ಬೆಂಗಳೂರಿನಲ್ಲಿರೋ ಬೈಕರ್ಸ್’ಗೆ ಟ್ರಾವೆಲ್ ಮಾಡೋದಕ್ಕೆ ಬೆಸ್ಟ್ ತಾಣಗಳಿವು

Published : May 10, 2025, 06:37 PM ISTUpdated : May 12, 2025, 11:02 AM IST

ನೀವು ಬೆಂಗಳೂರಿನಲ್ಲಿರುವ ಸಾಹಸಿ ಬೈಕ್ ರೈಡರ್ ಗಳೇ? ಹಾಗಿದ್ರೆ ನಿಮ್ಮ ಮುಂದಿನ ಪ್ರಯಾಣಕ್ಕೆ ಈ ತಾಣಗಳನ್ನು ಆಯ್ಕೆ ಮಾಡಿ.   

PREV
111
ಬೆಂಗಳೂರಿನಲ್ಲಿರೋ ಬೈಕರ್ಸ್’ಗೆ ಟ್ರಾವೆಲ್ ಮಾಡೋದಕ್ಕೆ ಬೆಸ್ಟ್ ತಾಣಗಳಿವು

ನೀವು ಬೈಕ್ ರೈಡರ್ (bike riders) ಆಗಿದ್ರೆ… ಅದ್ರಲ್ಲೂ ಬೆಂಗಳೂರಿನಲ್ಲಿ ನೀವು ವಾಸವಾಗಿದ್ರೆ? ಮುಂದಿನ ಬೈಕ್ ರೈಡ್ ಗೆ ಯಾವ ತಾಣವನ್ನು ಆಯ್ಕೆ ಮಾಡೋದು ಎನ್ನುವ ಯೋಚನೆ ನಿಮಗಿದ್ದರೆ. ನೀವು ಖಂಡಿತವಾಗಿಯೂ ಈ ಸುಂದರ ತಾಣಗಳನ್ನು ಆಯ್ಕೆ ಮಾಡಬಹುದು. 

211

ನಂದಿ ಬೆಟ್ಟ (61 ಕಿ.ಮೀ) -  ಬೆಂಗಳೂರಿನಲ್ಲಿ ಇದ್ದ ಮೇಲೆ ನಂದಿ ಹಿಲ್ಸ್ ಗೆ (Nandi Hills) ಹೋಗದೇ ಇದ್ದರೆ ಹೇಗೆ ಅಲ್ವಾ? ಇದು ನೀವು ಭೇಟಿ ನೀಡಲೇಬೇಕಾದ ತುಂಬಾನೆ ಸುಂದರವಾದ ಸ್ಥಳವಾಗಿದೆ. 

311

ಮಂಚಿನಬೆಲೆ ಅಣೆಕಟ್ಟು (35 ಕಿ.ಮೀ) - ಪ್ರಶಾಂತವಾದ ಸುಂದರವಾದ ತಾಣಗಳು ಮತ್ತು ಪಿಕ್ನಿಕ್ ಮಾಡೋದಕ್ಕೆ ಇದು ಬೆಸ್ಟ್ ತಾಣ. ಬೆಂಗಳೂರಿಗೆ ಹತ್ತಿರ ಇರೋ ಈ ತಾಣಕ್ಕೆ ನೀವು ಬೈಕ್ ರೈಡ್ ಮಾಡ್ಕೊಂಡು ಹೋಗಬಹುದು.  
 

411

ಗುಡಿಬಂಡೆ ಕೋಟೆ (100 ಕಿ.ಮೀ) - ಅದ್ಭುತವಾದ ಪ್ರಕೃತಿ ಸೌಂದರ್ಯ ಇರುವಂತಹ ತಾಣ ಗುಡಿಬಂಡೆ ಕೋಟೆ. ಇದು ಐತಿಹಾಸಿಕ ಕ್ಷಣಗಳನ್ನು ಸಹ ನೆನಪಿಸುವಂತಹ ಸುಂದರವಾದ ತಾಣ ಇದು. 
 

