ಜಪಾನ್‌ನ ವಿಮಾನನಿಲ್ದಾಣದಲ್ಲಿ ನಿಮ್ಮ ಬ್ಯಾಗೇಜ್‌ಗಳನ್ನು ಅಲ್ಲಿ ಅಧಿಕಾರಿಗಳೇ ಕ್ಲೀನ್ ಮಾಡಿ ಬ್ಯಾಗೇಜ್ ಬೆಲ್ಟ್‌ಗೆ ಹಾಕುತ್ತಾರೆ. ಬ್ಯಾಗೇಜ್ ಬೆಲ್ಟ್‌ನಲ್ಲಿ ನಿಮ್ಮ ಲಗೇಜ್ ಬಂದಾಗ ಅದು ಫುಲ್ ಕ್ಲೀನ್ ಆಗಿ ಬಂದಿರುತ್ತದೆ.
ಜಪಾನ್‌ನ ರೈಲುಗಳು ಫುಟ್‌ಬಾತ್‌ಗಳನ್ನು ಹೊಂದಿದೆ. ಪ್ರಯಾಣದ ವೇಳೆ ಪ್ರಯಾಣಿಕರು ಸಂಪೂರ್ಣ ರಿಲಾಕ್ಸ್ ಆಗಿರಬೇಕು ಎನ್ನುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ.
ಉತ್ತರ ಜಪಾನ್‌ನಲ್ಲಿ ಚಳಿಗಾಲದ ಸಮಯದಲ್ಲಿ ಸೈಡ್‌ವಾಕ್‌ಗಳನ್ನು ಹೀಟ್ ಮಾಡಲಾಗುತ್ತದೆ. ಈ ಸೈಡ್‌ವಾಕ್‌ಗಳ ಮೇಲೆ ಮಂಜು ಶೇಖರಿಸಬಾರದು ಎನ್ನುವ ದೃಷ್ಟಿಯಿಂದ ಸ್ವತಃ ಜಪಾನ್ ಸರ್ಕಾರ ಈ ವ್ಯವಸ್ಥೆ ಮಾಡುತ್ತದೆ.
ಜಪಾನ್‌ನ ರೈಲುಗಳ ವೇಳಾಪಟ್ಟಿಯಲ್ಲಿ ಸೆಕೆಂಡ್ಸ್‌ಗಳು ಕೂಡ ಇವೆ. ಸಮಯದ ಬಗ್ಗೆ ಅಷ್ಟು ಪಕ್ವವಾಗಿರುವ ದೇಶ ಜಪಾನ್. ವಿಶ್ವದ ಯಾವುದೇ ದೇಶದ ರೈಲುಗಳ ವೇಳಾಪಟ್ಟಿಯಲ್ಲಿ ಇಷ್ಟು ನಿಖರತೆ ಇಲ್ಲ.
ಜಪಾನ್ ದೇಶಗಳ ರಸ್ತೆಗಳ ಪಕ್ಕದಲ್ಲಿ ಕೊಡೆಗಳ Rack ಇರುತ್ತದೆ. ಯಾರು ಬೇಕಾದರೂ ಇದನ್ನು ಬಳಕೆ ಮಾಡಬಹುದು.ಅಂಬ್ರಲ್ಲಾ ಲ್ಯಾಮಿಟರ್ಸ್ ಎನ್ನಲಾಗುವ ಇದರಲ್ಲಿಕೊಡೆಗಳನ್ನು ಇರಿಸಿದರೆ, ಅದೇ ಸ್ವತಃ ನೀರನ್ನು ಹೀರಿಕೊಳ್ಳುತ್ತದೆ.
ಬೇಸ್‌ಬಾಲ್ ಜಪಾನ್‌ನ ಅತ್ಯಂತ ಪ್ರಸಿದ್ಧ ಕ್ರೀಡೆ. ಅಮೆರಿಕ ಹೊರತಾಗಿ ಬೇಸ್‌ಬೇಲ್ ಎಲ್ಲಾದರೂ ಪ್ರಸಿದ್ಧವಾಗಿದ್ದರೆ ಅದು ಜಪಾನ್ ಮಾತ್ರ. ಫುಟ್‌ಬಾಲ್ 2ನೇ ಪ್ರಸಿದ್ಧ ಕ್ರೀಡೆ.
ಜಪಾನ್‌ನ ಹೆಚ್ಚಿನ ಶಾಲೆಗಳಲ್ಲಿ ಕೆಲಸದ ಸಿಬ್ಬಂದಿಗಳು ಇರೋದಿಲ್ಲ. ಶಾಲೆಗಳ ಶುಚಿತ್ವವನ್ನು ವಿದ್ಯಾರ್ಥಿಗಳೇ ಮಾಡಬೇಕು. ಇದು ಚಿಕ್ಕ ವಯಸ್ಸಿನಲ್ಲಿಯೇ ಶುಚಿತ್ವ ಹಾಗೂ ಜವಾಬ್ದಾರಿಯನ್ನು ಮಕ್ಕಳಿಗೆ ಕಲಿಸುತ್ತದೆ ಎಂದು ಜಪಾನ್ ನಂಬಿದೆ.
ಜಪಾನ್‌ನಲ್ಲಿ ಟ್ಯಾಕ್ಸಿ ಡೋರ್‌ಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ಕ್ಯಾಬ್‌ನ ಡೋರ್‌ಗಳನ್ನು ನೀವು ತೆಗೆಯಬೇಕಾದ ಅವಶ್ಯಕತೆಯೇ ಇಲ್ಲ. ನೀವು ಇಳಿಯುವ ಸ್ಥಳ ಬಂದಾಗಲೂ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ.
