ದಿನದ 24 ಗಂಟೆಯೂ ಬೆಳಕಿದ್ದರೆ ಜೀವನ ಹೇಗಿರುತ್ತೆ? ಇಲ್ ಹೋಗಿ ಗೊತ್ತಾಗುತ್ತೆ!

First Published | Jan 19, 2023, 5:21 PM IST

ಚಳಿಗಾಲದಲ್ಲಿ ಸ್ವಲ್ಪ ಸೂರ್ಯನ ಬೆಳಕು ನಿಮಗೆ ವಿಟಮಿನ್ ಆಗಿ ಕೆಲಸ ಮಾಡುತ್ತದೆ. ಸೂರ್ಯನ ಬೆಳಕು ನಮಗೆ ಬೇಕು ನಿಜ. ಆದರೆ ದಿನಪೂರ್ತಿ ಸೂರ್ಯ ಮುಳುಗದೇ ಇದ್ದರೆ ಹೇಗೆ? ಸೂರ್ಯ ಮುಳುಗದೇ ಇದ್ದರೆ ಕತ್ತಲಾಗೋದು ಹೇಗೆ? ನಾವು ನಿದ್ರೆ ಮಾಡೋದು ಹೇಗೆ ಎಂದು ನೀವು ಯೋಚಿಸಿರಬಹುದು ಅಲ್ವಾ? ಆದರೆ ನಿಮಗೆ ಗೊತ್ತಾ? ಸೂರ್ಯ ಎಂದಿಗೂ ಮುಳುಗದ ವಿಶ್ವದ ಕೆಲವು ಸ್ಥಳಗಳಿವೆ. ಹೌದು, ಇಂದು ಆ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.

ಕ್ಯಾನಾಕ್, ಗ್ರೀನ್ಲ್ಯಾಂಡ್ (Qaanaaq, Greenland)

ಗ್ರೀನ್ ಲ್ಯಾಂಡ್ ನ ಈ ನಗರದಲ್ಲಿ, ಎರಡೂವರೆ ತಿಂಗಳವರೆಗೆ ಸೂರ್ಯ ಮುಳುಗೋದಿಲ್ಲ. ಇಲ್ಲಿನ ಜನರು ರಾತ್ರಿಯಲ್ಲಿ ಸೂರ್ಯನ ಬೆಳಕನ್ನು ತಪ್ಪಿಸಲು ಮಲಗುವಾಗ ಕಪ್ಪು ಪರದೆಗಳನ್ನು ಹಾಕುತ್ತಾರೆ. ಈ ಸ್ಥಳದ ಚಳಿಗಾಲವು ದೀರ್ಘ ಮತ್ತು ತಂಪಾಗಿರುತ್ತದೆ ಮತ್ತು ರಾತ್ರಿಗಳು ತುಂಬಾ ಸುಂದರವಾಗಿವೆ.

ಹ್ಯಾಮರ್ಫೆಸ್ಟ್, ನಾರ್ವೆ (Hammerfest Norway)

ಈ ನಗರವು ನಾರ್ವೆಯ ಅತ್ಯಂತ ಹಳೆಯ ಮತ್ತು ಸುಂದರವಾದ ನಗರ. ಇದು ವಿಶ್ವದ ಉತ್ತರದ ನಗರಗಳಲ್ಲಿ ಒಂದಾಗಿರುವುದರಿಂದ, ಸೂರ್ಯ ಇಲ್ಲಿ ಕೆಲವೇ ನಿಮಿಷಗಳ ಕಾಲ  ಮುಳುಗುತ್ತಾನೆ. ಈ ನಗರದಲ್ಲಿ, ಸುಮಾರು 79 ದಿನಗಳ ಕಾಲ ಸೂರ್ಯ 12:43 ಕ್ಕೆ ಮುಳುಗುತ್ತಾನೆ ಮತ್ತು ಕೇವಲ 40 ನಿಮಿಷಗಳ ಅಂತರದಲ್ಲಿ ಮತ್ತೆ ಉದಯಿಸುತ್ತಾನೆ. 

Tap to resize

ಫಿನ್ ಲ್ಯಾಂಡ್ (Finland)

ಫಿನ್ಲ್ಯಾಂಡ್ ಸಾವಿರಾರು ಸರೋವರಗಳು ಮತ್ತು ದ್ವೀಪಗಳಿಂದ ಅಲಂಕರಿಸಲ್ಪಟ್ಟ ಸುಂದರ ಮತ್ತು ಆಕರ್ಷಕ ದೇಶವಾಗಿದೆ. ಬೇಸಿಗೆಯಲ್ಲಿ, ಸೂರ್ಯನು ಸುಮಾರು 73 ದಿನಗಳವರೆಗೆ ಇಲ್ಲಿ ಮುಳುಗೋದೆ ಇಲ್ಲ. ಈ ಕಾರಣದಿಂದಾಗಿ ಇಲ್ಲಿನ ಜನರು ಬೇಸಿಗೆಯಲ್ಲಿ ತುಂಬಾ ಕಡಿಮೆ ಮತ್ತು ಚಳಿಗಾಲದಲ್ಲಿ ಹೆಚ್ಚು ಮಲಗುತ್ತಾರೆ.

ಉಕಾನ್, ಕೆನಡಾ (Yukon, Canada)

ವರ್ಷದಲ್ಲಿ ದೀರ್ಘಕಾಲದವರೆಗೆ ಹಿಮದಿಂದ ಆವೃತವಾಗಿರುವ ವಿಶ್ವದ ಎರಡನೇ ಅತಿದೊಡ್ಡ ನಗರ. ದೇಶದ ವಾಯುವ್ಯ ಭಾಗದಲ್ಲಿ, ಬೇಸಿಗೆಯ ದಿನಗಳಲ್ಲಿ ಸೂರ್ಯನು 50 ದಿನಗಳವರೆಗೆ ನಿರಂತರವಾಗಿ ಪ್ರಕಾಶಿಸುತ್ತಾನೆ. ಯುಕಾನ್ ಅನ್ನು ಮಧ್ಯರಾತ್ರಿ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ.

