IRCTC Singapore Tour Package: ಕಡಿಮೆ ಬೆಲೆಯಲ್ಲಿ ಸಿಂಗಾಪುರ್ ಟೂರ್ ಮಾಡಿ

First Published | Aug 30, 2022, 4:26 PM IST

ಸಿಂಗಾಪುರ ಪ್ರವಾಸ ಅದೂ ಬಜೆಟ್ ನಲ್ಲಿ.. ಅದನ್ನು ಕೇಳಿ ನಿಮಗೆ ಶಾಕ್ ಆಗಿರಬೇಕು ಅಲ್ವಾ? ಹೌದು ನೀವು ಸಿಂಗಾಪುರ ಟ್ರಾವೆಲ್ ಮಾಡಲು ಬಯಸಿದ್ರೆ ನಿಮಗಾಗಿ ಬಂಪರ್ ಆಫರ್ ಇಲ್ಲಿದೆ. ಹೌದು ಐಆರ್ಸಿಟಿಸಿ ನಿಮಗೆ ಉತ್ತಮ ಅವಕಾಶವನ್ನು ತಂದಿದೆ. ಈ ಪ್ಯಾಕೇಜ್ ನ ಬೆಲೆ ಎಷ್ಟು? ಯಾವ ಸೌಲಭ್ಯಗಳು ಈ ಪ್ಯಾಕೇಜ್ ನಲ್ಲಿ ದೊರೆಯುತ್ತೆ ಮತ್ತು ಇತರ ಅಗತ್ಯ ವಿವರಗಳು ಲಭ್ಯವಿರುತ್ತವೆ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸಿದ್ರೆ ನೀವು ಇದನ್ನ ಓದ್ಲೇಬೇಕು. 

ಸಿಂಗಾಪುರ ಬಹಳ ಸುಂದರವಾದ ಮತ್ತು ಸಾಹಸಮಯ ದೇಶವಾಗಿದೆ. ಈ ಸುಂದರ ದೇಶಕ್ಕೆ ಪ್ರಯಾಣಿಸಲು ನೀವು ಬಯಸಿದ್ರೆ ಮತ್ತು ಸಿಂಗಾಪುರವನ್ನು ನಿಮ್ಮ ವಿಶ್ ಲಿಸ್ಟ್ ನಲ್ಲಿ ಸೇರಿಸಿದರೆ, ಐಆರ್ಸಿಟಿಸಿ ನಿ(IRCTC) ಮ್ಮ ಕನಸನ್ನು ಸಾಕಾರಗೊಳಿಸಬಹುದು. ಐಆರ್ಸಿಟಿಸಿ ಒಂದು ಪ್ಯಾಕೇಜ್ ಅನ್ನು ಪ್ರಾರಂಭಿಸಿದೆ, ಇದರಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಜೆಟ್ ನಲ್ಲಿ ನೀವು ಸಿಂಗಾಪುರಕ್ಕೆ ಭೇಟಿ ನೀಡಲು ಪ್ಲಾನ್ ಮಾಡಬಹುದು. ಈ ಯೋಜನೆಯಲ್ಲಿನ ವಿಶೇಷತೆ ಏನು ಮತ್ತು ಅದರ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ. 

ಐಆರ್ಸಿಟಿಸಿ ಸಿಂಗಾಪುರ-ಮಲೇಷ್ಯಾ ಟೂರ್ ಪ್ಯಾಕೇಜ್ ವಿವರಗಳು
ಪ್ಯಾಕೇಜ್ ಹೆಸರು: SINGAPORE MALAYSIA TOUR EX KOLKATA

