IRCTC ಮಾತ್ರವಲ್ಲ, ಇಲ್ಲಿಯೂ ಸುಲಭವಾಗಿ ರೈಲು ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಬಹುದು!

First Published | Dec 29, 2024, 1:33 PM IST

IRCTC ವೆಬ್‌ಸೈಟ್ ಡೌನ್ ಆದಾಗ ರೈಲು ಟಿಕೆಟ್ ಬುಕ್ ಮಾಡಲು ಪರ್ಯಾಯ ಆಯ್ಕೆಗಳ ಬಗ್ಗೆ ತಿಳಿಯಿರಿ. ಈ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಎಷ್ಟು ಆರಾಮದಾಯಕವೋ ಅಷ್ಟೇ ಕಷ್ಟ ರಿಸರ್ವ್‌ ಟಿಕೆಟ್ ಬುಕ್ ಮಾಡೋದು. ಕನಿಷ್ಠ 30 ರಿಂದ 50 ದಿನ ಪ್ಲಾನ್ ಮಾಡಿದ್ರೆ ಮಾತ್ರ ಕೆಲವು ರೈಲುಗಳಲ್ಲಿ ಕನ್ಫರ್ಮ್ ಟಿಕೆಟ್ ಸಿಗುತ್ತದೆ. ಕಾಯ್ದಿರಿಸಿದ ಟಿಕೆಟ್‌ಗಾಗಿ ಜನರು ನಿಲ್ದಾಣದ ಕೌಂಟರ್ ಮತ್ತು ಅಧಿಕೃತ ವೆಬ್‌ಸೈಟ್ IRCTC ಮೂಲಕ ಬುಕ್ ಮಾಡುತ್ತಾರೆ.

ಆನ್‌ಲೈನ್‌ನಲ್ಲಿ IRCTC ಮಾತ್ರವಲ್ಲದೇ ಬೇರೆ ಪ್ಲಾಟ್‌ಫಾರಂಗಳಲ್ಲಿ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.  ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರಿಗೆ ಹಲವು ಆಯ್ಕೆಗಳಿವೆ. ರೈಲ್ವೆ ನಿಲ್ದಾಣದ ಕೌಂಟರ್‌ನಲ್ಲಿ ಟಿಕೆಟ್ ಬುಕ್ ಮಾಡಬೇಕು ಎಂಬ ಯಾವುದೇ ಕಡ್ಡಾಯ ನಿಯಮಗಳಿಲ್ಲ.

Tap to resize

IRCTCಯ  ರೈಲ್ ಕನೆಕ್ಟ್ ಆಪ್ ಅಥವಾ  IRCTCಯ ಅಧಿಕೃತ ವೆಬ್‌ಸೈಟ್‌  www.irctc.co.in ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಆದ್ರೆ ಕಳೆದ ಕೆಲವು ದಿನಗಳಿಂದ IRCTC ವೆಬ್‌ಸೈಟ್ ಡೌನ್ ಆಗಿದ್ದರಿಂದ ಟಿಕೆಟ್ ಮಾಡುವಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ತತ್ಕಾಲ್‌ ಸಮಯದಲ್ಲಿ ಪೇಜ್ ಓಪನ್ ಆಗಲ್ಲ ಎಂಬುವುದು ಸಾರ್ವಜನಿಕರ ಮಾತು. 

ಈ ಎರಡನ್ನೂ ಹೊರತುಪಡಿಸಿ ಬೇರೆ ಯಾವ ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಭಾರತೀಯ ರೈಲ್ವೆಯ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಅಂತ ನೋಡೋಣ ಬನ್ನಿ. ಇಲ್ಲಿ ನಿಮಗೆ ಕನ್ಫರ್ಮ್ ಟಿಕೆಟ್ ಸಿಗದಿದ್ದರೆ  ವಿಶೇಷ ಕೂಪನ್‌ಗಳು ಸಿಗುತ್ತವೆ.

ConfirmTkt
ತತ್ಕಾಲ್ ಟಿಕೆಟ್ ಮಾಡಲು ಪ್ರಯಾಣಿಕರು ಪರದಾಡುತ್ತಿರುತ್ತಾರೆ. IRCTC ಆಪ್/ವೆಬ್‌ಸೈಟ್ ಓಪನ್ ಆಗದಿದ್ದರೆ ConfirmTkt ಆಪ್ ಬಳಸಬಹುದು. ಇದರ ಆಪ್ ಮೂಲಕ ಸರಳವಾಗಿ ಕನ್ಫರ್ಮ್ ಟಿಕೆಟ್ ಕಾಯ್ದಿರಿಸಬಹುದು. ಇದೇ ಆಪ್‌ನಲ್ಲಿ PNR ಸ್ಟೇಟಸ್ ಸಹ ಚೆಕ್ ಮಾಡಬಹುದು. 

Paytm
ಸಾಮಾನ್ಯವಾಗಿ ಎಲ್ಲರ ಮೊಬೈಲ್‌ನಲ್ಲಿ Paytm ಆಪ್ ಇರುತ್ತದೆ. ಇಲ್ಲಿಯೂ ನೀವು  ಭಾರತೀಯ ರೈಲಿನ ಟಿಕೆಟ್, ವೇಟಿಂಗ್ ಲಿಸ್ಟ್ ಪೋರ್ಟಾಬಿಲಿಟಿ ಪರಿಶೀಲನೆ ಮಾಡಬಹುದು. ನಿಮಗೆ ಇಲ್ಲಿಯೇ ಪೇಮೆಂಟ್ ಆಯ್ಕೆಯೂ ಲಭ್ಯವಾಗುತ್ತದೆ. ಯಾವುದೇ  ಅಡೆತಡೆಯಿಲ್ಲದೇ ಪಾವತಿ ಮಾಡಬಹುದು. 

Ixigo
Ixigo ಆಪ್ ಮೂಲಕ ತುಂಬಾ ಸರಳವಾಗಿ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇಲ್ಲಿ ನೀವು ಎಲ್ಲಾ ರೈಲುಗಳ ಟಿಕೆಟ್‌ ಕಾಯ್ದಿರಿಸಬಹುದು. ಇಷ್ಟು ಮಾತ್ರವಲ್ಲಈ ಆಪ್ ನಿಮಗೆ ಟಿಕೆಟ್ ಕನ್ಫರ್ಮ್ ಆಗೋ ಖಚಿತತೆಯನ್ನು ತೋರಿಸುತ್ತದೆ. 

MakeMyTrip
ಇದು ಭಾರತದ ಫೇಮಸ್ ಟ್ರಾವೆಲ್ ಬುಕ್ಕಿಂಗ್ ಆಪ್ ಆಗಿದ್ದು, ತುಂಬಾ ಸರಳ ವಿಧಾನದಲ್ಲಿ ರೈಲ ಟಿಕೆಟ್ ಕಾಯ್ದಿರಿಸಬಹುದು. ಈ ಆಪ್‌ ತನ್ನ ಬಳಕೆದಾರರಿಗೆ Trip Guarantee ಆಯ್ಕೆಯನ್ನು ನೀಡುತ್ತಿದೆ. ಈ ಆಯ್ಕೆಯಲ್ಲಿ ನಿಮಗೆ ಕನ್ಫರ್ಮ್ ಟಿಕೆಟ್ ಸಿಗದಿದ್ದರೆ ಕಂಪನಿ ನಿಮಗೆ ವಿಶೇಷ ಕೂಪನ್‌ಗಳನ್ನು ನೀಡುತ್ತದೆ.
 

Latest Videos

click me!