಥಾನದಲ್ಲಿದೆ. ಈ ಜನಪ್ರಿಯ ಸ್ಥಳ ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿದ್ದು, ಹೇಗೆ ಕಾಣುತ್ತೆ ಎಂದರೆ 'ಭೂಮಿಯ ಮೇಲಿನ ಸ್ವರ್ಗ' (Heaven on earth) ಎಂದರೆ ತಪ್ಪಾಗಲಾರದು. ನೀವು ನಿಮ್ಮ ಸಂಗಾತಿಯೊಂದಿಗೆ ಭಾರತದ ಅತ್ಯುತ್ತಮ ಮಧುಚಂದ್ರದ ಸ್ಥಳವನ್ನು ಹುಡುಕುತ್ತಿದ್ದರೆ, ಇದು ಬೆಸ್ಟ್ ಆಯ್ಕೆಯಾಗಿದೆ.  

click me!