ಜಪಾನ್‌ನ ಟಾಯ್ಲೆಟ್‌ಗಳು ಹೈಟೆಕ್ ವ್ಯವಸ್ಥೆಯನ್ನು ಹೊಂದಿದೆ. ಟಾಯ್ಲೆಟ್ ವೇಳೆ ಅನಗತ್ಯವಾದ ಸೌಂಡ್‌ಗಳು ಆಗದೇ ಇರುವ ಕಾರಣಕ್ಕೆ ಒಂದು ಬಟನ್ ಕೂಡ ಟಾಯ್ಲೆಟ್‌ನಲ್ಲಿ ಇರುತ್ತದೆ.ಅಲ್ಲದೆ, ಇವುಗಳು ಹೀಟೆಡ್ ಟಾಯ್ಲೆಟ್ ಸೀಟ್‌ಗಳಾಗಿರುತ್ತದೆ.
ಇಲ್ಲಿನ ರೆಸ್ಟೋರೆಂಟ್‌ಗಳ ಹೊರಗೆ ಫೇಕ್ ಫುಡ್‌ಗಳನ್ನು ಪ್ರದರ್ಶನ ಮಾಡಲಾಗಿರುತ್ತದೆ. ಈ ಆಹಾರವನ್ನು ಬುಕ್ ಮಾಡಿದರೆ, ನೂವು ಆಯ್ಕೆ ಮಾಡಿದ ರೀತಿಯ ಆಹಾರವೇ ನಿಮ್ಮ ಟೇಬಲ್‌ಗೆ ಬರುತ್ತದೆ, ನಿಮ್ಮ ಆಹಾರವನ್ನು ಆಯ್ಕೆ ಮಾಡುವ ಕೆಲಸ ಸರಳವಾಗುತ್ತದೆ ಎಂದು ಜಪಾನ್ ಹೇಳುತ್ತದೆ.
ಜಪಾನ್ ರಾಜಧಾನಿ ಟೋಕಿಯೋ ವಿಶ್ವದಲ್ಲಿಯೇ ಅತ್ಯಂತ ಸೇಫ್ ಆಗಿರುವ ಮೆಟ್ರೋಪಾಲಿಟಿನ್ ಸಿಟಿ. ನಿಮ್ಮ ಪುಟ್ಟಮಕ್ಕಳನ್ನೂ ಇಲ್ಲಿನ ರಸ್ತೆಗಳಲ್ಲಿ ಆರಾಮವಾಗಿ ಬಿಡಬಹುದು.
ಜಪಾನ್‌ನ ಚಳಚರಂಡಿಗಳು ಎಷ್ಟು ಶುದ್ಧವಾಗಿದೆ ಎಂದರೆ, ಅಲ್ಲಿನ ಒಳಚರಂಡಿಗಳಲ್ಲಿ ಕೋಯ್ ಫಿಶ್‌ಗಳನ್ನು ಕಾಣಬಹುದಾಗಿದೆ. ಇದು ಜಪಾನ್ ಎಷ್ಟು ಕ್ಲೀನ್ ಎನ್ನುವುದನ್ನು ತೋರಿಸುತ್ತದೆ.
ಜಪಾನ್‌ನಲ್ಲಿ ಅಪರೂಪವಾದ ಕ್ಯಾಪ್ಸುಲ್ ಹೋಟೆಲ್‌ಗಳಿದೆ. 1970ರಲ್ಲಿ ಕುಶೋ ಕುರಾಕೋವಾ ಇದನ್ನು ಪರಿಚಯಿಸಿದರು,. ವಿದೇಶಿ ಪ್ರವಾಸಿಗರಿಗೆ ಇದು ನೆಚ್ಚಿನ ಕಾಣ. ಸೈನ್ಸ್ ಫಿಕ್ಷನ್ ರೀತಿ ಇದು ಕಾಣುತ್ತದೆ.
ಜಪಾನ್ ಸಾಕಷ್ಟು ನೈಸರ್ಗಿಕ ವಿಕೋಪಗಳನ್ನು ಎದುರಿಸಿದೆ. ಆದರೆ, ಜಪಾನ್‌ನಲ್ಲಿ ಲೂಟಿಯನ್ನು ನೋವು ನೋಡಲು ಸಾಧ್ಯವಿಲ್ಲ.ನಿಮ್ಮ ಆಸ್ತಿಗಳನ್ನು ಜಪಾನ್‌ನಲ್ಲಿ ಅಷ್ಟು ಸುರಕ್ಷಿತ.
ಜಪಾನ್‌ನಲ್ಲಿ ರೈಸ್ ಪ್ಯಾಡಿ ಆರ್ಟ್ ನಡೆಯುತ್ತದೆ. ಯಾವ ಮಾದರಿಯ ಅಕ್ಕಿಯನ್ನು ಬೆಳೆಯಲಾಗುತ್ತಿದೆ ಎನ್ನುವುದನ್ನು ಈ ಮೂಲಕ ತಿಳಿಸುತ್ತಾರೆ. ಯಾವ ಮಾದರಿಯ ಅಕ್ಕಿ ಬೆಳೆಯಬೇಕು ಅನ್ನೋದನ್ನ ಪ್ರತಿ ವರ್ಷದ ಏಪ್ರಿಲ್‌ನಲ್ಲಿ ಇಡೀ ಗ್ರಾಮ ಚರ್ಚಿಸಿ ನಿರ್ಧಾರ ಮಾಡುತ್ತದೆ.