ಬೇಸಿಗೆಯಲ್ಲಿ ತಿರುಮಲಕ್ಕೆ ಹೋಗ್ತಿದ್ದೀರಾ? ಶ್ರೀವಾರಿ ದರ್ಶನಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

Published : May 02, 2026, 10:31 PM IST

ಕಲಿಯುಗದ ಪ್ರತ್ಯಕ್ಷ ದೈವ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋಗಲು ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ, ಈ ಬೇಸಿಗೆಯ ಜನದಟ್ಟಣೆಯಲ್ಲೂ ಶ್ರೀವಾರಿ ದರ್ಶನವನ್ನು ಸುಲಭವಾಗಿ ಪಡೆಯಲು ನಿಮಗಾಗಿ ಕೆಲವು ಟಿಪ್ಸ್ ಇಲ್ಲಿವೆ.

PREV
15
ತಿರುಮಲ ಮಾಹಿತಿ

ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಹೀಗಾಗಿ, ಅನೇಕರು ಕುಟುಂಬದೊಂದಿಗೆ ತಿರುಮಲ ಯಾತ್ರೆಗೆ ಪ್ಲಾನ್ ಮಾಡುತ್ತಾರೆ. ರಜೆ ಇರುವುದರಿಂದ ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿರುತ್ತದೆ. ಹಾಗಾಗಿ, ಕುಟುಂಬದೊಂದಿಗೆ ಹೋಗುವವರು ಯಾವುದೇ ತೊಂದರೆಯಾಗದಂತೆ ಪೂರ್ಣ ಮಾಹಿತಿ ತಿಳಿದುಕೊಂಡರೆ ಒಳ್ಳೆಯದು. 

ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನದ ಟಿಕೆಟ್ ಪಡೆಯುವುದು ಹೇಗೆ? ಆನ್‌ಲೈನ್‌ನಲ್ಲಿ ಅಲ್ಲದೆ ನೇರವಾಗಿ ಎಲ್ಲಿ ಟಿಕೆಟ್ ತೆಗೆದುಕೊಳ್ಳಬಹುದು? ಟಿಟಿಡಿ ನೀಡುವ ಸೌಲಭ್ಯಗಳೇನು? ಈ ಎಲ್ಲಾ ವಿವರಗಳನ್ನು ಇಲ್ಲಿ ತಿಳಿಯೋಣ.

25
ದರ್ಶನ ಟಿಕೆಟ್‌ ಬುಕ್ಕಿಂಗ್

ನೀವು ತಿರುಮಲ ಶ್ರೀವಾರಿ ದರ್ಶನದ ಟಿಕೆಟ್‌ಗಳನ್ನು ಮುಂಚಿತವಾಗಿ (Advance Booking) ಬುಕ್ ಮಾಡಬಹುದು. ಕೊನೆ ಕ್ಷಣದಲ್ಲಿ ದರ್ಶನ ಟಿಕೆಟ್‌ಗಾಗಿ ಪರದಾಡುವುದನ್ನು ತಪ್ಪಿಸಲು ಮುಂಚಿತವಾಗಿ ಬುಕ್ ಮಾಡುವುದು ಉತ್ತಮ. ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು.

 ವಿಶೇಷ ಪ್ರವೇಶ ದರ್ಶನ (Special Entry Darshan - ರೂ. 300)

ಇವುಗಳನ್ನು ಸಾಮಾನ್ಯವಾಗಿ 2 ರಿಂದ 3 ತಿಂಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತದೆ. ಯಾವುದೇ ತೊಂದರೆಯಿಲ್ಲದೆ ಬೇಗನೆ ಶ್ರೀವಾರಿ ದರ್ಶನ ಮಾಡಬೇಕೆನ್ನುವವರಿಗೆ ಇದು ಉತ್ತಮ ಆಯ್ಕೆ. 

