ಈ ವರ್ಷ, ವಿದೇಶಕ್ಕೆ ಪ್ರಯಾಣಿಸುವ ಮೂಲಕ, ನೀವು ಕ್ರಿಸ್ಮಸ್ ರಜಾದಿನಗಳನ್ನು ಇನ್ನಷ್ಟು ಮೆಮೊರೇಬಲ್ ಮಾಡಬಹುದು. ಹೌದು, ಹೇಗೆ ಅಂತೀರಾ?, IRCTC ಯ ವಿಶೇಷ ಪ್ರವಾಸ ಪ್ಯಾಕೇಜ್ನಲ್ಲಿ, ಕಡಿಮೆ ಬಜೆಟ್ನಲ್ಲಿ ಥೈಲ್ಯಾಂಡ್ಗೆ ಭೇಟಿ ನೀಡುವ ಅವಕಾಶವನ್ನು ನಿಮಗೆ ನೀಡಲಾಗುತ್ತಿದೆ. 6 ದಿನಗಳ IRCTC ಥೈಲ್ಯಾಂಡ್ ಕ್ರಿಸ್ಮಸ್ ಟೂರ್ ಪ್ಯಾಕೇಜ್ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ಇಲ್ಲಿದೆ. ಈವಾಗ್ಲೇ ಚೆಕ್ ಮಾಡಿ.
ಡಿಸೆಂಬರ್ ಸಮೀಪಿಸುತ್ತಿದ್ದಂತೆ, ಹವಾಮಾನದಲ್ಲಿನ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಶೀತ ಗಾಳಿ ಬೀಸಲು ಪ್ರಾರಂಭಿಸುತ್ತದೆ . ಅಷ್ಟೇ ಯಾಕೆ ಪರ್ವತ ಪ್ರದೇಶಗಳಲ್ಲಿ ಹಿಮಪಾತ ಪ್ರಾರಂಭವಾಗುತ್ತದೆ. ಕ್ರಿಸ್ಮಸ್ (Christmas) ಮತ್ತು ಹೊಸ ವರ್ಷವನ್ನು ಸಹ ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ರಜಾದಿನಗಳನ್ನು ಆಚರಿಸಲು ಸುಂದರ ತಾಣಗಳಿಗೆ ಟ್ರಾವೆಲ್ ಮಾಡೋದಕ್ಕೆ ಇಷ್ಟ ಪಡ್ತಾರೆ.
ನೀವೂ ಸಹ ಈ ವರ್ಷದ ಕ್ರಿಸ್ಮಸ್ ರಜಾದಿನಗಳಲ್ಲಿ ಎಲ್ಲಾದರೂ ಪ್ರಯಾಣಿಸಲು ಯೋಜಿಸುತ್ತಿದ್ದರೆ, IRCTC ನಿಮಗಾಗಿ ಉತ್ತಮ ಪ್ರವಾಸ ಪ್ಯಾಕೇಜ್ (IRCTC Thailand Christmas Tour Package) ಅನ್ನು ತಂದಿದೆ, ಇದರಲ್ಲಿ ನೀವು ಕಡಿಮೆ ಬಜೆಟ್ನಲ್ಲಿ ಥೈಲ್ಯಾಂಡ್ಗೆ ಭೇಟಿ ನೀಡುವ ಅವಕಾಶವನ್ನು ಪಡೆಯುತ್ತೀರಿ.
ಈ ಪ್ಯಾಕೇಜ್ನಲ್ಲಿ, ನಿಮಗೆ ಐದು ರಾತ್ರಿ ಮತ್ತು ಆರು ದಿನಗಳ ಪ್ರವಾಸವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ನೀವು ಥೈಲ್ಯಾಂಡ್ ನ ಅನೇಕ ಸುಂದರ ನಗರಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತೆ, ಈ ಪ್ಯಾಕೇಜ್ ನಲ್ಲಿ ನಿಮಗೆ ಥೈಲ್ಯಾಂಡ್ ನಲ್ಲಿ ಉಳಿಯೋದಕ್ಕೆ, ತಿನ್ನೋದಕ್ಕೆ, ಟ್ರಾವೆಲ್ ಮಾಡೋದಕ್ಕೆ ಎಲ್ಲಾ ಸೌಲಭ್ಯವನ್ನೂ ನೀಡಲಾಗುತ್ತೆ. ಆ ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
IRCTC ಯ ಕ್ರಿಸ್ಮಸ್ ವಿಶೇಷ ಪ್ಯಾಕೇಜ್
ಕ್ರಿಸ್ಮಸ್ ಹಬ್ಬವನ್ನು ಭಾರತದಲ್ಲಿ ಬಹಳ ಆಡಂಬರದಿಂದ ಆಚರಿಸಲಾಗುತ್ತೆ ಮತ್ತು ಅನೇಕ ಜನರು ಈ ರಜಾದಿನಗಳಲ್ಲಿ ಟ್ರಾವೆಲ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ನೀವೂ ಸಹ ಈ ವರ್ಷದ ಕ್ರಿಸ್ಮಸ್ನಲ್ಲಿ ಎಲ್ಲಾದರೂ ಪ್ರಯಾಣಿಸಲು ಯೋಜಿಸುತ್ತಿದ್ದರೆ, IRCTC ಯ ವಿಶೇಷ ಪ್ರವಾಸ ಪ್ಯಾಕೇಜ್ ನಿಮಗೆ ಉತ್ತಮ ಆಯ್ಕೆಯಾಗಿದೆ.
