ನೀವು ದೆವ್ವಗಳ ಅನೇಕ ಕಥೆಗಳನ್ನು ಕೇಳಿರಬಹುದು. ಕೆಲವರು ಅವುಗಳನ್ನು ನಂಬುತ್ತಾರೆ, ಆದರೆ ಅನೇಕ ಜನರು ನಂಬುವುದಿಲ್ಲ. ಆದರೆ ದೆವ್ವಗಳಿಗೆ 15 ದಿನಗಳವರೆಗೆ ಆಹಾರ ನೀಡುವ ದೇಶವಿದೆ. ಜನರು ಇದನ್ನು ಮಾಡದಿದ್ದರೆ, ದುಷ್ಟ ಶಕ್ತಿಗಳು (evil power) ಮತ್ತು ದೆವ್ವಗಳು ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತವೆ ಎಂದು ನಂಬಲಾಗಿದೆ. ಈ ಕಥೆಯ ಹಿಂದೆ ಎಷ್ಟು ಸತ್ಯವಿದೆ ಎಂದು ಈಗ ನಾವು ಹೇಳಲು ಸಾಧ್ಯವಿಲ್ಲ, ಆದರೆ ಜನರು ಇದನ್ನು ಮಾಡುವುದರ ಹಿಂದಿನ ನಂಬಿಕೆ ಏನು? ಈ ಬಗ್ಗೆ ಇಲ್ಲಿ ಮಾಹಿತಿ ಇದೆ.
ಈ ನಂಬಿಕೆ ಎಲ್ಲಿದೆ?
ಜನರು ದೆವ್ವಗಳಿಗೆ ಆಹಾರ ನೀಡುವ ಸಂಪ್ರದಾಯ ಕಾಂಬೋಡಿಯಾದಲ್ಲಿದೆ. ವರದಿಯ ಪ್ರಕಾರ, ಈ ಮಾನ್ಯತೆ ಕಾಂಬೋಡಿಯಾದಿಂದ (ಏಷ್ಯನ್ ಕಂಟ್ರಿ) ಬಂದಿದೆ. ಶರತ್ಕಾಲದಲ್ಲಿ ಪ್ಯೂಮ್ ಬೆನ್ ಫೆಸ್ಟಿವಲ್ (pchum ben festival) ಎಂದು ಕರೆಯಲ್ಪಡುವ ಒಂದು ಹಬ್ಬ ಇಲ್ಲಿ ನಡೆಯುತ್ತೆ. ಈ ಉತ್ಸವವು ಪ್ರತಿ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಖ್ಮೇರ್ ಚಾಂದ್ರಮಾನ ಕ್ಯಾಲೆಂಡರ್ ನ 10 ನೇ ತಿಂಗಳಲ್ಲಿ 15 ದಿನಗಳ ಕಾಲ ನಡೆಯುತ್ತದೆ.
ಈ ಹಬ್ಬದ ಸಮಯದಲ್ಲಿ, ನರಕದ ಬಾಗಿಲುಗಳು 15 ದಿನಗಳವರೆಗೆ ತೆರೆಯುತ್ತವೆ ಮತ್ತು ಹಸಿದ ದುಷ್ಟ ಶಕ್ತಿಗಳು ಮತ್ತು ದೆವ್ವಗಳು ಅಲ್ಲಿಂದ ಹೊರಬರುತ್ತವೆ ಎಂದು ನಂಬಲಾಗಿದೆ. ಈ ಹಸಿದ ದೆವ್ವ, ದುಷ್ಟ ಶಕ್ತಿಗಳಿಗೆ ಆ ಊರಿನ ಜನರು ಆಹಾರ ನೀಡುತ್ತಾರೆ ಮತ್ತು ಹಸಿದ ದೆವ್ವಗಳನ್ನು ಸಮಾಧಾನಪಡಿಸಲಾಗುತ್ತೆ.
