ಇಗ್ಬೊ ಬುಡಕಟ್ಟು (Igbo Tribe) ನೈಜೀರಿಯಾದ ಅತ್ಯಂತ ವಿದ್ಯಾವಂತ ಬುಡಕಟ್ಟು ಜನಾಂಗಗಳಲ್ಲೊಂದು. ಈ ಬುಡಕಟ್ಟಿನ ಅನೇಕ ಮಕ್ಕಳು ಉನ್ನತ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಪಡೆದಿದ್ದಾರೆ. ಇಗ್ಬೊ ವಿದ್ಯೆ ಜೊತೆಗೆ ಟ್ಯಾಲೆಂಟೆಡ್ ಆಗಿರುವ ಸಮುದಾಯ. ಈ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ತಮ್ಮ ಕುಟುಂಬಗಳ ಬಗ್ಗೆ ಸಮರ್ಪಣೆಗೂ ಹೆಸರುವಾಸಿ. ಈ ಬುಡಕಟ್ಟು ಜನಾಂಗದ ಮಹಿಳೆಯರನ್ನು(tribal women) ಮದುವೆಯಾಗಲು ಇತರ ಜನಾಂಗದ ಜನರು ಸಹ ತುದಿಗಾಲಲ್ಲಿ ನಿಂತಿರುತ್ತಾರೆ. ಈ ಬುಡಕಟ್ಟು ಜನಾಂಗ ಮುಖ್ಯವಾಗಿ ಅಬಿಯಾ, ಅನಂಬರಾ, ಎಬೊನಿ, ಎನುಗು ಮತ್ತು ಇಮೊ ರಾಜ್ಯಗಳಲ್ಲಿ ಕಂಡುಬರುತ್ತದೆ. ಇಗ್ಬೋದ ದೊಡ್ಡ ಜನಸಂಖ್ಯೆಯು ಡೆಲ್ಟಾ ಮತ್ತು ನದಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕ್ಯಾಮರೂನ್, ಗ್ಯಾಬೊನ್ ಮತ್ತು ಈಕ್ವೆಟೋರಿಯಲ್ ಗಿನಿಯಾ ಮತ್ತು ಆಫ್ರಿಕಾದ ಹೊರಗೆ ಇಗ್ಬೊ ಜನಸಂಖ್ಯೆ ಕಂಡುಬರುತ್ತದೆ. ಈ ಬುಡಕಟ್ಟಿನ ಹುಡುಗಿಯರು ಮದುವೆಗೆ ಮೊದಲ ಆಯ್ಕೆಯಾಗಲು ಕಾರಣವೇನೆಂದು ತಿಳಿದುಕೊಳ್ಳೋಣ.