IRCTC tour package : ಅಂಡಮಾನ್ ಟ್ರಾವೆಲ್ ಪ್ಲ್ಯಾನ್ ಮಾಡಿದ್ದರೆ ಈ ಮಾಹಿತಿ ನಿಮಗಾಗಿ

First Published Jan 21, 2023, 7:55 PM IST

ಅಂಡಮಾನ್ - ನಿಕೋಬಾರ್ ಹೆಸರು ಕೇಳಿದ್ರೇನೆ ಅಲ್ಲಿನ ಸೌಂದರ್ಯ ಕಣ್ಣ ಮುಂದೆ ಹಾಗೆ ಸುಳಿಯುತ್ತೆ ಅಲ್ವಾ? ನೀವು ಕೂಡ ಆ ಸುಂದರ ತಾಣಕ್ಕೆ ಪ್ರವಾಸ ಮಾಡಲು ಪ್ಲ್ಯಾನ್ ಮಾಡಿದ್ದೀರಾ? ಆದರೆ ಹಣ ಹೆಚ್ಚಾಗುತ್ತೆ ಅನ್ನೋ ಯೋಚ್ನೆಲಿ ಸುಮ್ಮನೆ ಇದ್ರೆ ಈ ಐಆರ್ಸಿಟಿಸಿ ಯೋಜನೆ ಬಗ್ಗೆ ತಿಳಿಯಿರಿ. 

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ತನ್ನ ಪ್ರಯಾಣಿಕರಿಗೆ ಕಾಲಕಾಲಕ್ಕೆ ವಿವಿಧ ಪ್ರವಾಸ ಪ್ಯಾಕೇಜ್ಗಳನ್ನು ತರುತ್ತದೆ. ಈ ಬಾರಿ ಐಆರ್ಸಿಟಿಸಿ ಅಂಡಮಾನ್ ಡಿಲೈಟ್ ಎಕ್ಸ್ ಬಾಗ್ಡೋಗ್ರಾ ಟೂರ್ ಪ್ಯಾಕೇಜ್‌ನೊಂದಿಗೆ  (Andaman Delight Ex Bagdogra Tour Package)  ಬಂದಿದೆ. ಇದರಲ್ಲಿ ನೀವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನೋಡುವ ಅವಕಾಶವನ್ನು ಪಡೆಯುತ್ತೀರಿ. ಇದು ಬಹಳ ಸುಂದರವಾದ ದ್ವೀಪವಾಗಿದೆ. ಆದ್ದರಿಂದ ನೀವು ಫೆಬ್ರವರಿಯಲ್ಲಿ ಅಂಡಮಾನ್ ಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಐಆರ್ ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ನ ಲಾಭವನ್ನು ಪಡೆಯಬಹುದು. ಈ ಪ್ಯಾಕೇಜ್ ಬಗ್ಗೆ ತಿಳಿದುಕೊಳ್ಳೋಣ.

ಪ್ಯಾಕೇಜ್ ವಿವರಗಳು-

ಪ್ಯಾಕೇಜ್ ಹೆಸರು- ಅಂಡಮಾನ್ ಡಿಲೈಟ್ಸ್ ಎಕ್ಸ್- ಬಾಗ್ಡೋಗ್ರಾ
ಪ್ಯಾಕೇಜ್ ಅವಧಿ- 6 ರಾತ್ರಿಗಳು ಮತ್ತು 7 ದಿನಗಳು
ಟ್ರಾವೆಲ್ ಮೋಡ್ - ಫ್ಲೈಟ್ (Flight)
ತಲುಪಬಹುದಾದ ಸ್ಥಳ- ಪೋರ್ಟ್ ಬ್ಲೇರ್, ಹ್ಯಾವ್ಲಾಕ್ ದ್ವೀಪ, ನೀಲ್ ದ್ವೀಪ
ಬೋರ್ಡಿಂಗ್ ಪಾಯಿಂಟ್ಸ್- ಬಾಗ್ಡೋಗ್ರಾ

