ವಿಶ್ವ ಬುಕ್ ಆಫ್ ರೆಕಾರ್ಡ್ ಸೇರಿದ ಕಾಶ್ಮೀರದ ಟುಲಿಪ್ ಗಾರ್ಡನ್‌ನ ಸುಂದರ ಚಿತ್ರಗಳು...

First Published | Aug 22, 2023, 12:58 PM IST

ಏಷ್ಯಾದ ಅತ್ಯಂತ ದೊಡ್ಡ ಟುಲಿಪ್ ಗಾರ್ಡನ್ ಶ್ರೀನಗರದ ಜಬಾರ್ವನ್ ಕಣಿವೆಯಲ್ಲಿರುವ ಟುಲಿಪ್ ಗಾರ್ಡನ್  ವಿಶ್ವ ದಾಖಲೆ ಪುಟ ಸೇರಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಗಿನ್ನೆಸ್ ದಾಖಲೆ ಪುಟ ಸೇರಿದ ಈ ಸಂದರ್ಭದಲ್ಲಿ ಈ ಹೂಗಳ ಸ್ವರ್ಗದ ಸುಂದರ ಫೋಟೋಗಳು ಇಲ್ಲಿವೆ. 

tulip garden srinagar

ಏಷ್ಯಾದ ಅತ್ಯಂತ ದೊಡ್ಡ ಟುಲಿಪ್ ಗಾರ್ಡನ್ ಶ್ರೀನಗರದ ಜಬಾರ್ವನ್ ಕಣಿವೆಯಲ್ಲಿರುವ ಟುಲಿಪ್ ಗಾರ್ಡನ್  ವಿಶ್ವ ದಾಖಲೆ ಪುಟ ಸೇರಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಗಿನ್ನೆಸ್ ದಾಖಲೆ ಪುಟ ಸೇರಿದ ಈ ಸಂದರ್ಭದಲ್ಲಿ ಈ ಹೂಗಳ ಸ್ವರ್ಗದ ಸುಂದರ ಫೋಟೋಗಳು ಇಲ್ಲಿವೆ. 

tulip garden srinagar

ಇಂದಿರಾ ಗಾಂಧಿ ಸ್ಮರಣಾರ್ಥ ಮಾಡಲ್ಪಟ್ಟಿರುವ ಈ ಟುಲಿಪ್ ಗಾರ್ಡ್‌ನ್ ಈಗ ವಿಶ್ವ ಗಿನ್ನೆಸ್ ದಾಖಲೆ ಪುಟ ಸೇರಿದೆ.  ಈ ಗಾರ್ಡನ್‌ನ ಪುಷ್ಪಕೃಷಿಯ  ಕಮಿಷನರ್ ಕಾರ್ಯದರ್ಶಿ ಅವರಿಗೆ ಲಂಡನ್‌ನ ವಿಶ್ವ ದಾಖಲೆ ಸಂಸ್ಥೆಯ ಸಿಇಒ  ಪ್ರಮಾಣಪತ್ರ ನೀಡಿದ್ದಾರೆ. 

Tap to resize

tulip garden srinagar

ಮಾರ್ಚ್‌19ರ ರಮ್ಜಾನ್ ಸಂದರ್ಭದಲ್ಲಿ ಪ್ರವಾಸಿಗರಿಗೆ ತೆರಯಲ್ಪಟ್ಟ ಈ ಟುಲಿಪ್ ಗಾರ್ಡನ್‌ಗೆ ಮಳೆಯ ನಡುವೆಯೂ ಕಾಶ್ಮೀರಕ್ಕೆ ಬಂದ ಶೇ. 70 ರಷ್ಟು ಪ್ರವಾಸಿಗರು ಅಂದರೆ ಸುಮಾರು 1 ಲಕ್ಷ ಜನ ಮೊದಲ ವಾರದಲ್ಲೇ ಭೇಟಿ ನೀಡಿದ್ದಾರೆ. 

