Mandir Shri Gopinathji: ಕೈಯಲ್ಲಿ ವಾಚ್ ಧರಿಸೋ ಈ ಕೃಷ್ಣನ ವಿಗ್ರಹದಲ್ಲಿ ಜೀವ ಇದೆಯಂತೆ!

First Published | Aug 22, 2023, 1:09 PM IST

ಭಾರತದಲ್ಲಿ ರಹಸ್ಯಗಳೇ ತುಂಬಿರುವ ಅನೇಕ ದೇವಾಲಯಗಳಿವೆ. ಅವುಗಳ ರಹಸ್ಯ ಇನ್ನೂ ಸಹ ಜನರಿಗೆ ಒಗಟಾಗಿಯೇ ಉಳಿದಿದೆ. ಅಂತಹ ಒಂದು ರಹಸ್ಯವು ಜೈಪುರದ ಕೃಷ್ಣ ದೇವಾಲಯಕ್ಕೆ ಸಂಬಂಧಿಸಿದೆ.   
 

ಭಾರತದಲ್ಲಿ ಅನೇಕ ದೇವಾಲಯಗಳಿವೆ. ಭಾರತವನ್ನು ದೇಗುಲಗಳ ತವರು ಎಂದರೆ ತಪ್ಪಾಗಲ್ಲ. ದೇಶದಲ್ಲಿ ಹಲವು ವಿಶಿಷ್ಟ ದೇಗುಲಗಳು ಇವೆ. ಪ್ರತಿಯೊಂದು ದೇವಾಲಯವು ತನ್ನ ಒಂದೊಂದು ರಹಸ್ಯವನ್ನು ಅಡಗಿಸಿದೆ..ಅಂತಹ ಒಂದು ದೇವಾಲಯವು ಶ್ರೀ ಕೃಷ್ಣನದ್ದಾಗಿದೆ, ಅದರ ರಹಸ್ಯವು ಇಂದಿಗೂ ಬಗೆಹರಿದಿಲ್ಲ. ಈ ದೇವಾಲಯದಲ್ಲಿ ಶ್ರೀ ಕೃಷ್ಣನು ವಾಸಿಸುತ್ತಾನೆ ಎಂದು ನಂಬಲಾಗಿದೆ.
 

ಜೈಪುರದ ಕೃಷ್ಣ ದೇವಾಲಯದ (Jaipur ShriKrishna Mandir) ರಹಸ್ಯದ ಬಗ್ಗೆ ಇಲ್ಲಿ ಹೇಳಲಾಗಿದೆ. ಈ ದೇವಾಲಯದಲ್ಲಿರುವ ಶ್ರೀ ಕೃಷ್ಣನ ವಿಗ್ರಹಕ್ಕೆ ಜೀವ ಇದೆ ಎಂದು ಹೇಳಲಾಗುತ್ತೆ. ನೀವು ಇದನ್ನ ಕೇಳಿ ಶಾಖ್ ಆದ್ರ? ಹೌದು, ಜೈಪುರದ ಈ ವಿಗ್ರಹವು ಉಸಿರಾಡುತ್ತದೆ ಎನ್ನಲಾಗುತ್ತೆ. ಅಂದರೆ ಶ್ರೀ ಕೃಷ್ಣನ ಈ ಪ್ರತಿಮೆಗೆ ಜೀವ ಇದೆ ಎಂದು ಹೇಳಲಾಗುತ್ತದೆ. 
 

Tap to resize

ನಿಮಗೂ ಈ ದೇಗುಲದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಗಿದೆ ಅಲ್ವಾ? ಶ್ರೀ ಕೃಷ್ಣನ ಜೀವಂತ ವಿಗ್ರಹವನ್ನು ಸ್ಥಾಪಿಸಿದ ಈ ದೇವಾಲಯ ಯಾವುದು ಮತ್ತು ಈ ರಹಸ್ಯಕ್ಕೆ ಸಂಬಂಧಿಸಿದ ದೈವಿಕ ಕಥೆ (interesting story of temple) ಏನು ಎಂದು ತಿಳಿಯೋಣ. 
 

ಜೈಪುರದ ಗೋಪಿನಾಥ ದೇವಾಲಯದಲ್ಲಿ ಶ್ರೀ ಕೃಷ್ಣನ ಜೀವಂತ ಪ್ರತಿಮೆ ಇದೆ
ತನ್ನೊಳಗೆ ರಹಸ್ಯವನ್ನು ಅಡಗಿಸಿಟ್ಟ ಈ ದೇಗುಲ ಜೈಪುರದಲ್ಲಿರುವ ಗೋಪಿನಾಥ್ ದೇವಾಲಯ. ಈ ದೇವಾಲಯದಲ್ಲಿ, ಶ್ರೀ ಕೃಷ್ಣನ ಜೀವಂತ ಪ್ರತಿಮೆಯನ್ನು ಸ್ಥಾಪಿಸಲಾಗಿದೆ, ಇದಕ್ಕೆ ಕೈ ಗಡಿಯಾರ ಸಾಕ್ಷಿಯಾಗಿದೆ.  ಅದು ಹೇಗೆ ಅಂತೀರಾ? 

ಈ ದೇವಾಲಯದಲ್ಲಿ, ಶ್ರೀ ಕೃಷ್ಣನು ಕೈಗೆ ಕೈ ಗಡಿಯಾರವನ್ನು (watch) ಧರಿಸುತ್ತಾನೆ. ಗಡಿಯಾರವನ್ನು ಶ್ರೀ ಕೃಷ್ಣನ ವಿರುದ್ಧ ಕೈಯಲ್ಲಿ ಕಟ್ಟಲಾಗಿದೆ. ಮಣಿಕಟ್ಟಿನ ಮೇಲಿನ ಗಡಿಯಾರವು  ಶ್ರೀ ಕೃಷ್ಣನ ವಿಗ್ರಹದಲ್ಲಿ ಜೀವವಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಆದರೆ ಅದು ಹೇಗೆ ಸಾಧ್ಯ ನೋಡೋಣ. 
 

