ಜಪಾನ್ ಚೆರಿ ಬ್ಲಾಸಮ್ ಹೂವುಗಳು, ಸುಂದರ ತಾಣಗಳಿಗೆ ಜನಪ್ರಿಯ. ಆದರೆ ಇದೇ ಚೆರಿ ಬ್ಲಾಸಮ್ ಅಥವಾ ಸಕುರಾ ಹೂವುಗಳ ತಾಣ ನಮ್ಮಲ್ಲೇ ಇದೆ. ನಾವು ಹೆಚ್ಚು ದೂರ ಹೋಗಬೇಕಿಲ್ಲ. ಈ ಸಕುರಾ ಹೂವುಗಳ ಅದ್ಭುತ ತಾಣ ಎಲ್ಲಿದೆ ಗೊತ್ತಾ
ಚಳಿಗಾಲದಲ್ಲಿ ಚೆರಿ ಬ್ಲಾಸಮ್ ಅಥವಾ ಸಕುರಾ ಹೂವುಗಳು ಅರಳಿ ಆಹ್ಲಾದಕರ ಅನುಭವ ನೀಡುತ್ತದೆ. ಚೆರಿ ಬ್ಲಾಸಮ್ ಎಂದ ತಕ್ಷಣ ಎಲ್ಲರಿಗೂ ಜಪಾನ್ ನೆನಪು ಬರುತ್ತದೆ. ಆದರೆ ಚೆರಿ ಬ್ಲಸಮ್ ನೋಡಲು, ಅನುಭವಿಸಲು ಜಪಾನ್‌ಗೆ ಹೋಗಬೇಕಿಲ್ಲ. ನಮ್ಮಲ್ಲೇ ಇದೆ. ಚಳಿಗಾಲ ಬಂತೆಂದರೆ ಭಾರತದಲ್ಲೂ ಗುಲಾಬಿ ಹೂವುಗಳ ಅದ್ಭುತ ಋತು ಆರಂಭಗೊಳ್ಳುತ್ತದೆ. ಇಡೀ ಪ್ರದೇಶ ಗುಲಾಬಿ ಬಣ್ಣಗಳಿಂದ ಕಂಗೊಳಿಸುತ್ತದೆ. ಈ ಅದ್ಭುತ ತಾಣ ಶಿಲ್ಲಾಂಗ್‌ನಲ್ಲಿದೆ.
25
ಸಚಿವರು ಹೇಳಿದ್ದೇನು
ನ್ಯಾಗಾಲಾಂಡ್ ಪ್ರವಾಸೋದ್ಯಮ ಸಚಿವ ತೆಮ್ಜನ್ ಇಮ್ನಾ ಅಲಾಂಗ್ ಸೋಶಿಯಲ್ ಮೀಡಿಯಾದಲ್ಲಿ ಅದ್ಭುತ ತಾಣದ ಕುರಿತು ಹೇಳಿಕೊಂಡಿದ್ದಾರೆ.ಜಪಾನ್‌ನಲ್ಲಿ ಸಕುರಾ ಇರಬಹುದು, ಆದರೆ ಶಿಲ್ಲಾಂಗ್‌ನಲ್ಲಿ ಈ ಅದ್ಭುತ ತಾಣವಿದೆ. ಈ ಗುಲಾಬಿ ಬಣ್ಣದ ಪ್ರೇಮಕತೆಗಳ ಸುಂದರ ತಾಣ ಇದು. ಈ ನವೆಂಬರ್ ಈಶಾನ್ಯ ರಾಜ್ಯಗಳು ನಿಮ್ಮ ಹೃದಯ ಗೆಲ್ಲುತ್ತದೆ ಎಂದು ಸಚಿವರು ಹೇಳಿದ್ದಾರೆ.
