ಹೊಸಕೋಟೆ ದಾರಿ (Hoskote Route)
ಇದು ಖಂಡಿತವಾಗಿಯೂ ಕರ್ನಾಟಕದ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಈ ಮಾರ್ಗವು ಒಂಟಿ ರಸ್ತೆಯಾಗಿದ್ದು, ಹಲವು ಭಯಾನಕ ಘಟನೆಗಳಿಗೆ ಸಾಕ್ಷಿಯಾಗಿದೆ. ಒಮ್ಮೆ ಆಟೋರಿಕ್ಷಾ ಚಾಲಕರೊಬ್ಬರು ವೃದ್ಧೆಯೊಬ್ಬರು ಲಿಫ್ಟ್ ಕೇಳೋದನ್ನು ಗಮನಿಸಿ, ಚಾಲಕ ಅವಳ ಬಳಿ ನಿಲ್ಲಿಸಿ ಅವಳಿಗೆ ಲಿಫ್ಟ್ ನೀಡಿದನು. ಆದರೆ ಮಹಿಳೆ ಚಾಲಕನನ್ನು ಹೊರ ಬರಲು ಹೇಳಿ, ತನಗೆ ಗಾಯವಾಗಿದೆ ರಿಕ್ಷಾ ಹತ್ತೋದಕ್ಕೆ ಸಾಧ್ಯ ಆಗ್ತಿಲ್ಲ, ನೀನೆ ಹೊರ ಬಂದು ನನ್ನನ್ನು ಹತ್ತಿಸು ಎಂದು, ವಿಚಿತ್ರವಾಗಿ ನಕ್ಕಿದ್ದಾಳೆ, ಆವಾಗಲೇ ಡ್ರೈವರ್ ಗೆ ಆಕೆಯ ಮೇಲೆ ಸಂಶಯ ಮೂಡಿ, ಹೊರ ಬರಲು ಭಯಪಟ್ಟು ರಿಕ್ಷಾವನ್ನು ತೆಗೆದುಕೊಂಡು ಹೋಗಿದ್ದಾರೆ. ಆತನ ರಿಕ್ಷಾದಲ್ಲಿ ದೇವರ ಫೋಟೊಗಳು ಇದ್ದುದರಿಂದ ಆ ದೆವ್ವಕ್ಕೆ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ. ಈ ಅನುಭವ ಹಲವು ಜನರಿಗೆ ಆಗಿದೆ.