Monsoon Wedding: ಬೆಸ್ಟ್ ಡೆಸ್ಟಿನೇಷನ್ ತಾಣಗಳಿವು, ಪ್ಲ್ಯಾನ್ ಮಾಡ್ಕೊಳ್ಳಿ!

Published : Jul 28, 2022, 06:14 PM IST

ಮಾನ್ಸೂನ್ ಸಮಯದಲ್ಲಿ, ಅನೇಕ ಸ್ಥಳಗಳ ನೋಟ ಬದಲಾಗುತ್ತದೆ. ಅಂದರೆ, ಈ ಸ್ಥಳಗಳು ಇನ್ನೂ ಸುಂದರವಾಗಿ ಕಾಣಲು ಪ್ರಾರಂಭಿಸುತ್ತವೆ. ಹಚ್ಚ ಹಸುರಿನಿಂದ ಕೂಡುತ್ತದೆ. ಹಾಗಾಗಿ ನೀವು, ಡೆಸ್ಟಿನೇಶನ್ ವೆಡ್ಡಿಂಗ್ ಬಗ್ಗೆ ಯೋಚಿಸುತ್ತಿದ್ದರೆ, ಭಾರತದ ಈ ಸ್ಥಳಗಳು ಇದಕ್ಕೆ ಅತ್ಯುತ್ತಮವಾಗಿವೆ. ಯಾವ ಸ್ಥಳಗಳು ಮದುವೆಗೆ ಬೆಸ್ಟ್ ನೋಡೋಣ.

PREV
16
Monsoon Wedding: ಬೆಸ್ಟ್ ಡೆಸ್ಟಿನೇಷನ್ ತಾಣಗಳಿವು, ಪ್ಲ್ಯಾನ್ ಮಾಡ್ಕೊಳ್ಳಿ!

ಮದುವೆ ಭಾರತದ ಕುಟುಂಬಗಳ ಅತಿದೊಡ್ಡ ಸಂಭ್ರಮ. ಮದುವೆಯನ್ನು ಮೆಮೊರೇಬಲ್ ಆಗಿಸಲು ಲಕ್ಷಾಂತರ ಮತ್ತು ಕೋಟಿ ರೂಪಾಯಿ ಖರ್ಚು ಮಾಡ್ತಾರೆ. ಆದರೆ ಬೇಸಿಗೆ ಮತ್ತು ಚಳಿಗಾಲದ ಮದುವೆ ಸ್ಥಳಗಳನ್ನು ಹುಡುಕೋದು ಸುಲಭ. ಆದರೆ ಮಳೆಗಾಲದಲ್ಲಿ ಅರೇಂಜ್ ಮಾಡೋದೆ ಒಂದು ದೊಡ್ಡ ತಲೆನೋವು. ಆದ್ದರಿಂದ ನಿಮ್ಮ ವಿವಾಹವು ಮಾನ್ಸೂನ್ ತಿಂಗಳಲ್ಲಿ ಮಾಡಲು ಯೋಜನೆ ಮಾಡ್ತಿದ್ರೆ, ಅದನ್ನು ಸ್ಮರಣೀಯವಾಗಿಸಲು ನೀವು ಡೆಸ್ಟಿನೇಶನ್ ವೆಡ್ಡಿಂಗ್ ಯೋಜಿಸಬಹುದು. ಭಾರತದಲ್ಲಿ ಅನೇಕ ಉತ್ತಮ ಸ್ಥಳಗಳಿವೆ, ಅವು ಮದುವೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಅವುಗಳ ಬಗ್ಗೆ ನೋಡೋಣ. 

26
1. ಖಜುರಾಹೊ

ಮಧ್ಯಪ್ರದೇಶದ ಬುಂದೇಲ್ ಖಂಡ್ ನಲ್ಲಿರುವ ಖಜುರಾಹೊ ಒಂದು ಧಾರ್ಮಿಕ ಮತ್ತು ರೊಮ್ಯಾಂಟಿಕ್ ಸ್ಥಳ. ಖಜುರಾಹೊದಲ್ಲಿ ನಿರ್ಮಿಸಲಾದ ವಿಶೇಷ ದೇವಾಲಯಗಳನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಮಳೆಗಾಲದಲ್ಲಿ, ಇಲ್ಲಿನ ಹವಾಮಾನ ತುಂಬಾ ಆಹ್ಲಾದಕರವಾಗಿರುತ್ತದೆ. ಆದ್ದರಿಂದ ಖಜುರಾಹೊದಲ್ಲಿ ನೀವು ಡೆಸ್ಟಿನೇಶನ್ ವೆಡ್ಡಿಂಗ್ (destination wedding) ಯೋಜಿಸಬಹುದು. ಮದುವೆಗೆ ಹಾಜರಾಗಲು ಬರುವ ಅತಿಥಿಗಳು ಇಲ್ಲಿನ ಸುಂದರ ಸ್ಥಳಗಳನ್ನು ಸಹ ಕಾಣಬಹುದು.

