ವಿಮಾನದಲ್ಲಿದ್ದಾಗ ಪ್ರಯಾಣಿಕರು ಮೃತಪಟ್ಟರೆ ಸಿಬ್ಬಂದಿ ದೇಹವನ್ನು ಏನು ಮಾಡ್ತಾರೆ?

First Published | Mar 15, 2023, 3:44 PM IST

ವಿಮಾನದಲ್ಲಿ ಅನಿರೀಕ್ಷಿತವಾಗಿ ಸಾವನ್ನಪ್ಪುವ ಪ್ರಯಾಣಿಕರ ಮೃತದೇಹವನ್ನು ಏನು ಮಾಡಲಾಗುತ್ತದೆ ? ವಿಮಾನದ ಸಿಬ್ಬಂದಿ ಯಾವ ಕ್ರಮ ತೆಗೆದುಕೊಳ್ತಾರೆ? ಇಂಥಾ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿರುವವರು ಕೆಲವೊಮ್ಮೆ ದಿಢೀರ್‌ ಹೃದಯಾಘಾತವಾಗಿ ಅಥವಾ ಅಸ್ವಸ್ಥಗೊಂಡು ಸಾವನ್ನಪ್ಪೋದು ಸಾಮಾನ್ಯ. ಹೀಗಾದಾಗ ವಿಮಾನದ ಸಿಬ್ಬಂದಿ ಏನು ಮಾಡುತ್ತಾರೆ?  ಪ್ರೋಟೋಕಾಲ್‌ ಪ್ರಕಾರ ಏನು ಮಾಡ್ಬೇಕು ಅನ್ನೋ ಮಾಹಿತಿ ಇಲ್ಲಿದೆ.

ಟಿಕ್‌ಟಾಕ್‌ನಲ್ಲಿ @danidboyy1 ಎಂಬ ಹೆಸರಿನ ಬಳಕೆದಾರರು ಫ್ಲೈಟ್ ಅಟೆಂಡೆಂಟ್ ಒಬ್ಬರು ವಿಮಾನದಲ್ಲಿನ ಸಾವುಗಳಿಗೆ ಸಂಬಂಧಿಸಿದಂತೆ ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳನ್ನು ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಅನಿರೀಕ್ಷಿತ ಸಾವು ಸಂಭವಿಸಿದಾಗ ಸಿಬ್ಬಂದಿ ಅನುಸರಿಸುವ ಕೆಲವು ನಿಯಮಗಳು ಮತ್ತು ನಿಬಂಧನೆಗಳ ಮಾಹಿತಿ ನೀಡಿದ್ದಾರೆ. 

Tap to resize

ಕ್ಯಾಬಿನ್ ಸಿಬ್ಬಂದಿ ಯಾರಾದರೂ ಸತ್ತಿದ್ದಾರೆ ಎಂದು ಕಾನೂನುಬದ್ಧವಾಗಿ ಘೋಷಿಸಲು ಸಾಧ್ಯವಿಲ್ಲ. ಆದ್ದರಿಂದ ಕ್ಯಾಪ್ಟನ್ ವಿಮಾನವನ್ನು ಬೇರೆಡೆಗೆ ತಿರುಗಿಸದಿರಲು ನಿರ್ಧರಿಸಿದರೆ, ಅವರು ತಮ್ಮ ಅಂತಿಮ ಗಮ್ಯಸ್ಥಾನವನ್ನು ತಲುಪುವವರೆಗೆ ದೇಹವು ವಿಮಾನದಲ್ಲಿಯೇ ಇರುತ್ತದೆ ಎಂದು ಫ್ಲೈಟ್ ಅಟೆಂಡೆಂಟ್ ಹೇಳಿದರು.

