Karnataka Tourist Places: ಕರ್ನಾಟಕದಲ್ಲಿ ನೀವು ನೋಡಲೇಬೇಕಾದಂತಹ ನಯನಮನೋಹರ ತಾಣಗಳು

Published : Jul 14, 2025, 02:39 PM ISTUpdated : Jul 14, 2025, 02:43 PM IST

ಕರ್ನಾಟಕದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ನೀವು ನೋಡಲೇಬೇಕಾದ ಕೆಲವು ಸುಂದರ ಪ್ರಸಿದ್ಧ ತಾಣಗಳ ಲಿಸ್ಟ್ ಇಲ್ಲಿದೆ. 

PREV
111

ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೇನು ಕಮ್ಮಿ ಇಲ್ಲ. ಇಲ್ಲಿ ಹಲವು ಸುಂದರ ತಾಣಗಳಿವೆ. ಅವುಗಳಲ್ಲಿ ನೀವು ನೋಡಲೇಬೇಕಾದ ಒಂದಷ್ಟು ಐತಿಹಾಸಿಕ, ಪ್ರಕೃತಿ ರಮಣೀಯ ಸೌಂದರ್ಯ ಹೊಂದಿರುವ ಸುಂದರ ತಾಣಗಳ ಮಾಹಿತಿ ಇಲ್ಲಿದೆ. ಇವುಗಳನ್ನು ನೀವು ಜೀವನದಲ್ಲಿ ಒಂದು ಬಾರಿಯಾದರೂ ಭೇಟಿ ನೀಡಲೇಬೇಕು.

211

ಬಾದಾಮಿ ಗುಹಾಂತರ ದೇವಾಲಯ (Badami Cave Temple)

ಬಾದಾಮಿ ಗುಹೆ ದೇವಾಲಯಗಳು ಭಾರತದ ಕರ್ನಾಟಕದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿರುವ ಬೌದ್ಧ , ಹಿಂದೂ ಮತ್ತು ಜೈನ ಗುಹೆ ದೇವಾಲಯಗಳ ಸಂಕೀರ್ಣವಾಗಿದೆ. ಗುಹೆಗಳು ಭಾರತೀಯ ರಾಕ್-ಕಟ್ ವಾಸ್ತುಶಿಲ್ಪದ ಸುಂದರ ತಾಣಗಳಾಗಿವೆ. ಇವುಗಳ ಅಂದವನ್ನು ವರ್ಣಿಸಲು ಪದಗಳೇ ಸಾಲದು.

311

ಹಂಪಿ (Hampi)

ಹಂಪಿ ಬಗ್ಗೆ ಹೇಳಲು ಎರಡು ಮಾತಿಲ್ಲ. ಕರ್ನಾಟಕದ ಭವ್ಯ ಇತಿಹಾಸವನ್ನು ಸಾರುವ, ಶ್ರೀಮಂತ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ತಿಳಿಸುವ ಸುಂದರವಾದ ಶಿಲ್ಪಕಲೆಯ ತವರೂರು ಹಂಪಿ.

411

ಜೋಗ್ ಫಾಲ್ಸ್ (Jog Falls)

ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎನ್ನುವ ಹಾಡೇ ಇದೆ. ರಾಜಾ, ರಾಣಿ, ರೋವರ್, ರಾಕೆಟ್ ಎಂದು ನಾಲ್ಕು ಭಾಗದಲ್ಲಿ ಧುಮ್ಮಿಕ್ಕಿ ಹರಿಯುವ ಶರಾವತಿ ನದಿ ಹರಿಯುವ ಸುಂದರವಾದ ಜಲಪಾತ್ರ ಜೋಗ್ ಫಾಲ್ಸ್. ಮಳೆಗಾಲದಲ್ಲಿ ಇದರ ಸೌಂದರ್ಯ ಕಣ್ತುಂಬಿಸಿಕೊಳ್ಳೋದೆ ಚೆಂದ.

511

ಓಂ ಬೀಚ್ ಮತ್ತು ಪ್ಯಾರಡೈಸ್ ಬೀಚ್ (Om beach and Paradise Beach)

ನೀವು ಪ್ರೈವೆಟ್ ಬೀಚ್ ರೆಸಾರ್ಟ್ ನಲ್ಲಿ ಎಂಜಾಯ್ ಮಾಡಬೇಕೆಂದು ಬಯಸಿದರೆ ಗೋಕರ್ಣದಲ್ಲಿರುವ ಓಂ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಗೆ ಭೇಟಿ ನೀಡಬಹುದು. ಇಲ್ಲಿ ಅಲೆಗಳೊಂದು ಆಡುತ್ತಾ, ಸನ್ ಸೆಟ್ ಎಂಜಾಯ್ ಮಾಡಬಹುದು.

