ನೀವು ಪ್ರಕೃತಿ ಪ್ರೇಮಿಗಳಾ? ಬೆಂಗಳೂರಿನ ಈ ತಾಣಗಳಿಗೆ ಮಿಸ್ ಮಾಡ್ದೇ ಭೇಟಿ ನೀಡಿ

First Published | Nov 22, 2022, 3:07 PM IST

ಚಳಿಗಾಲದಲ್ಲಿ, ನೀವು ಟ್ರಾವೆಲ್ ಮಾಡಲು ಬಯಸಿದ್ರೆ, ಎಷ್ಟೊಂದು ಸುಂದರ ತಾಣಗಳಿವೆ ಗೊತ್ತಾ? ಹೀಗೆ ಟ್ರಾವೆಲ್ ಮಾಡಬೇಕು ಅಂದ್ರೆ ಬೆಂಗಳೂರು ಇದಕ್ಕೆ ಅತ್ಯುತ್ತಮ ತಾಣವಾಗಿದೆ. ಬೆಂಗಳೂರಿನ ಜನಸಂದಣಿ, ಒತ್ತಡದ ಜೀವನ ಬಿಟ್ಟು ಹೊರಬರಬೇಕು, ಸುಂದರ ತಾಣಗಳಲ್ಲಿ ಎಂಜಾಯ್ ಮಾಡಬೇಕೆಂದು ಬಯಸಿದ್ರೆ, ಈ ತಾಣಗಳಿಗೊಮ್ಮೆ ಭೇಟಿ ನೀಡಿ.

ರಾಜಧಾನಿ ಬೆಂಗಳೂರು (Bangalore) ಬಹಳ ಸುಂದರವಾದ ನಗರ. ಇದನ್ನು ಸಿಲಿಕಾನ್ ವ್ಯಾಲಿ ಎಂದೂ ಕರೆಯಲಾಗುತ್ತದೆ. ಇಲ್ಲಿಯ ಹವಾಮಾನ ಯಾವಾಗಲೂ ಆಹ್ಲಾದಕರವಾಗಿರುತ್ತದೆ. ಈಗಂತೂ ಚಳಿಗಾಲ ಎಲ್ಲರೂ ಟ್ರಾವೆಲ್ ಪ್ಲ್ಯಾನ್ ಮಾಡುತ್ತಿರುತ್ತಾರೆ. ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿರೋದರಿಂದ, ಪರ್ವತಗಳನ್ನು ಸುತ್ತಾಡಲು ಯೋಜಿಸುವುದು ಸ್ವಲ್ಪ ಕಷ್ಟ. ಎರಡನೆಯ ಆಯ್ಕೆ ಬೀಚ್ಗ. ಇದರಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ, ಇದು ಯಾವಾಗಲೂ ಪ್ರವಾಸಿಗರಿಂದ ತುಂಬಿರುತ್ತೆ. ಹಾಗಾಗಿ ನೀವು ಬೆಂಗಳೂರು ಸುತ್ತಮುತ್ತಲಿನ ತಾಣಗಳಲ್ಲೇ ಟ್ರಾವೆಲ್ ಮಾಡಬಹುದು. ಟ್ರೆಕ್ಕಿಂಗ್‌ಗಾಗಿ ನಂದಿ ಹಿಲ್ಸ್, ಮೋಜಿಗಾಗಿ ಗೋಕರ್ಣ ಬೀಚ್ ಟ್ರಾವೆಲ್ ಮಾಡಬಹುದು. ಇನ್ನು ಏನೆಲ್ಲಾ ನೋಡಬಹುದು ನೋಡೋಣ.

ನಂದಿ ಬೆಟ್ಟ (Nandi Hills)

ಬೆಂಗಳೂರಿನಲ್ಲಿದ್ದುಕೊಂಡು ನಂದಿ ಬೆಟ್ಟವನ್ನು ನೋಡದೇ ಇರಲು ಸಾಧ್ಯವೆ. ಚಾನ್ಸೇ ಇಲ್ಲ…ಈ ಸ್ಥಳವು ಸ್ನೇಹಿತರೊಂದಿಗೆ ಅಥವಾ ಫ್ಯಾಮಿಲಿ ಜೊತೆ ಎಂಜಾಯ್ ಮಾಡಲು ಅತ್ಯುತ್ತಮ ತಾಣ. ಇಲ್ಲಿಂದ, ಉದಯಿಸುವ ಮತ್ತು ಅಸ್ತಮಿಸುವ ಸೂರ್ಯನ ಸುಂದರ ನೋಟ ನೋಡಲು ಸ್ವಲ್ಪ ದೂರ ಚಾರಣ ಮಾಡಬೇಕಾಗುತ್ತದೆ. 