ಈ ಸೌಲಭ್ಯ ಲಭ್ಯವಿರುತ್ತದೆ-

1. ಪ್ರಯಾಣಕ್ಕಾಗಿ ನೀವು ವಿಮಾನ ಟಿಕೆಟ್ ಗಳನ್ನು (flight ticket) ಪಡೆಯುತ್ತೀರಿ.
2. ಉಳಿದುಕೊಳ್ಳಲು ಹೋಟೆಲ್ ಸೌಲಭ್ಯವಿರುತ್ತದೆ. 
3. 6 ಉಪಾಹಾರ ಮತ್ತು 7 ರಾತ್ರಿ ಊಟದ ಸೌಲಭ್ಯಗಳು ಇರುತ್ತವೆ.
4. ತಿರುಗಾಡಲು ಎಸಿ ವಾಹನ (AC vehicle) ಸೌಲಭ್ಯ ಲಭ್ಯವಿರುತ್ತದೆ.
5. ಈ ಟೂರ್ ಪ್ಯಾಕೇಜ್ನಲ್ಲಿ, ನೀವು ಪ್ರಯಾಣ ವಿಮಾ ಸೌಲಭ್ಯವನ್ನು ಸಹ ಪಡೆಯುತ್ತೀರಿ.

ಇದು ಪ್ರಯಾಣದ ಶುಲ್ಕವಾಗಿರುತ್ತದೆ-

1. ಈ ಪ್ರವಾಸದಲ್ಲಿ ನೀವು ಏಕಾಂಗಿಯಾಗಿ ಪ್ರಯಾಣಿಸಿದರೆ, 59,390 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
2. ಇಬ್ಬರು ವ್ಯಕ್ತಿಗಳು ಪ್ರಯಾಣಿಸೋದಾದ್ರೆ ಪ್ರತಿ ವ್ಯಕ್ತಿಗೆ 46,400 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
3. ಮೂವರು ವ್ಯಕ್ತಿಗಳು ಪ್ರಯಾಣಿಸೋದಾದ್ರೆ ಪ್ರತಿ ವ್ಯಕ್ತಿಗೆ 45,840 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
4. ನೀವು ಮಕ್ಕಳಿಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಸಿಗೆಗೆ 41,445 ರೂ ಮತ್ತು ಹಾಸಿಗೆ ಇಲ್ಲದೆ (without bed) 32,400 ರೂ ಪಾವತಿಸಬೇಕಾಗುತ್ತದೆ.

ಐಆರ್ಸಿಟಿಸಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ:

ಐಆರ್ಸಿಟಿಸಿ ತನ್ನ ಪ್ರವಾಸ ಪ್ಯಾಕೇಜ್ (IRCTC travel package) ಬಗ್ಗೆ ಮಾಹಿತಿ ನೀಡುವ ಟ್ವೀಟ್ ಅನ್ನು ಹಂಚಿಕೊಂಡಿದೆ. ನೀವು ಅಂಡಮಾನ್ ನ ಸುಂದರ ಸ್ಥಳಗಳಿಗೆ ಭೇಟಿ ನೀಡಲು ಬಯಸಿದರೆ, ಐಆರ್ ಸಿಟಿಸಿಯ ಈ ಉತ್ತಮ ಪ್ರವಾಸ ಪ್ಯಾಕೇಜ್ ನ ಲಾಭವನ್ನು ನೀವು ಪಡೆಯಬಹುದು.

ನೀವು ಈ ರೀತಿ ಬುಕ್ ಮಾಡಬಹುದು

ಐಆರ್ಸಿಟಿಸಿಯ ಅಧಿಕೃತ ವೆಬ್ಸೈಟ್ (IRCTC official website) ಮೂಲಕ ನೀವು ಈ ಪ್ರವಾಸ ಪ್ಯಾಕೇಜ್‌ಗಾಗಿ ಬುಕ್ ಮಾಡಬಹುದು. ಇದಲ್ಲದೆ, ಐಆರ್ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕಿಂಗ್ ಮಾಡಬಹುದು. ಪ್ಯಾಕೇಜಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು ಐಆರ್ಸಿಟಿಸಿ ಅಧಿಕೃತ ವೆಬ್ಸೈಟಿಗೆ ಭೇಟಿ ನೀಡಬಹುದು.

click me!