tulip garden srinagar

ಜಬರ್ವಾನ್ ಪರ್ವತ ಶ್ರೇಣಿಯ ಸುಂದರವಾದ ತಪ್ಪಲಿನ ನಡುವೆ ನಿರ್ಮಿತವಾಗಿರುವ ಈ ಉದ್ಯಾನವನವೂ ಏಷ್ಯಾದ ಅತಿದೊಡ್ಡ ಟುಲಿಪ್ ಹೂಗಳ ಸ್ವರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

Tulip Garden

ಇಲ್ಲಿ 1.5 ಮಿಲಿಯನ್‌ಗೂ ಅಧಿಕ ಟುಲಿಪ್ ಹೂಗಳಿದ್ದು 68 ವಿಭಿನ್ನ ಪ್ರಬೇಧಗಳ ಟುಲಿಪ್ ಹೂಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಪ್ರದೇಶದ ನೈಸರ್ಗಿಕ ಸೌಂದರ್ಯ ಹಾಗೂ ಮನೋರಮಣೀಯವೆನಿಸುವ ದೃಶ್ಯಗಳು ಈ ಟುಲಿಪ್ ಗಾರ್ಡನ್‌ನ ಸೌಂದರ್ಯದ ಮೂಲಕ ಮತ್ತೊಮ್ಮೆ ಎಲ್ಲರ ಸೆಳೆಯುತ್ತಿದೆ. 

Tulip Garden

ಔಪಚಾರಿಕ ಸಮಾರಂಭವೊಂದರಲ್ಲಿ ಟುಲಿಪ್ ಗಾರ್ಡನ್‌ನ ಕಮೀಷನರ್  ಪುಸ್ಪಸಂಸ್ಕೃತಿಯ ಸೆಕ್ರಿಟರಿ  ಶೇಕ್ ಫಯಾಜ್ ಅಹ್ಮದ್ ಅವರು ವಿಶ್ವ ದಾಖಲೆ ಸಮಿತಿ ಸಿಇಒ ಸಂತೋಷ್ ಶುಕ್ಲಾ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು. 

tulip garden srinagar

ಇಂದಿರಾಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್‌ನ ಸಾಟಿಯಿಲ್ಲದ ಸೌಂದರ್ಯ ಮತ್ತು ವೈಭವದಿಂದಾಗಿ ಈ ಜಾಗತಿಕ ಮನ್ನಣೆ ಸಿಕ್ಕಿದೆ ಇದು ನೈಸರ್ಗಿಕ ವೈಭವ ಮತ್ತು ಮಾನವ ಸೃಜನಶೀಲತೆ ಎರಡರ  ಸಮ್ಮಿಲನವಾಗಿದೆ ಎಂದು ಅವರು ಹೇಳಿದ್ದಾರೆ. 

Tulip Garden

ಇಲ್ಲಿ ಬರೀ ಟುಲಿಫ್ ಹೂಗಳಲ್ಲದೇ ಇತರ ಹಲವು ತರದ ಹೂಗಳಿವೆ. ಸೂಕ್ಷ್ಮವಾದ ಡ್ಯಾಫಡಿಲ್‌ಗಳು, ಪರಿಮಳಯುಕ್ತ ಹಯಸಿಂತ್‌, ಕಾಂತಿಯುತ ಗುಲಾಬಿಗಳು, ಆಕರ್ಷಕ ರಣನ್‌ಕುಲಿ, ರೋಮಾಂಚಕ ಮಸ್ಕರಿಯಾ ಮತ್ತು ಮೋಡಿ ಮಾಡುವ ಐರಿಸ್ ಹೂವುಗಳು ಸಾಂಪ್ರದಾಯಿಕ ಟುಲಿಪ್‌ಗಳ ಜೊತೆಗೆ ಅರಳುತ್ತವೆ

Latest Videos

click me!