511

ಮೇಕೆದಾಟು (Mekedatu) (100 ಕಿ.ಮೀ) - ಕಿರಿದಾದ ಕಮರಿಯ ಮೂಲಕ ಹರಿಯುವ ಕಾವೇರಿ ನದಿಯ ರೋಮಾಂಚಕ ದೃಶ್ಯವನ್ನು ಅನುಭವಿಸಬೇಕು ಅಂದ್ರೆ ಮೇಕೆದಾಟುವಿಗೆ ನೀವು ಬೈಕ್ ರೈಡ್ ಮಾಡಿ. 

611

ಬೆಟ್ಟಮುಗಿಲಲಂ (93 ಕಿ.ಮೀ) - ಕಿರಿದಾದ ಓಣಿಗಳು, ಸರೋವರಗಳು ಮತ್ತು ಹಚ್ಚ ಹಸಿರಿನ ಕೃಷಿಭೂಮಿಗಳ ಮೂಲಕ ಹಾದು ಹೋಗುವುದು ನಿಜವಾಗಿಯೂ ಸುಂದರವಾದ ಜರ್ನಿಯಾಗಿರುತ್ತೆ. 
 

711

ಸಂಗಮ (96 ಕಿ.ಮೀ) - ರಾಗಿಹಳ್ಳಿ ಅರಣ್ಯ ರಸ್ತೆಯ ಮೂಲಕ ಶಾಂತ ವಾತಾವರಣ ಮತ್ತು ಸುಂದರವಾದ ತಾಣ ಇದು. ಇಲ್ಲಿ ನೀವು  ಶಾಂತಯುತ ಪ್ರದೇಶದಲ್ಲಿ ಎಂಜಾಯ್ ಮಾಡಬಹುದು. 
 

811

ಭೀಮೇಶ್ವರಿ (Bheemeshwari)(100 ಕಿ.ಮೀ) - ಕಾವೇರಿ ನದಿಯುದ್ದಕ್ಕೂ ಇರುವ ರಮಣೀಯ ಮಾರ್ಗಗಳು, ಸುತ್ತಲೂ ಹಚ್ಚ ಹಸಿರಿನ ಕಾಡುಗಳು. ಇವುಗಳ ಮಧ್ಯೆ ಬೈಕ್ ರೈಡ್ ಮಾಡೋದೇ ಮಜಾ. 

911

ಕಬಿನಿ (215 ಕಿ.ಮೀ) - ಹಚ್ಚ ಹಸಿರಿನ ಪ್ರದೇಶ ಮತ್ತು ಸುಗಮ ರಸ್ತೆಗಳು, ಸುಂದರ ಪ್ರಕೃತಿ ಎಲ್ಲವೂ ಬೈಕ್ ಸವಾರರು ಮತ್ತು ವನ್ಯಜೀವಿ ಪ್ರಿಯರಿಗೆ ಸ್ವರ್ಗವೇ ಸರಿ. 
 

1011
Hill Stations

ಯೆಳಗಿರಿ ಬೆಟ್ಟಗಳು (157 ಕಿ.ಮೀ) - 14 ಹೇರ್ ಪಿನ್ ತಿರುವುಗಳು ನಿಮ್ಮನ್ನು ಈ ಪ್ರಶಾಂತ ಗಿರಿಧಾಮಕ್ಕೆ ಕರೆದೊಯ್ಯುತ್ತವೆ. ಈ ತಾಣಕ್ಕೆ ಬೈಕ್ ರೈಡ್ ಮಾಡ್ಕೊಂಡು ಹೋಗಲು ಮರಿಬೇಡಿ. 
 

1111

ಸಕಲೇಶಪುರ (225 ಕಿ.ಮೀ) - ಸುಂದರವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ತಾಣ ಇದು. ಇಲ್ಲಿ ನೀವು ಬೆಟ್ಟಗುಡ್ಡ, ಪ್ರಶಾಂತವಾದ ವಾತಾರವರಣದಲ್ಲಿ ಎಂಜಾಯ್ ಮಾಡಬಹುದು.  
 

Read more Photos on
click me!

Recommended Stories