ಭಾರತದ ಮೋಸ್ಟ್ ಹಾಂಟೆಡ್ ರೈಲ್ವೆ ನಿಲ್ದಾಣಗಳಿವು! ಒಂದೊಂದರೂ ಕಥೆ ಕೇಳಿದ್ರೆ ಎದೆ ಝಲ್ ಎನ್ನುತ್ತೆ!

First Published | Jun 30, 2024, 2:58 PM IST

ಆಂಧ್ರಪ್ರದೇಶದ ಚಿತ್ತೂರು ರೈಲ್ವೇ ಸ್ಟೇಷನ್ ನಿಂದ ಹಿಡಿದು, ಹಿಮಾಚಲ ಪ್ರದೇಶದ ಬರೋಗ್ ವರೆಗೆ ಭಾರತದಲ್ಲಿ ಹಲವು ಭಯಾನಕ  ರೈಲ್ವೆ ನಿಲ್ದಾಣಗಳು ಇವೆ. ಇಲ್ಲಿಗೆ ಹೋಗೋಕು ಜನ ಭಯಪಡ್ತಾರೆ. 
 

ಹಾಂಟೆಡ್ ತಾಣಗಳನ್ನ (haunted places) ಸುತ್ತೋ ಗುಂಡಿಗೆ ನಿಮಗಿದ್ರೆ, ಇಲ್ಲಿದೆ ನಿಮಗಾಗಿ ಅಂತಹ ಭಯಾನಕ ತಾಣಗಳ ಬಗ್ಗೆ ಮಾಹಿತಿ. ಇವು ರೈಲ್ವೆ ನಿಲ್ದಾಣಗಳು. ಭಾರತದ ಭಯಾನತೆಯನ್ನು ತನ್ನಲ್ಲಿ ಹೊದ್ದು ಮಲಗಿಸಿರುವ ಅನೇಕ ರೈಲ್ವೇ ನಿಲ್ದಾಣಗಳಿವೆ. ಅವುಗಳಲ್ಲಿ ಕೆಲವೊಂದು ರೈಲ್ವೆ ನಿಲ್ದಾಣದ ಬಗ್ಗೆ ನಿಮಗಿಂದು ಮಾಹಿತಿ ತಿಳಿಸ್ತೀವಿ. ಗುಂಡಿಗೆ ಗಟ್ಟಿ ಇದ್ರೆ ಒಮ್ಮೆ ಹೋಗಿ ಬರಬಹುದು. 
 

ಚಿತ್ತೂರು ರೈಲ್ವೆ ನಿಲ್ದಾಣ, ಆಂಧ್ರಪ್ರದೇಶ (Chittoor Railway Station, Andhrapradesh)
ಆಂಧ್ರಪ್ರದೇಶದ ಚಿತ್ತೂರು ರೈಲ್ವೆ ನಿಲ್ದಾಣವು ಭಾರತದ ಮೋಸ್ಟ್ ಹಾಂಟೆಡ್‌ ರೈಲ್ವೇ ನಿಲ್ದಾಣಗಳಲ್ಲಿ ಒಂದಾಗಿದೆ. ಸೂರ್ಯಾಸ್ತದ ಬಳಿಕ ಈ ರೈಲ್ವೆ ಸ್ಟೇಷನ್ ಗೆ ಹೋಗೋಕೆ ಹೆದರ್ತಾರೆ ಜನ. ಇಲ್ಲಿ CRPF ನ ಯೋಧರೊಬ್ಬರ ಆತ್ಮ ದೆವ್ವವಾಗಿ ಕಾಡುತ್ತಿದೆಯಂತೆ. ಈ  CRPF ಯೋಧನಿಗೆ RPF ಸಿಬ್ಬಂಧಿ ಮತ್ತು ಟಿಟಿಇ ಹಲ್ಲೆ ಮಾಡಿ, ಕೊಂದಿದ್ರಂತೆ. ಆ ಯೋಧ ಈ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದ ಎನ್ನಲಾಗಿದೆ. ತೀವ್ರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರು, ಆತ ಸಾವನ್ನಪ್ಪಿದ್ದ. ಆತನ ಆತ್ಮ ನ್ಯಾಯಕ್ಕಾಗಿ ಇನ್ನೂ ಅಲ್ಲಿ ಓಡಾಡುತ್ತಿದೆ ಎನ್ನಲಾಗಿದೆ. ಹಾಗಾಗಿ ರಾತ್ರಿ ಹೊತ್ತು ಇಲ್ಲಿ ಯಾರೂ ಬರೋದೆ ಇಲ್ಲ. 