ಆರ್ಜಿತ ಸೇವೆಗಳು

ಶ್ರೀವಾರಿಯ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಬಯಸುವವರು ವಿಶೇಷ ಸೇವಾ ಟಿಕೆಟ್‌ಗಳನ್ನು ಪಡೆಯಬಹುದು. ಸುಪ್ರಭಾತ, ತೋಮಾಲ, ಅರ್ಚನಾ ಮುಂತಾದ ಸೇವೆಗಳನ್ನು ಲಕ್ಕಿ ಡಿಪ್ ಮೂಲಕ ಹಂಚಲಾಗುತ್ತದೆ. ಇದಕ್ಕೂ ಕೆಲವು ತಿಂಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

35
ಉಚಿತ ದರ್ಶನ ಟೋಕನ್

ಆನ್‌ಲೈನ್‌ನಲ್ಲಿ ಶ್ರೀವಾರಿ ದರ್ಶನ ಟಿಕೆಟ್ ಇಲ್ಲದೆ ನೇರವಾಗಿ ತಿರುಮಲ ಯಾತ್ರೆ ಕೈಗೊಳ್ಳುವವರು ತಿರುಪತಿಯಲ್ಲೇ ಅಲರ್ಟ್ ಆಗಬೇಕು. ಯಾಕಂದ್ರೆ, ಭಕ್ತರಿಗೆ ಸರ್ವದರ್ಶನ (SSD Tokens) ಟಿಕೆಟ್‌ಗಳು ಅಲ್ಲಿಯೇ ಸಿಗುತ್ತವೆ. ತಿರುಪತಿ ಆರ್‌ಟಿಸಿ ಬಸ್ ನಿಲ್ದಾಣದ ಸಮೀಪವಿರುವ ಶ್ರೀನಿವಾಸಂ ಅಥವಾ ತಿರುಪತಿ ರೈಲ್ವೆ ನಿಲ್ದಾಣದ ಬಳಿಯಿರುವ ವಿಷ್ಣು ನಿವಾಸಂನಲ್ಲಿ ಉಚಿತ ದರ್ಶನ ಟೋಕನ್‌ಗಳು ಲಭ್ಯವಿವೆ. ಸಾಮಾನ್ಯವಾಗಿ ಪ್ರತಿದಿನ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಟೋಕನ್‌ಗಳನ್ನು ನೀಡಲಾಗುತ್ತಿತ್ತು. ಆದರೆ, ಸದ್ಯ ಬೇಸಿಗೆಯ ಬಿಸಿಲಿನ ಕಾರಣ, ಮುಂಜಾನೆ 4 ಗಂಟೆಗೆ ಈ ಟೋಕನ್‌ಗಳ ವಿತರಣೆ ನಡೆಯುತ್ತಿದೆ. 

ತಿರುಪತಿಯಲ್ಲಿ ಶ್ರೀವಾರಿಯ ಉಚಿತ ದರ್ಶನ ಟೋಕನ್ ಸಿಗದವರು ತಿರುಮಲದಲ್ಲಿ ಪಡೆಯಬಹುದು. ಅಲಿಪಿರಿ ಬಸ್ ನಿಲ್ದಾಣದ ಬಳಿಯಿರುವ ಭೂದೇವಿ ಕಾಂಪ್ಲೆಕ್ಸ್‌ನಲ್ಲೂ ದರ್ಶನ ಟಿಕೆಟ್‌ಗಳ ವಿತರಣೆ ನಡೆಯುತ್ತದೆ. ಈ ಟೋಕನ್‌ಗಳನ್ನು ಪಡೆದು ಏಳು ಬೆಟ್ಟಗಳನ್ನು ಹತ್ತಿ ಸ್ವಾಮಿಯ ದರ್ಶನ ಮಾಡಬಹುದು. ಆದರೆ, ಈ ಉಚಿತ ದರ್ಶನ ಟೋಕನ್‌ಗಳು ಮೊದಲು ಬಂದವರಿಗೆ ಮಾತ್ರ ಸಿಗುವುದರಿಂದ, ಭಕ್ತರು ಆದಷ್ಟು ಬೇಗ ವಿತರಣಾ ಕೇಂದ್ರಗಳಿಗೆ ತಲುಪುವುದು ಉತ್ತಮ.