ಗೋಪಿನಾಥ್ ಜಿ ಶ್ರೀ ಕೃಷ್ಣನ ವಿಗ್ರಹವು ಸ್ವತಃ ಪ್ರಕಟವಾದ ಪ್ರತಿಮೆಯಾಗಿದೆ ಎಂದು ನಂಬಲಾಗಿದೆ. ಈ ಪ್ರತಿಮೆ ಉದ್ಭವ ಮೂರ್ತಿಯಾಗಿದ್ದು, ಇದನ್ನು ಯಾವುದೇ ಶಿಲ್ಪಿಯೂ ತಯಾರಿಸಿಲ್ಲ. ಈ ಶ್ರೀ ಕೃಷ್ಣನ ವಿಗ್ರಹದಲ್ಲಿ ಜೀವವಿದೆ ಎಂದು ನಂಬಲಾಗಿದೆ. ಆದ್ದರಿಂದ, ಗೋಪಿನಾಥ್ ದೇವಾಲಯದ ಮೇಲೆ ಹೆಚ್ಚಿನ ಜನರು ಭಕ್ತಿಯಿಂದ ಬರುತ್ತಾರೆ. 
 

ಜೈಪುರದ ಗೋಪಿನಾಥ ದೇವಾಲಯದ ಶ್ರೀ ಕೃಷ್ಣನ ವಿಗ್ರಹದ ಕಥೆ
ಗಡಿಯಾರವು ಮೊದಲು ಶ್ರೀ ಕೃಷ್ಣನ ಕೈಯಲ್ಲಿರಲಿಲ್ಲ ಎಂದು ನಂಬಲಾಗಿದೆ. ಪ್ರತಿಮೆಯಲ್ಲಿ ಜೀವವಿದೆಯೇ ಎಂದು ನೋಡಲು ಬ್ರಿಟಿಷ್ ವ್ಯಕ್ತಿಯೊಬ್ಬರು ಗಡಿಯಾರವನ್ನು ಕೃಷ್ಣನ ಕೈಗೆ ಹಾಕಿದ್ದರಂತೆ.

ಒಮ್ಮೆ ಒಬ್ಬ ಬ್ರಿಟೀಷ್ ವ್ಯಕ್ತಿ ಭಾರತಕ್ಕೆ ಬಂದಾಗ, ಅವರು ಈ ದೇವಾಲಯದ ಬಗ್ಗೆ ಕೇಳಿ ತಿಳಿದಿದ್ದರಂತೆ. ಶ್ರೀ ಕೃಷ್ಣನ ವಿಗ್ರಹಕ್ಕೆ ಜೀವವಿದೆ ಅನ್ನೋದು ತಿಳಿದಾಗ, ಅವರಿಗೆ ಅಚ್ಚರಿಯೂ ಆಯ್ತು, ಜೊತೆಗೆ ಇದನ್ನ ಪರೀಕ್ಷೆ ಮಾಡಬೇಕು ಎನ್ನುವ ಯೋಚನೆಯೂ ಬಂದಂತೆ. ಅವರು ಮತ್ತೆ ತಮ್ಮ ದೇಶಕ್ಕೆ ಮರಳಿ, ಅಲ್ಲಿಂದ ಒಂದು ವಿಶೇಷ ಕೈ ಗಡಿಯಾರವನ್ನು ತಂದರು. 

ಈ ಗಡಿಯಾರದ ವಿಶೇಷತೆಯೆಂದರೆ ಅದು ವ್ಯಕ್ತಿಯ ನಾಡಿಮಿಡಿತದಿಂದ ಮಾತ್ರ ಚಲಿಸುತ್ತದೆ.  ಒಬ್ಬ ವ್ಯಕ್ತಿಯು ಜೀವಂತವಾಗಿದ್ದರೆ ಮಾತ್ರ ಆ ಗಡಿಯಾರವು ಚಲಿಸುತ್ತದೆ ಮತ್ತು ಸರಿಯಾದ ಸಮಯವನ್ನು ಹೇಳುತ್ತದೆ. ಆ ಬ್ರಿಟೀಷ್ ವ್ಯಕ್ತಿ  ಗಡಿಯಾರವನ್ನು ಶ್ರೀ ಕೃಷ್ಣನ ಮಣಿಕಟ್ಟಿಗೆ ಕಟ್ಟಿದರು. ಇದರ ನಂತರ, ಗಡಿಯಾರವು ಸರಿಯಾದ ಸಮಯವನ್ನು ತೋರಿಸಲು ಪ್ರಾರಂಭಿಸಿತು.  ಇದನ್ನು ನೋಡಿದ ಎಲ್ಲಾ ಭಕ್ತರಿಗೆ ಅಚ್ಚರಿ ಉಂಟಾಗಿದ್ದು ನಿಜಾ. ಅಂದಿನಿಂದ, ಈ ಗಡಿಯಾರವನ್ನು ಶ್ರೀ ಕೃಷ್ಣನ ಕೈಯಲ್ಲಿ ಕಟ್ಟಲಾಗಿದೆ ಮತ್ತು ಅದು ಇನ್ನೂ ಸಹ ಸರಿಯಾದ ಸಮಯವನ್ನು ಹೇಳುತ್ತಿದೆ ಎನ್ನಲಾಗಿದೆ. 
 

Latest Videos

click me!