'ಸ್ಥಳವಿದ್ದರೆ ದೇಹವನ್ನು ಖಾಲಿ ಸೀಟುಗಳಿಗೆ ಅಥವಾ ಬೇರೆ ಗ್ಯಾಲಿ ಅಥವಾ ಕ್ಯಾಬಿನ್‌ಗೆ ಸ್ಥಳಾಂತರಿಸಬಹುದು. ಆದರೆ ವಿಮಾನವು ತುಂಬಿದ್ದರೆ, ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ತಲುಪುವವರೆಗೆ ಮೃತದೇಹ ಅವರ ಮೂಲ ಸೀಟಿನಲ್ಲಿಯೇ ಇರುತ್ತದೆ' ಎಂದು ತಿಳಿಸಲಾಗಿದೆ. ಪ್ರಯಾಣಿಕರು ವಿಮಾನದಲ್ಲಿ ಸತ್ತಾಗ ಸಿಬ್ಬಂದಿ ಪ್ರೋಟೋಕಾಲ್‌ಗಳ ಪಟ್ಟಿಯನ್ನು ಅನುಸರಿಸಬೇಕು ಎಂದು ಸಹ ತಿಳಿಸಲಾಗಿದೆ.

ವಿಮಾನದಲ್ಲಿ ಸತ್ತ ವ್ಯಕ್ತಿಗೆ ಗೌರವವನ್ನು ತೋರಿಸುವ ಸಲುವಾಗಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಗುತ್ತದೆ. ಮೃತದೇಹದ ಮೇಲೆ ಬಟ್ಟೆಯನ್ನು ಮುಚ್ಚುತ್ತಾರೆ ಎಂದು ಅಟೆಂಡೆಂಟ್ ತಿಳಿಸಿದರು. ಸಹ ಪ್ರಯಾಣಿಕನ ಸಾವಿನೊಂದಿಗೆ ಏರ್‌ಲೈನ್ ಅಟೆಂಡೆಂಟ್‌ಗಳು ಹೇಗೆ ವ್ಯವಹರಿಸಿದ್ದಾರೆ ಎಂಬುದನ್ನು ಸಹ ಪ್ರಯಾಣಿಕರೊಬ್ಬರು ನೆನಪಿಸಿಕೊಂಡರು. 

ಸಹ ಪ್ರಯಾಣಿಕನ ಸಾವಿನೊಂದಿಗೆ ಏರ್‌ಲೈನ್ ಅಟೆಂಡೆಂಟ್‌ಗಳು ಹೇಗೆ ವ್ಯವಹರಿಸಿದ್ದಾರೆ ಎಂಬುದನ್ನು ಸಹ ಪ್ರಯಾಣಿಕರೊಬ್ಬರು ನೆನಪಿಸಿಕೊಂಡರು. 'ಫ್ರಾಂಕ್‌ಫರ್ಟ್‌ನಿಂದ ಸಿಂಗಾಪುರಕ್ಕೆ 11-ಗಂಟೆಗಳ ವಿಮಾನದಲ್ಲಿ ನನ್ನ ಹಿಂದೆ ಕುಳಿತಿದ್ದ ಮಹಿಳೆಯೊಬ್ಬರು ಪ್ರಯಾಣದ ಮಧ್ಯೆ ಮೃತಪಟ್ಟರು. ತಕ್ಷಣ ಸಹ ಪ್ರಯಾಣಿಕರು ಆಸನಗಳಲ್ಲಿ ಆಕೆಯನ್ನು ಅಡ್ಡಕ್ಕೆ ಮಲಗಿಸಿದರು. ನಂತರ ದೇಹವನ್ನು ಹಾಳೆಯಿಂದ ಮುಚ್ಚಿದರು.' ಎಂದು ತಿಳಿಸಿದ್ದಾರೆ.

ವಿಮಾನದಲ್ಲಿ ಸಾವನ್ನಪ್ಪುವುದು ನಿಜವಾಗಿಯೂ ಭಯಾನಕವಾಗಿದೆ. ಆದರೆ ಇಂಥಾ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಮರಣವನ್ನು ಘೋಷಿಸಲು ಕ್ಯಾಬಿನ್ ಸಿಬ್ಬಂದಿಗೆ ಕಾನೂನುಬದ್ಧವಾಗಿ ಅಧಿಕಾರವಿಲ್ಲ ಎಂದು ಅಟೆಂಡೆಂಟ್ ಹೇಳಿದ್ದಾರೆ.

Latest Videos

click me!