ಕಡಿಮೆ ವೆಚ್ಚದಲ್ಲಿ ಅತ್ಯದ್ಭುತ ನೇಪಾಳ ವಿಸಿಟ್‌, ಇಲ್ಲಿದೆ ಪ್ಯಾಕೇಜ್ ಡೀಟೈಲ್ಸ್

First Published | Jul 31, 2022, 1:02 PM IST

ಭಾರತದ ನೆರೆಯ ರಾಷ್ಟ್ರ ನೇಪಾಳ ಬಹಳ ಸುಂದರವಾದ ಮತ್ತು ಶಾಂತವಾದ ಸ್ಥಳವಾಗಿದೆ. ಅಲ್ಲಿನ ಸುಂದರವಾದ ಮಂಜು ಆವರಿಸಿದ ಪರ್ವತಗಳು, ಸರೋವರಗಳು, ಅಲ್ಲಿನ ಆಚರಣೆ ಎಲ್ಲವೂ ವಿಭಿನ್ನವಾಗಿರುತ್ತೆ. ನೀವು ಈ ಸ್ಥಳಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಐಆರ್ಸಿಟಿಸಿಯ ಈ ಟೂರ್ ಪ್ಯಾಕೇಜ್ ಅನ್ನು ನೋಡಿ, ಈ ಮೂಲಕ ನೀವು ಕೈಗೆಟಕುವ ದರದಲ್ಲಿ ನೇಪಾಳ ಟೂರ್ ಮಾಡಿಕೊಂಡು ಬರಬಹುದು. 

ನೀವು ಕಡಿಮೆ ಬಜೆಟ್ ನಲ್ಲಿ ವಿದೇಶಕ್ಕೆ ಪ್ರಯಾಣಿಸಲು ಬಯಸಿದರೆ, ನೇಪಾಳವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ ನೀವು ಕಡಿಮೆ ಬಜೆಟ್ ನಲ್ಲಿ 5ರಿಂದ 7 ದಿನಗಳ ಟೂರ್ ಮಾಡಬಹುದು. ಈ ಸ್ಥಳವು ಪ್ರಕೃತಿ ಪ್ರೇಮಿಗಳಿಗೆ (nature lover) ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ಮಾಡುವ ಜನರಿಗೆ ಸ್ವರ್ಗವಾಗಿದೆ. ಆದ್ದರಿಂದ ನೀವು ಈ ವರ್ಷ ವಿದೇಶ ಪ್ರವಾಸವನ್ನು ಮಾಡಲು ಯೋಚಿಸುತ್ತಿದ್ದರೆ, ಅದನ್ನು ನೇಪಾಳದಿಂದ ಏಕೆ ಪ್ರಾರಂಭಿಸಬಾರದು. 

ಈ ಬಾರಿ ಐಆರ್ಸಿಟಿಸಿ  (IRCTC) ಉತ್ತಮ ಪ್ರವಾಸ ಪ್ಯಾಕೇಜ್‌ನೊಂದಿಗೆ ಬಂದಿದೆ. 5 ದಿನಗಳ ಈ ಪ್ರವಾಸದಲ್ಲಿ, ನೀವು ನೇಪಾಳದ ಅನೇಕ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು, ಅದೂ ಕೂಡ ಕಡಿಮೆ ಬಜೆಟ್ ನಲ್ಲಿ. ಆದ್ದರಿಂದ ಹೆಚ್ಚು ತಡಮಾಡದೆ, ಪ್ಯಾಕೇಜ್‌ನ ವಿವರಗಳನ್ನು ತ್ವರಿತವಾಗಿ ತಿಳಿದುಕೊಳ್ಳಿ, ಇದರಿಂದ ನೀವು ಸಮಯಕ್ಕೆ ಸರಿಯಾಗಿ ಬುಕ್ಕಿಂಗ್ ಮಾಡಬಹುದು. 

Tap to resize

ಐಆರ್‌ಸಿಟಿಸಿ ನೇಪಾಳ ಪ್ರವಾಸ ಪ್ಯಾಕೇಜ್ ವಿವರಗಳು
ಪ್ಯಾಕೇಜ್ ನ ಹೆಸರು- ESSENCE OF NEPAL

ತಲುಪುವ ಜಾಗ - ಕಠ್ಮಂಡು, ಪೋಖರಾ

ಪ್ಯಾಕೇಜ್ ನ ಅವಧಿ - 5 ಹಗಲು ಮತ್ತು 4 ರಾತ್ರಿಗಳು

ಟ್ರಾವೆಲ್ ಮೋಡ್ - ಫ್ಲೈಟ್

ನಿರ್ಗಮನದ ದಿನಾಂಕ - ಸೆಪ್ಟೆಂಬರ್ 30, 2022

ನೀವು ಎಲ್ಲಿಂದ ಫ್ಲೈಟ್ ಹತ್ತಬಹುದು? - ಬಾಗ್ಡೋಗ್ರಾ / NJP/ ಸಿಲಿಗುರಿ

ನೀವು ನೇಪಾಳ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಕೆಳಗೆ ನೀಡಲಾದಂತಹ IRCTC ಲಿಂಕ್ ನ್ನು ಕ್ಲಿಕ್ ಮಾಡಿ. ಇಲ್ಲಿ ಪ್ರವಾಸದ ಕುರಿತಾದ ಡಿಟೇಲ್ ಮಾಹಿತಿಯನ್ನು ನೀಡಲಾಗಿದೆ. ಇವುಗಳ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. IRCTC ಕ್ಲಿಕ್ ಮಾಡಿ. 

IRCTC ನೇಪಾಳ ಟೂರ್ ಪ್ಯಾಕೇಜ್ ಬೆಲೆ (price per person)
- ಇಬ್ಬರು ಜನರಿಗೆ ಪ್ಯಾಕೇಜ್‌ನ ಬೆಲೆ 43,170 ರೂ.
- ನಾಲ್ಕು ಜನರಿಗೆ 42,130 ರೂ. 
- ಆರು ಜನರಿಗೆ 41,285 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 
- ಪ್ಯಾಕೇಜ್‌ನ ಬೆಲೆ 10 ಜನರಿಗೆ 39,400 ರೂ.
- ನೀವು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರೆ, ಹಾಸಿಗೆಗಳೊಂದಿಗೆ ಪ್ಯಾಕೇಜ್‌ನ ಬೆಲೆ 30,365 ರೂ.
ಅಂದರೆ, ಗುಂಪಿನಲ್ಲಿ ನೇಪಾಳ ಪ್ರವಾಸದ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಈ ರೀತಿಯಾಗಿ ಬುಕಿಂಗ್ ಮಾಡಬಹುದು
ಐಆರ್‌ಸಿಟಿಸಿಯ ಅಧಿಕೃತ ವೆಬ್ಸೈಟ್ ಮೂಲಕ ನೀವು ಈ ಟೂರ್ ಪ್ಯಾಕೇಜ್ಗಾಗಿ ಬುಕ್ ಮಾಡಬಹುದು. ಇದಲ್ಲದೆ, ಐಆರ್ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕ್ಕಿಂಗ್ ಮಾಡಬಹುದು. ಪ್ಯಾಕೇಜ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Latest Videos

click me!