45
ಐಪಿ ಬ್ರೇಕ್ ದರ್ಶನ ಟಿಕೆಟ್
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಶ್ರೀವಾರಿ ದರ್ಶನ ಟಿಕೆಟ್ ಸಿಗದಿದ್ದರೂ ಸ್ವಾಮಿಯ ದರ್ಶನ ಮಾಡಬಹುದು. ಆದರೆ ಇದು ಸ್ವಲ್ಪ ದುಬಾರಿ ವ್ಯವಹಾರ. ಶ್ರೀವಾಣಿ (ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣ) ಟ್ರಸ್ಟ್‌ಗೆ 10,000 ರೂ. ವಿರಾಳ ನೀಡಿ ವಿಐಪಿ ಬ್ರೇಕ್ ದರ್ಶನ ಟಿಕೆಟ್ ಪಡೆಯಬಹುದು. ದಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಮುಂಜಾನೆ ಸುಪ್ರಭಾತ ಸೇವೆಯ ನಂತರ ಶ್ರೀವಾರಿ ದರ್ಶನ ಭಾಗ್ಯ ಕಲ್ಪಿಸಲಾಗುತ್ತದೆ.
55
ವಸತಿಗಾಗಿ ಟಿಟಿಡಿ ವ್ಯವಸ್ಥೆ

ತಿರುಮಲದಲ್ಲಿ ಭಕ್ತರ ವಸತಿಗಾಗಿ ಟಿಟಿಡಿ ವ್ಯವಸ್ಥೆ ಮಾಡಿದೆ. ಅನೇಕ ಭವನಗಳಲ್ಲಿ ವಸತಿ ಕಲ್ಪಿಸಲಾಗಿದೆ. ದರ್ಶನದಂತೆಯೇ, ಕೊಠಡಿಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು ಅಥವಾ ನೇರವಾಗಿ ಹೋಗಿ ಟೋಕನ್ ಪಡೆದು ರೂಂ ತೆಗೆದುಕೊಳ್ಳಬಹುದು. 

ಬುಕಿಂಗ್ ಇಲ್ಲದೆ ನೇರವಾಗಿ ತಿರುಮಲದಲ್ಲಿ ವಸತಿ ಬೇಕಾದರೆ, ಬೆಳಗ್ಗೆ 6 ರಿಂದ 10 ಗಂಟೆಯೊಳಗೆ ಸಿಆರ್‌ಒ (ಸೆಂಟ್ರಲ್ ರಿಸೆಪ್ಷನ್ ಆಫೀಸ್) ಬಳಿ ನೋಂದಾಯಿಸಿಕೊಳ್ಳಬೇಕು. ಕೊಠಡಿಗಳು ಲಭ್ಯವಿದ್ದರೆ 'ಮೊದಲು ಬಂದವರಿಗೆ ಮೊದಲ ಆದ್ಯತೆ' (first come first serve) ಆಧಾರದ ಮೇಲೆ ಹಂಚಲಾಗುತ್ತದೆ. ತಿರುಮಲದಲ್ಲಿ ಉಚಿತ ವಸತಿಗಾಗಿ ಆಧಾರ್ ಕಾರ್ಡ್ ಕಡ್ಡಾಯ. 

ಒಂದು ವೇಳೆ ಉಚಿತ ಕೊಠಡಿ ಲಭಿಸದಿದ್ದರೆ, ವಸ್ತುಗಳನ್ನು ಇಡಲು ಲಾಕರ್ ಸೌಲಭ್ಯವಿದೆ. ಯಾತ್ರಿ ಸದನ್, ಶ್ರೀ ಪದ್ಮನಾಭ ನಿಲಯಂ, ವೆಂಕಟಾದ್ರಿ ನಿಲಯಂ, ವಿಷ್ಣು ನಿವಾಸಂ, ಶ್ರೀನಿವಾಸಂ ಹೀಗೆ ಹಲವೆಡೆ ಭಕ್ತರಿಗೆ ಲಾಕರ್ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ತಮ್ಮ ವಸ್ತುಗಳನ್ನು ಇಟ್ಟು ಭಕ್ತರು ಶ್ರೀವಾರಿ ದರ್ಶನಕ್ಕೆ ಹೋಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories