ನೀವು ಟ್ರೆಕ್ಕಿಂಗ್ )trekking) ಇಷ್ಟಪಡುತ್ತಿದ್ದರೆ, ಟ್ರೆಕ್ಕಿಂಗ್ ಮಾಡೊದ್ರಲ್ಲಿ ಎಷ್ಟೊಂದು ಅಪಾಯವಿದೆ ಅನ್ನೋದು ನಿಮಗೆ ತಿಳಿದಿರಬೇಕು ಅಲ್ವಾ?. ಒಂದು ಸಣ್ಣ ತಪ್ಪು ನಿಮ್ಮನ್ನ ಅಪಾಯಕ್ಕೆ ದೂಡಬಹುದು. ಇಂದು ನಾವು ನಿಮಗೆ ಹರಿಹರ ಕೋಟೆಯ ಬಗ್ಗೆ ಹೇಳಲಿದ್ದೇವೆ, ಸಾವಿರಾರು ಪ್ರವಾಸಿಗರು ಚಾರಣಕ್ಕೆ ಹೋಗುತ್ತಾರೆ. ಈ ಕೋಟೆಯನ್ನು ತಲುಪಲು 117 ಮೆಟ್ಟಿಲುಗಳನ್ನು ಹತ್ತಬೇಕು. ಅಷ್ಟೇ ತಾನೆ ಎಂದು ನಿಮಗೆ ಅನಿಸಬಹುದು. ಆದರೆ ನೇರವಾಗಿ ನಿಂತಿರುವ, ಆ ಕಿರಿದಾದ ಮೆಟ್ಟಿಲುಗಳನ್ನು ಹತ್ತಿ ಕೋಟೆಯ ತುತ್ತ ತುದಿ ತಲುಪೋದೆ ಒಂದು ದೊಡ್ಡ ಸಾಹಸ.
ಈ ಕೋಟೆ ಎಲ್ಲಿದೆ? ಮತ್ತು ಇಲ್ಲಿಗೆ ತಲುಪುವುದು ಹೇಗೆ ಅನ್ನೋ ಕುತೂಹಲ ನಿಮಗಿದ್ಯಾ? . ಹರಿಹರ ಕೋಟೆಯನ್ನು (Harihar fort) ದೊಡ್ಡದಾದ ಪರ್ವತದ ಮೇಲೆ ನಿರ್ಮಿಸಲಾಗಿದೆ. ಇದು ಬ್ರಿಟಿಷರು ನೆಲಸಮ ಮಾಡಲು ಬಯಸಿದ ಕೋಟೆಯಾಗಿತ್ತು. ಆ ಸಮಯದಲ್ಲಿ ಬ್ರಿಟಿಷರು ಈ ಕೋಟೆಯ ಬಾಗಿಲನ್ನು ಫಿರಂಗಿಗಳಿಂದ ಸ್ಫೋಟಿಸೋದಕ್ಕೆ ಪ್ಲ್ಯಾನ್ ಮಾಡಿದ್ರಂತೆ,, ಆದರೆ ಅದು ಸಾಧ್ಯವಾಗಲಿಲ್ಲ, ಏಕೆಂದರೆ ಈ ಕೋಟೆಯನ್ನು ಅಷ್ಟೊಂದು ಸ್ಟ್ರಾಂಗ್ ಆಗಿ ನಿರ್ಮಿಸಲಾಗಿದೆ. ಹಾಗಾಗಿಯೇ ಸಾವಿರಾರು ವರ್ಷಗಳ ನಂತರವೂ ಈ ಕೋಟೆ ಇನ್ನೂ ಭದ್ರವಾಗಿ ನಿಂತಿದೆ.
ಹರಿಹರ ಕೋಟೆ ತಲುಪೋದು ಹೇಗೆ?
