ದೆಹಲಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಜನಜಂಗುಳಿ ತೀವ್ರ ಹೆಚ್ಚಿದೆ ಎಂಬ ದೂರು ಆಗಾಗ್ಗೆ ಕೇಳಬರುತ್ತಿರುತ್ತದೆ. ಅಲ್ಲದೆ, ವಿಮಾನ ದರ ತೀವ್ರ ಹೆಚ್ಚಾಗುತ್ತಿದೆ ಎಂಬ ವರದಿಗಳೂ ಇವೆ. ಈ ಹಿನ್ನೆಲೆ ಇದಕ್ಕೆ ಪರಿಹಾರವೆಂದ್ರೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದ ಈ ವಿಮಾನ ನಿಲ್ದಾಣ. ಇದರಿಂದ ದೆಹಲಿಯಲ್ಲಿ ಜನಜಂಗುಳಿ ಸ್ವಲ್ಪ ಕಡಿಮೆಯಾಗುವುದಲ್ಲದೆ ವಿಮಾನ ದರವೂ ಕಡಿಮೆ ಇರಬಹುದು ಎಂದು ವರದಿಗಳು ಹೇಳ್ತಿವೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ (IGI) ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ದರಗಳು ಅಗ್ಗವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ ವಿಮಾನ ಟಿಕೆಟ್‌ಗಳು ಕಡಿಮೆ ಇರುವುದರಿಂದ ಪ್ರಯಾಣಿಕರು ಸುಮಾರು 1000 ರಿಂದ 1500 ರೂಪಾಯಿಗಳನ್ನು ಸೇವ್ ಮಾಡಬಹುದು ಎಂದು ಹೇಳಲಾಗ್ತಿದೆ.
ಎಟಿಎಫ್ ತೂಕದ ಶುಲ್ಕ (ವಿಮಾನಗಳಲ್ಲಿ ಬಳಸುವ ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ) ಉತ್ತರ ಪ್ರದೇಶದಲ್ಲಿ ಕೇವಲ 1 ಪ್ರತಿಶತದಷ್ಟು ಇದ್ದು, ಆದರೆ ದೆಹಲಿಯಲ್ಲಿ ಈ ಶುಲ್ಕ 25 ಪ್ರತಿಶತದವರೆಗೆ ಇದೆ. ಈ ಹಿನ್ನೆಲೆ ಫ್ಲೈಟ್ ಟಿಕೆಟ್ ದರ ಕಡಿಮೆ ಇರಲಿದೆ ಎಂದು ವರದಿಗಳು ಹೇಳುತ್ತಿವೆ.
ಟಿಕೆಟ್ ದರಗಳು ಶೇ. 10 ರಿಂದ 15ರಷ್ಟು ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ದೆಹಲಿಯಿಂದ ಲಖನೌಗೆ ವಿಮಾನ ಟಿಕೆಟ್ 3500 ರೂ. ಆಗಿದ್ದರೆ, ನೋಯ್ಡಾ ವಿಮಾನ ನಿಲ್ದಾಣದಿಂದ ಅದೇ ಟಿಕೆಟ್ ಬೆಲೆ 2800 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.
ಟಿಕೆಟ್ ದರಗಳು ಶೇ. 10 ರಿಂದ 15ರಷ್ಟು ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ದೆಹಲಿಯಿಂದ ಲಖನೌಗೆ ವಿಮಾನ ಟಿಕೆಟ್ 3500 ರೂ. ಆಗಿದ್ದರೆ, ನೋಯ್ಡಾ ವಿಮಾನ ನಿಲ್ದಾಣದಿಂದ ಅದೇ ಟಿಕೆಟ್ ಬೆಲೆ 2800 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.
ಜೆವಾರ್‌ನಲ್ಲಿ ನಿರ್ಮಾಣವಾಗುತ್ತಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಮುಂದಿನ ವರ್ಷ ಫೆಬ್ರವರಿ ವೇಳೆಗೆ (ಮೊದಲ ಹಂತ) ಪೂರ್ಣಗೊಳ್ಳಲಿದೆ. ಹಾಗೂ, ಅಕ್ಟೋಬರ್ 2024ರಿಂದ ಪ್ರಯಾಣಿಕರ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಮಧ್ಯೆ, ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ದಿನದಿಂದಲೇ 65 ವಿಮಾನಗಳು ಟೇಕ್ ಆಫ್ ಆಗಲಿವೆ ಎಂದು ಯಮುನಾ ಪ್ರಾಧಿಕಾರ ಈಗಾಗಲೇ ಹೇಳಿಕೊಂಡಿದೆ.
ನೋಯ್ಡಾ ವಿಮಾನ ನಿಲ್ದಾಣವು ನೋಯ್ಡಾ ಪ್ರದೇಶಕ್ಕೆ ಗೇಮ್ ಚೇಂಜರ್ ಆಗಿದ್ದು, ವಿಮಾನ ನಿಲ್ದಾಣ ಇನ್ನೂ ನಿರ್ಮಾಣವಾಗುತ್ತಿದ್ರೂ ಸಹ ಈಗಾಗಲೇ ಈ ಪ್ರದೇಶಕ್ಕೆ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ತರಲು ಪ್ರಾರಂಭಿಸಿದೆ.
ಜೆವಾರ್‌ನಲ್ಲಿ ಮುಂಬರುವ ವಿಮಾನ ನಿಲ್ದಾಣದ ರನ್‌ವೇ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೋಪುರವು ಮಾರ್ಚ್ 2024 ರ ವೇಳೆಗೆ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ಮಾಣ ಕಾರ್ಯವು ಬಹುತೇಕ ಶೇಕಡಾ 70 ರಷ್ಟು ಪೂರ್ಣಗೊಂಡಿದೆ ಎಂದು ಇತ್ತೀಚೆಗೆ ಮಾಹಿತಿ ನೀಡಲಾಗಿದೆ.
ಜೆವಾರ್ ವಿಮಾನ ನಿಲ್ದಾಣವು 1,334 ಹೆಕ್ಟೇರ್‌ಗಳಷ್ಟು ವಿಸ್ತಿರ್ಣವಾಗಿದೆ ಮತ್ತು ಅದರ ಆರು ಪ್ರಸ್ತಾವಿತ ರನ್‌ವೇಗಳು ತೆರೆದ ನಂತರ, ಇದು ಭಾರತದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 25, 2021 ರಂದು ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮಾಡಿದರು.
ಎಚ್‌ಸಿಎಲ್, ಟೆಕ್ ಮಹೀಂದ್ರಾ ಮತ್ತು ಮೈಕ್ರೋಸಾಫ್ಟ್‌ನಂತಹ ಸಂಸ್ಥೆಗಳು ಈಗಾಗಲೇ ಈ ಪ್ರದೇಶದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿವೆ. ಟೆಕ್ ದೈತ್ಯ ಮೈಕ್ರೋಸಾಫ್ಟ್ 3,000 ಉದ್ಯೋಗಗಳನ್ನು ಸೃಷ್ಟಿಸಲು ಯೋಜಿಸುತ್ತಿದ್ದು, 1,800 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರದ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ. Samsung, Dixon, LG, Oppo, Vivo, Lava, ಮತ್ತು Optimus ಫೋನ್ ಮತ್ತು ವೈಟ್ ಗೂಡ್ಸ್ ತಯಾರಕರಲ್ಲಿ ಈಗಾಗಲೇ ಈ ಪ್ರದೇಶದಲ್ಲಿ ಹೂಡಿಕೆ ಮಾಡಿದ್ದು, ವಿಸ್ತರಿಸುತ್ತಿವೆ.