36
2. ಉದಯಪುರ

ನೀವು ಡೆಸ್ಟಿನೇಷನ್ ವೆಡ್ಡಿಂಗ್ ಅನ್ನು ರಾಯಲ್ ರೀತಿಯಲ್ಲಿ ಯೋಜಿಸುತ್ತಿದ್ದರೆ, ಉದಯಪುರ ಇದಕ್ಕೆ ಬೆಸ್ಟ್ ಆಯ್ಕೆ. ಭವ್ಯವಾದ ಅರಮನೆಗಳು, ಸರೋವರಗಳಿಂದ ಅಲಂಕೃತವಾಗಿರುವ ಈ ನಗರ ಅತ್ಯಂತ ಸುಂದರ ಮತ್ತು ರೊಮ್ಯಾಂಟಿಕ್ ಆಗಿದೆ. ಉದಯಪುರವು ಎಲ್ಲಾ ಬದಿಗಳಲ್ಲಿ ಸರೋವರಗಳಿಂದ ಸುತ್ತುವರೆದಿದೆ, ಈ ಕಾರಣದಿಂದಾಗಿ, ಈ ಸ್ಥಳದ ಸೌಂದರ್ಯವು ಮಾನ್ಸೂನ್‌ನಲ್ಲಿ ದ್ವಿಗುಣಗೊಳ್ಳುತ್ತದೆ.

46
3. ಹೈದರಾಬಾದ್

"ನವಾಬರ ನಗರ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮುತ್ತಿನ ನಗರಿ ಹೈದರಾಬಾದ್, ಮದುವೆಗಳಿಗೆ ಅತ್ಯುತ್ತಮ ತಾಣ. ಮಾನ್ಸೂನ್ ಸಮಯದಲ್ಲಿ ಈ ಸ್ಥಳದ ಸೌಂದರ್ಯ ಸಹ ಬಹಳಷ್ಟು ಸುಂದರವಾಗಿರುತ್ತೆ. ಇಲ್ಲಿ ನೀವು ನವಾಬರ ರೀತಿ ಮದುವೆಯಾಗಬಹುದು. ಹೈದರಾಬಾದ್ ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಅದ್ಭುತ ರುಚಿಗಳಿಂದಾಗಿ ಉತ್ತಮ ಸ್ಥಳವಾಗಿದೆ. ಆದ್ದರಿಂದ ನೀವು ಮಾನ್ಸೂನ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಈ ಸ್ಥಳವನ್ನು ಸಹ ಆಯ್ಕೆ ಮಾಡಬಹುದು.  

56
4. ಗೋವಾ

ಮೋಜಿನ ಜೊತೆಗೆ ಬೆಸ್ಟ್ ವೆಡ್ಡಿಂಗ್‌ಗೆ ಗೋವಾ ಅತ್ಯಂತ ಜನಪ್ರಿಯ ತಾಣ. ಇಲ್ಲಿ ನೀವು ಸಾಕಷ್ಟು ಸುಂದರವಾದ ಮತ್ತು ಐಷಾರಾಮಿ ವಿವಾಹ (Luxurious Wedding) ಸ್ಥಳಗಳನ್ನು ಕಾಣಬಹುದು, ಅಲ್ಲಿ ನೀವು ಪ್ರತಿ  ಕ್ಷಣವನ್ನು ಶಾಶ್ವತವಾಗಿ ಸ್ಮರಣೀಯವಾಗಿಸಬಹುದು. ಮಾನ್ಸೂನ್‌ನಲ್ಲಿ ಹೆಚ್ಚು ಪ್ರವಾಸಿ ಜನಸಂದಣಿ ಇಲ್ಲದ ಕಾರಣ, ತುಂಬಾ ಕಡಿಮೆ ಬಜೆಟ್‌ನಲ್ಲಿ ನೀವು ಮದುವೆಯನ್ನು ಯೋಚಿಸಬಹುದು. ಗೋವಾದ ನೈಟ್ ಲೈಫ್ ನಿಮ್ಮ ಮದುವೆಯ ಆಚರಣೆಯನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ.

66
5.ಕೋವಲಂ

ಕೇರಳದ ಕೋವಲಂ ಸುಂದರವಾದ ಪ್ರದೇಶ. ಇದರ ಸೌಂದರ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ. ಕೇರಳದ ಸೌಂದರ್ಯಕ್ಕೆ ಮುಕುಟ ಇಟ್ಟಂತೆ ಇರುತ್ತೆ ಇಲ್ಲಿನ ಸೌಂದರ್ಯ. ಒಂದು ವೇಳೆ ನೀವು ಮದುವೆಯಾಗಲು ಬಯಸಿದರೆ ಈ ಸ್ಥಳವನ್ನು ಆಯ್ಕೆ ಮಾಡಬಹುದು, ನೀವು ಈ ಸ್ಥಳವನ್ನು ನಿಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇಡಬಹುದು. ತುಂತುರು ಮಳೆ ಮತ್ತು ಸಮುದ್ರದ ಅಲೆಗಳು ಮದುವೆಯ ಜೊತೆಗೆ ಫೋಟೋಗ್ರಾಫಿಯನ್ನು ಸಹ ಅದ್ಭುತವಾಗಿಸುತ್ತದೆ.

Read more Photos on
click me!

Recommended Stories