ಹರಿಹರ ಕೋಟೆಯನ್ನು ತಲುಪಲು, ಮೊದಲು ನೀವು ಮಹಾರಾಷ್ಟ್ರದ ನಾಸಿಕ್ ರೈಲ್ವೆ ನಿಲ್ದಾಣಕ್ಕೆ (Nashik Railwa station)ಬರಬೇಕು, ನಂತರ ಇಲ್ಲಿಂದ ಸರ್ಕಾರಿ ಬಸ್ ಹಿಡಿಯಬೇಕು, ಅದು ನಿಮ್ಮನ್ನು ನೇರವಾಗಿ ಬ್ರಹ್ಮಕೇಶ್ವರ ದೇವಸ್ಥಾನಕ್ಕೆ ಕರೆದೊಯ್ಯುತ್ತದೆ. ದೇವಾಲಯದ ಬಳಿ ಲಾಕರ್ ಕೊಠಡಿಗಳು ಲಭ್ಯವಿದೆ. ಅಲ್ಲಿ ನೀವು ನಿಮ್ಮ ವಸ್ತುಗಳನ್ನು ಇಡಬಹುದು.ಆಹಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಯಾಕಂದ್ರೆ ಇಲ್ಲಿ ಸಾಲು ಸಾಲು ಹೊಟೇಲ್ ಗಳನ್ನು ಕಾಣಬಹುದು.
ಈಗ ಬ್ರಹ್ಮಕೇಶ್ವರ ದೇವಸ್ಥಾನದಿಂದ ನೇರವಾಗಿ ಆಟೋ ಮೂಲಕ ಹರ್ಸೆವಾಡಿಯನ್ನು ತಲುಪಿ. ಇಲ್ಲಿಗೆ ತಲುಪಿದ ನಂತರ, ನೀವು ಹರಿಹರ ಕೋಟೆಗೆ ಟಿಕೆಟ್ ತೆಗೆದುಕೊಳ್ಳಬೇಕು. ಅದರ ನಂತರ ನೀವು ಹರಿಹರ ಕೋಟೆಗೆ ಟ್ರೆಕ್ಕಿಂಗ್ ಪ್ರಾರಂಭಿಸಬಹುದು. ಈ ಕೋಟೆಯು ಎರಡು ಬದಿಗಳಿಂದ ನೇರವಾಗಿ 90 ಡಿಗ್ರಿಗಳಷ್ಟು ದೂರದಲ್ಲಿದೆ. ಈ ಕೋಟೆಯನ್ನು 3,676 ಅಡಿ ಎತ್ತರವಿರುವ ಬೆಟ್ಟದ ಮೇಲೆ ನಿರ್ಮಿಸಲಾಗಿದೆ ಮತ್ತು ಕೋಟೆಯ ದ್ವಾರವನ್ನು ತಲುಪಲು, ಒಂದು ಮೀಟರ್ ಅಗಲದ 117 ಮೆಟ್ಟಿಲುಗಳನ್ನು ಹತ್ತಬೇಕು.
ಸದ್ಯ ಈ ಕೋಟೆ ಜನಪ್ರಿಯ ಟ್ರೆಕ್ಕಿಂಗ್ ತಾಣವಾಗಿದೆ
ಪ್ರತಿಯೊಂದು ಕೋಟೆಯೂ ತನ್ನದೇ ಆದ ವಿಶೇಷತೆಗಳನ್ನ ಹೊಂದಿದೆ, ಸೋಶಿಯಲ್ ಮೀಡಿಯಾ ಹೈಪ್ ನಿಂದಾಗಿ ಸದ್ಯ ಈ ಹರಿಹರ ಕೋಟೆಯು ಚಾರಣ ತಾಣವಾಗಿ ಮಾರ್ಪಟ್ಟಿದೆ. ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದನ್ನು ತಪ್ಪಿಸಬೇಕು. ಯಾಕಂದ್ರೆ ತುಂಬಾನೆ ಜಾರೋದ್ರಿಂದ ಬಿದ್ದು ಕೈಕಾಲು ಮುರಿದುಕೊಳ್ಳೊ ಸಾಧ್ಯತೆ ಇದೆ. ಸಾಹಸ ಪ್ರಿಯರಿಗೆ (adventurous lovers), ಇದು ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ.