ಈ ಹಬ್ಬದಲ್ಲಿ ನಾಲ್ಕು ರೀತಿಯ ಆತ್ಮಗಳು ಅಥವಾ ದೆವ್ವಗಳಿವೆ. ತಾತ್ಕಾಲಿಕವಾಗಿ ಸ್ವತಂತ್ರವಾಗಿರುವ ದೆವ್ವಗಳು ರಕ್ತ ಮತ್ತು ಕೀವು ಮಾತ್ರ ತಿನ್ನುತ್ತವೆ. ದೆವ್ವಗಳಿಗೆ ಆಹಾರ (food for devils) ನೀಡಿದರೆ, ಅವರು ಆಶೀರ್ವದಿಸುತ್ತಾರೆ ಮತ್ತು ನಂತರ ನರಕಕ್ಕೆ ಮರಳುತ್ತಾರೆ ಎಂದು ನಂಬಲಾಗಿದೆ.
ಹಸಿದ ಆತ್ಮಗಳು ಮತ್ತು ದೆವ್ವಗಳಿಗೆ ಆಹಾರ ನೀಡಲಾಗುತ್ತೆ!
ಈ ಸಮಯದಲ್ಲಿ ಹಸಿದ ಆತ್ಮಗಳು ಹೊರಬರುತ್ತವೆ ಮತ್ತು ಅವುಗಳಿಗೆ ಆಹಾರವನ್ನು ನೀಡಬೇಕಾಗುತ್ತದೆ ಎಂದು ನಂಬಲಾಗಿದೆ. ಈ ಹಬ್ಬವನ್ನು ಖ್ಮೇರ್ ಉತ್ಸವ ಎಂದೂ ಕರೆಯಲಾಗುತ್ತೆ. ಈ ಸಮಯದಲ್ಲಿ, ದೆವ್ವಗಳು ದೇವಾಲಯಗಳು, ಸ್ಮಶಾನಗಳು ಮತ್ತು ತಮ್ಮ ಸಂಬಂಧಿಕರ ಮನೆಗಳಿಗೆ ಉತ್ತಮ ಆಹಾರ ಹುಡುಕುತ್ತಾ ಸುತ್ತಾಡುತ್ತವೆ. ಅವರಿಗೆ ಉತ್ತಮ ಆಹಾರ ಸಿಗದಿದ್ದರೆ, ಆ ಮನೆಯ ಜನರಿಗೆ ಕಿರುಕುಳ ನೀಡುತ್ತದೆ.
ಕುಟುಂಬ ಸದಸ್ಯರು ಬೆಳಿಗ್ಗೆಯಿಂದಲೇ ತಯಾರಿ ನಡೆಸುತ್ತಾರೆ
ದೆವ್ವಗಳ ಹಸಿವನ್ನು ನೀಗಿಸಲು ದೆವ್ವಗಳಿಗೆ ವಿವಿಧ ಭಕ್ಷ್ಯಗಳನ್ನು ತಿನ್ನಿಸಲಾಗುತ್ತದೆ. ಪ್ರಾಚೀನ ಸಂಪ್ರದಾಯದ ಪ್ರಕಾರ, ಆಗ್ನೇಯ ಏಷ್ಯಾದ ದೇಶ ಕಾಂಬೋಡಿಯಾದಲ್ಲಿ ಈ ನಂಬಿಕೆಯನ್ನು ಬಹಳ ಉನ್ನತವೆಂದು ಪರಿಗಣಿಸಲಾಗಿದೆ. ಇದರಲ್ಲಿ, ಕುಟುಂಬವು ತನ್ನ ಕೊನೆಯ ಏಳು ಪೂರ್ವಜರಿಗೆ (7 ancestor) ನೀಡುತ್ತದೆ.