Tap to resize

ನೀವು ನಂದಿ ಬೆಟ್ಟದ ತುದಿಯನ್ನು ತಲುಪಿದಾಗ ಅಲ್ಲಿ ಕಂಡು ಬರುವ ಅದ್ಭುತ ನೋಟವು ಎಲ್ಲಾ ಆಯಾಸವನ್ನು ತೆಗೆದುಹಾಕುತ್ತದೆ. ಅಲ್ಲಿನ ಅದ್ಭುತ ದೃಶ್ಯವು, ಮತ್ತೆ ಮತ್ತೆ ನೋಡಬೇಕೆನುವ ಅನುಭವ ನೀಡುತ್ತೆ. ಇಲ್ಲಿ ನಿಂತಾಗ ನೀವು ಮೋಡಗಳ ಮೇಲೆ ನಿಂತಂತಹ ಅನುಭವ ಪಡೆಯುವಿರಿ. ಇದರಿಂದಾಗಿ ಸ್ವರ್ಗದಲ್ಲಿರುವ ಅನುಭವ ಪಡೆಯೋದು ಖಚಿತ. 

ದೂರ- ಬೆಂಗಳೂರಿನಿಂದ 60 ಕಿ.ಮೀ.
ಸಮಯ: ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (Bannerghatta National Park)

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನೀವು ಸಾಮಾನ್ಯ ಕಾಡು ಪ್ರಾಣಿಗಳಲ್ಲದೆ ಅನೇಕ ಅಪರೂಪದ ಪ್ರಭೇದಗಳನ್ನು ಸಹ ನೋಡಬಹುದು. ಆನೆ, ಚಿರತೆ, ನರಿ, ಕಾಡುಹಂದಿ, ಕರಡಿ, ಗೆಜೆಲ್, ಚುಕ್ಕೆ ಜಿಂಕೆ, ಮುಳ್ಳುಹಂದಿ, ಏಷ್ಯಾಟಿಕ್ ಸಿಂಹ, ರಾಯಲ್ ಬೆಂಗಾಲ್ ಹುಲಿ, ಹಲ್ಲಿ, ನಾಗರಹಾವು ಸೇರಿ ಅನೇಕ ರೀತಿಯ ವನ್ಯ ಜೀವಿಗಳು ಮತ್ತು ಪಕ್ಷಿ ಪ್ರಭೇದಗಳು ಕಂಡುಬರುತ್ತವೆ. 

ಇದಲ್ಲದೆ, ಶ್ರೀಗಂಧ, ಬೇವು, ಹುಣಸೆ, ಜಾಮೂನ್, ನೀಲಗಿರಿ, ಬಿದಿರಿನ ಮರಗಳು ಉದ್ಯಾನದಲ್ಲಿರುವ ಅರಣ್ಯವನ್ನು ಸುಂದರ ಮತ್ತು ಹಸಿರಾಗಿಡುವ ಕೆಲಸ ಮಾಡುತ್ತವೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ, ನೀವು ಜಂಗಲ್ ಸಫಾರಿ, ಚಾರಣದಂತಹ ಚಟುವಟಿಕೆಗಳನ್ನು ಸಹ ಆನಂದಿಸಬಹುದು. ನೇಚರ್ ಪ್ರಿಯರಿಗೆ ಇದೊಂದು ಬೆಸ್ಟ್ ತಾಣ.

ದೂರ- ಬೆಂಗಳೂರಿನಿಂದ 22 ಕಿ.ಮೀ.
ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ
ಪ್ರವೇಶ ಶುಲ್ಕ: ಭಾರತೀಯರಿಗೆ 80 ರೂ., ವಿದೇಶಿ ಪ್ರವಾಸಿಗರಿಗೆ 400 ರೂ.

ಸ್ನೋ ಸಿಟಿ (Snow city Bangalore)

ಬೆಂಗಳೂರಿನಲ್ಲಿ ಕಾಶ್ಮೀರದಂತಹ ಸ್ನೋ ಅನುಭವ ಪಡೆಯಬೇಕೆ? ಹಾಗಿದ್ರೆ ಸ್ನೋ ಸಿಟಿಗೆ ಭೇಟಿ ನೀಡಿ. ಬೆಂಗಳೂರಿನ ಸ್ನೋ ಸಿಟಿ ಇಲ್ಲಿನ ಅತ್ಯಂತ ಪ್ರಸಿದ್ಧ ತಾಣಗಳಲ್ಲಿ ಒಂದಾಗಿದೆ. 12,500 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಇನ್ ಡೋರ್ ಸ್ನೋ ಪಾರ್ಕ್  ಫನ್ ವರ್ಲ್ಡ್ ಕಾಂಪ್ಲೆಕ್ಸ್ ನ ಒಂದು ಭಾಗ. ನೀವು ಇಲ್ಲಿಗೆ ಸ್ನೇಹಿತರೊಂದಿಗೆ ಅಥವಾ ಫ್ಯಾಮಿಲಿ, ಮಕ್ಕಳೊಂದಿಗೆ ಬಂದು ಮೋಜು ಮಾಡಬಹುದು.

ಇಲ್ಲಿ ನೀವು ಶೂನ್ಯ ಡಿಗ್ರಿ ತಾಪಮಾನವನ್ನು ಸಹ ನೋಡುತ್ತೀರಿ. ಉದ್ಯಾನದಲ್ಲಿ ಕೇವಲ 45 ನಿಮಿಷ ಮಾತ್ರ ಉಳಿಯಲು ಅವಕಾಶವಿದೆ. ಇಲ್ಲಿ ನೀವು ಬ್ಯಾಸ್ಕೆಟ್ ಬಾಲ್ ಆಡಬಹುದು, ಹಿಮದ ವೇದಿಕೆಯಲ್ಲಿ ನೃತ್ಯ ಮಾಡಬಹುದು, ಹಿಮ ಚಾರಣವನ್ನು ಮಾಡಬಹುದು ಮತ್ತು ಅಂತಹ ಇತರ ಚಟುವಟಿಕೆಗಳನ್ನು ಆನಂದಿಸಬಹುದು.

ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ
ಪ್ರವೇಶ ಶುಲ್ಕ- ಸೋಮವಾರದಿಂದ ಶುಕ್ರವಾರ - ಪ್ರತಿ ವ್ಯಕ್ತಿಗೆ 390 ರೂ, ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳು - ಪ್ರತಿ ವ್ಯಕ್ತಿಗೆ 490 ರೂ.

ಮೈಕ್ರೋಲೈಟ್ ಫ್ಲೈಯಿಂಗ್ (Microlight flying)

ನೀವು ಸಾಹಸವನ್ನು ಇಷ್ಟಪಡುವುದಾದರೆ, ಬೆಂಗಳೂರಲ್ಲಿ ಮೈಕ್ರೋಲೈಟ್ ನಲ್ಲಿ ಹಾರುವ ಆಯ್ಕೆಯನ್ನು ಮಿಸ್ ಮಾಡಬೇಡಿ. ಇದರಲ್ಲಿ ನೀವು ಎರಡು ಆಸನಗಳ ಮೈಕ್ರೋಲೈಟ್ ವಿಮಾನದಲ್ಲಿ ಹಾರುವ ಅವಕಾಶ ಪಡೆಯುತ್ತೀರಿ. ನುರಿತ ಸಹ-ಪೈಲಟ್ ಅವರೊಂದಿಗೆ 15 ರಿಂದ 20 ನಿಮಿಷಗಳ ಈ ಪ್ರಯಾಣದಲ್ಲಿ, ಅನೇಕ ರೀತಿಯ ಚಟುವಟಿಕೆಗಳನ್ನು ಮಾಡಲು ಅವಕಾಶವಿರುತ್ತದೆ.

ಸಮಯ: ಪ್ರತಿದಿನ ಬೆಳಿಗ್ಗೆ 7 ರಿಂದ 10 ರವರೆಗೆ
ಪ್ರವೇಶ ಶುಲ್ಕ- 3450 ರೂ.

ವೈನ್ ಯಾರ್ಡ್ ಟೂರ್ (vineyard tour)

ಬೆಂಗಳೂರಿನಲ್ಲಿ ಭೇಟಿ ನೀಡಲು ಮತ್ತೊಂದು ಉತ್ತಮ ಸ್ಥಳವೆಂದರೆ ವೈನ್ ಯಾರ್ಡ್. ಅಲ್ಲಿ ನೀವು ವೈನ್ ಯಾರ್ಡ್‌ಗೆ ಭೇಟಿ ನೀಡಬಹುದು ಮತ್ತು ವೈನ್ ತಯಾರಿಕೆಯ ಪ್ರಕ್ರಿಯೆಯನ್ನು ನೋಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಪರೀಕ್ಷಿಸಬಹುದು. ಇಲ್ಲಿ ನೀವು ಇಡೀ ದಿನವನ್ನು ಪ್ಲ್ಯಾನ್ ಮಾಡಬಹುದು. 

ಸಮಯ: ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ

ಪ್ರವೇಶ ಶುಲ್ಕ: ಸೋಮವಾರದಿಂದ ಶುಕ್ರವಾರ - ಪ್ರತಿ ವ್ಯಕ್ತಿಗೆ 850 ರೂ ಮತ್ತು ಶನಿವಾರ-ಭಾನುವಾರ - ಪ್ರತಿ ವ್ಯಕ್ತಿಗೆ 1000 ರೂ.

Latest Videos

click me!