Tap to resize

ಲುಧಿಯಾನ ರೈಲ್ವೆ ನಿಲ್ದಾಣ, ಪಂಜಾಬ್  (Ludhiana Railwa Station, Punjab)
ಭಯಾನಕತೆ ಹುಟ್ಟಿಸುವ ಮತ್ತೊಂದು ರೈಲ್ವೇ ಸ್ಟೇಷನ್ ಎಂದರೆ, ಅದು ಪಂಜಾಬ್‌ನ ಲುಧಿಯಾನ ನಿಲ್ದಾಣ. ಇಲ್ಲಿ ಭೂತ ಪ್ರೇತಗಳ ಬಗ್ಗೆ ಅದೆಷ್ಟೋ ಕಥೆಗಳು ಕೇಳಿ ಬರುತ್ತವೆ. ಇಲ್ಲಿನ ರೈಲ್ವೇ ಹಳಿಗಳ ಮೇಲೆ ಬಹಳ ಹಿಂದೆ ಸಾವನ್ನಪ್ಪಿದ ಮಹಿಳೆಯ ದೆವ್ವ ಈಗಲೂ ಅಲ್ಲಿ ತಿರುಗಾಡುತ್ತಿದೆಯಂತೆ. ತಡರಾತ್ರಿ ಆಕೆ ಅಳುವುದು ಕೇಳಿಸುತ್ತದೆ ಎಂದು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಹೇಳುತ್ತಾರೆ. ಇನ್ನೂ ಕೆಲವರು ಹೇಳಿರುವಂತೆ ಇಲ್ಲೊಬ್ಬ ನಿಷ್ಠಾವಂತ ಅಧಿಕಾರಿ ಇದ್ದರಂತೆ, ಅವರು ಸಾವನ್ನಪ್ಪಿದ ಬಳಿಕ ಇನ್ನೂ ಅವರ ಆತ್ಮ ಅಲ್ಲಿಯೇ ಉಳಿದಿದೆ ಎನ್ನುತ್ತಾರೆ. 

ಬರೋಗ್ ನಿಲ್ದಾಣ, ಹಿಮಾಚಲ ಪ್ರದೇಶ (Barog Station, Himachal Pradesh)
ಹಿಮಾಚಲ ಪ್ರದೇಶದ ಬರೋಗ್‌ ನಿಲ್ದಾಣ ನೋಡೋದಕ್ಕೆ ಸುಂದರವಾಗಿದೆ, ಆದರೆ ಇದು ಹೃದಯ ಝಲ್ ಎನಿಸುವ ಕಥೆಗಳನ್ನು ಹೊಂದಿದೆ. ಹಿಮಾಚಲ ಪ್ರದೇಶದ ಸುಂದರ ಪರ್ವತಗಳಲ್ಲಿ ಇರುವ ಈ ರೈಲು ನಿಲ್ದಾಣದಲ್ಲಿ, ಇದನ್ನ ನಿರ್ಮಿಸಿದ ವಾಸ್ತುಶಿಲ್ಪಿ ಕರ್ನಲ್ ಬರೋಗ್ ನಿರ್ಮಾಣದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅಂದಿನಿಂದ ನಿಲ್ದಾಣದ ಬಳಿ ಇರುವ ಸುರಂಗದ ಸುತ್ತಲೂ ದೆವ್ವ ಅಲೆದಾಡುತ್ತದೆ ಎನ್ನಲಾಗುತ್ತದೆ. ಹಲವು ಜನರು ದೆವ್ವರವನ್ನು ನೋಡಿರೋದು ಇದೆ. ಹಲವರ ಜೊತೆ ಈತನ ಫ್ರೆಂಡ್ಲಿ ಆತ್ಮ ಮಾತನಾಡಿದ್ದು ಇದೆಯಂತೆ. 

ಡೊಂಬಿವ್ಲಿ ರೈಲ್ವೆ ನಿಲ್ದಾಣ, ಮಹಾರಾಷ್ಟ್ರ (Dombivli Railway Station, Maharastra)
ಮಹಾರಾಷ್ಟ್ರದ ಡೊಂಬಿವ್ಲಿ ರೈಲ್ವೆ ನಿಲ್ದಾಣದಲ್ಲಿ ಅಳುತ್ತಿರುವ ಮಹಿಳೆಯ ಕೂಗು ಕೇಳುತ್ತಂತೆ. ನನಗೆ ಮನೆಗೆ ಹೋಗ್ಬೇಕು, ಆದ್ರೆ ಹೋಗೋಕೆ ಆಗ್ತಿಲ್ಲ ಎನ್ನುವ ಕರುಣಾಜನಕ ಕೂಗು ಇದಾಗಿದೆ. ಈ ರೈಲ್ವೆ ನಿಲ್ದಾಣದಲ್ಲಿ ನಡೆದ ಹಲವು ಅಪಘಾತಗಳಲ್ಲಿ ಒಂದರಲ್ಲಿ ಸತ್ತ ಮಹಿಳೆಯ ಆತ್ಮ ಇದಾಗಿದೆ.  ಅಷ್ಟೇ ಅಲ್ಲ ಈ ರೈಲ್ವೆ ನಿಲ್ದಾಣದಲ್ಲಿ ಜನರು ಯಾವುದೋ ಆಗೋಚರ ಶಕ್ತಿಯ ಇರುವಿಕೆಯನ್ನು ಸಹ ಅನುಭವಿಸಿದ್ದಾರೆ. 