ತಲುಪುವ ಸ್ಥಳ- ಕೌಲಾಲಂಪುರ, ಸಿಂಗಾಪುರ, ಮಲೇಷ್ಯಾ

ಪ್ಯಾಕೇಜ್ ಅವಧಿ- 6 ಹಗಲು ಮತ್ತು 5 ರಾತ್ರಿಗಳು

ಟ್ರಾವೆಲ್ ಮೋಡ್- ಫ್ಲೈಟ್

ನಿರ್ಗಮನ ದಿನಾಂಕ: ಸೆಪ್ಟೆಂಬರ್ 14, 2022

ನೀವು ಎಲ್ಲಿಂದ ಪ್ರಯಾಣಿಸಬಹುದು - ಕೊಲ್ಕತ್ತಾ
 

Tap to resize

ಈ ಸೌಲಭ್ಯಗಳು ಲಭ್ಯವಿರುತ್ತವೆ
- ಪ್ರಯಾಣಕ್ಕೆ ವಿಮಾನ ಸೌಲಭ್ಯ.
- ಉಳಿದುಕೊಳ್ಳಲು ಉತ್ತಮ ಹೋಟೆಲ್ ಸೌಲಭ್ಯಗಳು.
- 6 ಉಪಾಹಾರ, 6 ಮಧ್ಯಾಹ್ನದ ಊಟ ಮತ್ತು 5 ರಾತ್ರಿ ಊಟಗಳು ಲಭ್ಯವಿರುತ್ತವೆ.
- ಸಿಂಗಾಪುರ್ ಸಿಟಿ ಟೂರ್
- ನೈಟ್ ಸಫಾರಿ ವಿತ್ ಟ್ರಾಮ್ ರೈಡ್
- ಸುತ್ತಾಡಲು ಎಸಿ ವಾಹನ ಸೌಲಭ್ಯ ಲಭ್ಯವಿರುತ್ತದೆ.
- ಇಡೀ ಪ್ರವಾಸದಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಟೂರ್ ಗೈಡ್ (travel guide).
- ಪ್ರಯಾಣ ವಿಮೆ  
 

ಐಆರ್ಸಿಟಿಸಿ ಸಿಂಗಾಪುರ್-ಮಲೇಷ್ಯಾ ಟೂರ್ ಪ್ಯಾಕೇಜ್ (tour package) ಬೆಲೆ
ಈ ಪ್ಯಾಕೇಜ್ನಲ್ಲಿ ನೀವು ಒಬ್ಬರೇ ಹೋಗುತ್ತಿದ್ದರೆ, ಇದಕ್ಕಾಗಿ ನೀವು 1,12,035 ರೂ.ಗಳನ್ನು ಪಾವತಿಸಬೇಕಾಗುತ್ತದೆ.
- ಇಬ್ಬರು ವ್ಯಕ್ತಿಗಳಿಗೆ 94,101 ರೂ.ಗಳ (per head) ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಅದೇ ಸಮಯದಲ್ಲಿ, ಮೂರು ಜನರಿಗೆ 94,101 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
- ಮಕ್ಕಳಿಗೆ ಪ್ರತ್ಯೇಕ ಶುಲ್ಕವನ್ನು (separate fees) ಪಾವತಿಸಬೇಕಾಗುತ್ತದೆ. 83,013 ರೂ.ಗಳನ್ನು ಹಾಸಿಗೆಗಳೊಂದಿಗೆ ಮತ್ತು 71,999 ರೂ.ಗಳನ್ನು ಹಾಸಿಗೆಗಳಿಲ್ಲದೆ ಪಾವತಿಸಬೇಕಾಗುತ್ತದೆ.

ಈ ರೀತಿಯಾಗಿ ನೀವು ಬುಕ್ ಮಾಡಬಹುದು
ಐಆರ್ಸಿಟಿಸಿಯ ಅಧಿಕೃತ ವೆಬ್ಸೈಟ್ ಮೂಲಕ ನೀವು ಈ ಟೂರ್ ಪ್ಯಾಕೇಜ್ಗಾಗಿ ಬುಕ್ ಮಾಡಬಹುದು. ಇದಲ್ಲದೆ, ಐಆರ್ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕಿಂಗ್ ಮಾಡಬಹುದು. ಪ್ಯಾಕೇಜ್ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು ಐಆರ್ಸಿಟಿಸಿ ಅಧಿಕೃತ ವೆಬ್ಸೈಟ್ಗೆ (official website) ಭೇಟಿ ನೀಡಬಹುದು.

ಸಿಂಗಾಪುರ ಪ್ರಯಾಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸಿದ್ರೆ ನೀವು irctc ವೆಬ್ ಸೈಟ್ ಗೆ ಭೇಟಿ ನೀಡಬಹುದು. ಟ್ವಿಟರ್ ಮೂಲಕವೂ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ, ನೀವು ಅವುಗಳನ್ನು irctc ಇಲ್ಲಿ ಕ್ಲಿಕ್ ಮಾಡಿ ಚೆಕ್ ಮಾಡಿ.
 

Latest Videos

click me!