ಭಾರತೀಯ ರೈಲ್ವೆಯಲ್ಲಿ ವಿವಿಧ ರೀತಿಯ ರೈಲುಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಶತಾಬ್ದಿ, ರಾಜಧಾನಿ, ತುರಂತೋ ಮತ್ತು ವಂದೇ ಭಾರತ್ ರೈಲುಗಳು ಓಡಾಡುತ್ತಿವೆ. ಈ ರೀತಿಯ ರೈಲುಗಳನ್ನು ಹೊರತುಪಡಿಸಿ, ಭಾರತದಲ್ಲಿ ಒಂದು ವಿಶೇಷ ರೈಲು ಇದೆ. ಏಷ್ಯಾದಲ್ಲೇ ಅತಿ ದುಬಾರಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಹಾರಾಜ ಎಕ್ಸ್‌ಪ್ರೆಸ್
ನಮ್ಮ ದೇಶದ ಅತಿ ದುಬಾರಿ ರೈಲಿನ ಹೆಸರು ಮಹಾರಾಜ ಎಕ್ಸ್‌ಪ್ರೆಸ್. ಏಷ್ಯಾದಲ್ಲೇ ಅತಿ ಐಷಾರಾಮಿ ರೈಲು ಇದು. ಈ ರೈಲು ಐಷಾರಾಮಿ ಸೌಲಭ್ಯಗಳ ಆಗರ. ಇದರ ದರ ಲಕ್ಷ ರೂಪಾಯಿ. ಒಂದು ರೀತಿಯಲ್ಲಿ ಈ ರೈಲನ್ನು ಫೈವ್ ಸ್ಟಾರ್ ಹೋಟೆಲ್ ಎಂದು ಹೇಳಬಹುದು. ಈ ರೈಲಿನಲ್ಲಿ ಹತ್ತುವ ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ಸಿಗುತ್ತವೆ.