ಈ ಹಬ್ಬದ ಪ್ರಾರಂಭದ ಹಿಂದಿನ ದಿನ, ಕುಟುಂಬವು ಬೆಳಿಗ್ಗೆ ಬೇಗನೆ ಎದ್ದು ಸೂರ್ಯ ಉದಯಿಸುವ ಮೊದಲು ಆಹಾರವನ್ನು ತಯಾರಿಸುತ್ತದೆ. ದೆವ್ವಗಳು ಬೆಳಕನ್ನು ಇಷ್ಟಪಡುವುದಿಲ್ಲ ಎಂದು ಹೇಳಲಾಗುತ್ತದೆ. ಸ್ವಲ್ಪ ಸೂರ್ಯನ ಬೆಳಕು ಇದ್ದರೆ, ಆಗ ಆಹಾರವು ಸ್ವೀಕಾರಾರ್ಹವಲ್ಲ ಎಂದು ನಂಬಲಾಗಿದೆ. ಆದುದರಿಂದ ಜನ ಕತ್ತಲಿರುವಾಗಲೇ ಎದ್ದು ಆಹಾರ ತಯಾರಿಸಿ, ದೆವ್ವಗಳಿಗೆ ನೀಡುತ್ತಾರೆ.
ಕಾಂಬೋಡಿಯದ ರಾಜಧಾನಿ ಫ್ನೋಮ್ ಪೆನ್ಹ್ ನ ಸನ್ಯಾಸಿ ಓಂ ಸ್ಯಾಮ್ ಓಲ್ ಪ್ರಕಾರ, "ಸತ್ತವರಲ್ಲಿ ಕೆಲವರು ತಮ್ಮ ಪಾಪಗಳಿಗಾಗಿ ಶಿಕ್ಷಿಸಲ್ಪಡುತ್ತಾರೆ ಮತ್ತು ನರಕಕ್ಕೆ ಹೋಗುತ್ತಾರೆ ಎಂದು ನಂಬಲಾಗಿದೆ. ಅವರು ಅಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ ಮತ್ತು ಸಾಕಷ್ಟು ಚಿತ್ರಹಿಂಸೆಗೆ ಒಳಗಾಗುತ್ತಾರೆ. ಸಾಮಾನ್ಯ ಜನರು ನರಕದ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ.
ನರಕದ ಆತ್ಮಗಳು ಸೂರ್ಯನನ್ನು ನೋಡಲು ಸಾಧ್ಯವಿಲ್ಲ. ಅವರಿಗೆ ಧರಿಸಲು ಬಟ್ಟೆಗಳಿಲ್ಲ ಮತ್ತು ತಿನ್ನಲು ಆಹಾರ ಸಹ ಇರೋದಿಲ್ಲ. ಆದುದರಿಂದ ಆ ಆತ್ಮಗಳು ತಮ್ಮ ಜೀವಂತ ಸಂಬಂಧಿಕರಿಂದ ಆಹಾರ ತೆಗೆದುಕೊಳ್ಳುವ ಸಮಯವೇ ಫಚಮ್ ಬೆನ್ ಮತ್ತು ಸಂಬಂಧಿಕರು ಅವರಿಗೆ ಆಹಾರ ಮತ್ತು ಪ್ರಸಾದವನ್ನು ನೀಡುವುದರಿಂದ ದೆವ್ವಗಳು ಖುಷಿಯಾಗುತ್ತವೆ ಎಂದು ನಂಬಲಾಗಿದೆ.
ಓಂ ಸ್ಯಾಮ್ ಓಲ್ ಹೇಳುವಂತೆ, "ಒಬ್ಬರ ಮೃತ ಸಂಬಂಧಿ ಸ್ವರ್ಗದಲ್ಲಿದ್ದಾನೆಯೇ ಅಥವಾ ನರಕದಲ್ಲಿದ್ದಾನೆಯೇ ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲ. ಆದ್ದರಿಂದ ಕಾಂಬೋಡಿಯನ್ನರು ತಮ್ಮ ಪೂರ್ವಜರಿಗೆ ತಾವು ಅನುಭವಿಸುತ್ತಿರುವ ಯಾತನೆಯನ್ನು ಕಡಿಮೆ ಮಾಡಲು ಆಹಾರ ನೀಡುತ್ತಾರೆ. ಈ ಹಬ್ಬವನ್ನು ಕ್ರಿ.ಶ. 9 ನೇ ಶತಮಾನಕ್ಕೆ ಸೇರಿದ ಆಂಗ್ಕೋರಿಯನ್ ಅವಧಿಯಿಂದ ಆಚರಿಸಲಾಗುತ್ತಿದೆ.