ನೀವು ಪ್ರಯಾಣ ಮಾಡೋಕೆ ಹೊರಟಾಗ, ನಿಮ್ಮ ರಿಸರ್ವ್ ಸೀಟು ಸಿಗದೇ ಇರಬಹುದು. ಹೀಗೆ ಆದ್ರೆ, ಇಲ್ಲಿ ಕೊಟ್ಟಿರೋ ವಿಧಾನಗಳನ್ನ ಅನುಸರಿಸಿ ನಿಮ್ಮ ಸೀಟು ಪಡೆಯಬಹುದು. ಮೊದಲನೆಯದಾಗಿ, ನೀವು ರೈಲು ಟಿಕೆಟ್ ಪರಿಶೋಧಕರಿಗೆ (TTE) ದೂರು ಕೊಡಬೇಕು. TTE ಯಿಂದ ಪರಿಹಾರ ಸಿಗದಿದ್ರೆ, ರೈಲ್ವೆ ಸಹಾಯವಾಣಿ 139 ಸಂಖ್ಯೆಗೆ ಕರೆ ಮಾಡಬಹುದು. ಈ ಸಂಖ್ಯೆ IVRS ವ್ಯವಸ್ಥೆಯನ್ನ ಆಧರಿಸಿದೆ.