ಬೇಗಂಕೋಡರ್ ನಿಲ್ದಾಣ, ಪಶ್ವಿಮ ಬಂಗಾಳ (Begunkodar Railwat Station, West Bengal)
ಪಶ್ಚಿಮ ಬಂಗಾಳದ ಬೇಗಂಕೋಡರ್ ನಿಲ್ದಾಣ ದಟ್ಟವಾದ ಕಾಡುಗಳ ಮಧ್ಯೆ ಇದೆ. ಬಿಳಿ ಸೀರೆಯುಟ್ಟ ಮಹಿಳೆ ಆತ್ಮವು ನಿಲ್ದಾಣದಲ್ಲಿ ಓಡಾಡುವುದು, ರಾತ್ರಿ ವೇಳೆ ರೈಲ್ವೆ ಹಳಿಗಳ ಉದ್ದಕ್ಕೂ ಓಡಾಡೋದನ್ನು ಜನರು ನೋಡಿದ್ದಾರೆ. ಅಂದಿನಿಂದ ನಿಲ್ದಾಣವನ್ನು ಮುಚ್ಚಲಾಗಿತ್ತು. ಕೆಲವು ವರ್ಷಗಳ ಬಳಿಕ ರೈಲ್ವೆ ನಿಲ್ದಾಣ ಮತ್ತೆ ತೆರೆದಿದ್ದು, ಮತ್ತೆ ಹಿಂದಿನ ಘಟನೆಗಳು ಮರುಕಳಿಸುತ್ತಿವೆ. 

ಸೊಹಾಗ್ಪುರ್ ನಿಲ್ದಾಣ, ಮಧ್ಯಪ್ರದೇಶ (Sohagpur Station, Madhyapradesh)
ಭೋಪಾಲ್ ಬಳಿಯ ಈ ರೈಲ್ವೆ ನಿಲ್ದಾಣದಲ್ಲಿ ನೋವು ಮತ್ತು ಯಾತನೆಯಿಂದ ಅಳುವ ಮಹಿಳೆಯ ಭೂತ ಇದೆ ಎಂದು ಜನ ಹೇಳ್ತಾರೆ , ಈ ಈ ರೈಲ್ವೆ ನಿಲ್ದಾಣದ ಮೂಲಕ ಹಾದು ಹೋಗುವ ಜನರು ಈ ಕೂಗಿನಿಂದ ಭಯಭೀತರಾಗ್ತಾರೆ. ಇಲ್ಲಿ ಇನ್ನೂ ಅನೇಕ ರೀತಿಯ ಭಯಾನಕ ಶಬ್ಧಗಳು ಕೇಳಿ ಬರುತ್ತೆ.

ನೈನಿ ನಿಲ್ದಾಣ, ಅಲಹಾಬಾದ್ (Naini Railway Station, Alahabad)
ಅಲಹಾಬಾದ್ ಸಮೀಪದಲ್ಲಿರುವ ನೈನಿ ನಿಲ್ದಾಣ ಸಹ ಹಾಂಟೆಂಟ್ ತಾಣ. ಭಾರತದ ಮೋಸ್ಟ್ ಹಾಂಟೆಡ್‌ ರೈಲು ನಿಲ್ದಾಣಗಳಲ್ಲಿ ಇದು ಒಂದಾಗಿದೆ. ವಿಶೇಷವಾಗಿ ಹುಣ್ಣಿಮೆಯ ರಾತ್ರಿಗಳಲ್ಲಿ, ನಿರ್ಜನ ರೈಲ್ವೆ ನಿಲ್ದಾಣದಲ್ಲಿ ಓಡಾಡುವ, ತೇಲಾಡುವ ದೆವ್ವಗಳನ್ನ ನೋಡಿದ್ದಾರೆ. 

Latest Videos

click me!