ಈ ಕೋಟೆಯನ್ನು ಏರುವುದು ಒಂದು ಕಡೆ ಕಷ್ಟಕರವಾಗಿದೆ, ಸಾವಿನ ಜೊತೆ ಜಿದ್ದಾ ಜಿದ್ದಿ ಮಾಡೋಕೆ ರೆಡಿ ಇದ್ರೆ ಮಾತ್ರ ಈ ಕೋಟೆ ಹತ್ತಬೇಕು ಅಂತಾರೆ ಜನ. ಕಷ್ಟಪಟ್ಟು ಈ ಕೋಟೆ ಹತ್ತಿ ಕೊಟೆಯ ತುತ್ತ ತುದಿ ತಲುಪಿದ ಮೇಲೆ ಸುತ್ತಲೂ ಪೋಣಿಸಿಟ್ಟಂತೆ ಕಾಣೋ ಆ ಪರ್ವತಗಳನ್ನ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ, ಅಂತಹ ಅದ್ಭುತ ತಾಣಗಳಿವು. ಇಲ್ಲಿಗೆ ಹೋಗುವಾಗ ನೀವು ನೆನಪಿಟ್ಟುಕೊಳ್ಳಬೇಕಾದ್ದು ಏನಂದ್ರೆ, ಈ ಕೋಟೆಯನ್ನು ಏರುವಾಗ ಯಾವುದೇ ರೀತಿಯ ಸೌಲಭ್ಯವನ್ನು ಒದಗಿಸೋದಿಲ್ಲ, ಹಾಗಾಗಿ ಭಾರವಾದ ಬ್ಯಾಗ್ ಬೆನ್ನಿಗೇರಿಸಿ, ಈ ಕೋಟೆ ಹತ್ತೊ ಸಾಹಸ ಮಾಡಲೇಬೇಡಿ.
ಹರಿಹರ ಕೋಟೆಯಲ್ಲಿ ಕೋತಿಗಳ ಭೀತಿ
ಹರಿಹರ ಕೋಟೆಯ ತುತ್ತ ತುದಿಯನ್ನು ತಲುಪಿದರೆ, ನೀವು ಮೋಡಗಳ ನಡುವೆ ಇದ್ದಂತೆ ಫೀಲ್ ಮಾಡಿಕೊಳ್ಳೋದು ಖಂಡಿತಾ. ಆದರೆ ಪರ್ವತಾರೋಹಣದ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ಪರ್ವತದ ಮೆಟ್ಟಿಲುಗಳು ನೇರವಾಗಿವೆ, ಇದರಿಂದ ಮೆಟ್ಟಿಲು ಏರೋದೆ ಕಷ್ಟ. ಕೋತಿ ಕಾಟ ಇದ್ರೆ ಇನ್ನೇನು ಆಗುತ್ತೇ?
ಹೌದು, ಹರಿಹರ ಕೋಟೆ ಹತ್ತೋವಾಗ ನೀವು ಬಹಳಷ್ಟು ಕೋತಿಗಳನ್ನು ನೋಡುತ್ತೀರಿ. ಆದ್ದರಿಂದ ಯಾವುದೇ ಆಹಾರ ಪದಾರ್ಥಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಡಿ ಮತ್ತು ಕೋತಿಗಳಿಂದ ಸಾಧ್ಯವಾದಷ್ಟು ದೂರವಿರಬೇಕು, ಏಕೆಂದರೆ ಕೋತಿಗಳಿಂದಾಗಿ ನಿಮ್ಮ ಬ್ಯಾಲೆನ್ಸ್ ತಪ್ಪಿ ನೀವು ಕೆಳಗೆ ಬೀಳೋ ಚಾನ್ಸ್ ಕೂಡ ಇದೆ. ಕೋತಿಗಳನ್ನು ಕಲ್ಲಿನಿಂದ ಹೊಡಿಯೋದಕ್ಕ್ಕೂ ಮತ್ತು ಓಡಿಸಲು ಪ್ರಯತ್ನಿಸಬೇಡಿ, ಹಾಗೆ ಮಾಡೋದ್ರಿಂದ ನೀವೆ ಸಮಸ್ಯೆಗೆ ಸಿಲುಕೋದು ಗ್ಯಾರಂಟಿ.