611

ಮೈಸೂರು ಅರಮನೆ (Mysore Palace)

ಮೈಸೂರನ್ನು ಅರಮನೆಗಳ ನಗರಿ ಎನ್ನುತ್ತಾರೆ. ಅದರಲ್ಲೂ ಮೈಸೂರು ಅರಮನೆಯನ್ನು ನೋಡುವ ಸೊಬಗೇ ಚೆಂದ. ಇದನ್ನು ಅಂಬವಿಲಾಸ ಅರಮನೆ ಅಂತಾನೂ ಕರೆಯುತ್ತಾರೆ. ಐತಿಹಾಸಿಕ ಹಾಗೂ ರಾಜಮನೆತನದ ಪರಂಪರೆಯನ್ನು ಸಾರುವ ಈ ಅರಮನೆ ಕರ್ನಾಟಕದ ಹೆಮ್ಮೆಯಾಗಿದೆ.

711

ಮಿರ್ಜಾನ್ ಕೋಟೆ (Mirjan Fort)

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿದೆ. ತನ್ನ ವಾಸ್ತುಶಿಲ್ಪದ ಸೊಬಗುಗೆ ಹೆಸರುವಾಸಿಯಾದ ಕೋಟೆಯು ಹಿಂದೆ ಹಲವಾರು ಯುದ್ಧಗಳು ನಡೆದ ಸ್ಥಳವಾಗಿದೆ. ಈ ಐತಿಹಾಸಿಕ ಕೋಟೆಯ ಸೌಂದರ್ಯ ನೋಡಲು ಚೆಂದ.

811

ಮುರುಡೇಶ್ವರ ಶಿವನ ಮೂರ್ತಿ (Murudeshwara)

ಉತ್ತರ ಕರ್ನಾಟಕ ಜಿಲ್ಲೆಯಲ್ಲಿರುವ ಅರಬ್ಬಿ ಸಮುದ್ರದ ತಟದಲ್ಲಿ ನೆಲೆಯಾಗಿರುವ ಸುಂದರ ದೇವಾಲಯ ಮುರುಡೇಶ್ವರ. ಇಲ್ಲಿನ ಶಿವನ ಮೂರ್ತಿಯನ್ನೊಮ್ಮೆ ನೋಡಬೇಕು. ಧ್ಯಾನಾವಸ್ಥೆಯಲ್ಲಿ ಕುಳಿತಿರುವ ಶಿವನ ಮೂರ್ತಿ ಸುಮಾರು 37 ಮೀಟರ್ ಎತ್ತರವಾಗಿದೆ. ಹಾಗೂ ಇಲ್ಲಿನ ಗೋಪುರ 237 ಅಡಿ ಎತ್ತರವನ್ನು ಹೊಂದಿದೆ.

911

ದುಬಾರೆ ಆನೆ ಶಿಬಿರ (Dubare Elephant Camp)

ದುಬಾರೆ ಕಾಡಿನಲ್ಲಿ ಆನೆ ಶಿಬಿರ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ. ಈ ಶಿಬಿರದಲ್ಲಿ ಆನೆಗಳ ತರಬೇತಿ, ಪ್ರವಾಸಿಗಳಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಇಲ್ಲಿ ದೋಣಿ ವಿಹಾರ ಮಾಡುತ್ತಾ, ಆನೆಗಳ ಆಟವನ್ನು ಎಂಜಾಯ್ ಮಾಡೋದು ಚೆಂದ.

1011

ಉಡುಪಿ ಶ್ರೀಕೃಷ್ಣ ದೇವಾಲಯ (Udupi Sri Krishna Math)

ಉಡುಪಿ ನಗರದಲ್ಲಿ ನೆಲೆಗೊಂಡಿರುವ ಕೃಷ್ಣ ಮತ್ತು ದ್ವೈತ ಮಠಕ್ಕೆ ಸಮರ್ಪಿತವಾದ ಪ್ರಸಿದ್ಧ ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ದೇವಾಲಯವು 13 ನೇ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಇದು ದ್ವೈತ ಶಾಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ದೇವಾಲಯದ ಒಂದು ವಿಶಿಷ್ಟ ಲಕ್ಷಣವೆಂದರೆ, ಭಕ್ತರು ನವಗ್ರಹ ಕಿಟಕಿ ಎಂದು ಕರೆಯಲ್ಪಡುವ ಒಂಬತ್ತು ರಂಧ್ರಗಳಿರುವ ಕಿಟಕಿಯ ಮೂಲಕ ಮಾತ್ರ ದೇವರ ದರ್ಶನ ಪಡೆಯುತ್ತಾರೆ.

1111

ಶ್ರವಣಬೆಳಗೊಳ (Shravanabelagola)

ಶ್ರವಣಬೆಳಗೊಳ ಹಾಸನ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ 58.8 ಅಡಿ ಎತ್ತರದ ಬಾಹುಬಲಿಯ ಮೂರ್ತಿಯಿದೆ. ಇದು ಜೈನ ಧಾರ್ಮಿಕ ಕೇಂದ್ರವಾಗಿದ್ದು, ಪ್ರಕೃತಿಯ ರಮಣೀಯ ಸೌಂದರ್ಯವನ್ನು ನೀವು ಅನುಭವಿಸಬಹುದು.

Read more Photos on
click me!

Recommended Stories