ಇದು ದೇಶದ ಅತಿ ದೀರ್ಘ ಪ್ರಯಾಣದ ವಂದೇ ಭಾರತ್ ರೈಲು; ಟಿಕೆಟ್ ಬೆಲೆ, ಟೈಮ್ ಮಾಹಿತಿ ಇಲ್ಲಿದೆ

First Published | Nov 1, 2024, 3:51 PM IST

ದೇಶದ ಅತಿ ದೀರ್ಘ ಪ್ರಯಾಣದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ಸಿಕ್ಕಿದೆ. ಈ ಹೊಸ ವಂದೇ ಭಾರತ್ ಎಲ್ಲಿಂದ ಎಲ್ಲಿಗೆ ಸಂಚರಿಸುತ್ತೆ ಎಂಬುದರ ಮಾಹಿತಿ ಇಲ್ಲಿದೆ. 

ದೀರ್ಘ ಪ್ರಯಾಣದ ವಂದೇ ಭಾರತ್ ರೈಲು  ನವದೆಹಲಿ ಮತ್ತು ಪಾಟನಾ ನಡುವೆ ಸಂಚರಿಸುತ್ತಿದೆ. ಬುಧವಾರ ಬೆಳಕ್ಕೆ 8.25ಕ್ಕೆ ನವದೆಹಲಿಯಿಂದ ರೈಲು ಪ್ರಯಾಣ ಬೆಳೆಸಿತು. ಈ ಎರಡೂ ನಗರಗಳ ನಡುವೆ 994 ಕಿಲೋ ಮೀಟರ್ ಅಂತರವಿದೆ.

ದೀಪಾವಳಿಯ ಶುಭ ಸಂದರ್ಭದಲ್ಲಿ ವಂದೇ ಭಾರತ್ ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ. 994 ಕಿಮೀ ಕ್ರಮಿಸಲು  ವಂದೇ ಭಾರತ್ ಎಕ್ಸ್‌ಪ್ರೆಸ್ 11 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. ಬೆಳಗ್ಗೆ 8.25ಕ್ಕೆ ಹೊರಡುವ ರೈಲು ರಾತ್ರಿ 8 ಗಂಟೆಗೆ ತಲುಪಲಿದೆ.

Tap to resize

ಭಾರತೀಯ ರೈಲ್ವೇ ಸಚಿವಾಲಯದ ಪ್ರಕಾರ ಈ ವಿಶೇಷ ರೈಲನ್ನು ಪ್ರಾಯೋಗಿಕ ಆಧಾರದ ಮೇಲೆ ನಿರ್ವಹಿಸಲಾಗಿದೆ. ಈ ರೈಲು ಅರ್ರಾ, ಬಕ್ಸರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಪ್ರಯಾಗರಾಜ್ ಮತ್ತು ಕಾನ್ಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ನವದೆಹಲಿ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ವೇಗದ ಮತ್ತು ಐಷಾರಾಮಿ ಪ್ರಯಾಣದ ಅನುಭವವನ್ನು ನೀಡುತ್ತದೆ.

ಈ ವಂದೇ ಭಾರತದ ದೆಹಲಿಯಿಂದ ಪಾಟನಾಗೆ ಪ್ರತಿ ಬುಧವಾರ, ಶುಕ್ರವಾರ ಮತ್ತು ಭಾನುವಾರ ಚಲಿಸಲಿದೆ. ಇತ್ತ ಪಾಟನಾದಿಂದ ದೆಹಲಿಗೆ ಸೋಮವಾರ, ಗುರುವಾರ ಮತ್ತು ಶನಿವಾರ ಸಂಚರಿಸಲಿದೆ. ಪಾಟನಾದಿಂದ ಬೆಳಗ್ಗೆ 7.30ಕ್ಕೆ ಪ್ರಯಾಣ ಆರಂಭಿಸುವ ರೈಲು ಅದೇ ದಿನ ರಾತ್ರಿ 7 ಗಂಟೆಗೆ ನವದೆಹಲಿ ತಲುಪಲಿದೆ. ಕೆಲವೇ ದಿನಗಳಲ್ಲಿ ಒಂದು ಸ್ಲೀಪರ್ ಕೋಚ್ ಅಳವಡಿಸುವ ಚಿಂತನೆಯನ್ನು ಭಾರತೀಯ ರೈಲ್ವೆ ಹೊಂದಿದೆ ಎಂದು ವರದಿಯಾಗಿದೆ.

ನವದೆಹಲಿ-ಪಾಟನಾ ವಂದೇ ಭಾರತ್ ಎಕ್ಸ್‌ಪ್ರೆಸ್ ಟಿಕೆಟ್ ದರಗಳು ಹೀಗಿವೆ
*ಎಸಿ ಕಾರ್ ಚೇರ್: 2,575 ರೂಪಾಯಿ
*ಎಕ್ಸಿಕ್ಯೂಟಿವ್ ಚೇರ್ ಕಾರ್: 4,655 ರೂಪಾಯಿ

ಅಕ್ಟೋಬರ್ 30ರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಪ್ರಯಾಣವನ್ನು ಆರಂಭಿಸಿದೆ. ನವೆಂಬರ್ 1,3 ಮತ್ತು 6 ಹಾಗೂ ಪಾಟಾನದಿಂದ ನವೆಂಬರ್ 2, 4  ಮತ್ತು 7ರಂದು ರೈಲು ಚಲಿಸಲಿದ್ದು, ಟಿಕೆಟ್ ಬುಕ್ಕಿಂಗ್ ಸಹ ಶುರುವಾಗಿದೆ. 

ಇದಕ್ಕೂ ಮೊದಲು ದೆಹಲಿ ಮತ್ತು  ವಾರಣಾಸಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ದೀರ್ಘ ಪ್ರಯಾಣದ ರೈಲು ಆಗಿತ್ತು.  ದೆಹಲಿ ಮತ್ತು ವಾರಣಾಸಿ ನಡುವಿನ 771 ಕಿಲೋ ಮೀಟರ್ ಕ್ರಮಿಸಲು ವಂದೇ ಭಾರತ್ ಎಕ್ಸ್‌ಪ್ರೆಸ್ 8 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. 

Latest Videos

click me!