ಈ ಪ್ಯಾಕೇಜ್ನ ಹೆಸರು "ಕ್ರಿಸ್ಮಸ್ ಸ್ಪೆಷಲ್ ಥೈಲ್ಯಾಂಡ್ ವಿತ್ ಫೋರ್ ಸ್ಟಾರ್ ವಸತಿ". ಇದು 5 ರಾತ್ರಿಗಳು ಮತ್ತು 6 ಹಗಲುಗಳ ಪ್ಯಾಕೇಜ್ ಆಗಿದ್ದು, ಇದು ಡಿಸೆಂಬರ್ 22 ರಿಂದ ಡಿಸೆಂಬರ್ 27 ರವರೆಗೆ ಇರುತ್ತದೆ. ಈ ಪ್ಯಾಕೇಜ್ ನಲ್ಲಿ, ನಿಮ್ಮನ್ನು ಥೈಲ್ಯಾಂಡ್ ನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುತ್ತದೆ.
ಲಕ್ನೋದಿಂದ ನೇರ ವಿಮಾನ ಸೇವೆ
ಈ IRCTC ಟೂರ್ ಪ್ಯಾಕೇಜ್ನೊಂದಿಗೆ, ನೀವು ಡಿಸೆಂಬರ್ 22 ರಂದು ರಾತ್ರಿ 11:05 ಕ್ಕೆ ಲಕ್ನೋದಿಂದ ನೇರವಾಗಿ ಥೈಲ್ಯಾಂಡ್ಗೆ ಹಾರುತ್ತೀರಿ. ಸುಂದರವಾದ ಹವಳ ದ್ವೀಪಗಳು (coral island) ಮತ್ತು ಪಟ್ಟಾಯದ ಫ್ಲೋಟಿಂಗ್ ಮಾರ್ಕೆಟ್ ಗೆ ಭೇಟಿ ನೀಡುವುದರ ಜೊತೆಗೆ ಬ್ಯಾಂಕಾಕ್ ನ ಅಡ್ವೆಂಚರ್ ಸಫಾರಿ ವರ್ಲ್ಡ್ ಮತ್ತು ಮೆರೈನ್ ಪಾರ್ಕ್ ಗೆ ಭೇಟಿ ನೀಡುವ ಅವಕಾಶವನ್ನು ಸಹ ನೀವು ಪಡೆಯುತ್ತೀರಿ. ಈ ಇಡೀ ಪ್ರವಾಸದಲ್ಲಿ ನಿಮಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಸಹ ನೀಡಲಾಗುತ್ತದೆ. ನೀವು ಡಿಸೆಂಬರ್ 27 ರಂದು ರಾತ್ರಿ 8:10 ಕ್ಕೆ ಬ್ಯಾಂಕಾಕ್ ನಿಂದ ಲಕ್ನೋಗೆ ಮರಳುತ್ತೀರಿ.
ಈ ಪ್ರವಾಸ ಪ್ಯಾಕೇಜ್ ಗೆ ಶುಲ್ಕ ಎಷ್ಟು?
IRCTC ಯ ಥೈಲ್ಯಾಂಡ್ ಪ್ರವಾಸದ ಶುಲ್ಕವು ಪ್ರಯಾಣಿಕರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ನೀವು ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದರೆ, ನೀವು 74,200 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇಬ್ಬರು ವ್ಯಕ್ತಿಗಳಿದ್ದರೆ, ಒಬ್ಬೊಬ್ಬರಿಗೆ ತಲಾ 63,500 ರೂ. ಮೂರು ಜನರ ಗುಂಪಿಗೆ, ಪ್ರತಿ ವ್ಯಕ್ತಿಗೆ ಶುಲ್ಕ 62,900 ರೂ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ವಿತ್ ಪ್ರತ್ಯೇಕ ಹಾಸಿಗೆಗೆ 57,500 ರೂ., 2 ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆ ಇಲ್ಲದೆ 52,900 ರೂ. ಆಗಿದೆ. ಹೆಚ್ಚಿನ ಮಾಹಿತಿಗಾಗಿ IRCTC ವೆಬ್ ಸೈಟ್ ನಲ್ಲಿ ಚೆಕ್ ಮಾಡಿ.