ಈಸಿಯಾಗಿ ಪಯಣಿಸೋ, ಸುಲಭವಾಗಿ ಜೀವನ ಮಾಡ್ಬೇಕು ಅಂದ್ರೆ ಈ ದೇಶಕ್ಕೆ ವಿಸಿಟ್ ಮಾಡಿ!

First Published | May 14, 2024, 6:15 PM IST

ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಈ ದೇಶಗಳಲ್ಲಿ ಜೀವನ ಮಾಡೋದು ತುಂಬಾ ಸುಲಭ. ಇದು ಬಜೆಟ್ ಫ್ರೆಂಡ್ಲಿ ಇಷ್ಟಪಡೋ ಪ್ರಯಾಣಿಕರು ಮತ್ತು ವಲಸಿಗರಿಗೆ ಬೆಸ್ಟ್ ತಾಣಗಳು. ಅಂತಹ ದೇಶಗಳು ಯಾವುವು ಅನ್ನೋದನ್ನು ನೋಡೋಣ. 
 

ವಿಶ್ವದಲ್ಲಿ ದುಬಾರಿ ದೇಶಗಳಿವೆ. ಕೈಗೆಟಕುವ ದರದಲ್ಲಿ ಜೀವನ ಮಾಡಲು ಸಾಧ್ಯವಿರುವ ದೇಶಗಳೂ ಇವೆ. ವಾಸಿಸಲು ಯೋಗ್ಯವಾದ ಕಡಿಮೆ ವೆಚ್ಚದಲ್ಲಿ ಜೀವನ ಮಾಡಲು ಸಾಧ್ಯವಾಗುವ ದೇಶಗಳ ಲಿಸ್ಟ್ ಇಲ್ಲಿವೆ. ಈ ದೇಶಗಳಲ್ಲಿ ಕೈಗೆಟುಕುವ ಬೆಲೆಗಳು ವಸತಿ ಮತ್ತು ಆಹಾರದಿಂದ ಸಾರಿಗೆ ಮತ್ತು ಮನರಂಜನೆಯವರೆಗೆ ವಿವಿಧ ಅಂಶಗಳನ್ನು ಒಳಗೊಂಡಿವೆ. ಇದು ವಿಶ್ವದ ಅತ್ಯಂತ ದುಬಾರಿ ಆರ್ಥಿಕತೆಗಳಿಗಿಂತ ಅಗ್ಗ (affordable countries). ಅಂತಹ ದೇಶಗಳು ಯಾವುವು? 

ಮೆಕ್ಸಿಕೊ (Mexico):  ಕ್ಯಾನ್ಕುನ್ ನ ಮರಳು ಕಡಲತೀರಗಳಿಂದ ಹಿಡಿದು ಓಕ್ಸಾಕಾದ ಆಕರ್ಷಕ ಬೀದಿಗಳವರೆಗೆ, ಮೆಕ್ಸಿಕೊ ಕೈಗೆಟುಕುವ ಜೀವನ ವೆಚ್ಚಗಳನ್ನು ನೀಡುತ್ತದೆ, ಬಜೆಟ್ ಸ್ನೇಹಿ ವಸತಿ, ಸಾರಿಗೆ ಮತ್ತು ಊಟದ ಆಯ್ಕೆಗಳೊಂದಿಗೆ ನೀವು ಕಡಿಮೆ ದರದಲ್ಲಿ ಜೀವನ ಎಂಜಾಯ್ ಮಾಡಬಹುದು. 
 

Tap to resize

ಚೀನಾ (China):  ತನ್ನ ಪ್ರಾಚೀನ ಹೆಗ್ಗುರುತುಗಳು, ಬ್ಯುಸಿ ನಗರಗಳು ಮತ್ತು ವೈವಿಧ್ಯಮಯ ಆಹಾರಗಳೊಂದಿಗೆ, ಚೀನಾದಲ್ಲಿ ಕೈಗೆಟುಕುವ ದರದಲ್ಲಿ ಜೀವನ ಅನುಭವಿಸೋಕೆ ಸಾಧ್ಯ. ವಿಶೇಷವಾಗಿ ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಎಂಜಾಯ್ ಮಾಡಬಹುದು. ಪ್ರವಾಸಿಗರು ಅತಿಯಾದ ಖರ್ಚು ಮಾಡದೆ ಚೀನಾ ಸೌಂದರ್ಯವನ್ನು ಎಂಜಾಯ್ ಮಾಡಬಹುದು. 
 

ಟರ್ಕಿ (Turkey):  ಇಸ್ತಾಂಬುಲ್‌ನ ಐತಿಹಾಸಿಕ ಬೀದಿಗಳಿಂದ ಕಪಡೋಸಿಯಾದ ಅದ್ಭುತ ಪ್ರಕೃತಿ ಸೌಂದರ್ಯದವರೆಗೆ, ಟರ್ಕಿ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯವನ್ನು ನೀವು ಕೈಗೆಟುಕುವ ದರದಲ್ಲಿ ಎಂಜಾಯ್ ಮಾಡಬಹುದು. ವಸತಿ, ಊಟ ಮತ್ತು ಸಾರಿಗೆ ಎಲ್ಲವೂ ಇಲ್ಲಿ ಕಡಿಮೆ ದರದಲ್ಲಿ ದೊರೆಯುತ್ತದೆ. 
 