ಬ್ಯಾರೋ, ಅಲಾಸ್ಕಾ (Barrow, Alaska)

ಇದನ್ನು ಉತ್ಕಿಯಾಗ್ವಿಕ್ (Utqiagvik) ಎಂದು ಕರೆಯಲಾಗುತ್ತದೆ. ವರ್ಷದ ಮೂರು ತಿಂಗಳು ಈ ಸ್ಥಳದಲ್ಲಿ ಸೂರ್ಯ ಮುಳುಗುವುದಿಲ್ಲ ಎಂದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತಾ. ಈ ಸುಂದರ ನಗರದಲ್ಲಿ ಸೂರ್ಯ ಮೂರು ತಿಂಗಳ ಕಾಲ ಮುಳುಗೋದೆ ಇಲ್ಲ. 

ಕಿರುನಾ, ಸ್ವೀಡಿಷ್ ಲ್ಯಾಪ್ಲ್ಯಾಂಡ್ (Kiruna Swedish Lapland)

ಕಿರುನಾ ಸ್ವೀಡನ್ ನ ಉತ್ತರದ ತುತ್ತತುದಿಯಲ್ಲಿರುವ ನಗರವಾಗಿದ್ದು, 19,000 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಮೇ ನಿಂದ ಆಗಸ್ಟ್ ವರೆಗೆ ಸುಮಾರು 100 ದಿನಗಳ ಕಾಲ ಸೂರ್ಯ ಮುಳುಗುವುದಿಲ್ಲ. ಇದು ವರ್ಷದ 100 ದಿನಗಳ ಕಾಲ ಪೂರ್ತಿಯಾಗಿ ಸೂರ್ಯನ ಬೆಳಕನ್ನು ಕಾಣುವ ನಗರವಾಗಿದೆ.
 

ಸೇಂಟ್ ಪೀಟರ್ಸ್ಬರ್ಗ್, ರಷ್ಯಾ (Saint Petersburg, Russia)

ಒಂದು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸೇಂಟ್ ಪೀಟರ್ಸ್ಬರ್ಗ್ ವಿಶ್ವದ ಉತ್ತರದ ನಗರವಾಗಿದೆ. ಇದು ಎಷ್ಟು ಉನ್ನತ ಅಕ್ಷಾಂಶದಲ್ಲಿದೆ ಎಂದರೆ ಒಂದೂವರೆ ತಿಂಗಳವರೆಗೆ ಸೂರ್ಯನು ಮುಳುಗೋದೆ ಇಲ್ಲ. ಹಾಗಾಗಿ ಇಲ್ಲಿ ಒಂದೂವರೆ ತಿಂಗಳು ಬೆಳಕನ್ನು ಕಾಣಬಹುದು.

ಐಸ್ಲ್ಯಾಂಡ್ (Iceland)

ಇದು ಗ್ರೇಟ್ ಬ್ರಿಟನ್ ನಂತರ ಯುರೋಪಿನ ಅತಿದೊಡ್ಡ ದ್ವೀಪ ಮತ್ತು ಸೊಳ್ಳೆಗಳಿಲ್ಲದ ದೇಶವಾಗಿದೆ. ಐಸ್ ಲ್ಯಾಂಡ್ ನಲ್ಲಿ ಬೇಸಿಗೆಯಲ್ಲಿ ರಾತ್ರಿಗಳು ಸ್ವಚ್ಛ ಮತ್ತು ಬ್ರೈಟ್ ಆಗಿರುತ್ತವೆ. ಜೂನ್ ತಿಂಗಳಲ್ಲಿ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಆರ್ಕ್ಟಿಕ್ ವೃತ್ತದಲ್ಲಿರುವ ಗ್ರಿಮ್ಸ್ ದ್ವೀಪ ಮತ್ತು ಅಕ್ವೆರಿ ನಗರವು ಮಧ್ಯರಾತ್ರಿ ಸೂರ್ಯನನ್ನು ನೋಡಲು ಉತ್ತಮ ಸ್ಥಳಗಳಾಗಿವೆ.

ನುನಾವುಟ್, ಕೆನಡಾ (Nunavut, Canada)

ಆರ್ಕ್ಟಿಕ್ ವೃತ್ತದಿಂದ ಎರಡು ಡಿಗ್ರಿ ಎತ್ತರದಲ್ಲಿರುವ ನುನಾವುಟ್ ಕೆನಡಾದ ವಾಯುವ್ಯ ಪ್ರದೇಶ ಕೇವಲ 3,000 ಕ್ಕೂ ಹೆಚ್ಚು ಜನರನ್ನು ಹೊಂದಿರುವ ನಗರ. ಚಳಿಗಾಲದಲ್ಲಿ ಇಲ್ಲಿ ಸೂರ್ಯನ ಬೆಳಕು ಇರೋದೆ ಇಲ್ಲ, ಈ ಸಮಯದಲ್ಲಿ ಸುಮಾರು 30 ದಿನಗಳವರೆಗೆ ಸಂಪೂರ್ಣವಾಗಿ ಕತ್ತಲೆ ಆವರಿಸಿರುತ್ತೆ. ಬೇಸಿಗೆಯಲ್ಲಿ, ನೀವು ಎರಡು ತಿಂಗಳು ಪೂರ್ತಿಯಾಗಿ ಸೂರ್ಯನ ಬೆಳಕನ್ನು ಇಲ್ಲಿ ಕಾಣಬಹುದು.

Latest Videos

click me!