35
ಎಲ್ಲಿದೆ ಈ ಚೆರಿ ಬ್ಲಾಸಮ್
ಭಾರತದ ಅತ್ಯಂತ ಪ್ರಸಿದ್ಧ ಚೆರಿ ಬ್ಲಾಸಮ್ ತಾಣಗಳಲ್ಲಿ ಶಿಲ್ಲಾಂಗ್ ಒಂದು. ಮೆಘಾಲಯದ ವಾರ್ಡ್ಸ್ ಲೇಕ್, ಶಿಲ್ಲಾಂಗ್ ಗಾಲ್ಫ್ ಕೋರ್ಸ್ ಹಾಗೂ ಖಾಸಿ ಬೆಟ್ಟಗಳ ರಸ್ತೆಯಲ್ಲಿನ ಪಯಣ ಅಹ್ವಾದಕರ. ರಸ್ತೆಯ ಎರೂಡ ಕಡೆಗಳಲ್ಲಿ ಈ ತಿಂಗಳು ಗುಲಾಬಿ ಹೂವುಗಳಿಂದ ಕಂಗೊಳಿಸುತ್ತಿದೆ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಉಮಿಯಂ ಸರೋವರದ ಬಳಿಯ ಭೋಯಿರಿಂಬಾಂಗ್‌ನ ಮದನ್ ಕುರ್ಕಲಾಂಗ್ ಕ್ರೀಡಾ ಸಂಕೀರ್ಣದಲ್ಲಿ 'ಶಿಲ್ಲಾಂಗ್ ಚೆರ್ರಿ ಬ್ಲಾಸಮ್ ಉತ್ಸವ' ನಡೆಯುತ್ತದೆ.
ನಾಗಾಲ್ಯಾಂಡ್‌ನ ಹಲವು ಸ್ಥಳಗಳು ಈ ಸುಂದರ ಅನುಭವ ನೀಡುತ್ತದೆ. ಕೊಹಿಮಾ ಬೊಟಾನಿಕಲ್ ಗಾರ್ಡನ್, ಕೊಹಿಮಾ ವಾರ್ ಸೆಮೆಟರಿ, ಕಿಸಾಮಾ ಹೆರಿಟೇಜ್ ವಿಲೇಜ್, ಖುಜಾಮಾ ಗ್ರಾಮ, ಫುಟ್ಸೆರೊ ಮತ್ತು ಜುಕೌ ಕಣಿವೆಯಲ್ಲಿ ಕೇವಲ ಎರಡು ವಾರಗಳ ಕಾಲ ಈ ಸುಂದರ ದೃಶ್ಯ ಕಾಣಸಿಗುತ್ತದೆ. ವಿಶೇಷ ಅಂದರೆ ಡಿಸೆಂಬರ್ ತಿಂಗಳಲ್ಲಿ ಹಾರ್ನ್‌ಬಿಲ್ ಉತ್ಸವ ಇಲ್ಲಿ ನಡೆಯಿುತ್ತದೆ.
55
ಹಿಮಾಚಲ ಪ್ರದೇಶದಲ್ಲೂ ಇದೇ ಈ ಸೌಂದರ್ಯ
ಹಿಮಾಚಲ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬಾರಿ ಈ ಸೌಂದರ್ಯ ಅನುಭವಿಸಲು ಸಾಧ್ಯ. ಮಾರ್ಚ್‌ನಿಂದ ಮೇ ತಿಂಗಳು ಹಾಗೂ ನವೆಂಬರ್‌ನಿಂದ ಡಿಸೆಂಬರ್ ತಿಂಗಳಲ್ಲಿ ಚೆರಿ ಬ್ಲಾಸಮ್ ನೋಡಲು ಸಾಧ್ಯ. ಹಿಮಾಚಲ ಪ್ರದೇಶದ ನರ್ಕಂಡಾ, ಕೋಟಘಡ, ತೀರ್ಥನ್ ಕಣಿವೆ ಸೇರಿದಂತೆ ಹಲವು ಭಾಗದಲ್ಲಿ ಈ ಸೌಂದರ್ಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.