ಮಲೇಶಿಯಾ (Malaysia): ಆಧುನಿಕ ನಗರಗಳು, ಉಷ್ಣವಲಯದ ದ್ವೀಪಗಳು ಮತ್ತು ವೈವಿಧ್ಯಮಯ ಆಹಾರಗಳೊಂದಿಗೆ, ಮಲೇಷ್ಯಾದಲ್ಲಿ ಕೈಗೆಟುಕುವ ದರದಲ್ಲಿ ಜೀವನ ನಡೆಸಲು ಸಾಧ್ಯ, ವಿಶೇಷವಾಗಿ ಕೌಲಾಲಂಪುರ್ ಮತ್ತು ಪೆನಾಂಗ್ ನಂತಹ ನಗರಗಳಲ್ಲಿ ಆರಾಮವಾಗಿ ಜೀವಿಸಬಹುದು. 
 

ಭಾರತ (India) : ರಾಜಸ್ಥಾನದ ಭವ್ಯ ಅರಮನೆಗಳಿಂದ ಹಿಡಿದು ಕೇರಳದ ಪ್ರಶಾಂತ ಹಿನ್ನೀರಿನವರೆಗೆ ಭಾರತ ಕೈಗೆಟುಕುವ ಬೆಲೆಯಲ್ಲಿ ಅದ್ಭುತ ಅನುಭವಗಳ ಸಂಪತ್ತನ್ನು ನೀಡುತ್ತದೆ. ವಸತಿ, ಸಾರಿಗೆ ಮತ್ತು ಆಹಾರ ಎಲ್ಲವೂ ಇಲ್ಲಿ ಅಗ್ಗ.

ಇಂಡೋನೇಶಿಯಾ (Indonesia) :  ಸುಂದರ ಕಡಲತೀರಗಳು, ಸೊಂಪಾದ ತಾರಸಿಗಳು ಮತ್ತು ರೋಮಾಂಚಕ ಸಂಸ್ಕೃತಿಗೆ ನೆಲೆಯಾಗಿರುವ ಇಂಡೋನೇಷ್ಯಾ ಕೈಗೆಟುಕುವ ಜೀವನ ವೆಚ್ಚವನ್ನು ನೀಡುತ್ತದೆ, ಬಜೆಟ್ ಸ್ನೇಹಿ ವಸತಿ ಮತ್ತು ಊಟದ ಆಯ್ಕೆಗಳು ದೇಶಾದ್ಯಂತ ಲಭ್ಯವಿದೆ.

ಫಿಲಿಪೈನ್ಸ್ (Philippines) :  ಫಿಲಿಪೈನ್ಸ್ 7000ಕ್ಕೂ ಹೆಚ್ಚು ದ್ವೀಪಗಳಿಗೆ ನೆಲೆಯಾಗಿದೆ! ದೇಶ ತನ್ನ ಸುಂದರವಾದ ಕಡಲತೀರಗಳು, ವೈವಿಧ್ಯಮಯ ಸಮುದ್ರ ಜೀವಿಗಳು ಮತ್ತು ಸ್ನೇಹಪರ ಸ್ಥಳೀಯರಿಗೆ ಹೆಸರುವಾಸಿ. ಇಲ್ಲಿನ ಜೀವನ ವೆಚ್ಚವು ತುಲನಾತ್ಮಕವಾಗಿ ಕಡಿಮೆಯಾಗಿದೆ, ಇದು ಸುಲಭವಾಗಿ ಕೈಗೆಟುಕುವ ತಾಣ.
 

ವಿಯೇಟ್ನಾಂ (Vietnam):  ತನ್ನ ಅದ್ಭುತ ಭೂದೃಶ್ಯಗಳು, ರೋಮಾಂಚಕ ನಗರಗಳು ಮತ್ತು ರುಚಿಯಾದ ಬೀದಿ ಆಹಾರದೊಂದಿಗೆ, ವಿಯೆಟ್ನಾಂ ಬಜೆಟ್ ಪ್ರಯಾಣಿಕರ ಸ್ವರ್ಗ. ಕೈಗೆಟುಕುವ ದರದಲ್ಲಿ ವಸತಿ, ಸಾರಿಗೆ ಮತ್ತು ಊಟ ಮಾಡುತ್ತಾ ನೀವಿಲ್ಲಿ ಎಂಜಾಯ್ ಮಾಡಬಹುದು. 

ಥೈಲ್ಯಾಂಡ್ (Thailand) : ಸುಂದರ ಕಡಲತೀರಗಳು, ಶ್ರೀಮಂತ ಸಂಸ್ಕೃತಿ ಮತ್ತು ರುಚಿಕರವಾದ ಪಾಕ ಪದ್ಧತಿಗೆ ಹೆಸರುವಾಸಿಯಾದ ಥೈಲ್ಯಾಂಡ್ ಕೈಗೆಟುಕುವ ದರದಲ್ಲಿ ಜೀವಿಸಬಹುದಾದ ದೇಶ. ವಿಶೇಷವಾಗಿ ಬ್ಯಾಂಕಾಕ್ ಮತ್ತು ಫುಕೆಟ್ ನಂತಹ ಪ್ರಮುಖ ಪ್ರವಾಸಿ ಪ್ರದೇಶಗಳಲ್ಲಿ ನೀವು ಸುಲಭವಾಗಿ ಎಂಜಾಯ್ ಮಾಡಬಹುದು. 

Latest Videos

click me!